😊“ಸುಗ್ಗಿ ಹಬ್ಬ” ದಲ್ಲಿ ಭಾಗಿಯಾದ ಸಂತಸದ ಕ್ಷಣ..😊
-------------------------------------------------------
🔸ಗ್ರಾಮೀಣ ಸೊಗಡು ಕ್ರಮೇಣ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ತುಮಕೂರು ನಗರದ ಹೊರವಲಯದಲ್ಲಿ ಇಂದು “ಸಂಕ್ರಾಂತಿ” ಹಬ್ಬದಂದು (ದಿನಾಂಕ 15-01-2020, ಬುಧವಾರ) ಸಂಜೆ “ಸುಗ್ಗಿಹಬ್ಬ” ಸಂಭ್ರಮದಿಂದ ನಡೆದು ಮತ್ತೊಮ್ಮೆ ಗ್ರಾಮೀಣ ಸೊಗಡಿನ ಬೆಳಕನ್ನು ಪಸರಿಸಿತು.
-------------------------------------------------------
🔸ಗ್ರಾಮೀಣ ಸೊಗಡು ಕ್ರಮೇಣ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ತುಮಕೂರು ನಗರದ ಹೊರವಲಯದಲ್ಲಿ ಇಂದು “ಸಂಕ್ರಾಂತಿ” ಹಬ್ಬದಂದು (ದಿನಾಂಕ 15-01-2020, ಬುಧವಾರ) ಸಂಜೆ “ಸುಗ್ಗಿಹಬ್ಬ” ಸಂಭ್ರಮದಿಂದ ನಡೆದು ಮತ್ತೊಮ್ಮೆ ಗ್ರಾಮೀಣ ಸೊಗಡಿನ ಬೆಳಕನ್ನು ಪಸರಿಸಿತು.
🔸ತುಮಕೂರಿನ ಹನುಮಂತಪುರಕ್ಕೆ ಹೊಂದಿಕೊಂಡಿರುವ ಭಾಗ್ಯನಗರದಲ್ಲಿ (23 ನೇ ವಾರ್ಡ್) ನಡೆದ ಈ “ಸುಗ್ಗಿ ಹಬ್ಬ”ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸುವ ಸದವಕಾಶ ನನಗೆ ಮತ್ತು ಸರಸ್ ಫೌಂಡೇಷನ್ ಅಧ್ಯಕ್ಷ ವಿಶ್ವನಾಥನ್ ಗೆ ಒದಗಿಬಂತು. ಇದಕ್ಕೆ ಕಾರಣೀಭೂತರಾದ ಈ ವಾರ್ಡ್ ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು ಮತ್ತು ಮಾಜಿ ಕಾರ್ಪೊರೇಟರ್ ಶ್ರೀ ಪ್ರೆಸ್ ರಾಜಣ್ಣರವರಿಗೆ ಕೃತಜ್ಞತೆಗಳು.🙏
🔸20 ಜೋಡಿ ಅಲಂಕೃತ ಎತ್ತುಗಳು ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದಿಂದ ಮೆರವಣಿಗೆಯಲ್ಲಿ ಭಾಗ್ಯನಗರಕ್ಕೆ ಬಂದವು. ಭಾಗ್ಯನಗರದ ರಾಮಮಂದಿರದ ಪಕ್ಕ “ಸುಗ್ಗಿಹಬ್ಬ”ದ “ರಾಶಿ ಪೂಜೆ”ಯನ್ನು ವ್ಯವಸ್ಥೆ ಮಾಡಲಾಗಿತ್ತು. ಹೂವಿನಿಂದ ವಿನ್ಯಾಸಗೊಳಿಸಿದ್ದ ದೊಡ್ಡ ರಂಗೋಲಿಯಲ್ಲಿ ಸಂಕ್ರಾಂತಿಯ ಸಂಕೇತಗಳಾದ ಕಬ್ಬು, ಸಿಹಿಗೆಣಸು, ಕಡಲೆಕಾಯಿ, ಅವರೆಕಾಯಿಯನ್ನು ಅಚ್ಚುಕಟ್ಟಾಗಿ ಜೋಡಿಸಿ ಆಕರ್ಷಕವಾಗಿ ಅಲಂಕೃತಗೊಳಿಸಲಾಗಿತ್ತು. ಅದರ ಹಿಂದೆ ಭತ್ತ ಮತ್ತು ರಾಗಿಯ ರಾಶಿಯನ್ನು ಹಾಕಲಾಗಿತ್ತು. ಇವೆಲ್ಲಕ್ಕೂ ಪೂಜೆ ಸಲ್ಲಿಸಲಾಯಿತು. ಬಳಿಕ ಎತ್ತುಗಳಿಗೆ ಬಹುಮಾನ ಘೋಷಿಸಲಾಯಿತು. ಪ್ರಥಮ ಬಹುಮಾನವಾಗಿ 5000 ರೂ., ದ್ವಿತೀಯ ಬಹುಮಾನವಾಗಿ 3000 ರೂ. ಹಾಗೂ ತೃತೀಯ ಬಹುಮಾನವಾಗಿ 2000 ರೂ.ಗಳನ್ನು ಎತ್ತುಗಳ ಪೋಷಕರಿಗೆ ವಿತರಿಸಲಾಯಿತು. ಎಲ್ಲ ಎತ್ತುಗಳ ಪೋಷಕರಿಗೂ ಪಾತ್ರೆಯನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು. ಬಂದವರಿಗೆಲ್ಲ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇಷ್ಟೆಲ್ಲದರ ವ್ಯವಸ್ಥೆ ಮಾಡಿದ್ದವರು ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು.
🔸 ಶ್ರೀ ನರಸಿಂಹಮೂರ್ತಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಿಗಳ ಸಮಾಜದ ಹಿರಿಯ ಮುಖಂಡರಾದ ಶ್ರೀ ಕುಂಭಯ್ಯ, 20 ನೇ ವಾರ್ಡ್ ಕಾರ್ಪೊರೇಟರ್ ಶ್ರೀ ಎ. ಶ್ರೀನಿವಾಸ್, ಮಾಜಿ ಕಾರ್ಪೊರೇಟರ್ ಶ್ರೀ ಪ್ರೆಸ್ ರಾಜಣ್ಣ, ತಿಗಳ ಸಮಾಜದ ಮುಖಂಡರುಗಳಾದ ಶ್ರೀ ಜಹಂಗೀರ್ ರವೀಶ್, ಶ್ರೀ ಎನ್.ಎಸ್.ಶಿವಣ್ಣ, ಯಜಮಾನರಾದ ಶ್ರೀ ಹನುಮಂತರಾಜು, ಶ್ರೀ ಟಿ.ಶ್ರೀನಿವಾಸ್, ಶ್ರೀ ಯತೀಶ್ ರವರು ಹಾಗೂ ನೂರಾರು ಗ್ರಾಮಸ್ಥರುಗಳು ಉಪಸ್ಥಿತರಿದ್ದರು. ಕಳೆದ 61 ವರ್ಷಗಳಿಂದ ಇಲ್ಲಿನ ರಾಮಮಂದಿರದಲ್ಲಿ ಸಂಕ್ರಾಂತಿಯಂದು ಭಜನಾದಿಗಳನ್ನು ಶ್ರೀ ಕುಂಭಯ್ಯರವರು ನಡೆಸಿಕೊಂಡು ಬಂದಿದ್ದರು. ಇದೀಗ ಕಳೆದ ಎರಡು ವರ್ಷಗಳಿಂದ ಅವರ ಪುತ್ರರಾದ ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು ಈ ರೀತಿ “ಸುಗ್ಗಿ ಹಬ್ಬ”ವನ್ನು ಸಂಭ್ರಮದಿಂದ ವ್ಯವಸ್ಥೆ ಮಾಡುತ್ತಿದ್ದಾರೆಂಬುದು ಇಡೀ ನಮ್ಮ ತುಮಕೂರಿಗೆ ಅಭಿಮಾನದ ವಿಷಯವಾಗಿದೆ. 👍
-ಆರ್.ಎಸ್. ಅಯ್ಯರ್, ತುಮಕೂರು
R.S.Iyer and R.Vishwanathan participated in Suggi Habba-2020 at Hanumanthapura, Tumkur
R.S.Iyer inaugurated Suggi Habba
Leaders of Hanumanthapura Tumkur in Suggi Habba 2020
With Sri Press Rajanna, Ex Corporater, Tumkur
With Sri Press Rajanna, Ex Corporater & Sri Renuka, Press Photographer
No comments:
Post a Comment