* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 22 July 2022

With Sri Ravi Hegade, Group Editor, Kannada Prabha & Suvarna News - 2022 ಶ್ರೀ ರವಿ ಹೆಗಡೆ ಅವರೊಡನೆ

ಪತ್ರಕರ್ತರಾದ ಶ್ರೀ ರವಿ ಹೆಗಡೆ ಅವರೊಡನೆ                                                  _________________________ 

ನಾಡಿನ ಹೆಸರಾಂತ ಪತ್ರಕರ್ತರೂ, ಕನ್ನಡಪ್ರಭ–ಸುವರ್ಣ ನ್ಯೂಸ್ ನ ಸಮೂಹ ಸಂಪಾದಕರೂ ಆದ ಶ್ರೀ ರವಿ ಹೆಗಡೆ ಅವರನ್ನು ಭೇಟಿ ಮಾಡುವ, ಅವರೊಡನೆ ಮಾತನಾಡುವ ಮತ್ತು “ಬದಲಾಗಿರುವ ಕಾಲದಲ್ಲಿ ಮಾಧ್ಯಮಕ್ಷೇತ್ರ ಬಯಸುವ ಕೌಶಲಗಳು” ವಿಷಯವಾಗಿ ಅವರು ನೀಡಿದ ವಿದ್ವತ್ಪೂರ್ಣ ಉಪನ್ಯಾಸ ಕೇಳುವ ಸದವಕಾಶ ಇಂದು ದಿ.22-07-2022, ಶುಕ್ರವಾರ ಬೆಳಗ್ಗೆ “ನಮ್ಮ ತುಮಕೂರು” ನಗರದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನನಗೆ ಮತ್ತು ಆರ್.ವಿಶ್ವನಾಥನ್ ಗೆ ಲಭಿಸಿತು. ತುಂಬ ಸಂತೋಷವಾಯಿತು.

ಈ ಮೊದಲನೆಯ ಚಿತ್ರದಲ್ಲಿ (ಎಡದಿಂದ ಬಲಕ್ಕೆ) ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ, ಆತ್ಮೀಯರೂ ಆದ ಡಾ. ಕೆ.ವಿ. ಸಿಬಂತಿ ಪದ್ಮನಾಭ, ಆರ್.ವಿಶ್ವನಾಥನ್, ವಿ.ವಿ.ಯ ಕುಲಸಚಿವ (ಪರೀಕ್ಷಾಂಗ)ರಾದ ಪ್ರೊ. ನಿರ್ಮಲ್ ರಾಜು, ಪತ್ರಕರ್ತರಾದ ಶ್ರೀ ರವಿ ಹೆಗಡೆ, ವಿ.ವಿ.ಯ ನೂತನ ಕುಲಪತಿಗಳೂ, ಪರಿಚಿತರೂ ಆದ ಪ್ರೊ. ಎಂ. ವೆಂಕಟೇಶ್ವರಲು, ನಾನು (ಆರ್.ಎಸ್.ಅಯ್ಯರ್), ವಿ.ವಿ. ಕಲಾಕಾಲೇಜಿನ ಪ್ರಾಚಾರ್ಯರೂ-ನಮ್ಮ ಹಳೆಯ ಮಿತ್ರರೂ ಆದ ಪ್ರೊ.ಜಿ.ಕರಿಯಣ್ಣ, ಕನ್ನಡಪ್ರಭದ ತುಮಕೂರು ವರದಿಗಾರರಾದ ಶ್ರೀ ಉಗಮ ಶ್ರೀನಿವಾಸ್ ಅವರುಗಳನ್ನು ಕಾಣಬಹುದು.
ವಿ.ವಿ.ಯ ನೂತನ ಕುಲಪತಿಗಳೂ, ಪರಿಚಿತರೂ ಆದ ಪ್ರೊ. ಎಂ. ವೆಂಕಟೇಶ್ವರಲು ಅವರನ್ನು ನಾವು ಇದೇ ಸಂದರ್ಭದಲ್ಲಿ ಅಭಿನಂದಿಸಿದೆವು. ಅವರೂ ಸಂತೋಷಪಟ್ಟರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 22-07-2022
ಟ್ವಿಟರ್ :- https://twitter.com/rsitmk


(From Left) HOD Journalism Dr. Sibanthi Padmanabha, R.Vishwanathan, Tumkur University Registrar Prof. Nirmal Raju, Group Editor, Kannada Prabha & Suvarna News Sri Ravi Hegade, Tumkur University Vice Chancellor Prof. M. Venkateshwaralu, R.S.Iyer, University Art College Principal Prof. B. Kariyanna and Kannada Prabha reporter Sri Ugama Srinivas.

From Left- R.S. Iyer, Sri Ugama Srinivas, Prof. B. Kariyanna, V.C. Prof M. Venkateshwaralu, Sri Ravi Hegade, Prof Nirmal Raju and R. Vishwanathan






Sunday, 17 July 2022

With Sri Swamy Purushottamanandaji/ Letters ಪ.ಪೂ. ಶ್ರೀ ಸ್ವಾಮಿಪುರುಷೋತ್ತಮಾನಂದಜಿಯವರೊಂದಿಗೆ ಹಾಗೂ ಪತ್ರಗಳು


ನಮ್ಮ ಮನೆಯಲ್ಲಿ ಕುಳಿತು "ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು"  ಹಾಡತೊಡಗಿದಾಗ
-------------------------------------------------------------------------------

ಅದು 1992 ಇರಬಹುದು. ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಅವರು ಟೈಫಾಯಿಡ್ ಕಾಯಿಲೆಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಈ ವಿಷಯ ತಿಳಿದ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು,  ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮತ್ತು ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯರೊಡನೆ ಅಂದು ಬೆಳಗ್ಗೆ ತುಮಕೂರಿನ ಚಿಕ್ಕಪೇಟೆಯಲ್ಲಿದ್ದ ನಮ್ಮ ಪುಟ್ಟ ಮನೆಗೆ ಬಂದೇ ಬಿಟ್ಟರು. ಮೂವರೂ ಸಂತರನ್ನು ಮಾಲಾರ್ಪಣೆ ಮಾಡಿ ಸ್ವಾಗತಿಸಿದೆವು. ಸಾಮಾನ್ಯವಾದ ತಗಡಿನ ಕುರ್ಚಿಯಲ್ಲೇ ಮೂವರೂ ಆಸೀನರಾದರು. ಕೆಲ ನಿಮಿಷಗಳ ಕಾಲ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು ಎಲ್ಲರೊಡನೆ ಕ್ಷೇಮ ಸಮಾಚಾರ ವಿಚಾರಿಸಿದರು.  ಅಲ್ಲೇ ಕೆಳಗೆ ನೆಲದ ಮೇಲಿನ ಹಾಸಿಗೆಯ ಮೇಲೆ ನಮ್ಮ ತಂದೆ ಕುಳಿತಿದ್ದರು. ಬಳಿಕ ಕಣ್ಮುಚ್ಚಿ ಕುಳಿತ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು ತಮ್ಮ ಕಂಠಸಿರಿಯಿಂದ "ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು..." ಎಂಬ ಪ್ರಸಿದ್ಧ ಗೀತೆಯನ್ನು ಹಾಡಲಾರಂಭಿಸಿದರು. ಅದೊಂದು ಅಭೂತಪೂರ್ವ ಅನಿರ್ವಚನೀಯ ದೃಶ್ಯವಾಗಿ ರೂಪುಗೊಂಡಿತು.  ನಂತರ ಕೆಲ ಹೊತ್ತು ಅಲ್ಲಿ ಹರ್ಷೋಲ್ಲಾಸದ ವಾತಾವರಣ. ಸ್ವಾಮೀಜಿಯವರು ಎಲ್ಲರನ್ನೂ ಹರಸಿ, ಆಶೀರ್ವದಿಸಿ,  ಹೊರಡುವಾಗ ಜೊತೆಯಲ್ಲಿ ಆಗಮಿಸಿದ್ದ ಅವರ ದಶಕಗಳ ಕಾಲದ  ಶಿಷ್ಯರಾದ ಬೆಂಗಳೂರಿನ ಶ್ರೀ ತಿಮ್ಮರಾಯಶೆಟ್ಟರು ನನ್ನ ಕಿವಿಯ ಬಳಿ "ಸ್ವಾಮೀಜಿಯವರಿಗೆ ನೀವು ಏನು ಮೋಡಿ ಮಾಡಿದಿರಿ? ಏಕೆಂದರೆ ಸ್ವಾಮೀಜಿಯವರು ಈ ರೀತಿ ಭಕ್ತರ ಮನೆಯಲ್ಲಿ ಕುಳಿತು ಅನೌಪಚಾರಿಕವಾಗಿ ಹಾಡಿದ್ದನ್ನು ನಾನು ನೋಡೇ ಇಲ್ಲ!!" ಎಂದು ಅಚ್ಚರಿ ಹಾಗೂ ಆನಂದದಿಂದ  ಉದ್ಗರಿಸಿದರು. ನಾನು ಕೇವಲ ಮುಗುಳ್ಕಕ್ಕೆ. ಸ್ವಾಮೀಜಿಯವರ ಆ ಭೇಟಿ ನಮ್ಮ ಪಾಲಿಗೆ ಚಿರಸ್ಮರಣೀಯವಾಗಿಯೇ ಉಳಿಯುವಂತಾಯಿತು..

- ಆರ್.ಎಸ್.ಅಯ್ಯರ್, ತುಮಕೂರು








***********************************************

ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರೊಡನೆ  ಬ್ರಹ್ಮಚಾರಿ ರಾಮು (ಈಗ ಇವರು ಧಾರವಾಡ ಆಶ್ರಮದ ಅಧ್ಯಕ್ಷರಾದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ) ಮತ್ತು ಆರ್.ಎಸ್.ಅಯ್ಯರ್
**********************************************

with Swamiji R.Vishwanathan

*******************************************************


with Swamiji (From Left) Madhu Deshapande (Now High Court Advocate), Muralidhara, R.Vishwanathan, Panchakshari, H.S.Sridhara, Siddalingappa (Advocate, Bangalore).

**********************************

R.S.Iyer with Sri Swamy Japanandaji & Sri Swamy Purushottamanandaji - Vivekananda Yuva Sangha Programme. Date 20-01-1995


R.Vishwanathan with Sri Swamy Japanandaji & Sri Swamy Purushottamanandaji - Vivekananda Yuva Sangha Programme. Date 20-01-1995.

********************************************************************

ಬೆಂಗಳೂರಿನ ವಿ.ವಿ.ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ 1994 ರಲ್ಲಿ ಏರ್ಪಟ್ಟಿದ್ದ "ವಿವೇಕ ಹಂಸ" ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ......


With H.H.Sri Swamy Purushottamanandaji .. R S Iyer and Sri Bharath Kumar Jain -Viveka Hamsa’ Monthly Magazine Releasing Programme,  Kuvempu Kalakshetra,  V.V.Puram, Bangalore, 18-03-1994




 ವಿವೇಕಹಂಸ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರಗಳು...

*******************************************************

ನಮ್ಮ ಮನೆಗೆ ಮೊದಲ ಬಾರಿ ಆಗಮಿಸಿದಾಗ...

ಇಲ್ಲಿರುವುದು 1991 ರ ಅಪೂರ್ವ ಚಿತ್ರಗಳು. ಆಗಿನ್ನೂ "ನಮ್ಮ ತುಮಕೂರು" ನಗರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿತವಾಗಿರಲಿಲ್ಲ.  ಆಗ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದ ಎದುರಿನ ಬಡಾವಣೆಯಲ್ಲಿ (ನಂತರ ಇದಕ್ಕೆ ಶಾರದಾದೇವಿ ನಗರ ಎಂದು ಹೆಸರಿಸಲಾಯಿತು)  "ವಿವೇಕಾನಂದ ವಿಚಾರ ವೇದಿಕೆ" ಎಂಬುದಷ್ಟೇ ಇತ್ತು. ಶ್ರೀ ಶಂಕರರಾಮಯ್ಯ (ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ) ಇದರ ಅಧ್ಯಕ್ಷರು. ಹಲವು ಯುವಕರು (ಇವರಲ್ಲಿ ಅನೇಕ ಜನರು ನಂತರದಲ್ಲಿ ಸಂನ್ಯಾಸಿಗಳಾದರು) ಇವರ ಜೊತೆಯಲ್ಲಿದ್ದರು. ಶ್ರೀ ಶಂಕರರಾಮಯ್ಯ ಅವರು ಇದಕ್ಕೆ ಮೊದಲು ಕುಣಿಗಲ್ ಪಟ್ಟಣದಲ್ಲಿ ವಿವೇಕಾನಂದ ವಿಚಾರ ವೇದಿಕೆ ಆರಂಭಿಸಿ ವಿವಿಧ ಚಟುವಟಿಕೆ ನಡೆಸುತ್ತಿದ್ದು, 1989-90 ರಲ್ಲಿ ಕುಣಿಗಲ್ ನಲ್ಲಿ ಇರುವಾಗಲೇ ಇವರು ನನಗೆ ಪರಿಚಿತರಾಗಿದ್ದರು. ನಂತರ ಇವರು ಮತ್ತು ಸ್ನೇಹಿತರು ತುಮಕೂರಿಗೆ ಸ್ಥಳಾಂತರಗೊಂಡು ಇಲ್ಲಿ ವೇದಿಕೆ ಆರಂಭಿಸಿದ್ದರು. ನಮ್ಮ ನಡುವೆ ಆಗಿನಿಂದಲೂ ಒಳ್ಳೆಯ ಒಡನಾಟ.  

1991 ರಲ್ಲಿ ಬೆಂಗಳೂರು ರಾಮಕೃಷ್ಣಾಶ್ರಮದ ಹಿರಿಯ ಸಂನ್ಯಾಸಿಗಳಾಗಿದ್ದ ಹಾಗೂ ಗಾಯಕರಾಗಿ, ಲೇಖಕರಾಗಿ ಬಹು ಜನಪ್ರಿಯರಾಗಿದ್ದ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ ಅವರನ್ನು ತುಮಕೂರಿಗೆ (ಬಹುಶಃ ಎರಡನೇ ಬಾರಿಗೆ ) ಆಹ್ವಾನಿಸಿ, ತುಮಕೂರಿನ ಕೆಲವು ಸಜ್ಜನರ ಮನೆಗಳಲ್ಲಿ ಸ್ವಾಮೀಜಿಯವರ ಸಂಕೀರ್ತನೆ- ಸತ್ಸಂಗ ನಡೆಸುವ ಒಂದು ವಿಶಿಷ್ಟ ಕಾರ್ಯಕ್ರಮವನ್ನು  ಶ್ರೀ ಶಂಕರರಾಮಯ್ಯ ಯೋಜಿಸಿದ್ದರು. ಅವುಗಳಲ್ಲಿ ನಮ್ಮ ಮನೆಯೂ ಒಂದಾಗಿತ್ತು.  

ಚಿಕ್ಕಪೇಟೆಯ ಪುಟ್ಟ ಹೆಂಚಿನ ಮನೆ ನಮ್ಮದು. ಸ್ವಾಮೀಜಿಯವರ ಆಗಮನವೆಂದರೆ ಸಂಭ್ರಮವೋ ಸಂಭ್ರಮ. ಅಕ್ಕಪಕ್ಕದ ಹಾಗೂ ಬಡಾವಣೆಯ ನಮ್ಮ ಪರಿಚಿತರು, ಇತರೆ ಆತ್ಮೀಯರು ನಮ್ಮ ಮನೆಗೆ ಆಗಮಿಸಿದ್ದರು.  ಇಕ್ಕಟ್ಟಾದ ಆ ನಮ್ಮ ಮನೆಯಲ್ಲಿದ್ದ ತಗಡಿನ ಕುರ್ಚಿಯಲ್ಲೇ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ ಅವರು ಆಸೀನರಾಗಿದ್ದರು. ಹಿನ್ನೆಲೆಗೆ ಒಂದು ಜಮಖಾನ ಕಟ್ಟಲಾಗಿತ್ತು. ಇದಾವುದನ್ನೂ ಗಮನಿಸದೆ ಸ್ವಾಮೀಜಿಯವರು ತಮ್ಮ ಅನುಪಮ ವ್ಯಕ್ತಿತ್ವದಿಂದ ಅಲ್ಲೊಂದು  ಉಲ್ಲಾಸದ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿದ್ದರು. ತಮ್ಮ ಸುಮಧುರ ಕಂಠದಿಂದ ಸಂಕೀರ್ತನೆ ನಡೆಸಿ ಎಲ್ಲರ ಮನವನ್ನೂ ಆಕರ್ಷಿಸಿಬಿಟ್ಟಿದ್ದರು. 

ಆ ಅವಿಸ್ಮರಣೀಯ, ಅನಿರ್ವಚನೀಯ ಸಂದರ್ಭದ ಕಪ್ಪು-ಬಿಳುಪು ಚಿತ್ರಗಳಿವು. ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಅವರ ದಶಕಗಳ ಕಾಲದ ಮಿತ್ರರೂ, ಜ್ಯೋತಿ ಸ್ಟೂಡಿಯೋ ಮಾಲೀಕರೂ ಆಗಿದ್ದ ಡೇನಿಯಲ್ ಗುಂಡಪ್ಪ ಅವರು ಆ ಸುಸಂದರ್ಭವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಶಾಶ್ವತವಾಗಿ ಉಳಿಯುವಂತೆ ಮಾಡಿದರು.

-ಆರ್.ಎಸ್.ಅಯ್ಯರ್, ತುಮಕೂರು   

https://www.instagram.com/r_s_iyer

https://twitter.com/rsitmk




ಸ್ವಾಮೀಜಿಯವರು ಸಂಕೀರ್ತನೆ ನಡೆಸುತ್ತಿರುವುದು. ಕೆಳಗಡೆ ಸ್ವಾಮೀಜಿಯವರ ಪಕ್ಕದಲ್ಲಿ ಕುಳಿತುರುವವರು ಶ್ರೀ ಶಂಕರರಾಮಯ್ಯ (ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ). ಪುಟ್ಟ ಮನೆಯ ನೆಲದ ಮೇಲೆ ಇಕ್ಕಟ್ಟಾಗಿ ಕುಳಿತೇ ಎಲ್ಲರೂ ಆ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಸ್ವಾಮೀಜಿ ಅವರೊಡನೆ ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಮತ್ತು ತಾಯಿ ಶ್ರೀಮತಿ ಪಾರ್ವತಿ


ಸ್ವಾಮೀಜಿ ಅವರೊಡನೆ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಅವರ ಪತಿ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು.


ಸ್ವಾಮೀಜಿ ಅವರೊಡನೆ ಆರ್.ವಿಶ್ವನಾಥನ್, ಆರ್.ಎಸ್.ಅಯ್ಯರ್ ಮತ್ತು ಸಹೋದರಿ ದಿವಂಗತ ಶ್ರೀಮತಿ ಮಹಾಲಕ್ಷ್ಮೀ ಶ್ರೀಧರ್


ಸ್ವಾಮೀಜಿಯವರಿಗೆ ಫಲತಾಂಬೂಲ ನೀಡಿ ನಮ್ಮ ತಂದೆಯವರು ಗೌರವಿಸಿದ ಕ್ಷಣ. ಚಿತ್ರದಲ್ಲಿ ವಿ.ವಿವೇಕ್ ಮತ್ತು ಮಹಾಲಕ್ಷ್ಮೀ ಇದ್ದಾರೆ.

ತಮಗೆ ಅರ್ಪಿಸಿದ್ದ ಹೂಮಾಲೆಯನ್ನು ಪೂಜ್ಯ ಶ್ರೀ ಸ್ವಾಮಿ ಪುರಷೋತ್ತಮಾನಂದಜಿಯವರು ಆರ್.ಎಸ್.ಅಯ್ಯರ್ ಅವರಿಗೆ ಹಾಕುವ ಮೂಲಕ ಎಲ್ಲರಲ್ಲೂ ರೋಮಾಂಚನ ಮೂಡಿಸಿದ ಕ್ಷಣ. ಅಯ್ಯರ್ ಅವರ ಹಿಂಬದಿ ಶ್ರೀ ಶಂಕರರಾಮಯ್ಯ ಹಾಗೂ ಇನ್ನೊಂದು ಬದಿ  ತುಮಕೂರು ತಾಲ್ಲೂಕು ಲಕ್ಕೇನಹಳ್ಳಿ ನಿವಾಸಿ ಸಂಗೀತ ವಿದ್ವಾಂಸರೂ, ಜ್ಯೋತಿಷಿಗಳೂ ಆಗಿದ್ದ ದಿ|| ರಂಗಧಾಮಯ್ಯ, ಸಹೋದರಿ ಗಾಯತ್ರಿ ಅವರನ್ನು ಕಾಣಬಹುದು.

ಈ ಚಿತ್ರದಲ್ಲಿ ಸ್ವಾಮೀಜಿಯವರೊಂದಿಗೆ ಶ್ರೀ ಹೆಚ್.ಕೆ.ವೇಣುಗೋಪಾಲ್, ಶ್ರೀ ದಿಲೀಪ್, ಶ್ರೀ ಗೋಪಾಲರಾವ್ ಇದ್ದಾರೆ.

                           ****************************************************

Letters of Sri Swamy Purushottamanandaji...      ಪೂಜ್ಯ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಪತ್ರಗಳು












--------------------------------------------
"ವಿವೇಕ ಹಂಸ" ಪತ್ರಿಕೆಯಲ್ಲಿ  ಸದರಿ ಪತ್ರ.....







Saturday, 9 July 2022

Sri Sringeri Swamiji Visit CM Temple Tumkur- 2022 ಶ್ರೀ ಶಂಗೇರಿ ಜಗದ್ಗುರುಗಳ ಭೇಟಿ- ಕ್ಯಾತಸಂದ್ರ, ತುಮಕೂರು

 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನಿಧ್ಯ...

******************************
ಪೂಜ್ಯರನ್ನು ನೋಡಿದಾಕ್ಷಣ ಮನದಲ್ಲಿ ಅದೇನೋ ಅನಿರ್ವಚನೀಯ ಭಾವ. ನಮಗರಿವಿಲ್ಲದೆಯೇ ಮತ್ತೆ ಮತ್ತೆ ನಮ್ಮ ನೋಟ, ನಮ್ಮ ಮನ ಆ ನಿಷ್ಕಲ್ಮಷ-ನಿಷ್ಕಪಟ ಸಂತರತ್ತಲೇ ಲೀನವಾಗುತ್ತಿತ್ತು. ಅದೆಂತಹ ತೇಜಃಪೂರ್ಣ ವ್ಯಕ್ತಿತ್ವ, ಪರಮ ಪ್ರಶಾಂತ ಭಾವ, ಕಾರುಣ್ಯಭರಿತ ನೋಟ, ಪ್ರೀತಿ ತುಂಬಿದ ಅಂತಃಕರಣದ ಮಾತುಗಳು, ಸಮದರ್ಶಿತ್ವ … ಸಾನಿಧ್ಯದಲ್ಲೊಂದು ಪರಮಪವಿತ್ರ ವಾತಾವರಣ…
ದಿನಾಂಕ 08-07-2022 ರಂದು ಶುಕ್ರವಾರ ಬೆಳಗ್ಗೆ “ನಮ್ಮ ತುಮಕೂರು’’ ನಗರದ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇಗುಲಕ್ಕೆ ಶ್ರೀ ಶೃಂಗೇರಿ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ದಯಮಾಡಿಸಿದ್ದರು. ಅಲ್ಲಿ ನನಗೆ ಮತ್ತು ವಿಶ್ವನಾಥನ್ ಗೆ ಸನಿಹದಿಂದ ಜಗದ್ಗುರುಗಳ ದರ್ಶನಭಾಗ್ಯ ದೊರೆಯಿತು. ಆ ಕ್ಷಣ ನಮಗಾದ ಅನುಭವ ಅನಿರ್ವಚನೀಯ.
-ಆರ್.ಎಸ್.ಅಯ್ಯರ್, ತುಮಕೂರು, 09-07-2022

https://www.instagram.com/r_s_iyer

https://twitter.com/rsitmk

Jagadguru Shankaracharya of Sringeri H.H. Sri Sri Vidhushekhara Barathi Mahaswamiji visited Sri Chandramoulishwara Temple, Kyathasandra, Tumakuru on 08-07-2022, Friday Morning. It was a great opportunity to me and R Vishwanathan to have the Darshan of H.H. Swamiji.





R.S. Iyer & R.Vishwanathan





R. S. Iyer & R.Vishwanathan

Vedic Scholar of Sri Sringeri Mutt Sri Shivakumara Sharma Tangirala (R.S.Iyer & R. Vishwanathan)



R. Vishwanathan and R.S. Iyer Tumkur



Tuesday, 5 July 2022

V.S.Ramachandran SANMANA Photos (Tumakuru History) ವಿ.ಎಸ್.ರಾಮಚಂದ್ರನ್ ಸನ್ಮಾನದ ಚಿತ್ರಮಾಲಿಕೆ

ತುಮಕೂರು ನಗರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಮತ್ತು  ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕ ಅಧ್ಯಕ್ಷರೂ ಆದ  ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ವಿವಿಧ ಸಂದರ್ಭಗಳಲ್ಲಿ ಗಣ್ಯರು ಸನ್ಮಾನಿಸಿರುವ ಸವಿನೆನಪಿನ ಚಿತ್ರಮಾಲಿಕೆಯಿದು. ಗತಕಾಲದ ತುಮಕೂರಿನ ಅನೇಕ ಗಣ್ಯಮಾನ್ಯರನ್ನು ನೆನಪಿಸುವ ಹಲವು ಚಿತ್ರಗಳು ಇಲ್ಲಿದ್ದು, ತುಮಕೂರು ಇತಿಹಾಸವನ್ನು ಅಷ್ಟಿಷ್ಟು ನೆನಪಿಸಿಕೊಳ್ಳಲು ಸಹಕಾರಿಯಾಗಿವೆ. V.S. Ramachandran Sanmana

https://www.instagram.com/r_s_iyer

https://twitter.com/rsitmk

*************************************************

ನಿವೇದಿತಾ ಕ್ರೀಡಾ ಸಂಸ್ಥೆಯಿಂದ ಸನ್ಮಾನ 2023

ತುಮಕೂರಿನ ಅಗ್ರಹಾರದ ನಿವೇದಿತಾ ಕ್ರೀಡಾ ಸಂಸ್ಥೆಯ ಪ್ರಮುಖರುಗಳು ದಿ. 03-10-2023 ಮಂಗಳವಾರ ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ಅವರನ್ನು ಅಕ್ಕರೆಯಿಂದ ಸನ್ಮಾನಿಸಿದರು.

 ಸಂಸ್ಥೆಯ ಅಧ್ಯಕ್ಷರೂ, ತಿಪಟೂರು ತಾಲ್ಲೂಕು ಬಿಳಿಗೆರೆ ಸರ್ಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯರೂ, ಹಾಲಿ ಬೆಂಗಳೂರಿನ ನಿವಾಸಿಗಳೂ ಆಗಿರುವ ಶ್ರೀ ಜಿ.ಕೆ.ಗುಂಡಣ್ಣರವರ ನೇತೃತ್ವದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳೂ, ನಿವೃತ್ತ ತಹಸೀಲ್ದಾರರೂ, ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರೂ ಆದ ಶ್ರೀ ಕೆ.ವಿ.ಕುಮಾರ್ ರವರು, ಸಂಸ್ಥೆಯ ಸಹಕಾರ್ಯದರ್ಶಿಗಳಾದ ನಿವೃತ್ತ ಎಸ್.ಬಿ.ಎಂ. ಉದ್ಯೋಗಿ ಶ್ರೀ ಎ.ಎಸ್.ಕೃಷ್ಣಮೂರ್ತಿ ರವರು, ಸಂಸ್ಥೆಯ ಖಜಾಂಚಿಗಳಾದ ವೈಶ್ಯ ಕೋ ಆಪರೇಟೀವ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಶ್ರೀ ಎಸ್.ಕೆ.ಶ್ರೀಧರ ಮೂರ್ತಿರವರು ಆಗಮಿಸಿ, ಈ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

-ಆರ್.ಎಸ್.ಅಯ್ಯರ್, ತುಮಕೂರು





-----------------------

ತುಮಕೂರು ಜಿಲ್ಲಾಡಳಿತದಿಂದ ಸನ್ಮಾನ- 2023

ಭಾರತದ 76 ನೇ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ತುಮಕೂರು ಜಿಲ್ಲಾಡಳಿತವು ಇಂದು (ದಿ.09-08-2023) ಅಪರಾಹ್ನ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರನ್ನು ಆದರಪೂರ್ವಕ ಸನ್ಮಾನಿಸಿತು.
ಜಿಲ್ಲಾಡಳಿತದ ಪರವಾಗಿ ತುಮಕೂರು ತಾಲ್ಲೂಕು ಕಚೇರಿಯ ರೆವಿನ್ಯೂ ಇನ್ಸ್ ಪೆಕ್ಟರ್ ಶ್ರೀ ಅಜಯ್ ರವರ ನೇತೃತ್ವದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಶ್ರೀ ರವಿಕುಮಾರ್, ಶ್ರೀ ದೇವರಾಜು ಮತ್ತು ಶ್ರೀಮತಿ ದಿವ್ಯರವರು ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಫಲತಾಂಬೂಲ ನೀಡಿ ಗೌರವಿಸಿದರು.
ಜಿಲ್ಲಾಡಳಿತಕ್ಕೆ ಹಾಗೂ ಈ ಎಲ್ಲ ಅಧಿಕಾರಿ ವೃಂದಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದೆವು. ಅಂದ ಹಾಗೆ ಕಳೆದ ವರ್ಷ ಇದೇ ದಿನಾಂಕದಂದು ಆಗಿನ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ನಮ್ಮ ನಿವಾಸಕ್ಕೆ ಆಗಮಿಸಿ ಶ್ರೀ ರಾಮಚಂದ್ರನ್ ರವರನ್ನು ಸನ್ಮಾನಿಸಿದ್ದರು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 09-08-2023

Twitter: https://twitter.com/rsitmk Instagram:- https://www.instagram.com/r_s_iyer/







R S Iyer   - V S Ramachandran  -   R Vishwanathan





++++++++++++++++++++++++++++++++++++++++++++++++

ಮಹಾನಗರ ಪಾಲಿಕೆ ಉಪಮೇಯರ್ ರವರಿಂದ ಸನ್ಮಾನ- 2022

ತುಮಕೂರು ಮಹಾನಗರ ಪಾಲಿಕೆಯ ನೂತನ ಉಪಮೇಯರ್ ಆಗಿ ಇತ್ತೀಚೆಗೆ ಚುನಾಯಿತರಾಗಿರುವ ಆತ್ಮೀಯ ಮಿತ್ರರಾದ ಶ್ರೀ ಟಿ.ಕೆ.ನರಸಿಂಹಮೂರ್ತಿ ಅವರು ಆ ಹಿನ್ನೆಲೆಯಲ್ಲಿ ಇಂದು (ದಿ. 08-10-2022, ಶನಿವಾರ) ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು. ಅವರ ವಿಶ್ವಾಸಕ್ಕೆ ಕೃತಜ್ಞತೆಗಳು ಹಾಗೂ ಶುಭಾಶಯಗಳು.
ಶ್ರೀ ನರಸಿಂಹಮೂರ್ತಿ ಅವರು ಎರಡನೇ ಬಾರಿಗೆ ಪಾಲಿಕೆ ಪ್ರವೇಶಿಸಿದ್ದು, ಪ್ರಸ್ತುತ 23 ನೇ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಈ ಮೊದಲು ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೋವಿಡ್ ಸಂದರ್ಭದಲ್ಲಿ ತಮ್ಮ ವಾರ್ಡ್ ನಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಜನಪ್ರತಿನಿಧಿಯಾಗಿ ಹಾಗೂ ತಿಗಳ ಸಮಾಜದ ಮುಖಂಡರಾಗಿ ಶ್ರೀ ನರಸಿಂಹಮೂರ್ತಿ ಅವರು ಒಳ್ಳೆಯ ಹೆಸರು ಗಳಿಸಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-10-2022





-----------------------------------------------------------------------

ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀಗಳಿಂದ ಸನ್ಮಾನ -2022
*******************************
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ಶ್ರೀ 1008 ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಇಂದು (ದಿ. 14-08-2022, ಭಾನುವಾರ) ಸಂಜೆ ತುಮಕೂರಿನ ಜಯನಗರದ ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲದೊಂದಿಗೆ ಫಲಮಂತ್ರಾಕ್ಷತೆಯನ್ನು ನೀಡಿ ಸನ್ಮಾನಿಸಿ ಹೃತ್ಪೂರ್ವಕವಾಗಿ ಆಶೀರ್ವದಿಸಿದರು.
ಸಾತ್ವಿಕತೆಯ ಪ್ರತೀಕದಂತಿರುವ ಹಾಗೂ ಸರಳಾತಿಸರಳ ವ್ಯಕ್ತಿತ್ವದ ಪರಮಪೂಜ್ಯ ಶ್ರೀಗಳು ನಮ್ಮ ಮನೆಗೆ ದಯಮಾಡಿಸಿ, ನಮ್ಮ ತಂದೆಯವರನ್ನು ಸನ್ಮಾನಿಸಿ, ಎಲ್ಲರನ್ನೂ ಆಶೀರ್ವದಿಸಿದ್ದು ನಮ್ಮ ಸೌಭಾಗ್ಯವೇ ಹೌದು. ಪೂಜ್ಯರಿಗೆ ನಮ್ಮ ಶಿರಸಾಷ್ಟಾಂಗ ಪ್ರಣಾಮಗಳು. ಶ್ರೀಗಳೊಂದಿಗೆ ಆಗಮಿಸಿದ್ದ ವಿದ್ವಾನ್ ಶ್ರೀ ಮರುತ್ ಆಚಾರ್ಯರವರು , ಆತ್ಮೀಯರಾದ ಶ್ರೀ ನಾಗಲಮಡಿಕೆ ಶ್ಯಾಮಸುಂದರ್ ರವರು ಮತ್ತಿತರರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು, ದಿ. 14-08-2022












                 ***********************************************************

ನೆರೆಹೊರೆಯವರ ಪ್ರೀತಿ-ವಿಶ್ವಾಸ-2022

'ನಮ್ಮ ತುಮಕೂರು' ನಗರದ ಜಯನಗರ ಬಡಾವಣೆಯ ನಮ್ಮ ನಿವಾಸದ ಆಸುಪಾಸಿನಲ್ಲಿ ವಾಸವಿರುವ ಶಿಕ್ಷಕರು ಇಂದು (ದಿ.14-08-2022, ಭಾನುವಾರ) ಬೆಳಗ್ಗೆ ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ಸನ್ಮಾನಿಸಿದರು. ಶಿಕ್ಷಕರಾದ ಶ್ರೀ ನರೇಶ್ ಮೂರ್ತಿ ಮತ್ತು ಕುಟುಂಬದವರು ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಶಿವಯ್ಯ ಅವರು ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿದರು. ಮತ್ತೋರ್ವ ಶಿಕ್ಷಕರಾದ ಶ್ರೀ ಶಿವಕುಮಾರ್ ರವರೂ ಜತೆಯಲ್ಲಿದ್ದರು. ಇವರೆಲ್ಲರ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದಗಳು ಹಾಗೂ ಕೃತಜ್ಞತೆಗಳು.

-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು





***************************************

ಕ.ಸಾ.ಪ. ಮತ್ತು ಚಿದಂಬರ ಸಹಕಾರಿಯಿಂದ ಸನ್ಮಾನ-2022
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ "ನಮ್ಮ ತುಮಕೂರು" ನಗರದ ಜಯನಗರ ಬಡಾವಣೆಯಲ್ಲಿರುವ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಪರವಾಗಿ ಮತ್ತು ಈ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ ಘಟಕದ ಪರವಾಗಿ ಅವುಗಳ ಪದಾಧಿಕಾರಿಗಳು ಇಂದು (ದಿ.13-08-2022, ಶನಿವಾರ) ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು ಪ್ರೀತ್ಯಾದರಗಳಿಂದ ಸನ್ಮಾನಿಸಿದರು.

ಚಿದಂಬರ ಪತ್ತಿನ ಸಹಕಾರಿಯ ನಿರ್ದೇಶಕರುಗಳಾದ ಶ್ರೀ ಪ್ರಕಾಶ್ ಭಾರದ್ವಾಜ್, ಶ್ರೀಮತಿ ಗೀತಾ ನಾಗೇಶ್, ಶ್ರೀಮತಿ ನಂದಿನಿ, ಶ್ರೀ ಶ್ರೀನಿವಾಸ್, ಶ್ರೀ ಬಾಲಸುಬ್ರಹ್ಮಣ್ಯಂ, ಶ್ರೀ ಶ್ರೀನಿವಾಸ್, ಸಿ.ಇ.ಓ.  ಶ್ರೀಮತಿ ಮಧುಶಾಲಿನಿ ಅವರುಗಳು ಆಗಮಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷರಾದ ಶ್ರೀಮತಿ ಕಮಲ ಬಡ್ಡಿಹಳ್ಳಿ, ಕಾರ್ಯದರ್ಶಿ ಶ್ರೀ ರಮೇಶ್, 31 ನೇ ವಾರ್ಡ್ ಘಟಕದ ಅಧ್ಯಕ್ಷ ಶ್ರೀ ಟಿ.ಆರ್.ಮಹದೇವಯ್ಯ, ಕಾರ್ಯದರ್ಶಿ ಶ್ರೀಮತಿ ಗೀತಾ ನಾಗೇಶ್, ನಿರ್ದೇಶಕ ಶ್ರೀ ಚಂದ್ರಚೂಡ ಮೊದಲಾದವರು ಉಪಸ್ಥಿತರಿದ್ದರು.

ಇವರೆಲ್ಲದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಎಲ್ಲರಿಗೂ ಧನ್ಯವಾದಗಳು.

-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು, ದಿ. 13-08-2022










*************************************************

ರಾಜ್ಯದ ಗೃಹ ಸಚಿವರಿಂದ ಮನೆಗೇ ಬಂದು ಸನ್ಮಾನ -2022

H'ble Home Minister of Karnataka Sri Araga Jnanendra visited our residence and felicitated Freedom Fighter Sri V.S.Ramachandran on 09-08-2022 on the eve of 75 th Independence Day Celebrations.

ದೇಶಾದ್ಯಂತ ಇದೀಗ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಉಲ್ಲಾಸ. ಆ ಸಂಭ್ರಮೋಲ್ಲಾಸದ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರೂ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಆರಗ ಜ್ಞಾನೇಂದ್ರ ಅವರು ದಿ.09-08-2022, ಮಂಗಳವಾರ ಸಂಜೆ ತುಮಕೂರಿನ ಜಯನಗರದಲ್ಲಿರುವ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರನ್ನು “ತುಮಕೂರು ಜಿಲ್ಲಾಡಳಿತ”ದ ಪರವಾಗಿ ಹೃತ್ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತುಮಕೂರು ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ IAS, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಾಪುರ್ ವಾಡ್ IPS, ಜಿಲ್ಲಾ ಪಂಚಾಯತ್ CEO ಡಾ. ಕೆ. ವಿದ್ಯಾಕುಮಾರಿ IAS, ತುಮಕೂರು ತಾಲ್ಲೂಕು ತಹಸೀಲ್ದಾರ್ ಶ್ರೀ ಜಿ.ವಿ. ಮೋಹನ್ ಕುಮಾರ್ KAS, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಅವರುಗಳೂ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸುತ್ತಮುತ್ತಲಿನ ನಾಗರಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ವಿ.ಎಸ್.ರಾಮಚಂದ್ರನ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಪ್ರತಿವಂದಿಸಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೂ ಶಾಲುಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಶ್ರೀ ಆರಗ ಜ್ಞಾನೇಂದ್ರ ಅವರ ಸಜ್ಜನಿಕೆ, ಸೌಜನ್ಯದ ನಡೆ-ನುಡಿಗಳು ಎಲ್ಲರಲ್ಲೂ ಸಂತಸ ಮೂಡಿಸಿತು.
ಮನೆಗೇ ಆಗಮಿಸಿ ನಮ್ಮ ತಂದೆಯವರಿಗೆ ಗೌರವಾರ್ಪಣೆ ಮಾಡಿದ ಜಿಲ್ಲಾಡಳಿತ ಹಾಗೂ ಸಕಲ ಗಣ್ಯರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್, ತುಮಕೂರು ದಿ.09-08-2022




Sri V.S.R. felicitating Sri Araga Jnanendra


From Left- Zilla Panchayath CEO Dr. Vidyakumari IAS, Home Minister Sri Araga Jnanendra, Deputy Commissioner Sri Y.S.Patil IAS, Tumkur MLA Sri Jyothi Ganesh, Police Superintendent Sri Rahul Kumar IPS and Corporation Commissioner Smt Renuka.




From Left- H.K.Ramesh, Sri Jyothi Ganesh MLA, R.S.Iyer, Home Minister Sri Araga Jnanendra, V.S.R., H.K.Venugopal, R.Vishwanathan and Smt Rajeshwari Venugopal.

Sri H.K.Ramesh, R.S.Iyer, Home Minister Sri Araga Jnanendra, Sri H.K.Venugopal and R.Vishwanathan

Sri H.K.Ramesh, Home Minister Sri Araga Jnanendra and Sri H.K.Venugopal

Home Minister Sri Araga Jnanendra and Sri V.S.R.





*******************************************************

Felicitation by Sri G.B.Jyothi Ganesh, MLA, 
Tumakuru City -2022

ಇಂದು ಆಶಾಢ ಶುಕ್ಲ ಪೂರ್ಣಿಮೆ (ದಿ. 13-07-2022, ಬುಧವಾರ). " ಶ್ರೀ ಗುರು ಪೂರ್ಣಿಮೆ"ಯ ಶುಭದಿನ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ "ನಮ್ಮ ತುಮಕೂರು" ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರು ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕ ಅಧ್ಯಕ್ಷರೂ ಆದ ಶ್ರಿ ವಿ.ಎಸ್.ರಾಮಚಂದ್ರನ್ (93) ಅವರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತುಮಕೂರು ಮೇಯರ್ ಶ್ರೀ ಬಿ.ಜಿ.ಕೃಷ್ಣಪ್ಪ, ಕಾರ್ಪೊರೇಟರ್ ಗಳಾದ ಶ್ರೀ ಸಿ.ಎನ್.ರಮೇಶ್ (31 ನೇ ವಾರ್ಡ್), ಶ್ರೀ ವಿಷ್ಣುವರ್ಧನ್ (30 ನೇ ವಾರ್ಡ್) ಮತ್ತು ಶ್ರೀ ಹೆಚ್. ಮಲ್ಲಿಕಾರ್ಜುನಯ್ಯ (26 ನೇ ವಾರ್ಡ್) ಮತ್ತು ಶ್ರೀ ರಮೇಶ್ ರವರುಗಳು ಇದ್ದರು.
-ಆರ್.ಎಸ್.ಅಯ್ಯರ್, ತುಮಕೂರು 13-07-2022
Sri G.B. Jyothi Ganesh, MLA, Tumkur City visited our house today on the eve of "Sri Guru Purnime"and felicitated Sri V.S.Ramachandran (93), Freedom Fighter & President, Sri Shankara Jayanthi Sabha. Tumkur Mayor Sri B.G.Krishnappa, Corporaters Sri C.N.Ramesh (Ward 31), Sri Vishnuvardhan (Ward 30) and Sri H.Mallikarjunaiah (Ward 26) and Sri Ramesh were present. -R.S.Iyer, Tumakuru









***********************************************************


@ V S R Residence felicitation by Sri Srinidhi Iyengar 
& Sri Hareesh 2022

 
     Sri Srinidhi Iyengar, Priest, Sri Abhaya Anjaneya Temple, Melekote, Tumkur and Sri Hareesh, Auditor  




 ***********************************************************


Shankara Seva Samithi, Tumakuru 2022

Sri Shankara Seva Samithi Team, Tumkur. President Sri K.G. Nanjundeshwar, Secretary Sri T S Manjunath, Treasure Sri H R Ramesh were present.


 Sri Shankara Seva Samithi Team, Tumkur 

-----------------------------------------------------------------------------------------------------------------------


Felicitation by District Administration, Tumkur

 @ the residence of Sri V S R- 2021

                   DC Sri Y S Patil, ADC Sri Chennabasappa and Tahasildar Sri Mohan Kumar











--------------------------------------------------------------------------------------------


@ Sunrise Souharda Co Ltd Kyathasandra 2021  

ಕ್ಯಾತಸಂದ್ರದ ‘ಸನ್ ರೈಸ್’ ನಲ್ಲಿ ಗಣರಾಜ್ಯೋತ್ಸವ: ಧ್ವಜಾರೋಹಣ, ಪುಷ್ಪಾರ್ಚನೆ, ಸನ್ಮಾನ



ನಮ್ಮ ತುಮಕೂರು ನಗರದ ಕ್ಯಾತಸಂದ್ರದ “ಸನ್ ರೈಸ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ”ದಲ್ಲಿ ಇಂದು (26-01-2021, ಮಂಗಳವಾರ) ಬೆಳಗ್ಗೆ ಏರ್ಪಟ್ಟಿದ್ದ “ಗಣರಾಜ್ಯೋತ್ಸವ” ಸಮಾರಂಭದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳುವ ಸದವಕಾಶ ಇಂದು ನಮಗೆ ಲಭಿಸಿತು.
“ಸನ್ ರೈಸ್” ನ ಅಧ್ಯಕ್ಷರೂ, ನಮ್ಮ ದೀರ್ಘಕಾಲದ ಸನ್ಮಿತ್ರರೂ ಆದ ಶ್ರೀ ಸಿ.ಪಿ.ವಿಜಯ್ ಅವರು ನೀಡಿದ್ದ ಪ್ರೀತಿಯ ಆಹ್ವಾನದ ಮೇರೆಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಭಾಗವಹಿಸಿದ್ದೆವು.
ಶ್ರೀ ವಿ.ಎಸ್.ರಾಮಚಂದ್ರನ್ ರವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಎಲ್ಲರೂ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು. ಬಳಿಕ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ನಂತರ ಸಾಂದರ್ಭಿಕವಾಗಿ ಶ್ರೀ ಸಿ.ಪಿ.ವಿಜಯ್ ರವರು ಮಾತನಾಡಿದರು. ಅನಿರೀಕ್ಷಿತವಾಗಿ ನಾನೂ ಸಹ ಒಂದೆರಡು ಮಾತುಗಳನ್ನಾಡಿದೆ. ಕೊನೆಯಲ್ಲಿ ನಮ್ಮ ತಂದೆಯವರನ್ನು “ಸನ್ ರೈಸ್” ಪರವಾಗಿ ಆಡಳಿತ ಮಂಡಲಿಯವರು ಶಾಲುಹೊದಿಸಿ, ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಸಂತಸ ಪಟ್ಟರು.
“ಸನ್ ರೈಸ್” ಅಧ್ಯಕ್ಷರಾದ ಶ್ರೀ ಸಿ.ಪಿ.ವಿಜಯ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ನಿರ್ದೇಶಕರುಗಳಾದ ಶ್ರೀ ಕೆ.ಸಿ.ಶಾಂತರಾಜು, ಶ್ರೀ ಪ್ರಮೋದ್ ಕುರ್ ಬೆಟ್, ಶ್ರೀ ಕೆ.ಎ.ವಿಜಯ್, ಶ್ರೀ ಮಹೇಶ್ ರೆಡ್ಡಿ, “ಸನ್ ರೈಸ್” ನ ಆಡಳಿತಾಧಿಕಾರಿಗಳಾದ ಶ್ರೀ ದಕ್ಷಿಣಾ ಮೂರ್ತಿ, ಶ್ರೀ ಆರ್.ಮಲ್ಲೇಶ್, ಶ್ರೀ ಕೃಷ್ಣಾಚಾರ್, ಮಾಜಿ ಗ್ರಾ.ಪಂ. ಸದಸ್ಯರಾದ ಶ್ರೀ ಬಿ.ಎಸ್.ವೆಂಕಟೇಶ್ ರವರು ಮೊದಲಾದ ಗಣ್ಯರುಗಳು, “ಸನ್ ರೈಸ್” ಸ್ನೇಹಿತರುಗಳು ಪಾಲ್ಗೊಂಡಿದ್ದರು.
ಈ ವರ್ಷದ ಅಂದರೆ 2021 ರ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ ಈ ರೀತಿ ನಮ್ಮದಾಯಿತು. ಶ್ರೀ ಸಿ.ಪಿ.ವಿಜಯ್ ರವರ ಹಾಗೂ "ಸನ್ ರೈಸ್" ಬಳಗದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ.
-ಆರ್.ಎಸ್.ಅಯ್ಯರ್, ತುಮಕೂರು


Sunrise Souhardha coop ltd, Kyathasandra, Tumakuru

---------------------------------------------------------------------------------------------------------------------------


Felicitation to VSR  by Former MLA and 
Congress Leaders @ his residence 2021


Former MLA Sri Rafeeq Ahmed, Former Mayor Smt Geetha Rudresh, Dist Congress President Sri Ramakrishna, Corporater Sri T M Mahesh, Sri Mehaboob Pasha, Sri Raju and others...

      Former MLA Sri Rafeeq Ahmed, Dist Congress President Sri Ramakrishna 

**************************************************************************



ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ (State Environment Impact Assessment Authority, M.S.Building, Bangalore, Karnataka) ಅಧ್ಯಕ್ಷರಾದ ಡಾ.ಕೆ.ಆರ್. ಶ್ರೀಹರ್ಷರವರು ಬೆಂಗಳೂರಿನ ಎನ್.ಆರ್.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ದಿನಾಂಕ 15-01-2021 ರಂದು ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ಸನ್ಮಾನಿಸಿದ ಕ್ಷಣ.



Felicitation by Dr. k R Sriharsha, Chairman, State Environment Impact Assessment Authority, Karnataka to V S Ramachandran on 15-01-2021 @ his residence in Bangalore.


********************************************************************



@ Sri Raghavendra Swamy Mutt, Shettyhalli Gate, Tumakuru 2021
 ತುಮಕೂರಿನ ಶೆಟ್ಟಿಹಳ್ಳಿ ಗೇಟ್ ನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸನ್ಮಾನ


Main priest of the Mutt felicitated V S Ramachandran. President of the Sri Raghavendra Seva Samithi Sri Puttanna , Sri H.N. Sateesh and others were present.








----------------------------------------------------------------------------------------------------------------------------

@ M.G Stadium Tumkur Independence Day 2019


Independence Day Celebrations by District Administration, Tumkur at M.G Stadium. MP Sri G S Basavaraj, DC Sri Rakesh Kumar IAS, SP Dr. Vamshi Krishna IPS and others







with Deputy Commissioner Dr. Rakesh Kumar.... V.S.Ramachandran and R.Vishwanathan

 With Sri Revanna, Sri Sampath, Freedom Fighters

Freedom Fighters of Tumakuru

***************************************************************


Felicitation by Tumkur District Vokkaliga Employees Fouram 2017


Sri Veereshananda Saraswathi Swamiji, President, Ramakrishna Vivekananda Ashrama, Tumkur and  Sri K B Siddaiah, Famous Dalit Poet & Writer...



on the dias Sri Muralidhara Halappa, Leader and Smt Anasuya Y K Ramaiah...

***************************************************************************

@ Raj Bhavan, Bengaluru with H'ble Governer Sri Rameshwar Takur - 2008



ಇದು ದಿನಾಂಕ 09-08-2008 ರ ಒಂದು ಅಪೂರ್ವ ಚಿತ್ರ. ಆಗ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ರವರು ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ 09-08-2008, ಶನಿವಾರ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸ್ಮರಣೀಯ ಕಾರ್ಯಕ್ರಮಕ್ಕೆ ಶ್ರೀ ವಿ.ಎಸ್.ರಾಮಚಂದ್ರನ್ ರವರೂ ಆಹ್ವಾನಿತರಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯಪಾಲರೊಡನೆ ಇದ್ದಾಗ ತೆಗೆಯಲಾದ ಚಿತ್ರವಿದು. ಈ ಚಿತ್ರದಲ್ಲಿ ರಾಮಚಂದ್ರನ್ ಅವರ ಪುತ್ರಿ ದಿವಂಗತ ಶ್ರೀಮತಿ ಮಹಾಲಕ್ಷ್ಮೀ ಶ್ರೀಧರ್ ರವರೂ ಇದ್ದಾರೆ.
@ Raj Bhavan, Bangalore , With the Governer of Karnataka Sri Rameshwar Takur... Sri V S Ramachandran, Freedom Fighter and his daughter Late Smt Mahalakshmi Sridhar. 09-08-2008




Sri V S Ramachandran presents a book of Swamy Vivekananda to the Governer


Sri V S Ramachandran with Governor Sri Rameshwar Takur. Sri Ramachandra Gowda, Minister of Karnataka, Sri M V Rajashekharan,  Central Minister and others seen.

*********************************************************************

@ Raj Bhavan, Bengaluru with H'ble Governor Sri T.N.Chaturvedi......2006

2006 ರ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ಯೋಧರನ್ನು ಗೌರವಿಸುವ ಕಾರ್ಯಕ್ರಮ ಏರ್ಪಟ್ಟಿತ್ತು. ಅಂದಿನ ರಾಜ್ಯಪಾಲರಾದ ಶ್ರೀ ಟಿ.ಎನ್.ಚತುರ್ವೇದಿಯವರ ಆಹ್ವಾನದ ಮೇರೆಗೆ ತುಮಕೂರಿನಿಂದ ಶ್ರೀ ವಿ.ಎಸ್.ರಾಮಚಂದ್ರನ್ ಅವರು ಪಾಲ್ಗೊಂಡಿದ್ದರು. ಅವರ ಜೊತೆಯಲ್ಲಿ ಪುತ್ರ ಶ್ರೀ ಆರ್.ವಿಶ್ವನಾಥನ್ ಇದ್ದರು.



ಬೆಂಗಳೂರಿನ ರಾಜಭವನದಲ್ಲಿ 2006 ರಲ್ಲಿ ಆಗಿನ ಸಚಿವರಾದ ಶ್ರೀ ಹೆಚ್.ಎಸ್.ಮಹದೇವ ಪ್ರಸಾದ್ ರವರೊಂದಿಗೆ...


************************************************************


@ Tumkur Zilla Panchayath Office-  1997


Minister Sri B Sathyanarayana felicitated V S Ramachandran on the occation of 50 th Independence Day. Zilla Panchayath president Smt Kamala Gangahanumaiah and Vice President Sri Karigiriyappa present

**********************************************************


Minister Sri B Sathyanarayana felicitated V S Ramachandran on the occation of 50 th Independence Day celebrations at Mahathma Gandhi Stadium, Tumakuru. Also seen Deputy Commissioner Sri I.M. Vittala Murthy. 

-------------------------------------------------------------------------------------  

@ Chikkapete, Tumkur 1997


Nagareeka Sangha of Chikkapete, Tumkur celebrated 50 th Independence day on 15-08-1997 & felicitated Sri V S Ramachandran and  Sri Danial Gundappa, Freedom Fighters. Sri Shivananda Shivacharya Swamiji, Hire Mutt, Tumkur and youth leader Sri Kumar were present.

*****************************************************************************

@ Hiremutt, Chickpet, Tumkur 2016. H.H. Dr. Sri Shivananda Shivacharya Swamiji felicitated Sri V.S.Ramachandran on the eve of his birthday...




*******************************************************************


@ Tumkur Round Table Function 2009



Sri V S Ramachandran felicitated by Tumkur Round Table and Tumkur Ladies Circle on the occasion of 63 rd Independence Day @ Rotary Bala Bhavan, Tumkur. Sri Veereshananda Saraswathi Swamiji, Sri T.B. Jayachandra, Former Minister, Dr.B.N.Prashanth, Sri Harish, Smt Mansi Prashanth, Smt Vandana Vasu and others were present.


*********************************************************************************

@ M.G. Stadium Tumkur on Independence Day 2008

ತುಮಕೂರು ರೋಟರಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆಗಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಹಾಗೂ ತುಮಕೂರು  ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ರವರು ಸನ್ಮಾನಿಸಿದರು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎಸ್ಪಿ ಡಾ. ಪಿ.ಎಸ್.ಹರ್ಷ, ರೋಟರಿ ಅಧ್ಯಕ್ಷರಾದ ಶ್ರೀ ಸಿ.ಎನ್.ವಿ.ರೆಡ್ಡಿ ಅವರನ್ನು ಕಾಣಬಹುದು.



On behalf of Rotary Club, Tumkur  Sri S Suresh Kumar, District Minister felicitated Sri V S Ramachandran. Deputy Commissioner Dr. C.Somashekhar IAS, S.P.  Dr. P S Harsha IPS, Rotary president Sri C N V Reddy, Sri Chikkahanumaiah, Sri K S Vishwanath and others were present. (Date 15-08-2008)  



******************************************************************************

@ Rotary Culb Tumkur 2009-10   ರೋಟರಿ ತುಮಕೂರು ಸಂಸ್ಥೆಯಿಂದ VSR ಅವರಿಗೆ ಸನ್ಮಾನ


ತುಮಕೂರು ರೋಟರಿ ಸಂಸ್ಥೆಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಪಿ.ಎಂ. ಮುತ್ತಪ್ಪ ಅವರು VSR ಅವರನ್ನು ಸನ್ಮಾನಿಸಿದರು. ಚಿತ್ರದಲ್ಲಿ (ಎಡದಿಂದ) ಶ್ರೀ ಸಿ.ಪಿ.ರಾಜಪ್ಪ, ಡಾ. ವೈ.ಎಂ.ರೆಡ್ಡಿ, ಶ್ರೀ ವಿಶ್ವನಾಥ್, ರೋಟರಿ ಅಧ್ಯಕ್ಷರಾದ ಶ್ರೀ ಸಿ.ಎನ್.ವಿ. ರೆಡ್ಡಿ ಮತ್ತು ಕಾರ್ಯದರ್ಶಿ ಶ್ರೀ ಚಿಕ್ಕಹನುಮಯ್ಯ ಅವರನ್ನು ಕಾಣಬಹುದು.





Felicitation at Rotary Club, Rotary Bal Bhavan, Tumkur.. On the dias Lieutenant Colonel Sri P.M. Muttappa, Rotary President C N V Reddy, Secretary Sri Chikkahanumaiah were present.


***********************************************************************************


@ on the occasion of 55 th Birthday celbration of H H Sri Shivananda Shivacharya Swamiji, Hire Mutt, Chikkapete, Tumakuru,  29-03-2016







********************************************************


@ Aryabharathi Polytechnic, Tumkur- Gandhi Jayanthi- 2016


V.S.Ramachandran felicitated on the occasion oF Gandhi Jayanthi at Arya Bharathi Polytechnic, Tumkur on 03-10-2016. Principal Sri K.R. Ashoka, President Sri K.Narasimha Murthy, Secretary Sri R.N.Sathyanarayana and others were present.


********************************************************

Felicitation by Nirbhaya Mahila Jagruthi Vedike, Tumakuru 15-08-2020


Felicitation to Sri V.S.Ramachandran by Nirbhaya Mahila Jagruthi Vedike, Nrupatunga Extn, Tumakuru on the eve of Independence Day Celebrations at Ganapathi Temple Park, Nrupatunga Extn, Tumakuru on 15-08-2020. Vedike President Smt Geetha Nagesh and other members are seen




************************************************************


@ Sri Hettenahalli Amma Temple, Shanthi Nagara, Tumkur, Felicitation by Sri B.S.Venkatesh (Belagumba) on the occasion of Ayyappa Swamy Bhajan. 29-04-2018.



**********************************************************


Felicitation by Abhivruddhi Revolution Forum, Tumkur


Felicitation by Abhivruddhi Revolution Forum @ Gandhinagara Office, Tumkur on 03-02-2007. Sri Veereshananda Saraswathi Swamiji, Ramakrishna Vivekananda Ashrama, Tumkur, Sri G S Basavaraj, M.P., Tumkur, Dr. M R Huli Naykar, M.L.C. and Writer Smt B C Shaila Nagaraj, Forum President Sri Kundaranahalli Ramesh were present.

**************************************************************
ಚಿಕ್ಕಪೇಟೆ ವೃತ್ತದ ಮಿತ್ರರಿಂದ ಸನ್ಮಾನ


ತುಮಕೂರಿನ ಚಿಕ್ಕಪೇಟೆ ವೃತ್ತದ ಹಳೆಯ ಮಿತ್ರರು ಅದೊಮ್ಮೆ ರಾಜ್ಯೋತ್ಸವ ಆಚರಿಸಿದರು. ಆಗ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ಆಹ್ವಾನಿಸಿ ಸನ್ಮಾನಿಸಿ ಸಂತೋಷಪಟ್ಟಿದ್ದರು. ಈ ಚಿತ್ರದಲ್ಲಿ ವಿಶ್ವಕರ್ಮ ಜನಾಂಗದ ಮುಖಂಡರಾದ ಶ್ರೀ ಜಯರಾಂ ಆಚಾರ್ (ಎಡತುದಿ), ಶ್ರೀ ಸುಧೀರ್ (ದಿ|| ಶ್ರೀ ಆನಂದರಾಮುರವರ ಪುತ್ರರು), ಶ್ರೀ ನಾಗರಾಜಾಚಾರ್ (ಮಧ್ಯದಲ್ಲಿರುವವರು), ಜೈನ ಸಮಾಜದ ಮುಖಂಡರಾಗಿದ್ದ ಹಾಗೂ ಫೈನಾನ್ಸ್ ನಡೆಸುತ್ತಿದ್ದ ಶ್ರೀ ನಾಗಣ್ಣ ರವರು ಹಾಗೂ ಇತರರನ್ನು ಕಾಣಬಹುದು.

************************

ಮಂತ್ರಾಲಯ ಶ್ರೀಗಳಿಂದ ಸನ್ಮಾನ




*********************

Felicitation by JDU team @ our residence  Nrupatunga Extn, Tumkur 2013.


 Felicitation  to Sri V.S.R. (85) by JDU team of Tumakuru on the eve of 64 th Republic Day.  Sri Kavitha Krishna, Poet & Sri K G L Ravi, JDU Dist President and other JDU leaders are seen. 

64 ನೇ ಗಣರಾಜ್ಯೋತ್ಸವದ ಅಂಗವಾಗಿ ತುಮಕೂರು ಜಿಲ್ಲಾ ಜೆ.ಡಿ.ಯು. ವತಿಯಿಂದ ತುಮಕೂರು ನಿವಾಸಿಗಳಾದ 85 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ನೃಪತುಂಗ ಬಡಾವಣೆಯಲ್ಲಿರುವ ಅವರ ಸ್ವಗೃಹದಲ್ಲಿ ಸಾಹಿತಿಗಳಾದ ಶ್ರೀ ಕವಿತಾಕೃಷ್ಣ ಮತ್ತು ಜಿಲ್ಲಾ ಜೆ.ಡಿ.ಯು. ಅಧ್ಯಕ್ಷರಾದ ಶ್ರೀ ಕೆ.ಜಿ.ಎಲ್.ರವಿ ಮತ್ತು ಇತರರು ಶಾಲು ಹೊದಿಸಿ ಸನ್ಮಾನಿಸಿದರು.

*****************************************************

@ our residence Sapthagiri Extn, Tumakuru 2009 - Felicitation by Swamijis


In 24-10-2009, Sri Veereshananda Sarasvathi Swamiji , President, Ramakrishna Vivekananda Ashrama, Tumkur, Sri NIrbhayananda Sarasvathi Swamiji, President, Ramakrishna Vivekananda Ashrama, Gadag & Bijapur and other Swamijis of other Ashramas visited our house at Sapthagiri Extension and felicitated Sri V.S.Ramachandran, President, Sri Shankara Jayanthi Sabha & Freedom Fighter and Smt. V. Parvathi.





V.S.Ramachandran, Smt Parvathi, R.S.Iyer and R.Vishwanathan

Smt V.Parvathi and Sri V.S.Ramachandran


in this picture along with swamijis Sri H.N.Sateesh and Sri Chandra Shekhar Rtd AEE also seen.



**********************************************************





ಜನಸಮುದಾಯ ಸಹಜವಾಗಿ ತೋರುವ ಪ್ರೀತಿ-ವಿಶ್ವಾಸ ಅವರ್ಣನೀಯ. ಅದಕ್ಕೊಂದು ನಿದರ್ಶನದಂತಿದೆ ಈ ಫೋಟೋ. ಇದು 2005 ರಿಂದ 2010 ರ ನಡುವಿನ ಇಸವಿಯದು. ತುಮಕೂರು ನಗರದ "ವಿಜಯನಗರ ಬಡಾವಣೆಯ ಮಹಿಳಾ ಸಂಘ"ದವರು ಅದೊಮ್ಮೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಮತ್ತು ಅವರ ಧರ್ಮಪತ್ನಿ ದಿವಂಗತ ಶ್ರೀಮತಿ ವಿ.ಪಾರ್ವತಿ ಅವರನ್ನು ಆಹ್ವಾನಿಸಿ, ಪ್ರೀತ್ಯಾದರಗಳಿಂದ ಸನ್ಮಾನಿಸಿದ್ದರು. ಎಲ್ಲ ಸದ್ಭಾವನೆಗಳನ್ನೂ ಈ ಪೋಟೋ ಹೊರಹೊಮ್ಮಿಸುವಂತಿದೆ.
ಫೋಟೋ ವಿವರ:- ಹೆಸರಾಂತ ಲೇಖಕಿ ಶ್ರೀಮತಿ ಶೈಲಾ ನಾಗರಾಜ್ ರವರ ನೇತೃತ್ವದಲ್ಲಿ ಏರ್ಪಟ್ಟಿದ್ದ ಈ ಸರಳ ಸಮಾರಂಭದಲ್ಲಿ, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಆರ್.ನಾಗರತ್ನ, ಉಪಾಧ್ಯಕ್ಷರಾದ ಶ್ರೀಮತಿ ಸಿದ್ಧಗಂಗಮ್ಮ ಪರಮಶಿವಯ್ಯ, ಸಹಕಾರ್ಯದರ್ಶಿಗಳಾದ ಶ್ರೀಮತಿ ಪ್ರಮೀಳಾ, ಶ್ರೀಮತಿ ಶೈಲಾ ಮುರಳಿ, ಶ್ರೀಮತಿ ಜ್ಯೋತಿ ರಭು, ಶ್ರೀಮತಿ ಗಂಗದೇವಮ್ಮ, ಖಜಾಂಚಿ ಶ್ರೀಮತಿ ಉಷಾರಾಣಿ, ಶ್ರೀಮತಿ ಗಂಗಮ್ಮ, ಶ್ರೀಮತಿ ಉಮರವರುಗಳು ಹಾಗೂ ಮುಖ್ಯಅತಿಥಿಗಳಾಗಿದ್ದ ಸತ್ಯನಾರಾಯಣರವರು ಇದ್ದರು.

****************************

ತುಮಕೂರಿನ ವಾಲ್ಮೀಕಿ ನಗರದಲ್ಲಿ ನಾಗರಿಕ ಸಮಿತಿ ವತಿಯಿಂದ ದಿ. 15-08-2006 ರಂದು 60 ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ಸಾಹಿತಿ ಶ್ರೀ ಗೌಡನಕಟ್ಟೆ ತಿಮ್ಮಯ್ಯ, ಯುಕೋ ಬ್ಯಾಂಕ್ ಮ್ಯಾನೇಜರ್ ಶ್ರೀ ಮಹದೇವಯ್ಯ, ಸಾಹಿತಿ ಎಂ.ಡಿ.ಶ್ರೀನಿವಾಸ್, ಶ್ರೀಮತಿ ಸರಳಾ ಚನ್ನಬಸವರಾಜು, ಶ್ರೀಮತಿ ಸುಹಾಸಿನಿ ಸಂಪತ್, ನಾಗರಿಕ ಸಮಿತಿ ಅಧ್ಯಕ್ಷರಾದ ಜಿ.ತಿಮ್ಮಾರೆಡ್ಡಿ, ನಗರಸಭೆಯ ಮಾಜಿ ಉಪಾಧ್ಯಕ್ಷ ಶ್ರೀ ಶ್ರೀನಿವಾಸ ಪ್ರಸಾದ್ ಇದ್ದಾರೆ.
        *******************


Felicitation by Dwija Samuha of HMT Tumkur @ Yagnavalkya Ashrama, Heggere, Tumkur Taluk -



ತುಮಕೂರು ತಾಲ್ಲೂಕು ಹೆಗ್ಗೆರೆಯ ಶ್ರೀ ಯಾಜ್ಞವಲ್ಕ್ಯ ಆಶ್ರಮದಲ್ಲಿ ಹೆಚ್.ಎಂ.ಟಿ. ದ್ವಿಜ ಸಮೂಹದ ವತಿಯಿಂದ ಶ್ರೀ ವಿ.ಎಸ್.ರಾಮಚಂದ್ರನ್ ಮತ್ತು ಶ್ರೀ ಶ್ರೀನಿವಾಸ ರಾವ್ ರವರನ್ನು 2004 ರಲ್ಲಿ ಸನ್ಮಾನಿಸಲಾಯಿತು. ಚಿತ್ರದಲ್ಲಿ (ಎಡದಿಂದ) ಶ್ರೀ ಕೆ.ವಿ.ಪ್ರಕಾಶ್ ಭಾರದ್ವಾಜ್ , ಶ್ರೀ ಎಂ.ಕೆ.ನಾಗರಾಜರಾವ್, ಪೈ ಸೆಂಟರ್ ನ ಶ್ರೀ ಟಿ.ಎನ್. ಸತೀಶ್, ಶ್ರೀ ವಿ.ಎಸ್.ರಾಮಚಂದ್ರನ್, ಶ್ರೀ ಶ್ರೀನಿವಾಸರಾವ್, ಹೈ ಪಾಯಿಂಟ್ ನ ಶ್ರೀ ಸಿ.ವಿ.ಕೇಶವಮೂರ್ತಿ, ಶ್ರೀ ಆರ್.ವೆಂಕಟೇಶ ಮೂರ್ತಿ ರವರನ್ನು ಕಾಣಬಹುದು.

**************

ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಭಾರದ್ವಾಜ ಟವರ್ಸ್ ನಲ್ಲಿ ಹೋಟೆಲ್ ಒಂದರ ಉದ್ಘಟನೆಯನ್ನು ಶ್ರೀ ವಿ.ಎಸ್.ರಾಮಚಂದ್ರನ್ ರವರು ನೆರವೇರಿಸಿದರು. ಭಾರದ್ವಾಜ ಟವರ್ಸ್ ಮಾಲೀಕರಾದ ಶ್ರೀ ಕೆ.ವಿ.ಪ್ರಕಾಶ್ ಭಾರದ್ಬಾಜ್ ಮತ್ತಿತರರು ಉಪಸ್ಥಿತರಿದ್ದರು.