* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 24 September 2021

ಮಕ್ಕಳು-ಮೊಮ್ಮಕ್ಕಳು, ಬಂಧುಬಳಗದೊಂದಿಗೆ ವಿ.ಎಸ್.ಆರ್... VSR with sons and daughters and grandsons and grand daughters and relatives

 ಮಕ್ಕಳು, ಮೊಮ್ಮಕ್ಕಳು, ಬಂಧು ಬಳಗದೊಂದಿಗೆ ಶ್ರಿ ವಿ.ಎಸ್.ರಾಮಚಂದ್ರನ್....

























Felicitation by Dr. Rafeeq Ahmed Ex MLA of Tumakuru ಡಾ. ರಫೀಕ್ ಅಹಮದ್ ಅವರಿಂದ ಸನ್ಮಾನ

 ಡಾ. ರಫೀಕ್ ಅಹಮದ್ ರವರ ನೇತೃತ್ವದಲ್ಲಿ ಗೌರವಾರ್ಪಣೆ -------------------------------------------

‘ಸ್ವಾತಂತ್ರ್ಯೋತ್ಸವ-75’ ರ ಹಿನ್ನೆಲೆಯಲ್ಲಿ ದಿ.15-08-2021, ಭಾನುವಾರ ಬೆಳಗ್ಗೆ ತುಮಕೂರು ನಗರದ ಜಯನಗರ (ಪಶ್ಚಿಮ)ದಲ್ಲಿರುವ ನಮ್ಮ ನಿವಾಸಕ್ಕೆ ತುಮಕೂರು ನಗರದ ಮಾಜಿ ಶಾಸಕರೂ, ಕಾಂಗ್ರೆಸ್ ಮುಖಂಡರೂ ಹಾಗೂ ಆತ್ಮೀಯರೂ ಆದ ಡಾ. ಎಸ್.ರಫೀಕ್ ಅಹಮದ್ ರವರು ಕಾಂಗ್ರೆಸ್ ಮುಖಂಡರುಗಳೊಡನೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (92) ಅವರಿಗೆ ಅತ್ಯಂತ ಆದರಪೂರ್ವಕವಾಗಿ ಗೌರವಾರ್ಪಣೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆರ್. ರಾಮಕೃಷ್ಣ ರವರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರೂ ಹಾಗೂ ಮಾಜಿ ಮೇಯರ್ ರವರೂ ಆದ ಶ್ರೀಮತಿ ಗೀತಾ ರುದ್ರೇಶ್ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಹಾಗೂ ಮಾಜಿ ಟೂಡಾ ಸದಸ್ಯರೂ ಆದ ಶ್ರೀ ಜಿ. ರಾಜು ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ, ಮಾಜಿ ನಗರಸಭಾ ಸದಸ್ಯರೂ ಆದ ಶ್ರೀ ಮಹಬೂಬ್ ಪಾಷ ರವರು, ಕಾರ್ಪೊರೇಟರ್ ಶ್ರೀ ಟಿ.ಎಂ. ಮಹೇಶ್ ರವರು ಹಾಗೂ ಇತರ ಅನೇಕ ಮುಖಂಡರುಗಳು ಆಗಮಿಸಿ, ಗೌರವಾರ್ಪಣೆ ನೆರವೇರಿಸಿ ಸಂತೋಷಪಟ್ಟರು. ಜೊತೆಗೆ ನಮ್ಮ ತಂದೆಯವರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಎಲ್ಲರಿಗೂ ನಮ್ಮ ತಂದೆಯವರು ಶುಭಕೋರಿದರು.
ಡಾ. ರಫೀಕ್ ಅಹಮದ್ ಅವರ ನಿವಾಸದಿಂದ ಎಲ್ಲರೂ ಪಾದಯಾತ್ರೆಯಲ್ಲೇ ಬಂದು ಹೋದದ್ದು ವಿಶೇಷವಾಗಿತ್ತು.






Felicitation by D C ಜಿಲ್ಲಾಧಿಕಾರಿಗಳಿಂದ ಸನ್ಮಾನ (ಸ್ವಾತಂತ್ರ್ಯೋತ್ಸವ -75 ಹಿನ್ನೆಲೆ)

 ''ಸ್ವಾತಂತ್ರ್ಯೋತ್ಸವ-75" ಹಿನ್ನೆಲೆಯಲ್ಲಿ ------------------------------

ಜಿಲ್ಲಾಡಳಿತದಿಂದ ಮನೆಗೇ ಆಗಮಿಸಿ ಸನ್ಮಾನ
--------------------------------------
"ಸ್ವಾತಂತ್ರ್ಯೋತ್ಸವ-75" ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ಅವರು ದಿ. 12-08-2021, ಗುರುವಾರ ಸಂಜೆ ತುಮಕೂರಿನ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (92) ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ನೀಡಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದ ಸ್ಮರಣೀಯ ಸಂದರ್ಭವಿದು. ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಚೆನ್ನಬಸಪ್ಪ ಅವರು ಮತ್ತು ತಹಸೀಲ್ದಾರ್ ಶ್ರೀ ಮೋಹನ್ ಕುಮಾರ್ ಅವರು ಇದ್ದರು.

Deputy Commissioner of Tumakuru District Sri Y.S.Patil IAS came to our house on 12-08-2021, Thursday and felicitated our father, Freedom Fighter Sri V S Ramachandran on the eve of 75th Independence Day. ADC Sri Chennabasapp and Tahasildar Sri Mohankumar were also present.