* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 24 February 2019

ಶಿವಾಜಿ ಜಯಂತಿಯಲ್ಲಿ ಸನ್ಮಾನ 24-10-2019, Felicitation- Shivaji Jayanthi

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭ ಸಂದರ್ಭದಲ್ಲಿ ಮಾಜಿ ಯೋಧರೊಂದಿಗೆ ಹಾಗೂ ಸಾಧಕರೊಂದಿಗೆ ನಾನೂ ಸನ್ಮಾನಿಸಲ್ಪಟ್ಟ ಸಂತೋಷ ಇಂದು ( ದಿ.24-02-2019, ಭಾನುವಾರ) ನನ್ನ ಪಾಲಿನದು. 
ನಮ್ಮ ತುಮಕೂರಿನ ಗೋಕುಲ ಬಡಾವಣೆ ಎರಡನೇ ಹಂತದ ಟೂಡಾಲೇಔಟ್ ನಲ್ಲಿ ಶ್ರೀಮತಿ ಸುಮಂಗಳಬಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ.ಬಿ.ಗೋಪಿರಾವ್ ಲೌಟೆ ರವರ ನೇತೃತ್ವದಲ್ಲಿ ಇಂದು ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವ, ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಹಾಗೂ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಯೋಧರಾದ ಶ್ರೀ ಪಾಂಡುರಂಗರವರು ಮತ್ತು ಖ್ಯಾತ ಕರಾಟೆ ಪಟು ಶ್ರೀ ಕೆ.ಕೃಷ್ಣಮೂರ್ತಿ ರವರೊಡನೆ ನಾನೂ ಸನ್ಮಾನಿತನಾದೆ. ಜೊತೆಗೆ ಅತ್ಯಂತ ಹಿರಿಯರಾದ ಶ್ರೀ ಕೆ.ವಿ. ವೆಂಕಟರಾವ್ ಮಹರ್ನೋರ್ (91 ವರ್ಷ) ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಥಾವರೆ (80 ವರ್ಷ) ಅವರನ್ನೂ ಸನ್ಮಾನಿಸಲಾಯಿತು.
https://www.facebook.com/r.s.iyertumkur







Monday, 18 February 2019

On Palasandra Road.... ಪಾಲಸಂದ್ರ ರಸ್ತೆಯಲ್ಲಿ....

ಎರಡು ತಿಂಗಳುಗಳ ಸುದೀರ್ಘ ಅವಧಿಯ ಬಳಿಕ ಇಂದು (18-02-2019, ಸೋಮವಾರ) ಸಂಜೆ ಮತ್ತೆ ಹೀಗೆ ಸಂಚಾರ ಪುನರಾರಂಭ.. ಸೂರ್ಯಾಸ್ತದ ಹೊತ್ತಿನಲ್ಲಿ ತುಮಕೂರಿನ ಹೊರವಲಯದ ಶೆಟ್ಟಿಹಳ್ಳಿ ದಾಟಿ ಪಾಲಸಂದ್ರದತ್ತ ಸಾಗುವಾಗ ಕಂಡುಬಂದ ಆಕರ್ಷಕ ತೋಟದ ಸಾಲು...



Sunday, 3 February 2019

Shivagange Sri Sharadamba Temple, ಶಿವಗಂಗೆಯ ಶ್ರೀ ಶಾರದಾಂಬೆ ಸನ್ನಿಧಿ

ಶಿವಗಂಗೆಯ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ...
**********************************************
ಶಿವಗಂಗೆಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಇಂದು (ದಿ. 03-02-2019, ಭಾನುವಾರ) ಸಂಜೆ ಕೆಲ ಹೊತ್ತು ಇರುವ ಸುಯೋಗ ನಮ್ಮದಾಯಿತು. ನಮ್ಮ ತುಮಕೂರು ಜಿಲ್ಲೆಯ ಗಡಿಯಂಚಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿರುವ ಶಿವಗಂಗೆಯ ಭವ್ಯ ಬೆಟ್ಟದ ತಪ್ಪಲಿನಲ್ಲಿ ಅತ್ಯಂತ ಪ್ರಶಾಂತ ಪರಿಸರದಲ್ಲಿದೆ ಈ ದೇವಾಲಯ.
ಜೀವಂತಸ್ವರೂಪದಿಂದಲೇ ಕಂಗೊಳಿಸುತ್ತಿರುವ ಅಮೃತಶಿಲೆಯ ದೇವಿಯ ದಿವ್ಯ ವಿಗ್ರಹವು ಮನದಲ್ಲಿ ಅಲೌಕಿಕ ಸಂತೋಷ ಮೂಡಿಸಿತು. ದೇವಾಲಯದ ಗೋಶಾಲೆಯಲ್ಲಿ ದೇಸಿ ತಳಿಯ ಗೋವುಗಳನ್ನು ಅಕ್ಕರೆಯಿಂದ ಸಾಕಲಾಗುತ್ತಿದೆ. ಹೊಸ ಪ್ರಸಾದ ನಿಲಯ ಸೇರಿದಂತೆ ಹಲವು ಕಟ್ಟಡಗಳು ಭರದಿಂದ ನಿರ್ಮಾಣಗೊಳ್ಳುತ್ತಿವೆ. ಮತ್ತೊಂದು ಬದಿ ಅಧಿಷ್ಠಾನವು ಆಕರ್ಷಕವಾಗಿ ಸಿದ್ದಗೊಂಡಿದೆ. ಇನ್ನೂ ಹಲವು ಕಟ್ಟಡಗಳ ನಿರ್ಮಾಣ ನಡೆದಿವೆ..ಕಳೆದ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲೇ ಇಲ್ಲಿ ಗಮನಾರ್ಹ ಸ್ವರೂಪದ ಅಭಿವೃದ್ಧಿ ಕಾರ್ಯಗಳು ಸಾಗಿವೆಯೆಂಬುದು ಸಂತಸದ ವಿಚಾರ.