* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 17 July 2018

R S Iyer and R Vishwanathan are with Sri Hariprasad Chaurasia, International famous Flutist,

ಅದು ನಮಗೊದಗಿದ ಸೌಭಾಗ್ಯ. ಅಂತರ ರಾಷ್ಟ್ರೀಯ ಖ್ಯಾತಿಯ ಕೊಳಲು (ಬಾನ್ಸುರಿ) ವಾದಕರಾದ ಪಂಡಿತ್ ಹರಿಪ್ರಸಾದ್ 

ಚಾರಾಸಿಯಾ ಅವರು ದಿ. 31-01-2014 ರ ಮುಸ್ಸಂಜೆ ತುಮಕೂರಿನ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿ ಪ್ರಸ್ತುತ 

ಪಡಿಸಿದ ಕೊಳಲು ವಾದನ ಕಾರ್ಯಕ್ರಮ ನೀಡಲು ಆಗಮಿಸಿದ್ದಾಗ, ಆ ಮಹಾನ್ ಕಲಾವಿದರನ್ನು ನೋಡುವ, ಅವರೊಡನೆ 

ಫೋಟೋ ತೆಗೆಸಿಕೊಳ್ಳುವ, ಅವರ ಅದ್ಭುತ ಕಾರ್ಯಕ್ರಮ ಆಸ್ವಾದಿಸುವ ಅದೃಷ್ಟ ನಮ್ಮದಾಗಿತ್ತು.

R S Iyer & R Vishwanathan are with  Pandit Sri Hariprasad Chaurasia, International famous 

Flutist who visited Tumkur on 31-01-2014 and gave a concert in SIT Birla Auditorium..






ಕವಿ-ಗಾಯಕರೊಂದಿಗೆ ( H S V, Shivamogga Subbanna) R S Iyer & R Vishwanathan

ನಾಡಿನ ಹೆಸರಾಂತ ಕವಿಗಳಾದ ಶ್ರೀ ಎಚ್.ಎಸ್.ವೆಂಕಟೇಶ ಮೂರ್ತಿರವರು, ಖ್ಯಾತ ಗಾಯಕ ಶ್ರೀ ಶಿವಮೊಗ್ಗ ಸುಬ್ಬಣ್ಣ, ಗಾಯಕಿ ಶ್ರೀಮತಿ ಮಹಾಲಕ್ಷ್ಮಿ, ಗಾಯಕ ಶ್ರೀ ಕಿಕ್ಕೇರಿ ಕೃಷ್ಣ ಮೂರ್ತಿ, ಗಾಯಕ ಶ್ರೀ ಶ್ರೀನಿವಾಸ ಉಡುಪ ಅವರೊಂದಿಗೆ...











Thursday 12 July 2018

with Smt S.Janaki , Famous Singer - R S Iyer Tumkur, R Vishwanthan ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಎಸ್.ಜಾನಕಿ ಅವರೊಡನೆ

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರೂ, ಗಾನ ಕೋಗಿಲೆ ಎಂದು ಜನಮನಸೂರೆಗೊಂಡಿರುವ ಶ್ರೀಮತಿ ಎಸ್.ಜಾನಕಿಯವರನ್ನು ನೋಡುವ, ಅವರೊಡನೆ ಕೆಲ ಕ್ಷಣ ಇರುವ ಸುಸಂದರ್ಭ ದಿ. 01-05-2016 ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ನಮಗೊದಗಿಬಂತು. "ಸಂಗೀತ ಗಂಗಾ" ಸಂಸ್ಥೆಯಿಂದ ಅಲ್ಲಿ ನಡೆದಿದ್ದ "ಜಿ.ವಿ.ಅತ್ರಿ ಸವಿನೆನಪು'' ಕಾರ್ಯಕ್ರಮಕ್ಕೆ ಹೋಗಿದ್ದಾಗ ಮುಂದಿನ ಆಸನದಲ್ಲಿ ಶ್ರೀಮತಿ ಜಾನಕಿಯವರು ಉಪಸ್ಥಿತರಿರುವುದು ಗೊತ್ತಾಯಿತು. ಬಳಿಕ ಅವರ ಭೇಟಿಯ ಸದವಕಾಶವೂ ದೊರಕಿತು. ಎಂದಿನ ಹಸನ್ಮುಖದೊಂದಿಗೆ ಅವರು ಪ್ರೀತಿಯಿಂದ ಮಾತನಾಡಿಸಿದರು. ಅವರೊಡನೆ ಫೋಟೋ ತೆಗೆಸಿಕೊಳ್ಳಲು ಪ್ರೀತಿಯಿಂದ ಅನುಮತಿಸಿದರು. ಇಂತಹುದೊಂದು ಅವಿಸ್ಮರಣೀಯ ಕ್ಷಣಕ್ಕೆ ಕಾರಣರಾದ ಸಂಗೀತ ನಿರ್ದೇಶಕರಾದ ಶ್ರೀ ಶಿವಸತ್ಯ ಅವರನ್ನು ಕೃತಜ್ಞತೆಯಿಂದ ನೆನೆಯಬೇಕು. 
with Llegendary Singer Smt S.Janaki (R,S.Iyer Tumkur , R.Vishwanathan Tumkur and V S Ramachandran)


   R Vishwanathan Tumkur, R S Iyer Tumkur and V S Ramachandran .... with Smt S.Janaki


with Smt S.Janaki-    R Vishwanathan  Tumkur and R.S. Iyer Tumkur .... 



R Vishwanathan  Tumkur and R S Iyer Tumkur .... with Smt S.Janaki


R Vishwanathan Tumkur and V S Ramachandran... with Smt S.Janaki

         

Wednesday 11 July 2018

with Dr.K.S. Nisar Ahmed (R S Iyer) ಡಾ. ಕೆ.ಎಸ್.ನಿಸಾರ್ ಅಹಮದ್ ಅವರೊಡನೆ...



ಅದೊಂದು ಅವಿಸ್ಮರಣೀಯ ಪ್ರಸಂಗವೇ ಆಗಿಹೋಯಿತು. 
********************************************
ನಾಡಿನ ಸುವಿಖ್ಯಾತ ಕವಿಗಳೂ -“ಜೋಗದ ಸಿರಿ ಬೆಳಕಿನಲ್ಲಿ” ಹಾಡಿನ ಖ್ಯಾತಿಯುಳ್ಳವರೂ ಆದ “ನಾಡೋಜ” ಪ್ರೊ. ಕೆ.ಎಸ್.ನಿಸಾರ್ ಅಹಮದ್ ಅವರನ್ನುನೋಡಿದ್ದು, ಅವರ ಪಕ್ಕ ಕುಳಿತು ಮಾತನಾಡಿದ್ದು, ಬಳಿಕ ಅವರು ವೇದಿಕೆಯಲ್ಲಿತಮ್ಮದೇ ಆದ ಕವನಗಳನ್ನು ಆಕರ್ಷಕವಾಗಿ ವಾಚಿಸಿದ್ದನ್ನು ಆಲಿಸಿದ್ದು, ಲಘುದಾಟಿಯಲ್ಲೇ ಮಾತನಾಡುತ್ತ ವೇದಿಕೆಯಲ್ಲಿದ್ದ ಹಾಗೂ ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಚಿಂತನೆಗೆ ಹಚ್ಚಿದ ಪರಿಯನ್ನು ಹಾಗೂ 83 ರ ವಯಸ್ಸಿನಲ್ಲೂ ಅವರಲ್ಲಿ ಉಕ್ಕುತ್ತಿದ್ದ ಜೀವನೋತ್ಸಾಹವನ್ನು ಕಂಡಿದ್ದು ನಿಜಕ್ಕೂ ವಿಶಿಷ್ಟ ಅನುಭವವನ್ನೇ ನಮಗುಂಟುಮಾಡಿತು.

ವೇದಿಕೆಯಲ್ಲಿ ಅವರು ಮಾತನಾಡುವಾಗ ಸಭಾಂಗಣದಲ್ಲಿ ಆಸೀನರಾಗಿದ್ದ ಅನೇಕ ಸಹೃದಯರ ಹೆಸರನ್ನು ಉಲ್ಲೇಖಿಸುತ್ತ ಹೋದರು. ಹಾಗೆಯೇ ಥಟ್ಟನೆ “ತುಮಕೂರಿನಿಂದ ಪತ್ರಕರ್ತ ಅಯ್ಯರ್ ಬಂದಿದ್ದಾರೆ’’ ಎಂದು ನನ್ನ ಹೆಸರನ್ನೂಹೇಳಿದೊಡನೆ ನನಗೆ ರೋಮಾಂಚನವಾಯಿತು. ಅವರ ಹೃದಯವೈಶಾಲ್ಯತೆ ಮತ್ತು ಅಗಾಧ ನೆನಪಿನ ಶಕ್ತಿ ಬೆರಗುಗೊಳಿಸಿತು. 

ಅವರ ಪಕ್ಕ ಕುಳಿತು ಮಾತನಾಡುವಾಗ ತುಮಕೂರಿನಲ್ಲಿಸರಸ್ ಫೌಂಡೇಷನ್ ವತಿಯಿಂದ ನಾವು ನಡೆಸುತ್ತಿರುವ “ಡಿವಿಜಿ ನೆನಪು’’ ಮಾಸಿಕ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ತಿಳಿಸುತ್ತ, “ಇದೀಗ 70 ನೇ ತಿಂಗಳಿಗೆ ಪದಾರ್ಪಣೆ ಮಾಡುತ್ತಿದೆ. ತಾವೂ ಒಮ್ಮೆ ಅತಿಥಿಗಳಾಗಿ ದಯಮಾಡಿಸಬೇಕು” ಎಂದಾಗ “ಏನು 70 ತಿಂಗಳುಗಳಿಂದ ನಡೆಯುತ್ತಿದೆಯೇ?’’ ಎಂದು ಮೆಚ್ಚುಗೆ ಮತ್ತು ಅಚ್ಚರಿಯಿಂದ ಉದ್ಗರಿಸಿದರು. “ಡಿವಿಜಿ ಬಹು ದೊಡ್ಡ ವ್ಯಕ್ತಿ’’ ಎನ್ನುತ್ತ, “ಒಂದೆರಡು ತಿಂಗಳು ಕಳೆಯಲಿ. ನಾನೂ ಬರುತ್ತೇನೆ’’ ಎಂದು ಸಂತೋಷದಿಂದ ಭರವಸೆಕೊಟ್ಟರು.

ಇಂಥದ್ದೊಂದು ಅವಿಸ್ಮರಣೀಯ ಅನುಭವ ದಿನಾಂಕ 08-07-2018, ಭಾನುವಾರ ಬೆಳಗ್ಗೆ ಬೆಂಗಳೂರಿನ “ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್”ನಲ್ಲಿ ಡಾ.ಪು.ತಿ.ನ. ಟ್ರಸ್ಟ್ ವತಿಯಿಂದ ಏರ್ಪಟ್ಟಿದ್ದ “ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯನಮನ-2” ಕಾರ್ಯಕ್ರಮದಲ್ಲಿ ನಮಗಾಯಿತು.






Sunday 8 July 2018

ಕನ್ನಡದ ಹಿರಿಯ ಹಾಗೂ ಪ್ರಸಿದ್ಧ ಕವಿಗಳೊಂದಿಗೆ...with kannada Poets / writers - R S Iyer & R Vishwanathan

ನಾಡಿನ ಹಿರಿಯ ಹಾಗೂ ಪ್ರಸಿದ್ಧ ಕವಿಗಳಾದ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ, ಡಾ. ನರಹಳ್ಲಿ ಬಾಲಸುಬ್ರಹ್ಮಣ್ಯ,  ಶ್ರೀ ಬಿ.ಆರ್.ಲಕ್ಷ್ಮಣರಾವ್, ಡಾ.ಸಿದ್ಧಲಿಂಗಯ್ಯ, ಶ್ರೀ ದುಂಡಿರಾಜ್ ಅವರೊಡನೆ...

ಸಾರಸ್ವತ ಲೋಕದ ದಿಗ್ಗಜರನ್ನು ನೋಡುವ, ಅವರ ನುಡಿಗಳನ್ನಾಲಿಸುವ, ಅವರೊಡನೆ ಕ್ಷಣಹೊತ್ತು ಕಳೆವ, ಮಾತನಾಡುವ ಸಂದರ್ಭಗಳು ಮೂಡಿಸುವ ಸಂತಸವಂತೂ ಅವರ್ಣನೀಯ. ಅದಂತೂ ದೀರ್ಘಕಾಲ ಸವಿನೆನಪಿನಲ್ಲಿರುವಂಥ ಸುಸಂದರ್ಭಗಳು. ಅಂಥದ್ದೊಂದು ಅನುಭವ ಇಂದು (08-07-2018, ಭಾನುವಾರ) ಬೆಳಗ್ಗೆ ಬೆಂಗಳೂರಿನ “ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್”ನಲ್ಲಿ ಡಾ.ಪು.ತಿ.ನ. ಟ್ರಸ್ಟ್ ವತಿಯಿಂದ ಏರ್ಪಟ್ಟಿದ್ದ “ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯನಮನ-2” ಕಾರ್ಯಕ್ರಮದಲ್ಲಿ ನಮಗಾಯಿತು.
(we ( R S Iyer & R Vishwanathan) are with famous poets of Karnataka "Nadoja" Prof. K.S.Nissar Ahmed, Dr.H.S.Venkatesha Murthy, Dr. Siddalingaiah, Sri B.R.Lakshmana Rao, Sri Dundi Raj, Dr.Chandrashekhara Kambara, Dr.Narahalli Balasubramanya @ Bengaluru








with Dr. Chandrashekhara Kambara



with Dr.Narahalli Balasubramanya