* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 22 July 2022

With Sri Ravi Hegade, Group Editor, Kannada Prabha & Suvarna News - 2022 ಶ್ರೀ ರವಿ ಹೆಗಡೆ ಅವರೊಡನೆ

ಪತ್ರಕರ್ತರಾದ ಶ್ರೀ ರವಿ ಹೆಗಡೆ ಅವರೊಡನೆ                                                  _________________________ 

ನಾಡಿನ ಹೆಸರಾಂತ ಪತ್ರಕರ್ತರೂ, ಕನ್ನಡಪ್ರಭ–ಸುವರ್ಣ ನ್ಯೂಸ್ ನ ಸಮೂಹ ಸಂಪಾದಕರೂ ಆದ ಶ್ರೀ ರವಿ ಹೆಗಡೆ ಅವರನ್ನು ಭೇಟಿ ಮಾಡುವ, ಅವರೊಡನೆ ಮಾತನಾಡುವ ಮತ್ತು “ಬದಲಾಗಿರುವ ಕಾಲದಲ್ಲಿ ಮಾಧ್ಯಮಕ್ಷೇತ್ರ ಬಯಸುವ ಕೌಶಲಗಳು” ವಿಷಯವಾಗಿ ಅವರು ನೀಡಿದ ವಿದ್ವತ್ಪೂರ್ಣ ಉಪನ್ಯಾಸ ಕೇಳುವ ಸದವಕಾಶ ಇಂದು ದಿ.22-07-2022, ಶುಕ್ರವಾರ ಬೆಳಗ್ಗೆ “ನಮ್ಮ ತುಮಕೂರು” ನಗರದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನನಗೆ ಮತ್ತು ಆರ್.ವಿಶ್ವನಾಥನ್ ಗೆ ಲಭಿಸಿತು. ತುಂಬ ಸಂತೋಷವಾಯಿತು.

ಈ ಮೊದಲನೆಯ ಚಿತ್ರದಲ್ಲಿ (ಎಡದಿಂದ ಬಲಕ್ಕೆ) ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ, ಆತ್ಮೀಯರೂ ಆದ ಡಾ. ಕೆ.ವಿ. ಸಿಬಂತಿ ಪದ್ಮನಾಭ, ಆರ್.ವಿಶ್ವನಾಥನ್, ವಿ.ವಿ.ಯ ಕುಲಸಚಿವ (ಪರೀಕ್ಷಾಂಗ)ರಾದ ಪ್ರೊ. ನಿರ್ಮಲ್ ರಾಜು, ಪತ್ರಕರ್ತರಾದ ಶ್ರೀ ರವಿ ಹೆಗಡೆ, ವಿ.ವಿ.ಯ ನೂತನ ಕುಲಪತಿಗಳೂ, ಪರಿಚಿತರೂ ಆದ ಪ್ರೊ. ಎಂ. ವೆಂಕಟೇಶ್ವರಲು, ನಾನು (ಆರ್.ಎಸ್.ಅಯ್ಯರ್), ವಿ.ವಿ. ಕಲಾಕಾಲೇಜಿನ ಪ್ರಾಚಾರ್ಯರೂ-ನಮ್ಮ ಹಳೆಯ ಮಿತ್ರರೂ ಆದ ಪ್ರೊ.ಜಿ.ಕರಿಯಣ್ಣ, ಕನ್ನಡಪ್ರಭದ ತುಮಕೂರು ವರದಿಗಾರರಾದ ಶ್ರೀ ಉಗಮ ಶ್ರೀನಿವಾಸ್ ಅವರುಗಳನ್ನು ಕಾಣಬಹುದು.
ವಿ.ವಿ.ಯ ನೂತನ ಕುಲಪತಿಗಳೂ, ಪರಿಚಿತರೂ ಆದ ಪ್ರೊ. ಎಂ. ವೆಂಕಟೇಶ್ವರಲು ಅವರನ್ನು ನಾವು ಇದೇ ಸಂದರ್ಭದಲ್ಲಿ ಅಭಿನಂದಿಸಿದೆವು. ಅವರೂ ಸಂತೋಷಪಟ್ಟರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 22-07-2022
ಟ್ವಿಟರ್ :- https://twitter.com/rsitmk


(From Left) HOD Journalism Dr. Sibanthi Padmanabha, R.Vishwanathan, Tumkur University Registrar Prof. Nirmal Raju, Group Editor, Kannada Prabha & Suvarna News Sri Ravi Hegade, Tumkur University Vice Chancellor Prof. M. Venkateshwaralu, R.S.Iyer, University Art College Principal Prof. B. Kariyanna and Kannada Prabha reporter Sri Ugama Srinivas.

From Left- R.S. Iyer, Sri Ugama Srinivas, Prof. B. Kariyanna, V.C. Prof M. Venkateshwaralu, Sri Ravi Hegade, Prof Nirmal Raju and R. Vishwanathan






No comments:

Post a Comment