ಅನಿರೀಕ್ಷಿತ ಸಂತೋಷದ ಕ್ಷಣಗಳು...
******************************
ಆತ್ಮೀಯ ಮಿತ್ರರುಗಳಾದ ಆಡಿಟರ್ ಶ್ರೀ ಹರಿಪ್ರಸಾದ್ (ಅಗ್ರಹಾರ) ರವರು ಮತ್ತು ಮೆಳೆಕೋಟೆ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾದ ಶ್ರೀ ಶ್ರೀನಿಧಿ ರವರು ಇಂದು (31-01-2022, ಸೋಮವಾರ) ಸಂಜೆ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದರು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆಗಿರುವ ಶ್ರೀ ವಿ.ಎಸ್.ರಾಮಚಂದ್ರನ್ ರವರ ಕುಶಲೋಪರಿ ವಿಚಾರಿಸಿದರು. ಬಳಿಕ ವೇದ ಮಂತ್ರ ಪಠಿಸುತ್ತ ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಫಲತಾಂಬೂಲ ಸಮರ್ಪಿಸಿ, ಹಾರ ಹಾಕಿ ಸನ್ಮಾನಿಸಿ, ನಮಸ್ಕರಿಸಿದರು. “ನಮ್ಮ ಬಹುದಿನಗಳ ಆಸೆ ಇಂದು ಈಡೇರಿತು” ಎಂದು ಉದ್ಗರಿಸುತ್ತ, ಸಂತೋಷದ ವಾತಾವರಣವನ್ನೇ ಸೃಷ್ಟಿಸಿದರು. ಪರಸ್ಪರ ಪ್ರೀತಿ-ವಿಶ್ವಾಸ-ಸಂತೋಷವನ್ನು ಹಂಚಿಕೊಳ್ಳುವ ಇಂಥ ಅನಿರೀಕ್ಷಿತ ಪ್ರಸಂಗಗಳೇ ಅಲ್ಲವೇ, ಬಾಳಿಗೊಂದು ಭರವಸೆಯನ್ನು ಮೂಡಿಸುವುದು?