ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 13 January 2026

VSR -97 / ವಿ.ಎಸ್.ರಾಮಚಂದ್ರನ್ 97 ನೇ ವಸಂತಕ್ಕೆ / 14-01-2026


 

💐 🌺 97 ನೇ ವಸಂತಕ್ಕೆ ಪಾದಾರ್ಪಣೆ....💐 🌺 ನಮ್ಮ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ.14-01-2026, ಬುಧವಾರ, ಪೌಷ ಕೃಷ್ಣ ಏಕಾದಶಿ) 97 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಮ್ಮ ಮನೆಯಲ್ಲಿ ಮನೆದೇವರಾದ ಶ್ರೀ ಪಳನಿ ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಮ್ಮ ಕೋರಿಕೆಯಂತೆ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿರುವ "ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ"ಗೆ ಅಭಿಷೇಕ-ಪೂಜೆಯನ್ನು ಪ್ರಧಾನ ಅರ್ಚಕರಾದ ಶ್ರೀ ಕೆ.ವೈ.ಲಕ್ಷ್ಮೀನರಸಿಂಹ ಶಾಸ್ತ್ರಿಯವರು ನೆರವೇರಿಸಿಕೊಟ್ಟರು. ಪೂಜಾ ಪ್ರಸಾದದ ಜೊತೆಗೆ ಪಳನಿ ದೇವಾಲಯದ ವಿಶೇಷ ವಸ್ತ್ರವನ್ನು ಮತ್ತು ತಿರುಪತಿ ದೇವಾಲಯದ ಪ್ರಸಾದವನ್ನೂ ಅವರು ನೀಡಿದ್ದು, ಅಪಾರ ಸಂತಸವನ್ನುಂಟುಮಾಡಿತು. ಹಾಗೂ ಈ ಹುಟ್ಟುಹಬ್ಬಕ್ಕೆ ಮೆರುಗು ಕೊಟ್ಟಿತು. ದೇವರ ಪ್ರಸಾದವನ್ನು ಸ್ವೀಕರಿಸಿ ನಮ್ಮ ತಂದೆಯವರು ಸಂತೋಷಭರಿತರಾದರು.
ಶ್ರೀ ರಾಮಚಂದ್ರನ್ ರವರು ಸ್ವಾತಂತ್ರ್ಯ ಹೋರಾಟಗಾರಷ್ಟೇ ಅಲ್ಲದೆ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆಗಿದ್ದಾರೆ. 1968 ರಲ್ಲಿ ಗೆಳೆಯರೊಡಗೂಡಿ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, 30-35 ವರ್ಷಗಳ ಕಾಲ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶ್ರೀ ಶಂಕರ ಜಯಂತಿ ಆಚರಣೆ, ಉತ್ಸವ, ಪೂಜಾದಿಗಳು, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆ ಕಾಲದ ಪ್ರಸಿದ್ಧ ಸಂತರು, ವಿದ್ವಾಂಸರು, ಮಹನೀಯರನ್ನು ಆಹ್ವಾನಿಸಿ ಪ್ರವಚನಗಳನ್ನು ಏರ್ಪಡಿಸಿದ್ದ ಕೀರ್ತಿಗೂ ಪಾತ್ರರಾಗಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 14-01-2026 #rsiyertumakuru





--------------------------------------------------------------------------------------------------
youtube ನಲ್ಲಿ ಈ ವಿಡಿಯೋ ವೀಕ್ಷಿಸಿ.....