* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 3 February 2019

Shivagange Sri Sharadamba Temple, ಶಿವಗಂಗೆಯ ಶ್ರೀ ಶಾರದಾಂಬೆ ಸನ್ನಿಧಿ

ಶಿವಗಂಗೆಯ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ...
**********************************************
ಶಿವಗಂಗೆಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿರುವ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಇಂದು (ದಿ. 03-02-2019, ಭಾನುವಾರ) ಸಂಜೆ ಕೆಲ ಹೊತ್ತು ಇರುವ ಸುಯೋಗ ನಮ್ಮದಾಯಿತು. ನಮ್ಮ ತುಮಕೂರು ಜಿಲ್ಲೆಯ ಗಡಿಯಂಚಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿರುವ ಶಿವಗಂಗೆಯ ಭವ್ಯ ಬೆಟ್ಟದ ತಪ್ಪಲಿನಲ್ಲಿ ಅತ್ಯಂತ ಪ್ರಶಾಂತ ಪರಿಸರದಲ್ಲಿದೆ ಈ ದೇವಾಲಯ.
ಜೀವಂತಸ್ವರೂಪದಿಂದಲೇ ಕಂಗೊಳಿಸುತ್ತಿರುವ ಅಮೃತಶಿಲೆಯ ದೇವಿಯ ದಿವ್ಯ ವಿಗ್ರಹವು ಮನದಲ್ಲಿ ಅಲೌಕಿಕ ಸಂತೋಷ ಮೂಡಿಸಿತು. ದೇವಾಲಯದ ಗೋಶಾಲೆಯಲ್ಲಿ ದೇಸಿ ತಳಿಯ ಗೋವುಗಳನ್ನು ಅಕ್ಕರೆಯಿಂದ ಸಾಕಲಾಗುತ್ತಿದೆ. ಹೊಸ ಪ್ರಸಾದ ನಿಲಯ ಸೇರಿದಂತೆ ಹಲವು ಕಟ್ಟಡಗಳು ಭರದಿಂದ ನಿರ್ಮಾಣಗೊಳ್ಳುತ್ತಿವೆ. ಮತ್ತೊಂದು ಬದಿ ಅಧಿಷ್ಠಾನವು ಆಕರ್ಷಕವಾಗಿ ಸಿದ್ದಗೊಂಡಿದೆ. ಇನ್ನೂ ಹಲವು ಕಟ್ಟಡಗಳ ನಿರ್ಮಾಣ ನಡೆದಿವೆ..ಕಳೆದ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲೇ ಇಲ್ಲಿ ಗಮನಾರ್ಹ ಸ್ವರೂಪದ ಅಭಿವೃದ್ಧಿ ಕಾರ್ಯಗಳು ಸಾಗಿವೆಯೆಂಬುದು ಸಂತಸದ ವಿಚಾರ.






No comments:

Post a Comment