* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 15 December 2019

Kote Betta Narasimha Swamy Temple, ಕೋಟೆ ಬೆಟ್ಟ ನರಸಿಂಹಸ್ವಾಮಿ ದೇಗುಲ 15.12.2019

ಶ್ರೀ ನರಸಿಂಹಸ್ವಾಮಿಯ ಉಗ್ರ ಸ್ವರೂಪದ ಭವ್ಯಮೂರ್ತಿಯನ್ನು ದರ್ಶಿಸಿದಾಗ ಆಗುವ ಅನುಭವವೇ ವಿಭಿನ್ನ. ಬೆಟ್ಟದ ತುದಿಯ ದೇಗುಲದ ಪಾರ್ಶ್ವದಲ್ಲಿ ನಿರ್ಮಿಸಲ್ಪಟ್ಟಿರುವ ಶ್ರೀ ನರಸಿಂಹಾವತಾರದ ಈ “ಅಪರೂಪದ ಬೃಹತ್ ವಿಗ್ರಹ”ದ ಮುಂದೆ ನಿಂತಾಗ, ಸುಯ್ಯನೆ ಬೀಸುವ ತಂಗಾಳಿಯ ನಡುವೆ ಹಿಂಬದಿಯ ಬೃಹತ್ ಕೆರೆ, ಬೆಟ್ಟಗುಡ್ಡಗಳ ರಮ್ಯ ನೋಟ ನಮ್ಮಿರುವಿಕೆಯನ್ನೇ ಮರೆಸಿಬಿಡುತ್ತದೆ! ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ಸುಪ್ರಸಿದ್ಧ ಕೋಟೆಬೆಟ್ಟ ಗ್ರಾಮದ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದ ಪ್ರಮುಖ ಆಕರ್ಷಣೆಯಿದು.

ಕಂಬದಿಂದ ಸೀಳಿ ಬಂದ ಉಗ್ರ ನರಸಿಂಹನು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನ ಹೊಟ್ಟೆಯನ್ನು ಬಗೆಯುವ ದೃಶ್ಯದ ಈ ವಿಗ್ರಹ ಸುಮಾರು 20 ಅಡಿಗಳಿಗೂ ಎತ್ತರವಿದ್ದು ಎಲ್ಲರ ಮನಸೂರೆಗೊಳ್ಳುತ್ತದೆ. ಇನ್ನು ಈ ಪುರಾತನ ದೇಗುಲದಲ್ಲಿ ವಿಗ್ರಹವಿಲ್ಲ. ಕಂಬವೊಂದರಲ್ಲಿ ಶ್ರೀನರಸಿಂಹಸ್ವಾಮಿ ಉದ್ಭವವಾಗಿದೆಯೆಂಬ ಪ್ರತೀತಿ ಇದ್ದು, ಆ ಕಂಬವೇ ಇಲ್ಲಿನ ಆರಾಧ್ಯದೈವ. ದೇವಾಲಯವನ್ನು ಸೊಬಗಿನಿಂದ ನವೀಕರಿಸಲಾಗಿದೆ. ತುಂಬ ಅಚ್ಚುಕಟ್ಟಾಗಿದೆ. ದೇಗುಲ ಪ್ರಾಂಗಣದಲ್ಲಿ ಕುಳಿತರೆ, ಸುತ್ತಲಿನ ಪ್ರಕೃತಿಯ ಸೊಬಗು ಅಕ್ಷರಶಃ ಮೈಮರೆಸಿಬಿಡುತ್ತದೆ.

ದಿನಾಂಕ 15-12-2019, ಭಾನುವಾರ ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು. ಸಮಯಾಭಾವದಿಂದ ಇಲ್ಲೇ ಪಕ್ಕದಲ್ಲಿರುವ ಶ್ರೀ ಕೋಟೆ ವೆಂಕಟರಮಣ ದೇಗುಲದ ಬೆಟ್ಟವನ್ನು ಏರಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಕೋಟೆ ಬೆಟ್ಟವನ್ನು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಮೂಲಕ ಸುಲಭವಾಗಿ ತಲುಪಬಹುದು.
https://www.youtube.com/watch?v=xHsjs_vYao0
http://rsiyertumkur.blogspot.com/











Thursday, 5 December 2019

Nimishamba Temple 02.12.2019, ನಿಮಿಷಾಂಬ ದೇಗುಲದಲ್ಲಿ..

ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಾಲಯದ ಸನ್ನಿಧಿಯಲ್ಲಿ ಮತ್ತು ಕಾವೇರಿ ತಟದಲ್ಲಿ ನಾವು ನಿಂತಾಗ.... 02.12.2019, ಸೋಮವಾರ ಸಂಜೆ...









Wednesday, 4 December 2019

Chamundi Hills, Mysuru, 02.12.2019, Monday, ಚಾಮುಂಡಿ ಬೆಟ್ಟ

ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಸನ್ನಿಧಿಯಲ್ಲಿ ನಾವು ... 02.12.2019, ಸೋಮವಾರ..












Monday, 2 December 2019

Mysuru Palace 02.12.2019 Monday ಮೈಸೂರು ಅರಮನೆ Mysuru Palace

ಮೈಸೂರಿನ ಹೆಮ್ಮೆಯ ಅರಮನೆಯು ನಿತ್ಯ ಹರಿದ್ವರ್ಣದಂತೆ ಸದಾ ಆಕರ್ಷಣೀಯವಾಗಿಯೇ ಇರುತ್ತದೆ .... (02-12-2019, ಸೋಮವಾರ)      In front of Mysuru Palace...


V S Rmachandran, Freedom Fighter, R Vishwanathan and R S Iyer Tumakuru








Sunday, 24 November 2019

ಕಡಲೆಕಾಯಿ ಪರಿಷೆಯಲ್ಲಿ… 24-11-2019, ಭಾನುವಾರ Groundnut Fair, Basavanagudi, Bengaluru

ಕಡಲೆಕಾಯಿ ಪರಿಷೆಯಲ್ಲಿ…
**********************
ಬೆಂಗಳೂರಿನ ಬಸವನಗುಡಿಯ ಸುಪ್ರಸಿದ್ಧ “ಕಡಲೆಕಾಯಿ ಪರಿಷೆ’’ (Groundnut Fair, Basavanagudi, Bengaluru) ಯಲ್ಲಿ ಇಂದು (24-11-2019, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ –ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಒಂದು ಸುತ್ತು ಬಂದಾಗ ಇಡೀ ಪರಿಷೆಯ ಪ್ರದೇಶವು ಜನಜೀವನದ ಆಕರ್ಷಕ ವೈವಿಧ್ಯತೆಗಳನ್ನು ಕಣ್ತುಂಬಿಸಿತು. ಜಾತಿ-ಮತ-ಧರ್ಮ-ಲಿಂಗಭೇದ- ವಯೋಭೇದವಿಲ್ಲದೆ ಪರಿಷೆ ನೋಡಲು ಬರುವವರು, ಪರಿಷೆ ಮೂಲಕ ಬದುಕು ಕಟ್ಟಿಕೊಳ್ಳುವವರು, ಬದುಕಿಗಾಗಿ ಅವಲಂಬಿಸಿರುವ ಬಗೆಬಗೆಯ ವೃತ್ತಿಗಳು- ಹೀಗೆ ಹೆಜ್ಜೆಹೆಜ್ಜೆಗೂ ಅದೊಂದು ಬೇರೆಯದೇ ಲೋಕವನ್ನು ಅನಾವರಣಗೊಳಿಸಿತು. ದೊಡ್ಡ ಗಣಪನ ಗುಡಿ ಹಾಗೂ ಬೃಹತ್ ನಂದಿಯ ಗುಡಿಗಳ ಆಸುಪಾಸಿನ ಪ್ರದೇಶದಲ್ಲೆಲ್ಲ ಎಲ್ಲಿ ನೋಡಿದರೂ, ಹೆಜ್ಜೆಯಿಡಲಾಗದಷ್ಟು ಜನ…ಜನ…ಜನ ಎಂದಾಗ ಅಲ್ಲಿನ ಸಂಭ್ರಮೋತ್ಸಾಹಗಳನ್ನು ಊಹಿಸಿಕೊಳ್ಳಬಹುದು.












Saturday, 19 October 2019

with Sri Yaduveer Krishnadatta Chamaraja Wadiyar. ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಡನೆ..19-10-2019





with Sri Yaduveer Krishnadatta Chamaraja Wadiyar ( R S Iyer & R Vishwanathan) 




with Sri Yaduveer Krishnadatta Chamaraja Wadiyar and Vice Chancellor Col (Prof) Y.S. Sidde Gowda




ಮೈಸೂರು ರಾಜವಂಶವೆಂದರೆ ಕರ್ನಾಟಕದ ಒಂದು ಹೆಮ್ಮೆಯಿದ್ದಂತೆ. ಆ ರಾಜವಂಶಸ್ಥರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು (ದಿ.19-10-2019, ಶನಿವಾರ) ಬೆಳಗ್ಗೆ ನಮ್ಮ ತುಮಕೂರಿನ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡುವ ಸಂದರ್ಭ ನನಗೆ ಮತ್ತು ವಿಶ್ವನಾಥನ್ ಗೆ ಲಭಿಸಿತು. ಅವರ ಸೌಜನ್ಯ ನಮ್ಮನ್ನು ಬೆರಗುಗೊಳಿಸಿತು. R S Iyer and R Vishwanathan with Sri 
Yaduveer Krishnadatta Chamaraja Wadiyar.  
Sri 
Yaduveer Krishnadatta Chamaraja Wadiyar is a great grandson of  Sri Jayachamarajendra Wadiyar, the last ruler of Mysore State during the British Raj in India.

Tuesday, 8 October 2019

Talakaveri, Kodagu - 06.10.2019 R.S.Iyer ತಲಕಾವೇರಿ, ಕೊಡಗು

ತಲಕಾವೇರಿಯ ಸನ್ನಿಧಿಯಲ್ಲಿ
****************
ಪ್ರಕೃತಿಯ ರಮ್ಯ ಪರಿಸರದಲ್ಲಿ, ಬೃಹತ್ ಬೆಟ್ಟಗಳ ಸಾಲಿನಲ್ಲಿ ಮೋಡ-ಮಳೆಗಳ ಕಣ್ಣಾಮುಚ್ಚಾಲೆಯ ನಡುವೆ ಕಾವೇರಿ ನದಿಯ ಉಗಮಸ್ಥಾನವಾದ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆಯುವುದೇ ರೋಮಾಂಚನ ಮೂಡಿಸುವಂತಹುದು. ದಿ. 06-10-2019, ಭಾನುವಾರ ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ ಆಗಷ್ಟೇ ಮಳೆ ಬಂದು ನಿಂತಿತ್ತು. ಇಡೀ ವಾತಾವರಣ ಮನೋಹರವಾಗಿತ್ತು. ನೂರಾರು ಜನರು (ಅಧಿಕವಾಗಿ ಕೇರಳೀಯರು) ಭಕ್ತಿಭಾವದಿಂದ ಕಾವೇರಿ ಮಾತೆಯ ದರ್ಶನಕ್ಕೆ ಬರುತ್ತಿದ್ದರು. ಪುರೋಹಿತರು ಪೂಜಾದಿಗಳಲ್ಲಿ ತಲ್ಲೀನರಾಗಿದ್ದರು. ಇದೇ ಅಕ್ಟೋಬರ್ 17 ರ “ತುಲಾ ಸಂಕ್ರಮಣ”ದಂದು ಇಲ್ಲಿ ತೀರ್ಥೋದ್ಭವ ಆಗಲಿರುವ ಹಾಗೂ ಸಹಸ್ರಾರು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಇಡೀ ಆವರಣವನ್ನು ಶುಚಿಗೊಳಿಸಲು ಶ್ರಮಿಸುತ್ತಿದ್ದರು. ಪ್ರವಾಸಿಗರು ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದರು.

















------------------------------------------------------------------------------------
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಸನ್ನಿಧಿಯಲ್ಲಿ......



















Thursday, 12 September 2019

with Sri Suresh Kumar, Minister for education, Karnataka

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಇಂದು (12-09-2019, ಗುರುವಾರ) ಸಂಜೆ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲು ಪ್ರಥಮ ಬಾರಿಗೆ ನಮ್ಮ ತುಮಕೂರು ನಗರಕ್ಕೆ ಆಗಮಿಸಿದ್ದ ನಮ್ಮ ಆತ್ಮೀಯರಾದ ಶ್ರೀ ಎಸ್.ಸುರೇಶ್ ಕುಮಾರ್ ಅವರನ್ನು ನಾನು ಮತ್ತು ವಿಶ್ವನಾಥನ್ ಭೇಟಿ ಮಾಡಿ ಅಭಿನಂದಿಸಿದೆವು. 🙏🙏
🍀ಅವರ ಸಹಜ ಸ್ವಭಾವವಾದ ಸರಳತೆ, ಸಜ್ಜನಿಕೆ, ಸಹನೆ ನಮ್ಮ ಮನಸೂರೆಗೊಂಡಿತು. ಸಮಾರಂಭದಲ್ಲಿ ಮಾತನಾಡುತ್ತ ''ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು'' ಎಂಬ ಕವಿವಾಣಿಯನ್ನು ಉಲ್ಲೇಖಿಸುತ್ತ “ಈ ವಿಷಯದಲ್ಲಿ ನಾನು ಧನ್ಯ” ಎಂದು ತಮ್ಮ ತಾಯಿಯನ್ನು ನೆನೆಯುತ್ತ ಹೇಳಿದ್ದು ಸಭಿಕರೆಲ್ಲರ ಮನವರಳಿಸಿತು.. "ಈ ವಿಷಯದಲ್ಲಿ ನಾವೂ ಧನ್ಯರು" ಎಂಬುದು ನಮ್ಮ ಮನದಲ್ಲಿ ಪ್ರತಿಧ್ವನಿಸಿತು..


Saturday, 29 June 2019

"Music Village" Rudra Patna "ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ..27-06-2019

"ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ
*******************************
ಬಹುವರ್ಷಗಳ ಕನಸೊಂದು ನನಸಾದ ಸಂತಸ ನಮ್ಮ ಮನದಲ್ಲಿ ತುಂಬಿ ತುಳುಕುತ್ತಿತ್ತು. "ಸಂಗೀತ ಗ್ರಾಮ"ವೆಂದು ಜಾಗತಿಕವಾಗಿ ಸುವಿಖ್ಯಾತವಾದ ರುದ್ರಪಟ್ಟಣಕ್ಕೆ ನಾವು (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್) ದಿನಾಂಕ 27-06-2019, ಗುರುವಾರ ಸಂಜೆ ಭೇಟಿ ಕೊಟ್ಟಿದ್ದೆವು.
ಇಲ್ಲಿನ "ಸಪ್ತ ಸ್ವರ ದೇವತಾ ಧ್ಯಾನ ಮಂದಿರ'' ನಮ್ಮನ್ನು ಮಂತ್ರಮುಗ್ದರನ್ನಾಗಿಸಿತು. 60 ಅಡಿ ಎತ್ತರದ "ರುದ್ರ ವೀಣೆ"ಯ ಆಕಾರದ ಗೋಪುರದ ಈ ದೇಗುಲದಲ್ಲಿ, ಸರಸ್ವತಿ ದೇವಿಯ ಪುತ್ಥಳಿಯೊಂದಿಗೆ ಕರ್ನಾಟಕ ಶಾಸ್ರ್ರೀಯ ಸಂಗಿತ ದಿಗ್ಗಜರಾದ ಶ್ರೀ ತ್ಯಾಗರಾಜರು,ಶ್ರೀ ಮುತ್ತುಸ್ವಾಮಿ ದೀಕ್ಷಿತರು,ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ಪುರಂದರ ದಾಸರು, ಶ್ರೀ ವಾದಿರಾಜರು ಮತ್ತು ಶ್ರೀ ಕನಕದಾಸರ ಪುತ್ಥಳಿಗಳು ವಿರಾಜಮಾನವಾಗಿವೆ. "ಸಂಗೀತ ನಮನ" ದ ಮೂಲಕ ಕನ್ನಡ ಭಾಷೆಯಲ್ಲೇ ಪೂಜಿಸುವುದು ಇಲ್ಲಿನ ವೈಶಿಷ್ಟ್ಯ.ನಾಡಿನ ಖ್ಯಾತ ಸಂಗೀತ ವಿದ್ವಾಂಸರಾದ ಶ್ರಿ ಆರ್.ಕೆ.ಪದ್ಮನಾಭರವರು ತಮ್ಮ ಹುಟ್ಟೂರಿಗೆ ನೀಡಿರುವ ಅಮೂಲ್ಯ ಕೊಡುಗೆಯಿದು. ಅವರ ಅದ್ಭುತ ಸೃಜನಶೀಲತೆಗೆ ಈ ಮಂದಿರ ಸಾಕ್ಷಿಯಾಗಿದೆ.
ಸಂಗೀತಗಾರರು, ಸಂಗೀತಾರಾಧಕರಿಗೆಲ್ಲ ರುದ್ರಪಟ್ಟಣ ಅಕ್ಷರಶಃ ತೀರ್ಥಕ್ಷೇತ್ರದಂತಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವು ಕಾವೇರಿ ನದಿಯ ತಟದಲ್ಲಿರುವ ರಮಣೀಯ ತಾಣವಾಗಿದೆ. ಇಲ್ಲಿನ ಇತಿಹಾಸ ಮೈನವಿರೇಳಿಸುವಂತಿದೆ. ಅದಕ್ಕೆ ಸಂಬಂಧಿಸಿದ ಲಿಂಕ್ ಗಳನ್ನು ಇಲ್ಲಿ ನಮೂದಿಸಿದ್ದು, ಆಸಕ್ತರ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ..
https://www.deccanchronicle.com/…/rudrapatna-a-village-whic…