* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 5 March 2022

ಶ್ರೀ ವಿ.ಎಸ್.ರಾಮಚಂದ್ರನ್ ರವರ ಜೊತ 2022

 ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ಇಂದು (ದಿ. 05-03-2022, ಶನಿವಾರ) ಬೆಂಗಳೂರಿನಿಂದ ನಮ್ಮ ನಿವಾಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ....





ಆರ್.ಎಸ್.ಅಯ್ಯರ್ ಸನ್ಮಾನ -2022 Felicitation to R S Iyer

 ತಲಕಾಡು ಮಠದ ಪ.ಪೂ. ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಶ್ರೀಗಳ ಆಶೀರ್ವಾದದೊಡನೆ “ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ”ದ ಅಧ್ಯಕ್ಷರಾದ ಶ್ರೀ ಜಿ.ಕೆ. ಕುಲಕರ್ಣಿಯವರು ಮತ್ತು ಈ ಸಹಕಾರಿಯ ನಿರ್ದೇಶಕರೂ, ಮಿತ್ರರೂ ಆದ ಶ್ರೀ ಪ್ರಕಾಶ್ ಭಾರದ್ವಾಜ್ ರವರು ನಮ್ಮ ನಗರದ ಹಲವು ಗಣ್ಯಮಾನ್ಯರ ಜೊತೆಯಲ್ಲಿ ನನ್ನನ್ನೂ ದಿ. 04-03-2022 ರಂದು ಶುಕ್ರವಾರ ಪ್ರೀತಿಯಿಂದ ಸನ್ಮಾನಿಸಿದರು.

“ನಮ್ಮ ತುಮಕೂರು” ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಜಯನಗರ ಬಡಾವಣೆಯಲ್ಲಿರುವ “ಭಾರದ್ವಾಜ ಟವರ್ಸ್”ನಲ್ಲಿ ಬೆಂಗಳೂರು ಮೂಲದ ಈ ಸಹಕಾರಿಯ “19 ನೇ ಶಾಖೆಯು” ಶುಭಾರಂಭಗೊಂಡ ಸವಿನೆನಪಿಗೆ ಈ ಸಮಾರಂಭವು ಆಯೋಜಿತವಾಗಿತ್ತು. ಸಮಾಜದ ಹಾಗೂ ಸಮುದಾಯದ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಈ ಸಹಕಾರಿಯ ಸಕಲ ಪದಾಧಿಕಾರಿಗಳ ಪ್ರೀತಿ-ವಿಶ್ವಾಸಕ್ಕೆ ಅನಂತ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್, ತುಮಕೂರು, (ದಿ. 04-03-2022, ಶುಕ್ರವಾರ)





ಶ್ರೀ ಚಿದಂಬರ ಸಹಕಾರಿಯ ನಿರ್ದೇಶಕರಾದ ಶ್ರೀ ಎಂ.ಆರ್.ಸತ್ಯಮೂರ್ತಿ ರವರು ಮತ್ತು ಸಹಕಾರಿಯ ಕೇಂದ್ರ ಕಚೇರಿಯ ಮಹಾಪ್ರಬಂಧಕರಾದ ಶ್ರೀ ಪಿ.ಕೆ.ಮುರಳೀಧರ ರವರು ದಿ.02-03-2022 ರಂದು ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ ಈ ಕಾರ್ಯಕ್ರಮದ ಆಹ್ವಾನಪತ್ರಿಕೆ ನೀಡಿ ಪ್ರೀತಿಯಿಂದ ಆಹ್ವಾನಿಸಿದರು. ಜೊತೆಯಲ್ಲಿ ತುಮಕೂರು ಶಾಖೆಯ ನಿರ್ದೇಶಕರೂ, ಆತ್ಮೀಯರೂ ಆದ ಶ್ರೀ ಪ್ರಕಾಶ್ ಭಾರದ್ವಾಜ್ ರವರು ಹಾಗೂ ಶಾಖೆಯ ಪ್ರಬಂಧಕರಾದ ಶ್ರೀ ರಮೇಶ್ ರವರೂ ಇದ್ದರು.