* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 24 May 2019

with veteran Film Director Sri Bhargava... ಶ್ರೀ ಭಾರ್ಗವ ರವರೊಡನೆ... 24-05-2019

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಪ್ರಸಿದ್ಧ ನಿರ್ದೇಶಕರಾದ ಶ್ರೀ ಭಾರ್ಗವರವರನ್ನು ನೋಡುವ ಹಾಗೂ ಅವರೊಡನೆ ಕೆಲ ಕ್ಷಣ ಮಾತನಾಡುವ ಸದವಕಾಶ ಇಂದು (24-05-2019, ಶುಕ್ರವಾರ) ಬೆಂಗಳೂರಿನಲ್ಲಿ ನಡೆದ "ಬ್ರಹ್ಮೋಪದೇಶ" ಸಮಾರಂಭದಲ್ಲಿ ನನಗೆ ಮತ್ತು ವಿಶ್ವನಾಥನ್ ಗೆ ಲಭಿಸಿತು. ಅವರ ಸರಳತೆ, ಸಜ್ಜನಿಕೆ, ವಿಜಯಶೀಲತೆ ಮನಸೂರೆಗೊಂಡಿತು. ಅವರನ್ನು ಭೇಟಿ ಮಾಡಿಸಿದ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯರವರೂ ಜೊತೆಯಲ್ಲಿದ್ದಾರೆ.








ಬ್ರಹ್ಮೋಪದೇಶ ಸಮಾರಂಭ... Upanayanam... 24-05-2019 Friday

ಬ್ರಹ್ಮೋಪದೇಶದ ಸಮಾರಂಭದಲ್ಲಿ...
*******************************
ಬೆಂಗಳೂರಿನಲ್ಲಿ ಇಂದು (ದಿನಾಂಕ 24-05-2019, ಶುಕ್ರವಾರ) ಬೆಳಗ್ಗೆ ನಮ್ಮ ಬಂಧುಗಳಾದ ಶ್ರೀಮತಿ ಗೀತಾ ಮತ್ತು ಜೆ.ಎನ್.ಪ್ರಸಾದ್ ದಂಪತಿಯ ಸುಪುತ್ರ ಅಶ್ವಿನ್ ಚಂದ್ರನಿಗೆ "ಬ್ರಹ್ಮೋಪದೇಶ"ದ ಕಾರ್ಯಕ್ರಮ ಏರ್ಪಟ್ಟಿತ್ತು. ಆ ಶುಭ ಸಮಾರಂಭದಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಭಾಗಿಯಾಗಿದ್ದೆವು. ಅನಿರೀಕ್ಷತವಾಗಿ ಅಲ್ಲಿ ನಮಗೆ ಮತ್ತೊಮ್ಮೆ ಚೆನ್ನೈನಿಂದ ಆಗಮಿಸಿದ್ದ ನಮ್ಮ ದೊಡ್ಡಪ್ಪ (ತಂದೆಯವರ ಅಣ್ಣ) ಶ್ರೀ ವೆಂಕಟಾಚಲಂ ಅವರನ್ನು ನೋಡುವ ಸದವಕಾಶ ಲಭಿಸಿತು. ಜೊತಗೆ ಇತರ ಬಂಧುಗಳ ಅಪರೂಪದ ಭೇಟಿಯೂ ಆಯಿತು. ಆ ಸಂತಸದ ಕೆಲವು ಕ್ಷಣಗಳು...

















Sunday, 19 May 2019

Savanadurga-2 ಸಾವನದುರ್ಗ-2

ಸಾವನದುರ್ಗದ ಮತ್ತೊಂದು ಪ್ರಸಿದ್ಧ ದೇಗುಲ ಶ್ರೀ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ....At Sri Veerabhadraswamy Temple, Another famous temple of Savandurga 19-05-2019





Savanadurga,,, ಸಾವನದುರ್ಗ (19-05-2019)

ಸಾವನದುರ್ಗದ ಮುಗಿಲೆತ್ತರದ ಬೆಟ್ಟದ ತಪ್ಪಲಿನಲ್ಲಿ, ದಟ್ಟ ಅರಣ್ಯದ ನಡುವೆ ಇರುವ 
ಪುರಾತನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಕೆಲ ಹೊತ್ತು ಇರುವ, ಸುತ್ತಲಿನ ನಿಸರ್ಗದ ಸೊಬಗನ್ನು ಆಸ್ವಾದಿಸುವ ಸುಸಂದರ್ಭ ಇಂದು (19-05-2019, ಭಾನುವಾರ) ಸಂಜೆ ನಮಗೆ ಒದಗಿತು. 
ರಾಮನಗರ ಜಿಲ್ಲೆಗೆ ಸೇರಿರುವ ಈ ಸುಂದರ ಸ್ಥಳಕ್ಕೆಇಂದು ಮುಸ್ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಭೇಟಿ ನೀಡಿದ್ದೆವು. ಆ ಸುಂದರ ಪರಿಸರ ಮನಸ್ಸಿಗೆ ಮುದ ನೀಡಿತು. Today evening we (me, Vishwanathan & our father Sri V.S.Ramachandran) visited Sri Lakshmi Narasimha Swamy temple situated at the foothills of Savanadurga (Ramanagara District). This beautiful place is surrounded by hills and forest.