ಬಿಟ್ಟೂ ಬಿಡದ ಮಳೆಯಿಂದ ಇಂದು (24-07-2023) ವಾತಾವರಣವೇ ಭಿನ್ನವಾಗಿತ್ತು. ಮುಸ್ಸಂಜೆ ಮಳೆ ಹನಿಯುತ್ತಲೇ ಇತ್ತು. ಆಗಸದಲ್ಲೆಲ್ಲ ಮೂಡ ತುಂಬಿಹೋಗಿತ್ತು. ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನೆಲ್ಲ ಮೋಡ ಆವರಿಸಿತ್ತು. ಆ ವಾತಾವರಣದಲ್ಲೇ ನಾನು ಮತ್ತು ವಿಶ್ವನಾಥನ್ ಅನಿರೀಕ್ಷಿತವಾಗಿ "ನಮ್ಮ ತುಮಕೂರು" ನಗರಕ್ಕೆ ಹೊಂದಿಕೊಂಡಂತೆಯೇ ಇರುವ, ಜೈನ ಧರ್ಮೀಯರ ಪವಿತ್ರ ಕ್ಷೇತ್ರವಾದ ಮಂದರಗಿರಿಗೆ ಹೋದೆವು. ಆದರೆ ಆಗ ವೇಳೆ 6-30 ದಾಟಿತ್ತು. ಅಲ್ಲಿ ಸಂಜೆ 6 ಗಂಟೆಗೆಲ್ಲ ಮೇಲಿನ ಬೆಟ್ಟಕ್ಕೆ ಪ್ರವೇಶ ಬಂದ್ ಆಗುವ ಕಾರಣ ಮಂದರಗಿರಿ ಬೆಟ್ಟದ ಮೇಲೆ ಹೋಗಲಾಗಲಿಲ್ಲ. ಆದರೆ ಬೆಟ್ಟದ ಮೇಲಕ್ಕೆ ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯ ಮೂಲಕ ಹೋಗುವಾಗ ಮೈದಾಳ ಕೆರೆಯ ಮತ್ತು ಆಸುಪಾಸಿನ ವಿಹಂಗಮ ನೋಟ ಲಭಿಸಿತು. ನಿರ್ಜನವಾಗಿದ್ದ, ನಿಃಶಬ್ದವಾಗಿದ್ದ ಆ ಸುಂದರ ಪರಿಸರದಲ್ಲಿ ಕೆಲ ಹೊತ್ತು ಇದ್ದು ವಾಪಸ್ಸಾದೆವು.
Tuesday, 25 July 2023
Sunday, 9 July 2023
With Sri T S Nagabharana, Film Director ಖ್ಯಾತ ಚಿತ್ರ ನಿರ್ದೇಶಕರಾದ ಶ್ರೀ ಟಿ.ಎಸ್.ನಾಗಾಭರಣ ಅವರೊಡನೆ 2023
With Sri T S Nagabharana ..... R Vishwanathan (Left) & R S Iyer (Right)
With Sri T S Nagabharana ..... R Vishwanathan (Left) & R S Iyer (Right)
With Sri T S Nagabharana, Wellknown Film Director and Dr. K R Sriharsha, Chairman, Environmental Impact Assesment Authority-Karnataka
From Left- Sri T S Ramashesha, Rtd AEE, Sri H K Ramesh, Journalist R S Iyer and R Vishwanathan are seen.
Intro speech by R S Iyer
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರೂ, ನಟರೂ, ರಂಗಕರ್ಮಿಗಳೂ ಆಗಿರುವ ಶ್ರೀ ಟಿ.ಎಸ್.ನಾಗಾಭರಣರವರನ್ನು ಸನ್ಮಾನಿಸಿದ ಸುಸಂದರ್ಭ. ಚಿತ್ರದಲ್ಲಿ (ಎಡದಿಂದ) ತುಮಕೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀ ವಿಷ್ಣುವರ್ಧನ್, ನಂದಿನಿ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷ ಶ್ರೀ ಹೆಚ್.ಕೆ.ರಮೇಶ್, ಸರಸ್ ಫೌಂಡೇಷನ್ ಅಧ್ಯಕ್ಷ ಶ್ರೀ ಆರ್.ವಿಶ್ವನಾಥನ್, ಕಾರ್ಯದರ್ಶಿ ಹಾಗೂ ಪತ್ರಕರ್ತ ಶ್ರೀ ಆರ್.ಎಸ್. ಅಯ್ಯರ್, ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕೆ.ಆರ್.ಶ್ರೀಹರ್ಷರವರನ್ನು ಕಾಣಬಹುದು.
ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕೆ.ಆರ್.ಶ್ರೀಹರ್ಷರವರನ್ನು ಸನ್ಮಾನಿಸಿದ ಸಂದರ್ಭ. ಚಿತ್ರದಲ್ಲಿ (ಎಡದಿಂದ) ಶ್ರೀ ಹೆಚ್.ಕೆ.ರಮೇಶ್, ಶ್ರೀ ಟಿ.ಎಸ್.ನಾಗಾಭರಣ, ಶ್ರೀ ಆರ್.ವಿಶ್ವನಾಥನ್, ಶ್ರೀ ಆರ್.ಎಸ್.ಅಯ್ಯರ್ ಮತ್ತು ತುಮಕೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀ ವಿಷ್ಣುವರ್ಧನ್ ಇದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರೂ, ನಟರೂ, ರಂಗಕರ್ಮಿಗಳೂ ಆಗಿರುವ ಶ್ರೀ ಟಿ.ಎಸ್.ನಾಗಾಭರಣರವರು ಮತ್ತು ಅತಿಥಿಗಳಾಗಿದ್ದ ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕೆ.ಆರ್.ಶ್ರೀಹರ್ಷರವರು ದಿ.23-06-2023, ಶುಕ್ರವಾರ ಸಂಜೆ ತುಮಕೂರಿನಲ್ಲಿ ನಮ್ಮ ಸರಸ್ ಫೌಂಡೇಷನ್ ವತಿಯ "ಡಿವಿಜಿ ನೆನಪು" ಉಪನ್ಯಾಸ ಮಾಲಿಕೆಯ "84 ನೇ ಕಾರ್ಯಕ್ರಮ"ಕ್ಕೆ ಉಪನ್ಯಾಸ ನೀಡಲು ಆಗಮಿಸಿದಾಗ ನಾವು ಸ್ವಾಗತಿಸಿದ ಸಂದರ್ಭ.
ಚಿತ್ರದಲ್ಲಿ (ಎಡದಿಂದ) ಸರಸ್ ಅಧ್ಯಕ್ಷ ಆರ್.ವಿಶ್ವನಾಥನ್, ಶ್ರೀ ನಾಗಾಭರಣರವರು, ನಾನು (ಆರ್.ಎಸ್.ಅಯ್ಯರ್), ಡಾ. ಕೆ.ಆರ್.ಶ್ರೀಹರ್ಷರವರು ಮತ್ತು ನಿವೃತ್ತ ಎ.ಇ.ಇ. ಶ್ರೀ ರಾಮಶೇಷರವರು ಇದ್ದೇವೆ.
ಶ್ರೀ ನಾಗಾಭರಣರವರ ಸರಳತೆ, ಸಜ್ಜನಿಕೆ, ನಮ್ರತೆ, ಸೌಜನ್ಯದ ನಡೆನುಡಿಗಳು ಹೃನ್ಮನ ಸೆಳೆಯಿತು. ಅಂತೆಯೇ ಅವರ ಪ್ರಬುದ್ಧ ಉಪನ್ಯಾಸವೂ ಆಕರ್ಷಿಸಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 23-06-2023
Subscribe to:
Posts (Atom)