* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 21 August 2016

R S Iyer with Justice N.Rama Jois ನ್ಯಾ|| ರಾಮಾಜೋಯಿಸ್ ರವರೊಡನೆ



ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ....



ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ....

ನ್ಯಾ|| ರಾಮಾಜೋಯಿಸ್ ರವರೊಡನೆ ಅಮೂಲ್ಯ ಕ್ಷಣಗಳು
------------------------------------------------------
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರೂ, ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರೂ ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ರವರು ದಿನಾಂಕ 16-02-2021 ಮಂಗಳವಾರ ಬೆಳಗ್ಗೆ ದೈವಾಧೀನರಾದ ವಿಷಯ ತಿಳಿದು ದುಃಖವಾಯಿತು. ಶ್ರೀಯುತರ ಆತ್ಮಕ್ಕೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತೇವೆ.
ಮೊದಲಿನಿಂದಲೂ ನ್ಯಾ|| ರಾಮಾಜೋಯಿಸ್ ರವರ ವಿದ್ವತ್ಪೂರ್ಣ ವ್ಯಕ್ತಿತ್ವದ ಬಗ್ಗೆ ನಮಗೆ ಅದೊಂದು ರೀತಿಯ ವಿಶೇಷ ಗೌರವ ಮತ್ತು ಅಭಿಮಾನ. ಸನ್ಮಾನ್ಯರನ್ನು ಹತ್ತಿರದಿಂದ ನೋಡುವ, ಅವರೊಡನೆ ಮಾತನಾಡುವ ಸದವಕಾಶ ತುಮಕೂರಿನಲ್ಲೇ ಎರಡುಬಾರಿ ನಮಗೆ ಲಭಿಸಿತ್ತು.
ಒಮ್ಮೆ ದಿನಾಂಕ 06-04-2003, ಭಾನುವಾರ ಅವರು ನಮ್ಮ ತುಮಕೂರಿನ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಾಲಯಕ್ಕೆ ದಿ|| ಶ್ರೀ ಯೋಗಾನರಸಿಂಹ ಶಾಸ್ತ್ರಿಗಳ ಆಹ್ವಾನದ ಮೇರೆಗೆ ಧನ್ವಂತರಿ ಹವನ ಸಮಾರಂಭಕ್ಕೆಆಗಮಿಸಿದ್ದರು. ಆಗ ಅವರು ಜಾರ್ಖಂಡ್ ರಾಜ್ಯಪಾಲರಾಗಿದ್ದರು. ಅಂದು ಅವರನ್ನು ಭೇಟಿಯಾಗುವ ಸುಯೋಗ ನಮಗೊದಗಿತ್ತು. ಈ ದೇವಾಲಯದಲ್ಲಿರುವ ಶ್ರೀ ಶಾರದಾಂಬೆಯ ಅಮೃತಶಿಲೆಯ ಮನೋಹರವಾದ ವಿಗ್ರಹವನ್ನು ಶ್ರೀಯುತರೇ ಕೊಡುಗೆಯಾಗಿ ನೀಡಿದ್ದಾರೆಂಬುದು ಇಲ್ಲಿನ ವಿಶೇಷ.
ಆನಂತರದಲ್ಲಿ ಮತ್ತೊಮ್ಮೆ ಅಂದರೆ 2009 ರಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಆಗಮಿಸಿದ್ದಾಗ ನಾನು ಮತ್ತು ವಿಶ್ವನಾಥನ್ ಭೇಟಿಯಾಗಿದ್ದೆವು. ಆಗ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿಗೆ ಅವಕಾಶ ಕಲ್ಪಿಸಿದ್ದರು. ಈ ಎರಡೂ ಪ್ರಸಂಗಗಳಲ್ಲಿ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು ಅವಿಸ್ಮರಣೀಯವಾಗಿದೆ.
ಇನ್ನು ನಮ್ಮ ತುಮಕೂರಿನ ಕುಣಿಗಲ್ ರಸ್ತೆಯಲ್ಲಿ ಲೇಔಟ್ ಒಂದಕ್ಕೆ ಅಲ್ಲಿನ ನಿವಾಸಿಗಳು ಕೃತಜ್ಞತಾಭಾವದಿಂದ “ರಾಮಾಜೋಯಿಸ್ ನಗರ” ಎಂದೇ ನಾಮಕರಣ ಮಾಡಿದ್ದು, ಸನ್ಮಾನ್ಯರ ಹೆಸರು ನಮ್ಮ ತುಮಕೂರಿನಲ್ಲಿ ಚಿರಂತನವಾಗಿರುವಂತಾಗಿದೆ.
-ಆರ್.ಎಸ್.ಅಯ್ಯರ್ ತುಮಕೂರು



No comments:

Post a Comment