ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 29-05-2024) ಬೆಳಗ್ಗೆ ಬೆಂಗಳೂರಿನಿಂದ ಹೆಚ್.ಎಸ್.ಪವನ್ ತನ್ನ ಗೆಳೆಯರೊಬ್ಬರ ಬೈಕ್ ನಲ್ಲಿ ತುಮಕೂರಿನ ನಮ್ಮ ಮನೆಗೆ ಬಂದಿದ್ದ. ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ಹೆಚ್.ಎಸ್.ಸತ್ಯನಾರಾಯಣ ದಂಪತಿಯ ಪುತ್ರನಾದ ಪವನ್ ಈಗ ಅಂತಿಮ ಪದವಿ ವಿದ್ಯಾರ್ಥಿ. ಬೈಕ್, ಕಾರನ್ನು ಲೀಲಾಜಾಲವಾಗಿ ಚಾಲನೆ ಮಾಡುವ ಚಾಕಚಕ್ಯತೆ ಇವನಿಗೆ ಕರಗತ. ಹೀಗಾಗಿ ಗೆಳೆಯನ ಬೈಕ್ ನಲ್ಲೇ ಬಂದಿದ್ದ. ಒಂದಿಷ್ಟು ಹೊತ್ತು ನಮ್ಮ ಮನೆಯಲ್ಲಿದ್ದು, ತನ್ನ ತಾತನ ಆಶೀರ್ವಾದ ಪಡೆದುಕೊಂಡ. ಬಳಿಕ ಶೆಟ್ಟಿಹಳ್ಳಿ ಶ್ರೀ ಆಂಜನೇಯ ದೇವಾಲಯ, ಮಾರ್ಕೆಟ್ ವೃತ್ತದ ಶ್ರೀ ಕೋಟೆ ಆಂಜನೇಯ ಸ್ವಾಮಿ ಪ್ರತಿಮೆ ಇತ್ಯಾದಿ ವೀಕ್ಷಿಸುವ ಮೂಲಕ ತುಮಕೂರು ನಗರವನ್ನು ಒಂದು ಸುತ್ತು ಹಾಕಿದ. ಮಧ್ಯಾಹ್ನದ ಭೋಜನ ಮುಗಿಸಿ ಬೆಂಗಳೂರಿಗೆ ನಿರ್ಗಮಿಸಿದ. ಮುಂದಿನ ಎರಡು ಗಂಟೆಗಳೊಳಗೆ ಸುರಕ್ಷಿತವಾಗಿ ಮನೆ ಸೇರಿದ್ದ. ಪರಸ್ಪರ ಭೇಟಿಯ ಸಂತಸವನ್ನು ಬಣ್ಣಿಸಲಾದೀತೇ?
No comments:
Post a Comment