* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 29 June 2019

"Music Village" Rudra Patna "ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ..27-06-2019

"ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ
*******************************
ಬಹುವರ್ಷಗಳ ಕನಸೊಂದು ನನಸಾದ ಸಂತಸ ನಮ್ಮ ಮನದಲ್ಲಿ ತುಂಬಿ ತುಳುಕುತ್ತಿತ್ತು. "ಸಂಗೀತ ಗ್ರಾಮ"ವೆಂದು ಜಾಗತಿಕವಾಗಿ ಸುವಿಖ್ಯಾತವಾದ ರುದ್ರಪಟ್ಟಣಕ್ಕೆ ನಾವು (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್) ದಿನಾಂಕ 27-06-2019, ಗುರುವಾರ ಸಂಜೆ ಭೇಟಿ ಕೊಟ್ಟಿದ್ದೆವು.
ಇಲ್ಲಿನ "ಸಪ್ತ ಸ್ವರ ದೇವತಾ ಧ್ಯಾನ ಮಂದಿರ'' ನಮ್ಮನ್ನು ಮಂತ್ರಮುಗ್ದರನ್ನಾಗಿಸಿತು. 60 ಅಡಿ ಎತ್ತರದ "ರುದ್ರ ವೀಣೆ"ಯ ಆಕಾರದ ಗೋಪುರದ ಈ ದೇಗುಲದಲ್ಲಿ, ಸರಸ್ವತಿ ದೇವಿಯ ಪುತ್ಥಳಿಯೊಂದಿಗೆ ಕರ್ನಾಟಕ ಶಾಸ್ರ್ರೀಯ ಸಂಗಿತ ದಿಗ್ಗಜರಾದ ಶ್ರೀ ತ್ಯಾಗರಾಜರು,ಶ್ರೀ ಮುತ್ತುಸ್ವಾಮಿ ದೀಕ್ಷಿತರು,ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ಪುರಂದರ ದಾಸರು, ಶ್ರೀ ವಾದಿರಾಜರು ಮತ್ತು ಶ್ರೀ ಕನಕದಾಸರ ಪುತ್ಥಳಿಗಳು ವಿರಾಜಮಾನವಾಗಿವೆ. "ಸಂಗೀತ ನಮನ" ದ ಮೂಲಕ ಕನ್ನಡ ಭಾಷೆಯಲ್ಲೇ ಪೂಜಿಸುವುದು ಇಲ್ಲಿನ ವೈಶಿಷ್ಟ್ಯ.ನಾಡಿನ ಖ್ಯಾತ ಸಂಗೀತ ವಿದ್ವಾಂಸರಾದ ಶ್ರಿ ಆರ್.ಕೆ.ಪದ್ಮನಾಭರವರು ತಮ್ಮ ಹುಟ್ಟೂರಿಗೆ ನೀಡಿರುವ ಅಮೂಲ್ಯ ಕೊಡುಗೆಯಿದು. ಅವರ ಅದ್ಭುತ ಸೃಜನಶೀಲತೆಗೆ ಈ ಮಂದಿರ ಸಾಕ್ಷಿಯಾಗಿದೆ.
ಸಂಗೀತಗಾರರು, ಸಂಗೀತಾರಾಧಕರಿಗೆಲ್ಲ ರುದ್ರಪಟ್ಟಣ ಅಕ್ಷರಶಃ ತೀರ್ಥಕ್ಷೇತ್ರದಂತಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವು ಕಾವೇರಿ ನದಿಯ ತಟದಲ್ಲಿರುವ ರಮಣೀಯ ತಾಣವಾಗಿದೆ. ಇಲ್ಲಿನ ಇತಿಹಾಸ ಮೈನವಿರೇಳಿಸುವಂತಿದೆ. ಅದಕ್ಕೆ ಸಂಬಂಧಿಸಿದ ಲಿಂಕ್ ಗಳನ್ನು ಇಲ್ಲಿ ನಮೂದಿಸಿದ್ದು, ಆಸಕ್ತರ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ..
https://www.deccanchronicle.com/…/rudrapatna-a-village-whic…

No comments:

Post a Comment