* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 25 August 2016

wirh Former Lokayuktha Sri Santhosh Hegde ಮಾಜಿ ಲೋಕಾಯುಕ್ತರಾದ ಶ್ರೀ ಸಂತೋಷ್ ಹೆಗ್ಡೆ ಅವರೊಂದಿಗೆ

ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರೂ, ಕರ್ನಾಟಕದ ಮಾಜಿ ಲೋಕಾಯುಕ್ತರೂ ಆದ ನ್ಯಾ|| ಸಂತೋಷ್ ಹೆಗ್ಡೆ ಅವರು ದಿನಾಂಕ 24-08-2016, ಬುಧವಾರ ತುಮಕೂರು ನಗರದ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಉಪನ್ಯಾಸ ನೀಡಲು ಆಗಮಿಸಿದ್ದಾಗ ಅವರೊಂದಿಗೆ ...



R.S.Iyer with Sri Santhosh Hegde, Former Lokayuktha of karnataka


Tuesday 23 August 2016

With Sri M ( Mumtaz Ali Khan ) @ Tumakuru - 2015 - R.S.Iyer and R.Vishwanathan - ಶ್ರೀ ಎಂ (ಮುಮ್ತಾಜ್ ಅಲಿ ಖಾನ್ ) ಅವರೊಂದಿಗೆ

Walk of Hope – A 15-month long padayatra from Kanyakumari to Kashmir, led by Sri "M", spanning 7500 kms across 11 states of India in 2015-16 for "peace, harmony and tolerance". when he came to Tumakuru on 12-04-2015 we (R.S.Iyer, R.Vishwanathan and Sri G.K.Srinivas) met him at Nandihalli...    

(Sri M (born Mumtaz Ali Khan) is a yogi and a disciple of Sri Maheshwarnath Babaji, who was a disciple of Mahavatar Babaji . Sri M, also known as Sri Madhukarnath ji, is an initiate of the Nath sub-tradition of Hinduism. He lives in MadanapalleAndhra Pradesh, India. Sri M received the Padma Bhushan, India's third-highest civilian award, in 2020.)



Sri M and R.S.Iyer, Tumakuru


ಅಖಿಲ ಭಾರತ ಪಾದಯಾತ್ರೆ ಕೈಗೊಂಡಿದ್ದ ಶ್ರೀ "ಎಂ" ಅವರು ದಿನಾಂಕ 12-04-2015 ರಂದು  ತುಮಕೂರು ಮೂಲಕ ಪ್ರಯಾಣಿಸುವಾಗ ಬೆಂಗಳೂರು ರಸ್ತೆಯ  ನಂದಿಹಳ್ಳಿ ಬಳಿ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದಾಗ....




               R.Vishwanathan and Sri M


  Sri M , R.S.Iyer and Sri G.K.Srinivas.  




ಪಾದಯಾತ್ರೆಯ ಒಂದು ನೋಟ... one view of Padayathra


ಪಾದಯಾತ್ರೆಯ ಒಂದು ನೋಟ... one view of Padayathra
  
                                                

Sunday 21 August 2016

ಸಿದ್ಧಗಂಗಾ ಶ್ರೀಗಳ ಪತ್ರಿಕಾಗೋಷ್ಠಿಯಲ್ಲಿ... With Sri Siddaganga Swamiji-1 - in a Press Conference ( R.S.Iyer )


ಸಿದ್ಧಗಂಗಾ ಮಠಾಧ್ಯಕ್ಷರಾದ ಪ.ಪೂ. ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ವಿವಿಧ ಸಂದರ್ಭಗಳಲ್ಲಿ ಮಠದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಅಮೂಲ್ಯ ಸಂದರ್ಭಗಳು. R.S.Iyer with Sri Siddaganga Swamiji.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ (ಹಿಂಬದಿ) ಸಿದ್ಧಗಂಗಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ವೀರಭದ್ರಯ್ಯ ರವರು ಇದ್ದಾರೆ.

R.S.Iyer  With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ  ಪತ್ರಕರ್ತ ಶ್ರೀ ಉಗಮ ಶ್ರೀನಿವಾಸ್ ಇದ್ದಾರೆ.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ ಪತ್ರಕರ್ತರಾದ ಶ್ರೀ ಕೆ.ಬಿ.ಚಂದ್ರಮೌಳಿ, ಶ್ರೀ ಹರೀಶ್ ಆಚಾರ್ಯ,  S.I.T. ಪ್ರಾಚಾರ್ಯ ಡಾ. ಎಂ.ಎನ್.ಚನ್ನಬಸಪ್ಪ ಮೊದಲಾದವರು ಇದ್ದಾರೆ.

With Shathayushi Dr.Sri Shivakumara Swamiji in a Press Conference  ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ....


ಈ ಚಿತ್ರದಲ್ಲಿ R.S.Iyer ಅವರೊಡನೆ ಪತ್ರಕರ್ತರಾದ  ಶ್ರೀ ಹೆಚ್.ಎನ್.ಮಲ್ಲೇಶ್, ಶ್ರೀ ಇಂದ್ರಕುಮಾರ್ ಇದ್ದಾರೆ.

ಪತ್ರಕಾಗೋಷ್ಠಿಯ ಬಳಿಕ ಶ್ರೀಗಳು ಪುಸ್ತಕವೊಂದನ್ನು ವಿತರಿಸಿದ ಸಂದರ್ಭ.. ಚಿತ್ರದಲ್ಲಿ (ಬಲತುದಿ) ಶ್ರೀ ರೇಣುಕಾರಾಧ್ಯ ರವರು ಇದ್ದಾರೆ.

R S Iyer with Justice N.Rama Jois ನ್ಯಾ|| ರಾಮಾಜೋಯಿಸ್ ರವರೊಡನೆ



ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ....



ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ....

ನ್ಯಾ|| ರಾಮಾಜೋಯಿಸ್ ರವರೊಡನೆ ಅಮೂಲ್ಯ ಕ್ಷಣಗಳು
------------------------------------------------------
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರೂ, ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರೂ ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ರವರು ದಿನಾಂಕ 16-02-2021 ಮಂಗಳವಾರ ಬೆಳಗ್ಗೆ ದೈವಾಧೀನರಾದ ವಿಷಯ ತಿಳಿದು ದುಃಖವಾಯಿತು. ಶ್ರೀಯುತರ ಆತ್ಮಕ್ಕೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತೇವೆ.
ಮೊದಲಿನಿಂದಲೂ ನ್ಯಾ|| ರಾಮಾಜೋಯಿಸ್ ರವರ ವಿದ್ವತ್ಪೂರ್ಣ ವ್ಯಕ್ತಿತ್ವದ ಬಗ್ಗೆ ನಮಗೆ ಅದೊಂದು ರೀತಿಯ ವಿಶೇಷ ಗೌರವ ಮತ್ತು ಅಭಿಮಾನ. ಸನ್ಮಾನ್ಯರನ್ನು ಹತ್ತಿರದಿಂದ ನೋಡುವ, ಅವರೊಡನೆ ಮಾತನಾಡುವ ಸದವಕಾಶ ತುಮಕೂರಿನಲ್ಲೇ ಎರಡುಬಾರಿ ನಮಗೆ ಲಭಿಸಿತ್ತು.
ಒಮ್ಮೆ ದಿನಾಂಕ 06-04-2003, ಭಾನುವಾರ ಅವರು ನಮ್ಮ ತುಮಕೂರಿನ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಾಲಯಕ್ಕೆ ದಿ|| ಶ್ರೀ ಯೋಗಾನರಸಿಂಹ ಶಾಸ್ತ್ರಿಗಳ ಆಹ್ವಾನದ ಮೇರೆಗೆ ಧನ್ವಂತರಿ ಹವನ ಸಮಾರಂಭಕ್ಕೆಆಗಮಿಸಿದ್ದರು. ಆಗ ಅವರು ಜಾರ್ಖಂಡ್ ರಾಜ್ಯಪಾಲರಾಗಿದ್ದರು. ಅಂದು ಅವರನ್ನು ಭೇಟಿಯಾಗುವ ಸುಯೋಗ ನಮಗೊದಗಿತ್ತು. ಈ ದೇವಾಲಯದಲ್ಲಿರುವ ಶ್ರೀ ಶಾರದಾಂಬೆಯ ಅಮೃತಶಿಲೆಯ ಮನೋಹರವಾದ ವಿಗ್ರಹವನ್ನು ಶ್ರೀಯುತರೇ ಕೊಡುಗೆಯಾಗಿ ನೀಡಿದ್ದಾರೆಂಬುದು ಇಲ್ಲಿನ ವಿಶೇಷ.
ಆನಂತರದಲ್ಲಿ ಮತ್ತೊಮ್ಮೆ ಅಂದರೆ 2009 ರಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಆಗಮಿಸಿದ್ದಾಗ ನಾನು ಮತ್ತು ವಿಶ್ವನಾಥನ್ ಭೇಟಿಯಾಗಿದ್ದೆವು. ಆಗ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿಗೆ ಅವಕಾಶ ಕಲ್ಪಿಸಿದ್ದರು. ಈ ಎರಡೂ ಪ್ರಸಂಗಗಳಲ್ಲಿ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು ಅವಿಸ್ಮರಣೀಯವಾಗಿದೆ.
ಇನ್ನು ನಮ್ಮ ತುಮಕೂರಿನ ಕುಣಿಗಲ್ ರಸ್ತೆಯಲ್ಲಿ ಲೇಔಟ್ ಒಂದಕ್ಕೆ ಅಲ್ಲಿನ ನಿವಾಸಿಗಳು ಕೃತಜ್ಞತಾಭಾವದಿಂದ “ರಾಮಾಜೋಯಿಸ್ ನಗರ” ಎಂದೇ ನಾಮಕರಣ ಮಾಡಿದ್ದು, ಸನ್ಮಾನ್ಯರ ಹೆಸರು ನಮ್ಮ ತುಮಕೂರಿನಲ್ಲಿ ಚಿರಂತನವಾಗಿರುವಂತಾಗಿದೆ.
-ಆರ್.ಎಸ್.ಅಯ್ಯರ್ ತುಮಕೂರು



Friday 19 August 2016

 ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರೂ, ಸ್ನೇಹಿತರೂ ಆದ ಶ್ರೀ ಸುಚೇತನ ಸ್ವರೂಪ ಅವರು ಇಂದು (19-08-2016, ಶುಕ್ರವಾರ) ತುಮಕೂರು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯನಿಮಿತ್ತ ಆಗಮಿಸಿದ್ದಾಗ ಅವರನ್ನು ಭೇಟಿ ಆದಾಗ ..... R.S. Iyer with Karnataka Information Commissioner Sri Suchethana Swaroop @ Tumakuru, 19-08-2016.


ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರೂ, ಸ್ನೇಹಿತರೂ ಆದ ಶ್ರೀ ಸುಚೇತನ ಸ್ವರೂಪ ಅವರು ಇಂದು (19-08-2016, ಶುಕ್ರವಾರ) ತುಮಕೂರು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯನಿಮಿತ್ತ ಆಗಮಿಸಿ ಪತ್ರಕರ್ತರೊಂದಿಗೆ ಮಾತನಾಡುವಾಗ 

Sunday 14 August 2016

R.S.Iyer with Patil Puttappa & H.S.Doreswamy ಡಾ. ಪಾಟಿಲ್ ಪುಟ್ಟಪ್ಪನವರು ಮತ್ತು ಹೆಚ್.ಎಸ್.ದೊರೆಸ್ವಾಮಿಯವರೊಡನೆ

ನಾಡಿನ ಹಿರಿಯ ಚೇತನ , ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್. ದೊರೆಸ್ವಾಮಿ ಅವರು ತುಮಕೂರಿಗೆ ದಿನಾಂಕ 29-05-2011 ರಂದು ಆಗಮಿಸಿದ್ದಾಗ ಅವರೊಂದಿಗೆ ಕೆಲವು ಕ್ಷಣಗಳು..
R S Iyer With veteran freedom fighter Sri H.S. Doreswamy. 




ನಾಡಿನ ಹಿರಿಯ ಚೇತನ , ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್. ದೊರೆಸ್ವಾಮಿ ಅವರು ತುಮಕೂರಿಗೆ ದಿನಾಂಕ 29-05-2011 ರಂದು ಆಗಮಿಸಿದ್ದಾಗ ಅವರೊಂದಿಗೆ ಕೆಲವು ಕ್ಷಣಗಳು..
R S Iyer With veteran freedom fighter Sri H.S. Doreswamy. 


--------------------------------------------------------







*************************************

R S Iyer with Sri Patil Puttappa





ಪಾಪು ಸ್ಮರಣೆ…

■ ಆರೆಂಟು ವರ್ಷಗಳ ಹಿಂದೆ ಅದೊಂದು ದಿನ. ನಾಡಿನ ಹಿರಿಯ ಚೇತನ, ಪತ್ರಕರ್ತರಾದ ಡಾ. ಪಾಟೀಲ ಪುಟ್ಟಪ್ಪನವರು ತುಮಕೂರಿನ ನಮ್ಮ “ಪ್ರಜಾಪ್ರಗತಿ” ಪತ್ರಿಕಾ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 2 ಗಂಟೆ. ಪುಟ್ಟಪುಟ್ಟ ಹೆಜ್ಜೆಗಳನ್ನಿಡುತ್ತ ಊಟಕ್ಕೆ ಹೊರಟಿದ್ದರು. ಜೊತೆಯಲ್ಲಿದ್ದವರು ನನ್ನನ್ನು ಅವರಿಗೆ ಪರಿಚಯಿಸಿದರು. “ಅಯ್ಯರ್” ಎಂಬ ಶಬ್ದ ಕಿವಿಗೆ ಬಿದ್ದೊಡನೆ ಸಹಜ ಕುತೂಹಲದಿಂದ “ಯಾವ ಊರಿನವರು?” ಎಂದು ಪ್ರಶ್ನಿಸಿದರು.  ನಾನು ವಿವರ ನೀಡುವುದರ ಜೊತೆ-ಜೊತೆಗೇ ಹಿಂದೊಮ್ಮೆ ಅವರು “ಟಿಯೆಸ್ಸಾರ್ ಪ್ರಶಸ್ತಿ” ಬಂದಾಗ ಪ್ರತಿಕ್ರಿಯಿಸುತ್ತ “ಪತ್ರಕರ್ತನಿಗೆ ಬ್ಯಾಂಕ್ ಬ್ಯಾಲೆನ್ಸ್ ಗಿಂತ ಮರ್ಯಾದೆಯ ಬ್ಯಾಲೆನ್ಸ್ ಇರಬೇಕು” ಎಂದು ಹೇಳಿದ್ದುದನ್ನು, ಈ ಹೇಳಿಕೆ ಬೆಂಬಲಿಸಿ ನಾನು “ವಾಚಕರ ವಾಣಿ”ಗೆ ಪತ್ರ ಬರೆದಿದ್ದುದನ್ನು ಪ್ರಸ್ತಾಪಿಸಿದೆ.  ಅವರು ಕುತೂಹಲದಿಂದ, ಖುಷಿಯಿಂದ, ಪ್ರೀತಿಯಿಂದ ನನ್ನ ಹೆಗಲ ಮೇಲೆ ಕೈಯಿಟ್ಟು ಮಾತಿಗಿಳಿದರು. ಆದರೆ ಜೊತೆಯಲ್ಲಿದ್ದವರಿಗೆ ಏನನ್ನಿಸಿತೋ- “ಊಟಕ್ಕೆ ಹೊತ್ತಾಯಿತು” -ಎಂದು ಕರೆದೊಯ್ಯಲು ಮುಂದಾದರು. ಆದರೆ ಪುಟ್ಟಪ್ಪನವರು ಅದನ್ನು ನಿರ್ಲಕ್ಷಿಸುತ್ತ ಮತ್ತೆ ನನ್ನೊಡನೆ ಮಾತು ಮುಂದುವರೆಸಿದರು. ಮಾತಿನ ನಡುವೆ ನಾನು ದಶಕಗಳ ಹಿಂದೆ “ತರಂಗ” ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅವರ ಜನಪ್ರಿಯ ಅಂಕಣ ಬರಹ “ಪಾಪು ಪ್ರಪಂಚ” ಕುರಿತು ಪ್ರಸ್ತಾಪಿಸಿದೆ. ವಾರ-ವಾರವೂ ನಾನು ಕಾದು-ಕಾದು ಓದುತ್ತಿದ್ದ ಪರಿಯನ್ನು ಹೇಳಿದೆ. ಅಗಾಧ ನೆನಪಿನ ಶಕ್ತಿ, ನಿರ್ದಾಕ್ಷಿಣ್ಯ ಬರಹಗಳನ್ನು ಬೆರಗಿನಿಂದ ಉಲ್ಲೇಖಿಸಿದೆ. ಅದು ಮುಂದುವರೆಯದೆ ಸ್ಥಗಿತಗೊಂಡುದನ್ನೂ ಹೇಳಿದೆ. ಆಗ ಅವರು ಹಳೆಯ ಪ್ರಸಂಗಗಳನ್ನು ಮೆಲುಕು ಹಾಕತೊಡಗಿದರು. ಆಗ ಮತ್ತೆ ಜೊತೆಯಲ್ಲಿದ್ದವರು “ಊಟಕ್ಕೆ ಲೇಟ್ ಆಗುತ್ತೆ ಬನ್ನಿ… ಬನ್ನಿ” ಎಂದು ಕರೆದೊಯ್ಯಲು ಮುಂದಾದಾಗ ಅವರು ಮಾತ್ರ ಅದನ್ನು ನಿರ್ಲಕ್ಷಿಸಿ ನನ್ನೊಡನೆ ಮಾತು ಮುಂದುವರೆಸಿದರು. “ನೋಡಿ, ಅಯ್ಯರ್ ರೇ, ನಾನು ಬರೆದುದನ್ನು ಯಥಾವತ್ತಾಗಿ ಹಾಕಲಿಲ್ಲ. ಆಗ ನಾನು ಬೇಸರಗೊಂಡೆ. ಬರೆಯುವುದನ್ನು ನಿಲ್ಲಿಸಿದೆ. ಈ ಮಾಲೀಕತ್ವವೆಂಬುದೇ ಹೀಗೆ” ಎಂದು ತಮ್ಮ ಎಂದಿನ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಹೀಗೆ ಸುಮಾರು 20 ನಿಮಿಷಗಳ ಕಾಲ ಅವರು ಮೆಟ್ಟಿಲಿಳಿಯುವ ದಾರಿಯಲ್ಲಿ ನಿಂತುಕೊಂಡೇ, ನನ್ನ ಹೆಗಲಿನ ಮೇಲೆ ಕೈಯಿರಿಸಿಕೊಂಡೇ, ನನ್ನೊಡನೆ ಮಾತನಾಡಿದ್ದು ನನ್ನ ಪಾಲಿಗೆ ಒಂದು ಅವಿಸ್ಮರಣೀಯ ಪ್ರಸಂಗವಾಗಿದೆ.

 

■ಇದಕ್ಕೂ ಹಿಂದೆ ಅಂದರೆ ದಿನಾಂಕ 16-07-2009 ರಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಮತ್ತೋರ್ವ ಹಿರಿಯ ಪತ್ರಕರ್ತರಾಗಿದ್ದ ಶ್ರೀ ಎಸ್.ವಿ.ಜಯಶೀಲರಾವ್ ಅವರೊಂದಿಗೆ ಆಗಮಿಸಿದ್ದಾಗ ಆ ಹಿರಿಯ ಚೇತನಗಳೊಂದಿಗೆ ನಾನಿರುವ ಅವಿಸ್ಮರಣೀಯ ಫೋಟೋಗಳಿವು.  

- ಆರ್.ಎಸ್.ಅಯ್ಯರ್, ತುಮಕೂರು