* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 28 October 2016

R S Iyer with H.H. Swarnavalli Sri.... ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ

ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಪೀಠಾಧಿಕಾರಿಗಳಾದ ಪ.ಪೂ.ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ದರ್ಶನ ಹಾಗೂ ಅವರ ಆಶೀರ್ವಾದ ಪಡೆಯುವ ಸುಯೋಗ ಇಂದು (28-10-2016, ಶುಕ್ರವಾರ) ಸಂಜೆ ತುಮಕೂರಿನ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ನಮಗೆ ( ನಾನು, ವಿಶ್ವನಾಥನ್ Vishwanathan R. Tumkur ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಲಭಿಸಿತು. Today evening we got the blessings of H.H. Sri Gangadharendra Saraswathi Swamiji, Peetadhipathi of Sonda Swarnavalli Mutt, Sirsi at Sri Chandramoulishwara Temple, Kyathasandra, Tumakuru.














Wednesday 26 October 2016

R.S.Iyer with Prof. Baraguru Ramachandrappa

ಶ್ರೀ ಬರಗೂರು ರಾಮಚಂದ್ರಪ್ಪ ಅವರೊಂದಿಗೆ.....
-------------------------------------------------------
"ಎಲ್ಲಿ, ನೀವು ಕಾಣಿಸುತ್ತಿಲ್ಲವಲ್ಲ" ಎಂದು ಅವರು ಹೇಳಿದಾಗ ನಾನು ಸಹಜವಾಗಿ "ಇದ್ದೇನಲ್ಲ" ಎಂದೆ. ಅದಕ್ಕವರು "ಪತ್ರಿಕೆಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗ ಮತ್ತೆ ನಾನು "ಪತ್ರಿಕೆಯಲ್ಲೇ ಇದ್ದೇನಲ್ಲ..." ಎನ್ನುವಷ್ಟರಲ್ಲೇ ಅವರು ಮಧ್ಯೆಪ್ರವೇಶಿಸಿ "ವಾಚಕರ ವಾಣಿಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗಲೇ ನನಗೆ ಅವರು ಏನು ಹೇಳಲು ಹೊರಟಿದ್ದಾರೆಂಬುದು ಅರ್ಥವಾದದ್ದು!! -- ಇದು ಇಂದು (26-10-2016, ಬುಧವಾರ) ಬೆಳಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ನಾನು ಭೇಟಿ ಆದ ತಕ್ಷಣ ನಡೆದ ಸಂಭಾಷಣೆ. ದಶಕದ ಹಿಂದೆ ತುಮಕೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಅವರು ಬಂದ ಸಂದರ್ಭದಿಂದಲೂ ಅವರು ಪರಿಚಿತರು. "ಪ್ರಜಾವಾಣಿ"ಯ ವಾಚಕರ ವಾಣಿಯಲ್ಲಿ ನಾನು ಬರೆಯುತ್ತಿದ್ದ ರಾಜಕೀಯ/ಸಾಂಸ್ಕೃತಿಕ ಸಂಗತಿ ಕುರಿತ ಪತ್ರವನ್ನು ಗಮನಿಸುತ್ತಿದ್ದ ಅವರು, ತುಮಕೂರಿನಲ್ಲಿ ಭೇಟಿ ಆದಾಗಲೆಲ್ಲ "ಪತ್ರ ಓದಿದೆ" ಎನ್ನುತ್ತಿದ್ದರು. ಕಾರಣಾಂತರಗಳಿಂದ ಇತ್ತೀಚೆಗೆ ನಾನು ಬರೆಯುತ್ತಿಲ್ಲ. ಅದನ್ನೂ ಅವರು ಗಮನಿಸಿದ್ದು ಇಂದು ಹೀಗೆ ಪ್ರತಿಕ್ರಿಯಿಸಿದರು. ಅವರ ವಿಶ್ವಾಸ ಸಂತೋಷವನ್ನುಂಟುಮಾಡಿತು. ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಅವರನ್ನು ಅಭಿನಂದಿಸಿದಾಗ ಮನಸಾರೆ ಮುಗುಳ್ನಕ್ಕರು. (ಆ ಕ್ಷಣಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಶ್ರೀ ತ್ರಿಯಂಬಕ ಅವರಿಗೆ ಕೃತಜ್ಞತೆಗಳು)






Monday 24 October 2016

R S Iyer with Dr.Khader

ಡಾ.ಖಾದರ್ ಅವರೊಂದಿಗೆ... ಇಂದು ( 24-10-2016, ಸೋಮವಾರ) ಸಂಜೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಮೈಸೂರಿನ ಡಾ. ಖಾದರ್ ಅವರ ಉಪನ್ಯಾಸ ಕೇಳುವ ಸುಯೋಗ ನಮಗೆ ಲಭಿಸಿತು. ವಿಜ್ಞಾನಿಯಾಗಿ, ಹೋಮಿಯೋಪತಿ ವೈದ್ಯರಾಗಿ ಖ್ಯಾತಿ ಪಡೆದಿರುವ ಜೊತೆಗೆ ಇದೀಗ ಸಿರಿಧಾನ್ಯಗಳ ಸಂಶೋಧಕರಾಗಿ ಅದರ ಪ್ರಯೋಜನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತ ಅಪಾರ ಜನಮನ್ನಣೆಗೆ, ಜನಾಕರ್ಷಣೆಗೆ ಪಾತ್ರರಾಗಿದ್ದಾರೆ. ಅವರೊಡನೆ ನಾನು, ಆರ್.ವಿಶ್ವನಾಥನ್Vishwanathan R. Tumkur ಕೆಲಹೊತ್ತು ಕಳೆದಾಗ...Today evening we met Dr.Khader at Sira town. Dr. Khader from Mysore is a renowned Scientist, Homeopathic Doctor, a unique farmer. He has done extensive research on Millets. He speaks wonderfully about the advantages of Millets and how if used in our daily diet will improve our Health. He is extensively working on promoting Millets (SIRI DHANYA) in our daily diet. (Photo Courtesy: Renuka)