ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 25 July 2023

Mandaragiri Hills -Tumakuru- 24-07-2023 ಮಂದರಗಿರಿ ಬೆಟ್ಟ, ತುಮಕೂರು

 ಬಿಟ್ಟೂ ಬಿಡದ ಮಳೆಯಿಂದ ಇಂದು (24-07-2023) ವಾತಾವರಣವೇ ಭಿನ್ನವಾಗಿತ್ತು. ಮುಸ್ಸಂಜೆ ಮಳೆ ಹನಿಯುತ್ತಲೇ ಇತ್ತು. ಆಗಸದಲ್ಲೆಲ್ಲ ಮೂಡ ತುಂಬಿಹೋಗಿತ್ತು. ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನೆಲ್ಲ ಮೋಡ ಆವರಿಸಿತ್ತು. ಆ ವಾತಾವರಣದಲ್ಲೇ ನಾನು ಮತ್ತು ವಿಶ್ವನಾಥನ್ ಅನಿರೀಕ್ಷಿತವಾಗಿ "ನಮ್ಮ ತುಮಕೂರು" ನಗರಕ್ಕೆ ಹೊಂದಿಕೊಂಡಂತೆಯೇ ಇರುವ, ಜೈನ ಧರ್ಮೀಯರ ಪವಿತ್ರ ಕ್ಷೇತ್ರವಾದ ಮಂದರಗಿರಿಗೆ ಹೋದೆವು. ಆದರೆ ಆಗ ವೇಳೆ 6-30 ದಾಟಿತ್ತು. ಅಲ್ಲಿ ಸಂಜೆ 6 ಗಂಟೆಗೆಲ್ಲ ಮೇಲಿನ ಬೆಟ್ಟಕ್ಕೆ ಪ್ರವೇಶ ಬಂದ್ ಆಗುವ ಕಾರಣ ಮಂದರಗಿರಿ ಬೆಟ್ಟದ ಮೇಲೆ ಹೋಗಲಾಗಲಿಲ್ಲ. ಆದರೆ ಬೆಟ್ಟದ ಮೇಲಕ್ಕೆ ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯ ಮೂಲಕ ಹೋಗುವಾಗ ಮೈದಾಳ ಕೆರೆಯ ಮತ್ತು ಆಸುಪಾಸಿನ ವಿಹಂಗಮ ನೋಟ ಲಭಿಸಿತು. ನಿರ್ಜನವಾಗಿದ್ದ, ನಿಃಶಬ್ದವಾಗಿದ್ದ ಆ ಸುಂದರ ಪರಿಸರದಲ್ಲಿ ಕೆಲ ಹೊತ್ತು ಇದ್ದು ವಾಪಸ್ಸಾದೆವು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 24-07-2023
















No comments:

Post a Comment