ಶ್ರೀ ಗಾಯತ್ರಿ ಸಹಕಾರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ
ತುಮಕೂರಿನ ಸೋಮೇಶ್ವರಪುರಂನಲ್ಲಿರುವ ಪ್ರತಿಷ್ಠಿತ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘವು ಪ್ರಕಟಿಸಿರುವ “2026 ನೇ ಹೊಸ ವರ್ಷದ ದಿನದರ್ಶಿ ”(ಕ್ಯಾಲೆಂಡರ್)ಯನ್ನು ಇಂದು (ದಿ. 12-12-2025) ಸಂಜೆ ನಮ್ಮ ನಿವಾಸದಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಬಿಡುಗಡೆಗೊಳಿಸಿ, ಶುಭ ಕೋರಿದರು.
ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಕೆ.ವಿ.ಕುಮಾರ್ ರವರ ನೇತೃತ್ವದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಸಿ.ಫಣೀಶ್, ನಿರ್ದೇಶಕರುಗಳಾದ ಶ್ರೀ ಸಿ.ಎನ್.ರಮೇಶ್, ಶ್ರೀ ಎಸ್.ಶ್ರೀನಿವಾಸ್, ಶ್ರೀ ಡಿ.ಎಸ್.ಹರೀಶ್, ಶ್ರೀ ಟಿ.ಎಸ್.ಮಂಜುನಾಥ್, ಶ್ರೀ ಕೆ.ವಿ.ಪ್ರಕಾಶ್, ಶ್ರೀ ಟಿ.ಜಿ.ವೇದಮೂರ್ತಿ, ಶ್ರೀಮತಿ ಎಸ್.ವಿ. ರೂಪ ರವರುಗಳು ಆಗಮಿಸಿದ್ದರು. ಇವರೊಂದಿಗೆ ಸಂಘದ ಸಿ.ಇ.ಓ. ಶ್ರೀಮತಿ ಸುಕನ್ಯರವರು ಹಾಗೂ ಹೊಸ ಸಿ.ಇ.ಓ. ಆಗಿ ನಿಯುಕ್ತರಾಗಿರುವ ಶ್ರೀ ನಾಗದತ್ತ ರವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಗಾಯತ್ರಿ ಸಹಕಾರ ಸಂಘದ ಪರವಾಗಿ ಪದಾಧಿಕಾರಿಗಳು ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ, ಮಾಲಾರ್ಪಣೆ ಮಾಡಿ ಗೌರವಿಸಿದರು ಹಾಗೂ ಆಶೀರ್ವಾದ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ನಾನು ಮತ್ತು ವಿಶ್ವನಾಥನ್ ಹಾಜರಿದ್ದು ಗಾಯತ್ರಿ ಸಹಕಾರ ಸಂಘದ ಈ ಎಲ್ಲ ಗಣ್ಯರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಅರ್ಪಿಸಿದೆವು.
youtube link: https://youtu.be/lQ14SjIGT7c?si=JF2w-fSP2sng69ux
-ಆರ್.ಎಸ್.ಅಯ್ಯರ್, ತುಮಕೂರು, ದಿ. 12-12-2025
†************--**********************
~~~~~~~~~~~~~~~~~~~~~









No comments:
Post a Comment