* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday, 26 October 2016

R.S.Iyer with Prof. Baraguru Ramachandrappa

ಶ್ರೀ ಬರಗೂರು ರಾಮಚಂದ್ರಪ್ಪ ಅವರೊಂದಿಗೆ.....
-------------------------------------------------------
"ಎಲ್ಲಿ, ನೀವು ಕಾಣಿಸುತ್ತಿಲ್ಲವಲ್ಲ" ಎಂದು ಅವರು ಹೇಳಿದಾಗ ನಾನು ಸಹಜವಾಗಿ "ಇದ್ದೇನಲ್ಲ" ಎಂದೆ. ಅದಕ್ಕವರು "ಪತ್ರಿಕೆಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗ ಮತ್ತೆ ನಾನು "ಪತ್ರಿಕೆಯಲ್ಲೇ ಇದ್ದೇನಲ್ಲ..." ಎನ್ನುವಷ್ಟರಲ್ಲೇ ಅವರು ಮಧ್ಯೆಪ್ರವೇಶಿಸಿ "ವಾಚಕರ ವಾಣಿಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗಲೇ ನನಗೆ ಅವರು ಏನು ಹೇಳಲು ಹೊರಟಿದ್ದಾರೆಂಬುದು ಅರ್ಥವಾದದ್ದು!! -- ಇದು ಇಂದು (26-10-2016, ಬುಧವಾರ) ಬೆಳಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ನಾನು ಭೇಟಿ ಆದ ತಕ್ಷಣ ನಡೆದ ಸಂಭಾಷಣೆ. ದಶಕದ ಹಿಂದೆ ತುಮಕೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಅವರು ಬಂದ ಸಂದರ್ಭದಿಂದಲೂ ಅವರು ಪರಿಚಿತರು. "ಪ್ರಜಾವಾಣಿ"ಯ ವಾಚಕರ ವಾಣಿಯಲ್ಲಿ ನಾನು ಬರೆಯುತ್ತಿದ್ದ ರಾಜಕೀಯ/ಸಾಂಸ್ಕೃತಿಕ ಸಂಗತಿ ಕುರಿತ ಪತ್ರವನ್ನು ಗಮನಿಸುತ್ತಿದ್ದ ಅವರು, ತುಮಕೂರಿನಲ್ಲಿ ಭೇಟಿ ಆದಾಗಲೆಲ್ಲ "ಪತ್ರ ಓದಿದೆ" ಎನ್ನುತ್ತಿದ್ದರು. ಕಾರಣಾಂತರಗಳಿಂದ ಇತ್ತೀಚೆಗೆ ನಾನು ಬರೆಯುತ್ತಿಲ್ಲ. ಅದನ್ನೂ ಅವರು ಗಮನಿಸಿದ್ದು ಇಂದು ಹೀಗೆ ಪ್ರತಿಕ್ರಿಯಿಸಿದರು. ಅವರ ವಿಶ್ವಾಸ ಸಂತೋಷವನ್ನುಂಟುಮಾಡಿತು. ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಅವರನ್ನು ಅಭಿನಂದಿಸಿದಾಗ ಮನಸಾರೆ ಮುಗುಳ್ನಕ್ಕರು. (ಆ ಕ್ಷಣಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಶ್ರೀ ತ್ರಿಯಂಬಕ ಅವರಿಗೆ ಕೃತಜ್ಞತೆಗಳು)






No comments:

Post a Comment