* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 12 January 2019

ಮಹಿಳಾ ಸಮಾಜದಲ್ಲಿ ಡಿವಿಜಿ ಸ್ಮರಣೆ, ಸನ್ಮಾನ Mahila Samaja- DVG Smarane & Felicitation to R S Iyer & R Vishwanathan

ತುಮಕೂರಿನ ಮಹಿಳಾ ಸಮಾಜದಲ್ಲಿ ದಿನಾಂಕ 11-01-2019 ರಂದು
ಡಿವಿಜಿ ಮತ್ತು “ಕಗ್ಗ”ದ ಸವಿನೆನಪಿನ ಸಮಾರಂಭ, ಸನ್ಮಾನ

ಕವಿ-ಸಾಹಿತಿ-ಪತ್ರಕರ್ತ-ದಾರ್ಶನಿಕ ಡಿವಿಜಿ ಅವರ ಮೇರುಕೃತಿ “ಮಂಕುತಿಮ್ಮನ ಕಗ್ಗ” ಪ್ರಕಾಶನಗೊಂಡು 75 ವರ್ಷಗಳಾದ ಸವಿನೆನಪಿಗೆ ನಮ್ಮ ತುಮಕೂರು ನಗರದ on ಮಹಾತ್ಮಗಾಂಧಿ ರಸ್ತೆಯಲ್ಲಿರುವ “ಮಹಿಳಾ ಸಮಾಜ ಟ್ರಸ್ಟ್” ಸಭಾಂಗಣದಲ್ಲಿ ದಿನಾಂಕ 11-01-2019, ಶುಕ್ರವಾರ ಸಂಜೆ 5-30 ರಿಂದ 6-30 ರವರೆಗೆ ಮಹಿಳಾ ಸಮಾಜದ ಪದಾಧಿಕಾರಿಗಳು ಅರ್ಥಪೂರ್ಣ ಸಮಾರಂಭವನ್ನು ಆಯೋಜಿಸಿದ್ದರು.

ತುಮಕೂರು ನಗರದಲ್ಲಿ ಕಳೆದ 73 ತಿಂಗಳುಗಳಿಂದ ನಮ್ಮ ಸರಸ್ ಫೌಂಡೇಷನ್ ವತಿಯಿಂದ “ಡಿವಿಜಿ ನೆನಪು” ಮಾಸಿಕ ಉಪನ್ಯಾಸ ಕಾರ್ಯಕ್ರಮವನ್ನು ನಾವು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯಅತಿಥಿಯಾಗಿ ಅತ್ಯಂತ ಪ್ರೀತಿಯಿಂದ ಆಹ್ವಾನಿಸಿದ್ದರು. ಡಿವಿಜಿಯವರ ಬಗ್ಗೆ ಮತ್ತು “ಕಗ್ಗ” ಕುರಿತು ಮಾತನಾಡುವ ಸುಯೋಗವೂ ನನ್ನ ಪಾಲಿಗೆ ಲಭಿಸಿತು.

ಇದೇ ಸಂದರ್ಭದಲ್ಲಿ ನನ್ನನ್ನು ಮತ್ತು ನನ್ನ ಸಹೋದರ ಆರ್.ವಿಶ್ವನಾಥನ್ ಅವರನ್ನು ಮಾತೃ ಸಮಾನರಾದ ಮಹಿಳಾ ಸಮಾಜದ ಪದಾಧಿಕಾರಿಗಳು ಪ್ರೀತ್ಯಾದರಗಳಿಂದ ಸನ್ಮಾನಿಸಿದ್ದು ನಮ್ಮ ಪಾಲಿಗೆ ಅವಿಸ್ಮರಣೀಯ ಕ್ಷಣಗಳು. ತಮ್ಮ ಸಾಧನೆಗಳಿಗಾಗಿ ವಿವಿಧ ಪ್ರಶಸ್ತಿ ಪುರಸ್ಕೃತರಾಗಿರುವ  ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪರವರನ್ನು ಮತ್ತು ಶ್ರೀಮತಿ ಶಾಲಿನಿ ರವಿಶಂಕರ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು ವಿಶೇಷವಾಗಿತ್ತು.  

ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ತುಂಗಮ್ಮರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ಆರ್.ಕುಮಾರ್ ರವರು, ಶ್ರೀಮತಿ ಉಷಾ ಅನಂತರಾಮಯ್ಯ ರವರು ವೇದಿಕೆಯಲ್ಲಿದ್ದು, ಇತರ ಅನೇಕ ಹಿರಿಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನಮ್ಮನ್ನು ಈ ಕಾರ್ಯಕ್ರಮಕ್ಕೆ ಸುಮಾರು 20 ದಿನಗಳ ಮೊದಲೇ ಪ್ರೀತಿಯಿಂದ ಆಹ್ವಾನಿಸಿದ್ದ ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ಆರ್.ಕುಮಾರ್ ರವರಿಗೆ ಮತ್ತು ಮಹಿಳಾ ಸಮಾಜದ ಎಲ್ಲ ಪದಾಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ.  

ತುಮಕೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಹಿಳಾ ಸಮಾಜವು ತುಮಕೂರಿನ ಅತ್ಯಂತ ಹಳೆಯ ಸಂಸ್ಥೆಗಳಲ್ಲೊಂದು. 1940 ರಲ್ಲೇ ಇದರ ಹಳೆಯ ಕಟ್ಟಡ ಉದ್ಘಾಟನೆಗೊಂಡಿದ್ದು, ಅದರ ಶಿಲಾಫಲಕವು ಮಹಿಳಾ ಸಮಾಜದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಅಂದಿನಿಂದ ಟೈಲರಿಂಗ್ ತರಬೇತಿ ಮತ್ತಿತರ ಜನೋಪಯೋಗಿ ಸೇವಾ ಕಾರ್ಯಗಳನ್ನು ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಹಿಂಬದಿಯ ವಿಶಾಲ ಜಾಗದಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಸುವ್ಯವಸ್ಥಿತ ಸಭಾಂಗಣವನ್ನು ಮಹಿಳಾ ಸಮಾಜ ನಿರ್ಮಿಸಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

-ಆರ್.ಎಸ್.ಅಯ್ಯರ್, ತುಮಕೂರು
























No comments:

Post a Comment