* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 13 August 2022

'ಮನೆ ಮನೆಯಲ್ಲಿ ತ್ರಿವರ್ಣ ಧ್ವಜ' ಅಭಿಯಾನ 2022, Har Ghar Tiranga Abiyan 2022

 ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ. 'ಮನೆ ಮನೆಯಲ್ಲಿ ತ್ರಿವರ್ಣ ಧ್ವಜ' ಅಭಿಯಾನ ನಮ್ಮ ಮನೆ- ತುಮಕೂರು- ದಿ. 13-08-2022, ಶನಿವಾರ. Azadi Ka Amrit Mahotsav-2022, Har Ghar Tiranga Abhiyan









Thursday, 11 August 2022

ಗೃಹ ಸಚಿವರ ಭೇಟಿಯ ಸಂದರ್ಭ... Home Ministers Visit 2022

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರೂ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಆರಗ ಜ್ಞಾನೇಂದ್ರ ಅವರು ದಿ.09-08-2022 ರಂದು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು ಸನ್ಮಾನಿಸಲು ತುಮಕೂರಿನ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿದ್ದಾಗ ..... H'ble Home Minister of Karnataka Sri Araga Jnanendra visited our home ....























********************************************

Youtube Video 



ಗೃಹ ಸಚಿವರ ಭೇಟಿ- ಅತಿಥಿ ಸತ್ಕಾರ... Home Ministers visit- Honour to Guests 2022

ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರಿಂದ
ಶ್ರೀ ವಿ.ಎಸ್.ರಾಮಚಂದ್ರನ್ ಅವರಿಗೆ ಸನ್ಮಾನ
****************************
ದೇಶಾದ್ಯಂತ ಇದೀಗ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಉಲ್ಲಾಸ. ಆ ಸಂಭ್ರಮೋಲ್ಲಾಸದ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರೂ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಆರಗ ಜ್ಞಾನೇಂದ್ರ ಅವರು ದಿ.09-08-2022, ಮಂಗಳವಾರ ಸಂಜೆ ತುಮಕೂರಿನ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು “ತುಮಕೂರು ಜಿಲ್ಲಾಡಳಿತ”ದ ಪರವಾಗಿ ಹೃತ್ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತುಮಕೂರು ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ IAS, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಾಪುರ್ ವಾಡ್ IPS, ಜಿಲ್ಲಾ ಪಂಚಾಯತ್ CEO ಡಾ. ಕೆ. ವಿದ್ಯಾಕುಮಾರಿ IAS, ತುಮಕೂರು ತಾಲ್ಲೂಕು ತಹಸೀಲ್ದಾರ್ ಶ್ರೀ ಜಿ.ವಿ. ಮೋಹನ್ ಕುಮಾರ್ KAS, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಅವರುಗಳೂ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸುತ್ತಮುತ್ತಲಿನ ನಾಗರಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ವಿ.ಎಸ್.ರಾಮಚಂದ್ರನ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಪ್ರತಿವಂದಿಸಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೂ ಶಾಲುಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಶ್ರೀ ಆರಗ ಜ್ಞಾನೇಂದ್ರ ಅವರ ಸಜ್ಜನಿಕೆ, ಸೌಜನ್ಯದ ನಡೆ-ನುಡಿಗಳು ಎಲ್ಲರಲ್ಲೂ ಸಂತಸ ಮೂಡಿಸಿತು.
ಮನೆಗೇ ಆಗಮಿಸಿ ನಮ್ಮ ತಂದೆಯವರಿಗೆ ಗೌರವಾರ್ಪಣೆ ಮಾಡಿದ ಜಿಲ್ಲಾಡಳಿತ ಹಾಗೂ ಸಕಲ ಗಣ್ಯರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆಗಳು.

-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು ದಿ.09-08-2022

 ಅತಿಥಿ ಸತ್ಕಾರ…

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರೂ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಆರಗ ಜ್ಞಾನೇಂದ್ರ ಅವರು ದಿ.09-08-2022 ರಂದು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು ಸನ್ಮಾನಿಸಲು ನಮ್ಮ ನಿವಾಸಕ್ಕೆ ಆಗಮಿಸಿದ್ದಾಗ ನಮ್ಮ ತಂದೆ ಎಂದಿನ ತಮ್ಮ ಸಹಜ ಪದ್ಧತಿಯಂತೆ ಗೃಹಸಚಿವರೂ ಸೇರಿದಂತೆ ಎಲ್ಲ ಹಿರಿಯ-ಕಿರಿಯ ಅಧಿಕಾರಿಗಳಿಗೆ, ಪೊಲೀಸರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ಫಲ (ಬಾಳೆಹಣ್ಣು) ವಿತರಿಸಿ “ಅತಿಥಿ ದೇವೋಭವ” ಎಂದು ಸಂತಸಪಟ್ಟರು.

(ಚಿತ್ರದಲ್ಲಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರು , ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ಕೆ.ವಿದ್ಯಾಕುಮಾರಿ ರವರು ಮತ್ತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾರವರನ್ನು ಕಾಣಬಹುದು.)
-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು





















******************************************************************

Youtube Video