* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 17 July 2022

With Sri Swamy Purushottamanandaji/ Letters ಪ.ಪೂ. ಶ್ರೀ ಸ್ವಾಮಿಪುರುಷೋತ್ತಮಾನಂದಜಿಯವರೊಂದಿಗೆ ಹಾಗೂ ಪತ್ರಗಳು


ನಮ್ಮ ಮನೆಯಲ್ಲಿ ಕುಳಿತು "ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು"  ಹಾಡತೊಡಗಿದಾಗ
-------------------------------------------------------------------------------

ಅದು 1992 ಇರಬಹುದು. ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಅವರು ಟೈಫಾಯಿಡ್ ಕಾಯಿಲೆಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಈ ವಿಷಯ ತಿಳಿದ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು,  ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮತ್ತು ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯರೊಡನೆ ಅಂದು ಬೆಳಗ್ಗೆ ತುಮಕೂರಿನ ಚಿಕ್ಕಪೇಟೆಯಲ್ಲಿದ್ದ ನಮ್ಮ ಪುಟ್ಟ ಮನೆಗೆ ಬಂದೇ ಬಿಟ್ಟರು. ಮೂವರೂ ಸಂತರನ್ನು ಮಾಲಾರ್ಪಣೆ ಮಾಡಿ ಸ್ವಾಗತಿಸಿದೆವು. ಸಾಮಾನ್ಯವಾದ ತಗಡಿನ ಕುರ್ಚಿಯಲ್ಲೇ ಮೂವರೂ ಆಸೀನರಾದರು. ಕೆಲ ನಿಮಿಷಗಳ ಕಾಲ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು ಎಲ್ಲರೊಡನೆ ಕ್ಷೇಮ ಸಮಾಚಾರ ವಿಚಾರಿಸಿದರು.  ಅಲ್ಲೇ ಕೆಳಗೆ ನೆಲದ ಮೇಲಿನ ಹಾಸಿಗೆಯ ಮೇಲೆ ನಮ್ಮ ತಂದೆ ಕುಳಿತಿದ್ದರು. ಬಳಿಕ ಕಣ್ಮುಚ್ಚಿ ಕುಳಿತ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರು ತಮ್ಮ ಕಂಠಸಿರಿಯಿಂದ "ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು..." ಎಂಬ ಪ್ರಸಿದ್ಧ ಗೀತೆಯನ್ನು ಹಾಡಲಾರಂಭಿಸಿದರು. ಅದೊಂದು ಅಭೂತಪೂರ್ವ ಅನಿರ್ವಚನೀಯ ದೃಶ್ಯವಾಗಿ ರೂಪುಗೊಂಡಿತು.  ನಂತರ ಕೆಲ ಹೊತ್ತು ಅಲ್ಲಿ ಹರ್ಷೋಲ್ಲಾಸದ ವಾತಾವರಣ. ಸ್ವಾಮೀಜಿಯವರು ಎಲ್ಲರನ್ನೂ ಹರಸಿ, ಆಶೀರ್ವದಿಸಿ,  ಹೊರಡುವಾಗ ಜೊತೆಯಲ್ಲಿ ಆಗಮಿಸಿದ್ದ ಅವರ ದಶಕಗಳ ಕಾಲದ  ಶಿಷ್ಯರಾದ ಬೆಂಗಳೂರಿನ ಶ್ರೀ ತಿಮ್ಮರಾಯಶೆಟ್ಟರು ನನ್ನ ಕಿವಿಯ ಬಳಿ "ಸ್ವಾಮೀಜಿಯವರಿಗೆ ನೀವು ಏನು ಮೋಡಿ ಮಾಡಿದಿರಿ? ಏಕೆಂದರೆ ಸ್ವಾಮೀಜಿಯವರು ಈ ರೀತಿ ಭಕ್ತರ ಮನೆಯಲ್ಲಿ ಕುಳಿತು ಅನೌಪಚಾರಿಕವಾಗಿ ಹಾಡಿದ್ದನ್ನು ನಾನು ನೋಡೇ ಇಲ್ಲ!!" ಎಂದು ಅಚ್ಚರಿ ಹಾಗೂ ಆನಂದದಿಂದ  ಉದ್ಗರಿಸಿದರು. ನಾನು ಕೇವಲ ಮುಗುಳ್ಕಕ್ಕೆ. ಸ್ವಾಮೀಜಿಯವರ ಆ ಭೇಟಿ ನಮ್ಮ ಪಾಲಿಗೆ ಚಿರಸ್ಮರಣೀಯವಾಗಿಯೇ ಉಳಿಯುವಂತಾಯಿತು..

- ಆರ್.ಎಸ್.ಅಯ್ಯರ್, ತುಮಕೂರು








***********************************************

ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರೊಡನೆ  ಬ್ರಹ್ಮಚಾರಿ ರಾಮು (ಈಗ ಇವರು ಧಾರವಾಡ ಆಶ್ರಮದ ಅಧ್ಯಕ್ಷರಾದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ) ಮತ್ತು ಆರ್.ಎಸ್.ಅಯ್ಯರ್
**********************************************

with Swamiji R.Vishwanathan

*******************************************************


with Swamiji (From Left) Madhu Deshapande (Now High Court Advocate), Muralidhara, R.Vishwanathan, Panchakshari, H.S.Sridhara, Siddalingappa (Advocate, Bangalore).

**********************************

R.S.Iyer with Sri Swamy Japanandaji & Sri Swamy Purushottamanandaji - Vivekananda Yuva Sangha Programme. Date 20-01-1995


R.Vishwanathan with Sri Swamy Japanandaji & Sri Swamy Purushottamanandaji - Vivekananda Yuva Sangha Programme. Date 20-01-1995.

********************************************************************

ಬೆಂಗಳೂರಿನ ವಿ.ವಿ.ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ 1994 ರಲ್ಲಿ ಏರ್ಪಟ್ಟಿದ್ದ "ವಿವೇಕ ಹಂಸ" ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ......


With H.H.Sri Swamy Purushottamanandaji .. R S Iyer and Sri Bharath Kumar Jain -Viveka Hamsa’ Monthly Magazine Releasing Programme,  Kuvempu Kalakshetra,  V.V.Puram, Bangalore, 18-03-1994




 ವಿವೇಕಹಂಸ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರಗಳು...

*******************************************************

ನಮ್ಮ ಮನೆಗೆ ಮೊದಲ ಬಾರಿ ಆಗಮಿಸಿದಾಗ...

ಇಲ್ಲಿರುವುದು 1991 ರ ಅಪೂರ್ವ ಚಿತ್ರಗಳು. ಆಗಿನ್ನೂ "ನಮ್ಮ ತುಮಕೂರು" ನಗರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿತವಾಗಿರಲಿಲ್ಲ.  ಆಗ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದ ಎದುರಿನ ಬಡಾವಣೆಯಲ್ಲಿ (ನಂತರ ಇದಕ್ಕೆ ಶಾರದಾದೇವಿ ನಗರ ಎಂದು ಹೆಸರಿಸಲಾಯಿತು)  "ವಿವೇಕಾನಂದ ವಿಚಾರ ವೇದಿಕೆ" ಎಂಬುದಷ್ಟೇ ಇತ್ತು. ಶ್ರೀ ಶಂಕರರಾಮಯ್ಯ (ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ) ಇದರ ಅಧ್ಯಕ್ಷರು. ಹಲವು ಯುವಕರು (ಇವರಲ್ಲಿ ಅನೇಕ ಜನರು ನಂತರದಲ್ಲಿ ಸಂನ್ಯಾಸಿಗಳಾದರು) ಇವರ ಜೊತೆಯಲ್ಲಿದ್ದರು. ಶ್ರೀ ಶಂಕರರಾಮಯ್ಯ ಅವರು ಇದಕ್ಕೆ ಮೊದಲು ಕುಣಿಗಲ್ ಪಟ್ಟಣದಲ್ಲಿ ವಿವೇಕಾನಂದ ವಿಚಾರ ವೇದಿಕೆ ಆರಂಭಿಸಿ ವಿವಿಧ ಚಟುವಟಿಕೆ ನಡೆಸುತ್ತಿದ್ದು, 1989-90 ರಲ್ಲಿ ಕುಣಿಗಲ್ ನಲ್ಲಿ ಇರುವಾಗಲೇ ಇವರು ನನಗೆ ಪರಿಚಿತರಾಗಿದ್ದರು. ನಂತರ ಇವರು ಮತ್ತು ಸ್ನೇಹಿತರು ತುಮಕೂರಿಗೆ ಸ್ಥಳಾಂತರಗೊಂಡು ಇಲ್ಲಿ ವೇದಿಕೆ ಆರಂಭಿಸಿದ್ದರು. ನಮ್ಮ ನಡುವೆ ಆಗಿನಿಂದಲೂ ಒಳ್ಳೆಯ ಒಡನಾಟ.  

1991 ರಲ್ಲಿ ಬೆಂಗಳೂರು ರಾಮಕೃಷ್ಣಾಶ್ರಮದ ಹಿರಿಯ ಸಂನ್ಯಾಸಿಗಳಾಗಿದ್ದ ಹಾಗೂ ಗಾಯಕರಾಗಿ, ಲೇಖಕರಾಗಿ ಬಹು ಜನಪ್ರಿಯರಾಗಿದ್ದ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ ಅವರನ್ನು ತುಮಕೂರಿಗೆ (ಬಹುಶಃ ಎರಡನೇ ಬಾರಿಗೆ ) ಆಹ್ವಾನಿಸಿ, ತುಮಕೂರಿನ ಕೆಲವು ಸಜ್ಜನರ ಮನೆಗಳಲ್ಲಿ ಸ್ವಾಮೀಜಿಯವರ ಸಂಕೀರ್ತನೆ- ಸತ್ಸಂಗ ನಡೆಸುವ ಒಂದು ವಿಶಿಷ್ಟ ಕಾರ್ಯಕ್ರಮವನ್ನು  ಶ್ರೀ ಶಂಕರರಾಮಯ್ಯ ಯೋಜಿಸಿದ್ದರು. ಅವುಗಳಲ್ಲಿ ನಮ್ಮ ಮನೆಯೂ ಒಂದಾಗಿತ್ತು.  

ಚಿಕ್ಕಪೇಟೆಯ ಪುಟ್ಟ ಹೆಂಚಿನ ಮನೆ ನಮ್ಮದು. ಸ್ವಾಮೀಜಿಯವರ ಆಗಮನವೆಂದರೆ ಸಂಭ್ರಮವೋ ಸಂಭ್ರಮ. ಅಕ್ಕಪಕ್ಕದ ಹಾಗೂ ಬಡಾವಣೆಯ ನಮ್ಮ ಪರಿಚಿತರು, ಇತರೆ ಆತ್ಮೀಯರು ನಮ್ಮ ಮನೆಗೆ ಆಗಮಿಸಿದ್ದರು.  ಇಕ್ಕಟ್ಟಾದ ಆ ನಮ್ಮ ಮನೆಯಲ್ಲಿದ್ದ ತಗಡಿನ ಕುರ್ಚಿಯಲ್ಲೇ ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ ಅವರು ಆಸೀನರಾಗಿದ್ದರು. ಹಿನ್ನೆಲೆಗೆ ಒಂದು ಜಮಖಾನ ಕಟ್ಟಲಾಗಿತ್ತು. ಇದಾವುದನ್ನೂ ಗಮನಿಸದೆ ಸ್ವಾಮೀಜಿಯವರು ತಮ್ಮ ಅನುಪಮ ವ್ಯಕ್ತಿತ್ವದಿಂದ ಅಲ್ಲೊಂದು  ಉಲ್ಲಾಸದ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿದ್ದರು. ತಮ್ಮ ಸುಮಧುರ ಕಂಠದಿಂದ ಸಂಕೀರ್ತನೆ ನಡೆಸಿ ಎಲ್ಲರ ಮನವನ್ನೂ ಆಕರ್ಷಿಸಿಬಿಟ್ಟಿದ್ದರು. 

ಆ ಅವಿಸ್ಮರಣೀಯ, ಅನಿರ್ವಚನೀಯ ಸಂದರ್ಭದ ಕಪ್ಪು-ಬಿಳುಪು ಚಿತ್ರಗಳಿವು. ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಅವರ ದಶಕಗಳ ಕಾಲದ ಮಿತ್ರರೂ, ಜ್ಯೋತಿ ಸ್ಟೂಡಿಯೋ ಮಾಲೀಕರೂ ಆಗಿದ್ದ ಡೇನಿಯಲ್ ಗುಂಡಪ್ಪ ಅವರು ಆ ಸುಸಂದರ್ಭವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಶಾಶ್ವತವಾಗಿ ಉಳಿಯುವಂತೆ ಮಾಡಿದರು.

-ಆರ್.ಎಸ್.ಅಯ್ಯರ್, ತುಮಕೂರು   

https://www.instagram.com/r_s_iyer

https://twitter.com/rsitmk




ಸ್ವಾಮೀಜಿಯವರು ಸಂಕೀರ್ತನೆ ನಡೆಸುತ್ತಿರುವುದು. ಕೆಳಗಡೆ ಸ್ವಾಮೀಜಿಯವರ ಪಕ್ಕದಲ್ಲಿ ಕುಳಿತುರುವವರು ಶ್ರೀ ಶಂಕರರಾಮಯ್ಯ (ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ). ಪುಟ್ಟ ಮನೆಯ ನೆಲದ ಮೇಲೆ ಇಕ್ಕಟ್ಟಾಗಿ ಕುಳಿತೇ ಎಲ್ಲರೂ ಆ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಸ್ವಾಮೀಜಿ ಅವರೊಡನೆ ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ಮತ್ತು ತಾಯಿ ಶ್ರೀಮತಿ ಪಾರ್ವತಿ


ಸ್ವಾಮೀಜಿ ಅವರೊಡನೆ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಅವರ ಪತಿ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು.


ಸ್ವಾಮೀಜಿ ಅವರೊಡನೆ ಆರ್.ವಿಶ್ವನಾಥನ್, ಆರ್.ಎಸ್.ಅಯ್ಯರ್ ಮತ್ತು ಸಹೋದರಿ ದಿವಂಗತ ಶ್ರೀಮತಿ ಮಹಾಲಕ್ಷ್ಮೀ ಶ್ರೀಧರ್


ಸ್ವಾಮೀಜಿಯವರಿಗೆ ಫಲತಾಂಬೂಲ ನೀಡಿ ನಮ್ಮ ತಂದೆಯವರು ಗೌರವಿಸಿದ ಕ್ಷಣ. ಚಿತ್ರದಲ್ಲಿ ವಿ.ವಿವೇಕ್ ಮತ್ತು ಮಹಾಲಕ್ಷ್ಮೀ ಇದ್ದಾರೆ.

ತಮಗೆ ಅರ್ಪಿಸಿದ್ದ ಹೂಮಾಲೆಯನ್ನು ಪೂಜ್ಯ ಶ್ರೀ ಸ್ವಾಮಿ ಪುರಷೋತ್ತಮಾನಂದಜಿಯವರು ಆರ್.ಎಸ್.ಅಯ್ಯರ್ ಅವರಿಗೆ ಹಾಕುವ ಮೂಲಕ ಎಲ್ಲರಲ್ಲೂ ರೋಮಾಂಚನ ಮೂಡಿಸಿದ ಕ್ಷಣ. ಅಯ್ಯರ್ ಅವರ ಹಿಂಬದಿ ಶ್ರೀ ಶಂಕರರಾಮಯ್ಯ ಹಾಗೂ ಇನ್ನೊಂದು ಬದಿ  ತುಮಕೂರು ತಾಲ್ಲೂಕು ಲಕ್ಕೇನಹಳ್ಳಿ ನಿವಾಸಿ ಸಂಗೀತ ವಿದ್ವಾಂಸರೂ, ಜ್ಯೋತಿಷಿಗಳೂ ಆಗಿದ್ದ ದಿ|| ರಂಗಧಾಮಯ್ಯ, ಸಹೋದರಿ ಗಾಯತ್ರಿ ಅವರನ್ನು ಕಾಣಬಹುದು.

ಈ ಚಿತ್ರದಲ್ಲಿ ಸ್ವಾಮೀಜಿಯವರೊಂದಿಗೆ ಶ್ರೀ ಹೆಚ್.ಕೆ.ವೇಣುಗೋಪಾಲ್, ಶ್ರೀ ದಿಲೀಪ್, ಶ್ರೀ ಗೋಪಾಲರಾವ್ ಇದ್ದಾರೆ.

                           ****************************************************

Letters of Sri Swamy Purushottamanandaji...      ಪೂಜ್ಯ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಪತ್ರಗಳು












--------------------------------------------
"ವಿವೇಕ ಹಂಸ" ಪತ್ರಿಕೆಯಲ್ಲಿ  ಸದರಿ ಪತ್ರ.....







No comments:

Post a Comment