ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 09-04-2022, ಶನಿವಾರ) ಸಂಜೆ ಬೆಂಗಳೂರಿನಿಂದ ನಮ್ಮ ಸಮೀಪ ಬಂಧುಗಳು ನಮ್ಮ ಮನೆಗೆ ಆಗಮಿಸಿದ್ದರು.
ನಮ್ಮ ತಂದೆಯವರ ತಂಗಿ ದಿ|| ಶ್ರೀಮತಿ ವೇದವತಿ ಅವರ ಪುತ್ರಿ ಶ್ರೀಮತಿ ಶಾರದಾಮಣಿ, ಅವರ ಪತಿ ಶ್ರೀ ಕೇಶವಮೂರ್ತಿ, ವೇದವತಿ ಅವರ ಸೊಸೆ ಶ್ರೀಮತಿ ವೇದವಲ್ಲಿ ಕಲ್ಯಾಣರಾಮನ್ ಹಾಗೂ ಅವರ ಪುತ್ರ ವಿಜಯ್ ಕಲ್ಯಾಣರಾಮನ್ ರವರು ಕೆಲಹೊತ್ತು ಇದ್ದು ನಮ್ಮ ತಂದೆಯವರೊಡನೆ ಮಾತನಾಡಿ ಸಂತೋಷಪಟ್ಟರು. ಶ್ರೀಮತಿ ವೇದವಲ್ಲಿ ಅವರು ಪ್ರಸ್ತುತ ದುಬೈ ದೇಶದಲ್ಲಿದ್ದು ಕಳೆದ ವಾರ ಬೆಂಗಳೂರಿಗೆ ಬಂದಿದ್ದು, ಇದೀಗ ಪುನಃ ದುಬೈಗೆ ವಾಪಸ್ಸಾಗುವ ಮುನ್ನ ತುಮಕೂರಿಗೆ ಆಗಮಿಸಿದ್ದರು. ಇವರ ಭೇಟಿ ನಮ್ಮೆಲ್ಲರಿಗೂ ಸಂತೋಷ ಮೂಡಿಸಿತು.
No comments:
Post a Comment