ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93 ವರ್ಷ) ರವರನ್ನು ಭೇಟಿ ಮಾಡಲೆಂದೇ “ನಮ್ಮ ತುಮಕೂರು” ನಗರದ ಜನಪ್ರಿಯ ರಾಜಕಾರಣಿಗಳೂ, ಬಿಜೆಪಿಯ ಹಿರಿಯ ನಾಯಕರೂ, ಮಾಜಿ ಸಚಿವರೂ ಆದ ಶ್ರೀ ಸೊಗಡು ಶಿವಣ್ಣನವರು ಇಂದು (ದಿ. 07-04-2022, ಗುರುವಾರ) ಬೆಳಗ್ಗೆ ಅನಿರೀಕ್ಷಿತವಾಗಿ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಸುಮಾರು ಅರ್ಧಗಂಟೆ ಕಾಲ ಇದ್ದು ಕುಶಲೋಪರಿ ವಿಚಾರಿಸಿದರು. ನಮ್ಮ ತಂದೆಯವರನ್ನು ನೋಡಿ, ಅವರೊಡನೆ ಮಾತನಾಡಿ ಶ್ರೀ ಸೊಗಡು ಶಿವಣ್ಣನವರು ತುಂಬ ಸಂತೋಷಪಟ್ಟರು. ಶಿವಣ್ಣನವರ ಆಪ್ತರಾದ ಶ್ರೀ ಜಯಸಿಂಹರಾವ್ ರವರೂ ಜೊತೆಯಲ್ಲಿದ್ದರು.
No comments:
Post a Comment