ಮೈಸೂರಿನ ಸುತ್ತೂರು ಮಠಾಧೀಶರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದರ್ಶನಾಶೀರ್ವಾದ ಪಡೆಯುವ ಸುಯೋಗ ಅನಿರೀಕ್ಷಿತವಾಗಿ 27.11.2017, ಸೋಮವಾರ ಒದಗಿ ಬಂದಿತು. ತುಮಕೂರಿನ ಪ್ರಾಧ್ಯಾಪಕರಾದ ಡಾ. ಸದಾಶಿವಯ್ಯ (ಅಚರ್ಡ್) ಅವರ ನಿವಾಸಕ್ಕೆ ಶ್ರೀಗಳು ಇಂದು ಆಗಮಿಸಿದ್ದಾಗ ಈ ಸ್ಮರಣೀಯ ಅವಕಾಶ ನನಗೆ ಲಭಿಸಿತು... with Sutturu Jagadguru H.H. Sri Shivarathri Deshikendra Maha Swamiji ..
Tuesday, 26 December 2017
R S Iyer with H H Dalai Lama -26-12-2017 ಬೌದ್ಧಗುರು ಪ.ಪೂ. ದಲೈಲಾಮರವರೊಡನೆ....
ಬೌದ್ಧಗುರು ಪ.ಪೂ. ದಲೈಲಾಮರವರೊಡನೆ....
*********************************************
ಅವರನ್ನು ನೋಡಿದಾಗ, ಅವರ ಬಳಿ ನಿಂತಾಗ, ಅವರಿಗೆ ಹಸ್ತಲಾಘವ ನೀಡಿದಾಗ ನಮಗೆ ವಿದ್ಯುತ್ ಸಂಚಾರವಾದಂತಾಯಿತು... ಅವರ ಆ ಸ್ನಿಗ್ಧ ಹಸನ್ಮುಖ ಮನದಲ್ಲಿ ಅಚ್ಚೊತ್ತಿಬಿಟ್ಟಿತು... ಬೌದ್ಧ ಧರ್ಮಗುರುಗಳಾದ ಪರಮ ಪೂಜ್ಯರಾದ ದಲೈ ಲಾಮರವರು ದಿ. 26-12-2017, ಮಂಗಳವಾರ ತುಮಕೂರಿನ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದಾಗ ನಮಗೆ (ನಾನು, ವಿಶ್ವನಾಥನ್ R Vishwanathan ) ಈ ಅದೃಷ್ಟ ಒದಗಿತು. ನಮ್ಮೊಡನೆ ಪತ್ರಕರ್ತ ಮಿತ್ರ ಶ್ರೀ ಕುರ್ಕೆ ಪ್ರಶಾಂತ್ ರವರೂ ಇದ್ದಾರೆ. (ಫೋಟೋ: ಶ್ರೀ ಟಿ.ಎಚ್. ಸುರೇಶ್) R.S.Iyer and R.Vishwanathan With His Holiness the 14th Dalai Lama, Buddist Monk..@ Tumkur University, Tumkur, 26-12-2017, Tuesday. The 14th Dalai Lama, known as Gyalwa Rinpoche to the Tibetan people, is the current Dalai Lama, the highest spiritual leader and former head of state of Tibet.
with H.H. Dalai Lama... - R.S.Iyer and Sri Kurke Prashanth
with H.H. Dalai Lama... R.Vishwanathan, R.S.Iyer & Sri Kurke Prashanth (Prajavani Reporter)
with H.H. Dalai Lama... - R.Vishwanathan
Tuesday, 22 August 2017
ಶ್ರೀಗಳಿಂದ ಆಶೀರ್ವಾದ 21-08-2017, ಸೋಮವಾರ
ಶ್ರೀಗಳಿಂದ ಆಶೀರ್ವಾದ
***********************ಕಳೆದ ಕೆಲ ದಿನಗಳಿಂದ ನಮ್ಮ ತಂದೆ –ಸ್ವಾತಂತ್ರ್ಯಹೋರಾಟಗಾರರಾದ- ಶ್ರೀ ವಿ.ಎಸ್.ರಾಮಚಂದ್ರನ್ ರವರು ಶೀತದಿಂದ ಅಸ್ವಸ್ಥರಾಗಿದ್ದಾರೆಂಬುದನ್ನು ತಿಳಿದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಇಂದು (ದಿನಾಂಕ 21-08-2017, ಸೋಮವಾರ) ಸಂಜೆ ನಮ್ಮ ಮನೆಗೇ ಆಗಮಿಸಿ ನಮ್ಮ ತಂದೆಯವರನ್ನು ಭೇಟಿಯಾಗಿ ಆಶೀರ್ವದಿಸಿ, ಶೀಘ್ರವಾಗಿ ಗುಣಮುಖರಾಗಿರೆಂದು ಹಾರೈಸಿದರು. ಪೂಜ್ಯ ಸ್ವಾಮೀಜಿಯವರ ಭೇಟಿ ನಮ್ಮ ತಂದೆಯವರಲ್ಲಿ ಚೈತನ್ಯವನ್ನೇ ಮೂಡಿಸಿತು. ನಮಗಂತೂ ಅತ್ಯಂತ ಆನಂದವನ್ನು ಉಂಟುಮಾಡಿತು. ಆ ಸುಸಂದರ್ಭದ ಅವಿಸ್ಮರಣೀಯ ಕ್ಷಣಗಳಿವು….
Saturday, 19 August 2017
Wednesday, 28 June 2017
Durgada Halli Lake 25-06-2017
ತುಮಕೂರು ಸನಿಹವಿರುವ -(ದೇವರಾಯನದುರ್ಗ ಅರಣ್ಯದಿಂದ ಸುತ್ತುವರೆದಿರುವ)- ದುರ್ಗದ ಹಳ್ಳಿಯ ಕೆರೆಯ ವಿಹಂಗಮ ನೋಟವಿದು... ದಿನಾಂಕ 25-06-2017, ಭಾನುವಾರ ಸಂಜೆ ನಾನು ಮತ್ತು ವಿಶ್ವನಾಥನ್ Vishwanathan R. Tumkur ಅಲ್ಲಿಗೆ ತೆರಳಿದ್ದಾಗ ಸೂರ್ಯಾಸ್ತದ ಹೊತ್ತಿನ ಆ ಪ್ರಾಕೃತಿಕ ಸೊಬಗು ನಮ್ಮ ಮನಸೂರೆಗೊಂಡ ಕ್ಷಣಗಳು...
Today evening we visited Durgada Halli Lake, near to Tumakuru.
Sunday, 18 June 2017
with Justice N.Santhosh Hegde
ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮವು ಕೊಳವೆಬಾವಿ ಕೊರೆಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ದಿನಾಂಕ 17-06-2017, ಶನಿವಾರ ಅದನ್ನು ಉದ್ಘಾಟಿಸಲು ಆಗಮಿಸಿದ್ದ ಮಾಜಿ ಲೋಕಾಯುಕ್ತರಾದ ನ್ಯಾ|| ಎನ್. ಸಂತೋಷ್ ಹೆಗ್ಡೆಯವರನ್ನು ನಾನು ಮತ್ತು ಆರ್.ವಿಶ್ವನಾಥನ್ ಸಂಧಿಸಿದ ಸಂತಸದ ಕ್ಷಣ...with former Lokayuktha Justice N.Santhosh Hegde
Saturday, 28 January 2017
SHRINGERI visit 14-01-2017 R S Iyer Tumkur
ಶ್ರೀ ಶೃಂಗೇರಿಯ ಶ್ರೀ ಶಾರದಾಂಬೆಯ ದಿವ್ಯ ಕ್ಷೇತ್ರದಲ್ಲಿ.... (ಭಾಗ-2)
ನಮ್ಮ ಪೂಜ್ಯ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರ 88 ನೇ ಹುಟ್ಟುಹಬ್ಬದ ಅಂಗವಾಗಿ 'ಸಂಕ್ರಾಂತಿ'ಯ ಶುಭದಿನದಂದು (ದಿ. 14-01-2017, ಶನಿವಾರ) ಸಂಜೆ ನಮ್ಮ ತಂದೆಯವರೊಂದಿಗೆ ನಾವು (ನಾನು, ಆರ್.ವಿಶ್ವನಾಥನ್ Vishwanathan R. Tumkur) ಶ್ರೀ ಶೃಂಗೇರಿಗೆ ಭೇಟಿ ನೀಡಿದೆವು. ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ ಮತ್ತು ಉಭಯ ಜಗದ್ಗುರುಗಳ ದರ್ಶನ 'ಸಂಕ್ರಾಂತಿ'ಯನ್ನು ನಮ್ಮ ಪಾಲಿಗೆ ಸಾರ್ಥಕಗೊಳಿಸಿತು.... We visited Sringeri Sharada Peetam on 14-01-2017 and having darshan of Sri Sharadambe, Sri Vidyashankara and ubhaya jagadgurus... (R S Iyer Tumkur and R Vishwanathan Tumkur)
ನಮ್ಮ ಪೂಜ್ಯ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರ 88 ನೇ ಹುಟ್ಟುಹಬ್ಬದ ಅಂಗವಾಗಿ 'ಸಂಕ್ರಾಂತಿ'ಯ ಶುಭದಿನದಂದು (ದಿ. 14-01-2017, ಶನಿವಾರ) ಸಂಜೆ ನಮ್ಮ ತಂದೆಯವರೊಂದಿಗೆ ನಾವು (ನಾನು, ಆರ್.ವಿಶ್ವನಾಥನ್ Vishwanathan R. Tumkur) ಶ್ರೀ ಶೃಂಗೇರಿಗೆ ಭೇಟಿ ನೀಡಿದೆವು. ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ ಮತ್ತು ಉಭಯ ಜಗದ್ಗುರುಗಳ ದರ್ಶನ 'ಸಂಕ್ರಾಂತಿ'ಯನ್ನು ನಮ್ಮ ಪಾಲಿಗೆ ಸಾರ್ಥಕಗೊಳಿಸಿತು.... We visited Sringeri Sharada Peetam on 14-01-2017 and having darshan of Sri Sharadambe, Sri Vidyashankara and ubhaya jagadgurus... (R S Iyer Tumkur and R Vishwanathan Tumkur)
V S Ramachandran, R Vishwanathan and R S Iyer Tumkur
Subscribe to:
Posts (Atom)