* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday, 14 January 2019

R S Iyer & R Vishwanathan ....with writer Dr. S L Bhyrappa & Dr. R. Ganesh ಡಾ.ಎಸ್.ಎಲ್.ಭೈರಪ್ಪ ಅವರೊಡನೆ...

ಡಾ.ಎಸ್.ಎಲ್.ಭೈರಪ್ಪ ಅವರೊಡನೆ...
****************************
ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ "ಡಿವಿಜಿ ಸಭಾಂಗಣ" ದಲ್ಲಿ ದಿನಾಂಕ 22.07.2018, ಭಾನುವಾರ ಸಂಜೆ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ರವರು ಬರೆದಿರುವ "ಡಿವಿಜಿ ಸಾರಸಂಗ್ರಹ" ಕೃತಿಯ ಲೋಕಾರ್ಪಣೆ ಮಾಡಲು ಆಗಮಿಸಿದ್ದ ಖ್ಯಾತ ಸಾಹಿತಿ "ಪದ್ಮಶ್ರೀ" ಡಾ.ಎಸ್.ಎಲ್.ಭೈರಪ್ಪ ಅವರೊಡನೆ ನಾನು ಮತ್ತು ವಿಶ್ವನಾಥನ್. ( R S Iyer & R Vishwanathan )
 


R S Iyer and R Vishwanathan with Sri S L Bhyrappa





2) ಈ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶತಾವಧಾನಿಗಳೂ, ನಾಡಿನ ಬಹುಶ್ರುತ ವಿದ್ವಾಂಸರೂ ಆದ ಸನ್ಮಾನ್ಯ  ಡಾ. ಆರ್.ಗಣೇಶ್  ಅವರ ಭೇಟಿಯ ಸುಯೋಗವೂ ನಮಗೆ ಲಭಿಸಿತು. with Shatavadhani Dr. R.Ganesh




3) ಇದೇ ಸಮಾರಂಭ ವೀಕ್ಷಿಸಲು ಆಗಮಿಸಿದ್ದ ಖ್ಯಾತ ಲೇಖಕರಾದ ಹಾಗೂ ಅಮೇರಿಕಾದ ನಿವಾಸಿಯಾದ ಶ್ರೀ ಶ್ರೀವತ್ಸ ಜೋಷಿಯವರು, ಡಿವಿಜಿ ಬಳಗದ ಮೂಲಕ ತಾವು ಕರ್ತವ್ಯ ನಿರ್ವಹಿಸುವ ಊರಿನಲ್ಲಿ ಡಿವಿಜಿ ಕಾರ್ಯಕ್ರಮ ನೆರವೇರಿಸುವ ಕೆನರಾ ಬ್ಯಾಂಕ್ ಅಧಿಕಾರಿಗಳಾದ ಶ್ರೀ ಕನಕರಾಜುರವರು,  ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೆಳೆಯ ಶ್ರೀ ಜಯಸಿಂಹರವರೂ ಅಂದು ನಮಗೆ ಭೇಟಿಯಾದರು. ಆ ಸಂತಸದ ಕ್ಷಣಗಳ ಫೋಟೋಗಳಿವು.. (ಕೆಳಗಿನ 2 ಫೋಟೋಗಳು) 

with Sri Srivathsa Joshi, USA, Sri P.Jayasimha, Scientist and Sri Kanaka Raju, Bank Officer- R.S.Iyer & R.Vishwanathan
***************************************************************************


* ಮಾನ್ಯ ಶ್ರೀ ಎಸ್. ಎಲ್ ಭೈರಪ್ಪನವರನ್ನು ನಾವು ಮೊದಲ ಬಾರಿಗೆ ಮೈಸೂರಿನಲ್ಲಿ ಭೇಟಿ ಮಾಡಿದ ಚಿತ್ರವಿದು.  ಮೈಸೂರಿನಲ್ಲಿ ದಿನಾಂಕ 19-07-2009 ರಂದು ಏರ್ಪಟ್ಟಿದ್ದ  "ಸುಧರ್ಮ" ಸಂಸ್ಕೃತ ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಅತಿಥಿಗಳಾಗಿ ತೆರಳುವಾಗ ನಮ್ಮನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಸಮಾರಂಭದಲ್ಲಿ ಶ್ರೀ ಭೈರಪ್ಪನವರು ಸಭಿಕ ವೃಂದದ ಜೊತೆಯಲ್ಲೇ ಆಸೀನರಾಗಿದ್ದರು. ಸಮಾರಂಭದ  ಬಳಿಕ  ಅವರನ್ನು ಭೇಟಿ ಮಾಡುವ, ಅವರೊಡನೆ ಕೆಲ ಕ್ಷಣ ಮಾತನಾಡುವ ಅವಕಾಶವೂ ಲಭಿಸಿತ್ತು. ಆ ಸ್ಮರಣೀಯ ಸಂದರ್ಭದ ಫೋಟೋಗಳಿವು.. (ಕೆಳಗಿನ 2 ಫೋಟೋಗಳು)



R.Vishwanathan, Sri S.L.Bhyrappa and R.S.Iyer


R.S.Iyer, Sri Veereshananda Saraswathi Swamiji, Sri S.L.Bhyrappa and R.Vishwanathan



No comments:

Post a Comment