* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 9 July 2022

Sri Sringeri Swamiji Visit CM Temple Tumkur- 2022 ಶ್ರೀ ಶಂಗೇರಿ ಜಗದ್ಗುರುಗಳ ಭೇಟಿ- ಕ್ಯಾತಸಂದ್ರ, ತುಮಕೂರು

 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನಿಧ್ಯ...

******************************
ಪೂಜ್ಯರನ್ನು ನೋಡಿದಾಕ್ಷಣ ಮನದಲ್ಲಿ ಅದೇನೋ ಅನಿರ್ವಚನೀಯ ಭಾವ. ನಮಗರಿವಿಲ್ಲದೆಯೇ ಮತ್ತೆ ಮತ್ತೆ ನಮ್ಮ ನೋಟ, ನಮ್ಮ ಮನ ಆ ನಿಷ್ಕಲ್ಮಷ-ನಿಷ್ಕಪಟ ಸಂತರತ್ತಲೇ ಲೀನವಾಗುತ್ತಿತ್ತು. ಅದೆಂತಹ ತೇಜಃಪೂರ್ಣ ವ್ಯಕ್ತಿತ್ವ, ಪರಮ ಪ್ರಶಾಂತ ಭಾವ, ಕಾರುಣ್ಯಭರಿತ ನೋಟ, ಪ್ರೀತಿ ತುಂಬಿದ ಅಂತಃಕರಣದ ಮಾತುಗಳು, ಸಮದರ್ಶಿತ್ವ … ಸಾನಿಧ್ಯದಲ್ಲೊಂದು ಪರಮಪವಿತ್ರ ವಾತಾವರಣ…
ದಿನಾಂಕ 08-07-2022 ರಂದು ಶುಕ್ರವಾರ ಬೆಳಗ್ಗೆ “ನಮ್ಮ ತುಮಕೂರು’’ ನಗರದ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇಗುಲಕ್ಕೆ ಶ್ರೀ ಶೃಂಗೇರಿ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ದಯಮಾಡಿಸಿದ್ದರು. ಅಲ್ಲಿ ನನಗೆ ಮತ್ತು ವಿಶ್ವನಾಥನ್ ಗೆ ಸನಿಹದಿಂದ ಜಗದ್ಗುರುಗಳ ದರ್ಶನಭಾಗ್ಯ ದೊರೆಯಿತು. ಆ ಕ್ಷಣ ನಮಗಾದ ಅನುಭವ ಅನಿರ್ವಚನೀಯ.
-ಆರ್.ಎಸ್.ಅಯ್ಯರ್, ತುಮಕೂರು, 09-07-2022

https://www.instagram.com/r_s_iyer

https://twitter.com/rsitmk

Jagadguru Shankaracharya of Sringeri H.H. Sri Sri Vidhushekhara Barathi Mahaswamiji visited Sri Chandramoulishwara Temple, Kyathasandra, Tumakuru on 08-07-2022, Friday Morning. It was a great opportunity to me and R Vishwanathan to have the Darshan of H.H. Swamiji.





R.S. Iyer & R.Vishwanathan





R. S. Iyer & R.Vishwanathan

Vedic Scholar of Sri Sringeri Mutt Sri Shivakumara Sharma Tangirala (R.S.Iyer & R. Vishwanathan)



R. Vishwanathan and R.S. Iyer Tumkur



No comments:

Post a Comment