ಕಂಬದಿಂದ ಸೀಳಿ ಬಂದ ಉಗ್ರ ನರಸಿಂಹನು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನ ಹೊಟ್ಟೆಯನ್ನು ಬಗೆಯುವ ದೃಶ್ಯದ ಈ ವಿಗ್ರಹ ಸುಮಾರು 20 ಅಡಿಗಳಿಗೂ ಎತ್ತರವಿದ್ದು ಎಲ್ಲರ ಮನಸೂರೆಗೊಳ್ಳುತ್ತದೆ. ಇನ್ನು ಈ ಪುರಾತನ ದೇಗುಲದಲ್ಲಿ ವಿಗ್ರಹವಿಲ್ಲ. ಕಂಬವೊಂದರಲ್ಲಿ ಶ್ರೀನರಸಿಂಹಸ್ವಾಮಿ ಉದ್ಭವವಾಗಿದೆಯೆಂಬ ಪ್ರತೀತಿ ಇದ್ದು, ಆ ಕಂಬವೇ ಇಲ್ಲಿನ ಆರಾಧ್ಯದೈವ. ದೇವಾಲಯವನ್ನು ಸೊಬಗಿನಿಂದ ನವೀಕರಿಸಲಾಗಿದೆ. ತುಂಬ ಅಚ್ಚುಕಟ್ಟಾಗಿದೆ. ದೇಗುಲ ಪ್ರಾಂಗಣದಲ್ಲಿ ಕುಳಿತರೆ, ಸುತ್ತಲಿನ ಪ್ರಕೃತಿಯ ಸೊಬಗು ಅಕ್ಷರಶಃ ಮೈಮರೆಸಿಬಿಡುತ್ತದೆ.
ದಿನಾಂಕ 15-12-2019, ಭಾನುವಾರ ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು. ಸಮಯಾಭಾವದಿಂದ ಇಲ್ಲೇ ಪಕ್ಕದಲ್ಲಿರುವ ಶ್ರೀ ಕೋಟೆ ವೆಂಕಟರಮಣ ದೇಗುಲದ ಬೆಟ್ಟವನ್ನು ಏರಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಕೋಟೆ ಬೆಟ್ಟವನ್ನು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಮೂಲಕ ಸುಲಭವಾಗಿ ತಲುಪಬಹುದು.
https://www.youtube.com/watch?v=xHsjs_vYao0
http://rsiyertumkur.blogspot.com/
No comments:
Post a Comment