* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 14 January 2019

R S Iyer & R Vishwanathan ....with writer Dr. S L Bhyrappa & Dr. R. Ganesh ಡಾ.ಎಸ್.ಎಲ್.ಭೈರಪ್ಪ ಅವರೊಡನೆ...

ಡಾ.ಎಸ್.ಎಲ್.ಭೈರಪ್ಪ ಅವರೊಡನೆ...
****************************
ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ "ಡಿವಿಜಿ ಸಭಾಂಗಣ" ದಲ್ಲಿ ದಿನಾಂಕ 22.07.2018, ಭಾನುವಾರ ಸಂಜೆ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ರವರು ಬರೆದಿರುವ "ಡಿವಿಜಿ ಸಾರಸಂಗ್ರಹ" ಕೃತಿಯ ಲೋಕಾರ್ಪಣೆ ಮಾಡಲು ಆಗಮಿಸಿದ್ದ ಖ್ಯಾತ ಸಾಹಿತಿ "ಪದ್ಮಶ್ರೀ" ಡಾ.ಎಸ್.ಎಲ್.ಭೈರಪ್ಪ ಅವರೊಡನೆ ನಾನು ಮತ್ತು ವಿಶ್ವನಾಥನ್. ( R S Iyer & R Vishwanathan )
 


R S Iyer and R Vishwanathan with Sri S L Bhyrappa





2) ಈ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶತಾವಧಾನಿಗಳೂ, ನಾಡಿನ ಬಹುಶ್ರುತ ವಿದ್ವಾಂಸರೂ ಆದ ಸನ್ಮಾನ್ಯ  ಡಾ. ಆರ್.ಗಣೇಶ್  ಅವರ ಭೇಟಿಯ ಸುಯೋಗವೂ ನಮಗೆ ಲಭಿಸಿತು. with Shatavadhani Dr. R.Ganesh




3) ಇದೇ ಸಮಾರಂಭ ವೀಕ್ಷಿಸಲು ಆಗಮಿಸಿದ್ದ ಖ್ಯಾತ ಲೇಖಕರಾದ ಹಾಗೂ ಅಮೇರಿಕಾದ ನಿವಾಸಿಯಾದ ಶ್ರೀ ಶ್ರೀವತ್ಸ ಜೋಷಿಯವರು, ಡಿವಿಜಿ ಬಳಗದ ಮೂಲಕ ತಾವು ಕರ್ತವ್ಯ ನಿರ್ವಹಿಸುವ ಊರಿನಲ್ಲಿ ಡಿವಿಜಿ ಕಾರ್ಯಕ್ರಮ ನೆರವೇರಿಸುವ ಕೆನರಾ ಬ್ಯಾಂಕ್ ಅಧಿಕಾರಿಗಳಾದ ಶ್ರೀ ಕನಕರಾಜುರವರು,  ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೆಳೆಯ ಶ್ರೀ ಜಯಸಿಂಹರವರೂ ಅಂದು ನಮಗೆ ಭೇಟಿಯಾದರು. ಆ ಸಂತಸದ ಕ್ಷಣಗಳ ಫೋಟೋಗಳಿವು.. (ಕೆಳಗಿನ 2 ಫೋಟೋಗಳು) 

with Sri Srivathsa Joshi, USA, Sri P.Jayasimha, Scientist and Sri Kanaka Raju, Bank Officer- R.S.Iyer & R.Vishwanathan
***************************************************************************


* ಮಾನ್ಯ ಶ್ರೀ ಎಸ್. ಎಲ್ ಭೈರಪ್ಪನವರನ್ನು ನಾವು ಮೊದಲ ಬಾರಿಗೆ ಮೈಸೂರಿನಲ್ಲಿ ಭೇಟಿ ಮಾಡಿದ ಚಿತ್ರವಿದು.  ಮೈಸೂರಿನಲ್ಲಿ ದಿನಾಂಕ 19-07-2009 ರಂದು ಏರ್ಪಟ್ಟಿದ್ದ  "ಸುಧರ್ಮ" ಸಂಸ್ಕೃತ ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಅತಿಥಿಗಳಾಗಿ ತೆರಳುವಾಗ ನಮ್ಮನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಸಮಾರಂಭದಲ್ಲಿ ಶ್ರೀ ಭೈರಪ್ಪನವರು ಸಭಿಕ ವೃಂದದ ಜೊತೆಯಲ್ಲೇ ಆಸೀನರಾಗಿದ್ದರು. ಸಮಾರಂಭದ  ಬಳಿಕ  ಅವರನ್ನು ಭೇಟಿ ಮಾಡುವ, ಅವರೊಡನೆ ಕೆಲ ಕ್ಷಣ ಮಾತನಾಡುವ ಅವಕಾಶವೂ ಲಭಿಸಿತ್ತು. ಆ ಸ್ಮರಣೀಯ ಸಂದರ್ಭದ ಫೋಟೋಗಳಿವು.. (ಕೆಳಗಿನ 2 ಫೋಟೋಗಳು)



R.Vishwanathan, Sri S.L.Bhyrappa and R.S.Iyer


R.S.Iyer, Sri Veereshananda Saraswathi Swamiji, Sri S.L.Bhyrappa and R.Vishwanathan



90 ನೇ ವಸಂತಕ್ಕೆ ರಾಮಚಂದ್ರನ್ ಪಾದಾರ್ಪಣೆ, V.S.R. 90 th Birthday

"ಸಂಕ್ರಾಂತಿ"ಯ ಶುಭಪರ್ವದ ಹಿಂದಿನ ದಿನವಾದ ಇಂದು 14-01-2019, ಸೋಮವಾರ ನಮ್ಮ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರು 90 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ನಾವಿಂದು ನಮ್ಮ ತುಮಕೂರಿನ ಕ್ಯಾತಸಂದ್ರದಲ್ಲಿರುವ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯಕ್ಕೆ ಸಂಜೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡಿದೆವು.








Saturday 12 January 2019

ಮಹಿಳಾ ಸಮಾಜದಲ್ಲಿ ಡಿವಿಜಿ ಸ್ಮರಣೆ, ಸನ್ಮಾನ Mahila Samaja- DVG Smarane & Felicitation to R S Iyer & R Vishwanathan

ತುಮಕೂರಿನ ಮಹಿಳಾ ಸಮಾಜದಲ್ಲಿ ದಿನಾಂಕ 11-01-2019 ರಂದು
ಡಿವಿಜಿ ಮತ್ತು “ಕಗ್ಗ”ದ ಸವಿನೆನಪಿನ ಸಮಾರಂಭ, ಸನ್ಮಾನ

ಕವಿ-ಸಾಹಿತಿ-ಪತ್ರಕರ್ತ-ದಾರ್ಶನಿಕ ಡಿವಿಜಿ ಅವರ ಮೇರುಕೃತಿ “ಮಂಕುತಿಮ್ಮನ ಕಗ್ಗ” ಪ್ರಕಾಶನಗೊಂಡು 75 ವರ್ಷಗಳಾದ ಸವಿನೆನಪಿಗೆ ನಮ್ಮ ತುಮಕೂರು ನಗರದ on ಮಹಾತ್ಮಗಾಂಧಿ ರಸ್ತೆಯಲ್ಲಿರುವ “ಮಹಿಳಾ ಸಮಾಜ ಟ್ರಸ್ಟ್” ಸಭಾಂಗಣದಲ್ಲಿ ದಿನಾಂಕ 11-01-2019, ಶುಕ್ರವಾರ ಸಂಜೆ 5-30 ರಿಂದ 6-30 ರವರೆಗೆ ಮಹಿಳಾ ಸಮಾಜದ ಪದಾಧಿಕಾರಿಗಳು ಅರ್ಥಪೂರ್ಣ ಸಮಾರಂಭವನ್ನು ಆಯೋಜಿಸಿದ್ದರು.

ತುಮಕೂರು ನಗರದಲ್ಲಿ ಕಳೆದ 73 ತಿಂಗಳುಗಳಿಂದ ನಮ್ಮ ಸರಸ್ ಫೌಂಡೇಷನ್ ವತಿಯಿಂದ “ಡಿವಿಜಿ ನೆನಪು” ಮಾಸಿಕ ಉಪನ್ಯಾಸ ಕಾರ್ಯಕ್ರಮವನ್ನು ನಾವು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯಅತಿಥಿಯಾಗಿ ಅತ್ಯಂತ ಪ್ರೀತಿಯಿಂದ ಆಹ್ವಾನಿಸಿದ್ದರು. ಡಿವಿಜಿಯವರ ಬಗ್ಗೆ ಮತ್ತು “ಕಗ್ಗ” ಕುರಿತು ಮಾತನಾಡುವ ಸುಯೋಗವೂ ನನ್ನ ಪಾಲಿಗೆ ಲಭಿಸಿತು.

ಇದೇ ಸಂದರ್ಭದಲ್ಲಿ ನನ್ನನ್ನು ಮತ್ತು ನನ್ನ ಸಹೋದರ ಆರ್.ವಿಶ್ವನಾಥನ್ ಅವರನ್ನು ಮಾತೃ ಸಮಾನರಾದ ಮಹಿಳಾ ಸಮಾಜದ ಪದಾಧಿಕಾರಿಗಳು ಪ್ರೀತ್ಯಾದರಗಳಿಂದ ಸನ್ಮಾನಿಸಿದ್ದು ನಮ್ಮ ಪಾಲಿಗೆ ಅವಿಸ್ಮರಣೀಯ ಕ್ಷಣಗಳು. ತಮ್ಮ ಸಾಧನೆಗಳಿಗಾಗಿ ವಿವಿಧ ಪ್ರಶಸ್ತಿ ಪುರಸ್ಕೃತರಾಗಿರುವ  ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪರವರನ್ನು ಮತ್ತು ಶ್ರೀಮತಿ ಶಾಲಿನಿ ರವಿಶಂಕರ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು ವಿಶೇಷವಾಗಿತ್ತು.  

ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ತುಂಗಮ್ಮರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ಆರ್.ಕುಮಾರ್ ರವರು, ಶ್ರೀಮತಿ ಉಷಾ ಅನಂತರಾಮಯ್ಯ ರವರು ವೇದಿಕೆಯಲ್ಲಿದ್ದು, ಇತರ ಅನೇಕ ಹಿರಿಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನಮ್ಮನ್ನು ಈ ಕಾರ್ಯಕ್ರಮಕ್ಕೆ ಸುಮಾರು 20 ದಿನಗಳ ಮೊದಲೇ ಪ್ರೀತಿಯಿಂದ ಆಹ್ವಾನಿಸಿದ್ದ ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ಆರ್.ಕುಮಾರ್ ರವರಿಗೆ ಮತ್ತು ಮಹಿಳಾ ಸಮಾಜದ ಎಲ್ಲ ಪದಾಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ.  

ತುಮಕೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಹಿಳಾ ಸಮಾಜವು ತುಮಕೂರಿನ ಅತ್ಯಂತ ಹಳೆಯ ಸಂಸ್ಥೆಗಳಲ್ಲೊಂದು. 1940 ರಲ್ಲೇ ಇದರ ಹಳೆಯ ಕಟ್ಟಡ ಉದ್ಘಾಟನೆಗೊಂಡಿದ್ದು, ಅದರ ಶಿಲಾಫಲಕವು ಮಹಿಳಾ ಸಮಾಜದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಅಂದಿನಿಂದ ಟೈಲರಿಂಗ್ ತರಬೇತಿ ಮತ್ತಿತರ ಜನೋಪಯೋಗಿ ಸೇವಾ ಕಾರ್ಯಗಳನ್ನು ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಹಿಂಬದಿಯ ವಿಶಾಲ ಜಾಗದಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಸುವ್ಯವಸ್ಥಿತ ಸಭಾಂಗಣವನ್ನು ಮಹಿಳಾ ಸಮಾಜ ನಿರ್ಮಿಸಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

-ಆರ್.ಎಸ್.ಅಯ್ಯರ್, ತುಮಕೂರು
























Thursday 10 January 2019

ಶ್ರೀ ಸ್ವಾಮಿ ಜಪಾನಂದಜಿಯವರ ಭೇಟಿ- Sri Swamy Japanandaji Visited our home


ದಿಢೀರನೆ ನನ್ನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಮರಳಿದ ಬಳಿಕ ಸುದ್ದಿ ತಿಳಿದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಖುದ್ದು ನಮ್ಮ ಮನೆಗೆ ದಿನಾಂಕ 29-12-2018 ರಂದು ಆಗಮಿಸಿ, ಆಶೀರ್ವದಿಸಿದ ಅಮೂಲ್ಯ ಕ್ಷಣ... H.H. Sri Swamy Japanandaji, President, Sri Ramakrishna Sevashrama, Pavagada, Tumkur Dist visited our home and blessed me...




Sunday 6 January 2019

ಮೈಸೂರಿನ ಶುಕವನದಲ್ಲಿ Shuka Vana at Mysore

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಸುಪ್ರಸಿದ್ಧ "ಶುಕವನ"ದಲ್ಲಿ (ದಿ.21-04-2016) This unique park, commonly known as parrot park, is a part of the Avadhoota Datta Peetham in the Sri Ganapathi Sachidananda Ashram, Mysore.