* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 24 May 2024

Dubai Relatives.... ದುಬೈ ಬಂಧುಗಳು ಬಂಧಾಗ... 24-05-2024

 ದುಬೈ ಬಂಧುಗಳು ಬಂದಾಗ....

--------------------------

"ದುಬೈನ ನಮ್ಮ ಮನೆಗೆ ಯಾವಾಗ ಬರುತ್ತೀರಿ?" ಎಂದು ಕಲ್ಯಾಣರಾಮನ್ ಮತ್ತು ಅವರ ಪತ್ನಿ ವೇದವಲ್ಲಿ ಅವರು ಸುಮ್ಮನೆ ಕೇಳಿದರು. "ಸ್ವಲ್ಪ ಕಾಲು ಸರಿಹೋಗಿ ಓಡಾಡುವಂತಾದರೆ, ದುಬೈಗೆ ಖಂಡಿತಾ ಬರುತ್ತೇನೆ" ಎಂದು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ರವರು ಅತಿ ಮುಗ್ಧತೆಯಿಂದ ಹೇಳುವಾಗಲೂ, ಅವರಲ್ಲಿ ಅದಮ್ಯ ಆತ್ಮವಿಶ್ವಾಸ ಉಕ್ಕುತ್ತಿತ್ತು. ಆಗ ಮಿಕ್ಕವರ ಮುಖದಲ್ಲಿ ಮಂದಹಾಸ....
ನಮ್ಮ ತಂದೆಯವರ ಕಿರಿಯ ಸಹೋದರಿ ದಿವಂಗತ ಶ್ರೀಮತಿ ವೇದವತಿ ಅವರ ಹಿರಿಯ ಪುತ್ರ ಸಿ.ಕಲ್ಯಾಣರಾಮನ್, ಕಳೆದ ಹಲವು ವರ್ಷಗಳಿಂದ ದುಬೈನ ಪ್ರತಿಷ್ಥಿತ ಕಂಪನಿಯೊಂದರಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದಾರೆ.
ಇಂದು (ದಿ. 24-05-2024, ಶುಕ್ರವಾರ) ಸಂಜೆ ಬೆಂಗಳೂರಿನಿಂದ ಕಲ್ಯಾಣರಾಮನ್, ಅವರ ಪತ್ನಿ ಶ್ರೀಮತಿ ವೇದವಲ್ಲಿ, ಕಲ್ಯಾಣ್ ರವರ ಕಿರಿಯ ಸಹೋದರಿ ಶಿಕ್ಷಕಿ ಶ್ರೀಮತಿ ಶಾರದಾಮಣಿ (ಬೆಂಗಳೂರು), ಇವರ ಪತಿ ಶ್ರೀ ಕೇಶವಮೂರ್ತಿ ಅವರು ನಮ್ಮ ತಂದೆಯವರ ಯೋಗಕ್ಷೇಮ ವಿಚಾರಿಸಲೆಂದು ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು. ಆಗ ಮಾತಿನ ನಡುವೆ ಅವರೀರ್ವರ ಮಧ್ಯೆ ಮೇಲ್ಕಂಡಂತೆ ಸಂಭಾಷಣೆ ನಡೆದಾಗ ಎಲ್ಲರ ಮುಖದಲ್ಲೂ ಮಂದಹಾಸ.
ಇವರ ಭೇಟಿಯ ಸಂತೋಷದ ಸವಿನೆನಪಿಗಾಗಿ ನಮ್ಮ ತಂದೆಯವರು ಕಲ್ಯಾಣರಾಮನ್ ಮತ್ತು ಕೇಶವಮೂರ್ತಿಯವರಿಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಎಲ್ಲರಲ್ಲೂ ದೀರ್ಘಕಾಲ ನೆನಪಿನಲ್ಲುಳಿಯುವಂಥ ಸಂತೋಷದ ಕ್ಷಣಗಳು ಏರ್ಪಟ್ಟವು. ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 24-05-2024









No comments:

Post a Comment