* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 17 September 2016

Alasettykere Anthima Yathre 05-06-2002 ಅಳಸೆಟ್ಟಿಕೆರೆ ಅಂತಿಮಯಾತ್ರೆ-

ಅಗಲಿದ ಕೆರೆಗೆ ಹೀಗೊಂದು ಅಂತಿಮ ನಮನ....
**************************************
ಇದು 2002 ರ ಸಂಗ್ರಹ ಚಿತ್ರ. ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಈಗಿರುವ ಹೇಮಾವತಿ ಕಛೇರಿ ಒಳಗೊಂಡು ಹಿಂಬದಿಯ ಪ್ರದೇಶ "ಅಳಸೆಟ್ಟಿಕೆರೆ" ಆಗಿತ್ತು. ಆ ಕೆರೆ ಅಂಗಳ ವಿವಿಧೋದ್ದೇಶಗಳಿಗೆ ವಿಂಗಡಣೆಗೊಂಡಿತು. ಆ ಮೂಲಕ ಆ ಕೆರೆ ಇನ್ನಿಲ್ಲವಾಯಿತು. ಆ ವರ್ಷದ ವಿಶ್ವಪರಿಸರ ದಿನಾಚರಣೆಯನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಮುಖ್ಯಸ್ಥ ಶ್ರೀ ಟಿ.ವಿ.ಎನ್.ಮೂರ್ತಿ ಅವರು ಈ ಕೆರೆಗೆ ಅರ್ಪಿಸಿ, ವಿಶಿಷ್ಟ ರೀತಿಯ ಪ್ರತಿಭಟನಾ ಕಾರ್ಯಕ್ರಮ ರೂಪಿಸಿದ್ದರು. ಅಂದು (05-06-2002) ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ "ಅಳಸೆಟ್ಟಿಕೆರೆಯ ಶವಯಾತ್ರೆ" ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ಹೊರಟು ಕುಣಿಗಲ್ ರಸ್ತೆಯ ಹೇಮಾವತಿ ಕಛೇರಿ ಪಕ್ಕ ಅದನ್ನು ಹೂತು, ಅಲ್ಲೊಂದು ಕಲ್ಲು ನೆಡಲಾಯಿತು. ಆ ಮೂಲಕ ಅಳಸೆಟ್ಟಿಕೆರೆಗೆ ಅಂತಿಮ ನಮನ ಸಲ್ಲಿಸಲಾಯಿತು. ಆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಂದು ಸರ್ವಶ್ರೀ ಟಿ.ವಿ.ಎನ್.ಮೂರ್ತಿ, ಬಿ.ವಿ. ಗುಂಡಪ್ಪ, ಸಿ.ಯತಿರಾಜು, ಚಂದ್ರಶೇಖರ ಉಪಾಧ್ಯಾಯ, ನವೀನ್, ನರಸಿಂಹರಾಜು, ಮುರಳಿಕೃಷ್ಣ, ಅಮೀನ್ ಅಹಮದ್, ಸುರೇಶ್ ಅಗ್ರಹಾರ ಮತ್ತಿತರ ಪರಿಸರಾಸಕ್ತರು ಭಾಗಿಯಾಗಿದ್ದರು. ನಾನೂ ( R. S. Iyer ) ಸಹಾ ಪಾಲ್ಗೊಂಡಿದ್ದೆ.

 

 – ಆರ್.ಎಸ್.ಅಯ್ಯರ್, ತುಮಕೂರು 











No comments:

Post a Comment