* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 18 May 2023

R S Iyer Sanmana Photos - ಆರ್.ಎಸ್.ಅಯ್ಯರ್ ಸನ್ಮಾನದ ಚಿತ್ರಮಾಲಿಕೆ- (ವಿವಿಧ ಸಮಾರಂಭಗಳು)

R S Iyer Tumkur  Felicitations ಆರ್.ಎಸ್.ಅಯ್ಯರ್ ಸನ್ಮಾನ 

********************
ತುಮಕೂರಿನ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರ  
ಸಂಘದಿಂದ ಸನ್ಮಾನ- 2022


ತಲಕಾಡು ಮಠದ ಪ.ಪೂ. ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, “ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ”ದ ಅಧ್ಯಕ್ಷರಾದ ಶ್ರೀ ಜಿ.ಕೆ. ಕುಲಕರ್ಣಿಯವರು ಮತ್ತು ಈ ಸಹಕಾರಿಯ ನಿರ್ದೇಶಕರಾದ ಶ್ರೀ ಕೆ.ವಿ. ಪ್ರಕಾಶ್ ಭಾರದ್ವಾಜ್ ರವರು ದಿ. 04-03-2022, ಶುಕ್ರವಾರ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಜಯನಗರ ಬಡಾವಣೆಯಲ್ಲಿರುವ “ಭಾರದ್ವಾಜ ಟವರ್ಸ್”ನಲ್ಲಿ ಬೆಂಗಳೂರು ಮೂಲದ ಈ ಸಹಕಾರಿಯ “19 ನೇ ಶಾಖೆಯು” ಶುಭಾರಂಭಗೊಂಡ ಸವಿನೆನಪಿಗೆ ಈ ಸಮಾರಂಭವು ಆಯೋಜಿತವಾಗಿತ್ತು.




**************
ಪರಿಸರ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕೆ.ಆರ್. ಶ್ರೀಹರ್ಷ ಅವರಿಂದ 
ಸನ್ಮಾನ -2021


ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ (State Environment Impact Assessment Authority Karnataka) ಅಧ್ಯಕ್ಷರಾದ ಡಾ.ಕೆ.ಆರ್. ಶ್ರೀಹರ್ಷರವರ ಆಹ್ವಾನದ ಮೇರೆಗೆ ಬೆಂಗಳೂರಿನ ಅವರ ನಿವಾಸಕ್ಕೆ ದಿ. 15-01-2021 ರಂದು ಭೇಟಿ ನೀಡಿದ್ದಾಗ ಅವರು ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು.



************************

ಶ್ರೀ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದಲ್ಲಿ ಸನ್ಮಾನ - 2020


ತುಮಕೂರಿನ ಕ್ಯಾತಸಂದ್ರದಲ್ಲಿ ದಿನಾಂಕ 28-02-2020, ಶುಕ್ರವಾರ ಬೆಳಗ್ಗೆ ಏರ್ಪಟ್ಟಿದ್ದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರ 78 ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಪತ್ರಕರ್ತ ಆರ್.ಎಸ್.ಅಯ್ಯರ್ ಅವರನ್ನು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಜಿ.ಜ್ಯೋತಿಗಣೇಶ್ ರವರು ಸನ್ಮಾನಿಸಿದರು.  ತುಮಕೂರಿನ ಪ್ರತಿಷ್ಠಿತ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪರಮೇಶ್, ಬಿಜೆಪಿ ಧುರೀಣರಾದ ಶ್ರೀ ಶಿವಪ್ರಸಾದ್, ಶ್ರೀ ರುದ್ರೇಶ್, ತುಮಕೂರು ಮಹಾನಗರ ಪಾಲಿಕೆ ಉಪಮೇಯರ್ ಶ್ರೀಮತಿ ಶಶಿಕಲಾ ಗಂಗಹನುಮಯ್ಯ, ಪಾಲಿಕೆಯ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು. "ಆಟೋ ಯಡಿಯೂರಪ್ಪ" ಎಂದೇ ಪ್ರಸಿದ್ಧರಾಗಿರುವ ಶ್ರೀ ಕೆ.ಎಂ.ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.





************************************ 

ಭಾಗ್ಯನಗರದಲ್ಲಿ "ಸುಗ್ಗಿ ಸಂಭ್ರಮ" ಉದ್ಘಾಟನೆ - 2020



ತುಮಕೂರಿನ ಹನುಮಂತಪುರಕ್ಕೆ ಹೊಂದಿಕೊಂಡಿರುವ ಭಾಗ್ಯನಗರದಲ್ಲಿ (23 ನೇ ವಾರ್ಡ್) ದಿನಾಂಕ 15-01-2020, ಬುಧವಾರ  “ಸಂಕ್ರಾಂತಿ” ಹಬ್ಬದಂದು ಸಂಜೆ  ನಡೆದ ಈ “ಸುಗ್ಗಿ ಹಬ್ಬ”ವನ್ನು ಪತ್ರಕರ್ತ ಆರ್.ಎಸ್. ಅಯ್ಯರ್ ಮತ್ತು ಸರಸ್ ಫೌಂಡೇಷನ್ ಅಧ್ಯಕ್ಷ ವಿಶ್ವನಾಥನ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಿಗಳ ಸಮಾಜದ ಹಿರಿಯ ಮುಖಂಡರಾದ ಶ್ರೀ ಕುಂಭಯ್ಯ, 20 ನೇ ವಾರ್ಡ್ ಕಾರ್ಪೊರೇಟರ್ ಶ್ರೀ ಎ. ಶ್ರೀನಿವಾಸ್, ಮಾಜಿ ಕಾರ್ಪೊರೇಟರ್ ಶ್ರೀ ಪ್ರೆಸ್ ರಾಜಣ್ಣ, ತಿಗಳ ಸಮಾಜದ ಮುಖಂಡರುಗಳಾದ ಶ್ರೀ ಜಹಂಗೀರ್ ರವೀಶ್, ಶ್ರೀ ಎನ್.ಎಸ್.ಶಿವಣ್ಣ, ಯಜಮಾನರಾದ ಶ್ರೀ ಹನುಮಂತರಾಜು, ಶ್ರೀ ಟಿ.ಶ್ರೀನಿವಾಸ್, ಶ್ರೀ ಯತೀಶ್ ರವರು ಹಾಗೂ ನೂರಾರು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.
20 ಜೋಡಿ ಅಲಂಕೃತ ಎತ್ತುಗಳು ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದಿಂದ ಮೆರವಣಿಗೆಯಲ್ಲಿ ಭಾಗ್ಯನಗರಕ್ಕೆ ಬಂದವು. ಭಾಗ್ಯನಗರದ ರಾಮಮಂದಿರದ ಪಕ್ಕ “ಸುಗ್ಗಿಹಬ್ಬ”ದ “ರಾಶಿ ಪೂಜೆ”ಯನ್ನು ವ್ಯವಸ್ಥೆ ಮಾಡಲಾಗಿತ್ತು. ಹೂವಿನಿಂದ ವಿನ್ಯಾಸಗೊಳಿಸಿದ್ದ ದೊಡ್ಡ ರಂಗೋಲಿಯಲ್ಲಿ ಸಂಕ್ರಾಂತಿಯ ಸಂಕೇತಗಳಾದ ಕಬ್ಬು, ಸಿಹಿಗೆಣಸು, ಕಡಲೆಕಾಯಿ, ಅವರೆಕಾಯಿಯನ್ನು ಅಚ್ಚುಕಟ್ಟಾಗಿ ಜೋಡಿಸಿ ಆಕರ್ಷಕವಾಗಿ ಅಲಂಕೃತಗೊಳಿಸಲಾಗಿತ್ತು. ಅದರ ಹಿಂದೆ ಭತ್ತ ಮತ್ತು ರಾಗಿಯ ರಾಶಿಯನ್ನು ಹಾಕಲಾಗಿತ್ತು. ಇವೆಲ್ಲಕ್ಕೂ ಪೂಜೆ ಸಲ್ಲಿಸಲಾಯಿತು. ಬಳಿಕ ಎತ್ತುಗಳಿಗೆ ಬಹುಮಾನ ಘೋಷಿಸಲಾಯಿತು. ಪ್ರಥಮ ಬಹುಮಾನವಾಗಿ 5000 ರೂ., ದ್ವಿತೀಯ ಬಹುಮಾನವಾಗಿ 3000 ರೂ. ಹಾಗೂ ತೃತೀಯ ಬಹುಮಾನವಾಗಿ 2000 ರೂ.ಗಳನ್ನು ಎತ್ತುಗಳ ಪೋಷಕರಿಗೆ ವಿತರಿಸಲಾಯಿತು. ಎಲ್ಲ ಎತ್ತುಗಳ ಪೋಷಕರಿಗೂ ಪಾತ್ರೆಯನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು. ಬಂದವರಿಗೆಲ್ಲ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.











*********************************************

ಶೆಟ್ಟಿಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಿಂದ ಸನ್ಮಾನ-2020


ತುಮಕೂರು ನಗರದ ಶೆಟ್ಟಿಹಳ್ಳಿಯ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಳೀಯ ಶ್ರೀ ಅಯ್ಯಪ್ಪಸ್ವಾಮಿ ಭಕ್ತಾದಿಗಳು ಗುರುಸ್ವಾಮಿಗಳಾದ ಶ್ರೀ ಜಿ.ಪುಟ್ಟರಾಜುರವರ ನೇತೃತ್ವದಲ್ಲಿ ದಿ. 01-01-2020, ಬುಧವಾರ ರಾತ್ರಿ ಏರ್ಪಡಿಸಿದ್ದ ಶ್ರೀ ಅಯ್ಯಪ್ಪಸ್ವಾಮಿಯ ಭಜನೆ, ಪೂಜೆಯ ಸಂದರ್ಭದಲ್ಲಿ ಪತ್ರಕರ್ತ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. 

**************************************

ನಿರ್ಭಯ ಮಹಿಳಾ ಜಾಗೃತಿ ವೇದಿಕೆಯಿಂದ ಸನ್ಮಾನ -2019


ತುಮಕೂರಿನ ನೃಪತುಂಗ ಬಡಾವಣೆಯ "ನಿರ್ಭಯ ಮಹಿಳಾ ಜಾಗೃತಿ ವೇದಿಕೆ" ದಿ. 14-03-2019, ಗುರುವಾರ ಸಂಜೆ ಏರ್ಪಡಿಸಿದ್ದ "ಮಹಿಳಾ ದಿನಾಚರಣೆ"ಯಲ್ಲಿ ಒಂದಕ್ಕಿಂತ ಒಂದು ಭಿನ್ನವಾದ 9500 ರಂಗೋಲೆ ಚಿತ್ರ ಬಿಡಿಸುವ ಮೂಲಕ "ವರ್ಲ್ಡ್ ಬುಕ್ ಆಫ್ ರೆಕಾರ್ಡ್''ಗೆ ಭಾಜನರಾಗಿರುವ ಶ್ರೀಮತಿ ಎಸ್.ವಿ.ಜಯ ಸೋ.ಮು.ಭಾಸ್ಕರಾಚಾರ್, "ಸಹಕಾರ ರತ್ನ" ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ವೃತ್ತಿನಿಷ್ಠ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಶ್ರೀ ಮಹೇಶ್ ಅವರೊಂದಿಗೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತನಾಗಿರುವ ಆರ್.ಎಸ್.ಅಯ್ಯರ್ ಅವರನ್ನೂ ಸನ್ಮಾನಿಸಲಾಯಿತು.

ವೇದಿಕೆ ಅದ್ಯಕ್ಷರಾದ ಶ್ರೀಮತಿ ಗೀತಾ ನಾಗೇಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀ ಕವಿತಾಕೃಷ್ನ, ಸಾಹಿತಿ ಶ್ರೀ ಜಿ.ಕೆ.ಕುಲಕರ್ಣಿ, ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಶ್ರೀಮತಿ ಬಾ.ಹ.ರಮಾಕುಮಾರಿ, ಶ್ರೀಮತಿ ಸುಗುಣಾದೇವಿಯವರೂ ಸೇರಿದಂತೆ ಹಲವು ಗಣ್ಯರುಗಳು ವೇದಿಕೆಯಲ್ಲಿದ್ದರು.





****************   
   
ಶಿವಾಜಿ ಜಯಂತಿಯಲ್ಲಿ ಸನ್ಮಾನ -2019



 ತುಮಕೂರಿನ ಗೋಕುಲ ಬಡಾವಣೆ ಎರಡನೇ ಹಂತದ ಟೂಡಾಲೇಔಟ್ ನಲ್ಲಿ ಶ್ರೀಮತಿ ಸುಮಂಗಳಬಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ.ಬಿ.ಗೋಪಿರಾವ್ ಲೌಟೆ ರವರ ನೇತೃತ್ವದಲ್ಲಿ ದಿ.24-02-2019, ಭಾನುವಾರ  ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವ, ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಹಾಗೂ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರ್.ಎಸ್.ಅಯ್ಯರ್  ಅವರನ್ನು ಸನ್ಮಾನಿಸಲಾಯಿತು. ಜೊತೆಯಲ್ಲಿ  ಮಾಜಿ ಯೋಧರಾದ ಶ್ರೀ ಪಾಂಡುರಂಗರವರು ಮತ್ತು ಖ್ಯಾತ ಕರಾಟೆ ಪಟು ಶ್ರೀ ಕೆ.ಕೃಷ್ಣಮೂರ್ತಿ ರವರು, ಹಿರಿಯರಾದ ಶ್ರೀ ಕೆ.ವಿ. ವೆಂಕಟರಾವ್ ಮಹರ್ನೋರ್ (91 ವರ್ಷ) ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಥಾವರೆ (80 ವರ್ಷ) ಅವರನ್ನೂ ಸನ್ಮಾನಿಸಲಾಯಿತು. ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ (30 ನೇ ವಾರ್ಡ್) ರವರೂ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿದ್ದರು.





***********************************

ಮಹಿಳಾ ಸಮಾಜದಿಂದ ಸನ್ಮಾನ -2019


ಕವಿ-ಸಾಹಿತಿ-ಪತ್ರಕರ್ತ-ದಾರ್ಶನಿಕ ಡಿವಿಜಿ ಅವರ ಮೇರುಕೃತಿ “ಮಂಕುತಿಮ್ಮನ ಕಗ್ಗ” ಪ್ರಕಾಶನಗೊಂಡು 75 ವರ್ಷಗಳಾದ ಸವಿನೆನಪಿಗೆ ತುಮಕೂರು ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ “ಮಹಿಳಾ ಸಮಾಜ ಟ್ರಸ್ಟ್” ಸಭಾಂಗಣದಲ್ಲಿ ದಿನಾಂಕ 11-01-2019, ಶುಕ್ರವಾರ ಸಂಜೆ ಮಹಿಳಾ ಸಮಾಜದ ಪದಾಧಿಕಾರಿಗಳು ಅರ್ಥಪೂರ್ಣ ಸಮಾರಂಭವನ್ನು ಆಯೋಜಿಸಿದ್ದರು. ಸರಸ್ ಫೌಂಡೇಷನ್ ಮೂಲಕ "ಡಿವಿಜಿ ನೆನಪು" ಉಪನ್ಯಾಸ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿರುವ ಕಾರಣ ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್ ಅವರನ್ನು ಇದೇ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ತಮ್ಮ ಸಾಧನೆಗಳಿಗಾಗಿ ವಿವಿಧ ಪ್ರಶಸ್ತಿ ಪುರಸ್ಕೃತರಾಗಿರುವ ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪರವರನ್ನು ಮತ್ತು ಶ್ರೀಮತಿ ಶಾಲಿನಿ ರವಿಶಂಕರ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ತುಂಗಮ್ಮರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಾಜ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ಆರ್.ಕುಮಾರ್ ರವರು, ಶ್ರೀಮತಿ ಉಷಾ ಅನಂತರಾಮಯ್ಯ ರವರು ವೇದಿಕೆಯಲ್ಲಿದ್ದು, ಇತರ ಅನೇಕ ಹಿರಿಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.









*************************

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಿನ್ನೆಲೆಯಲ್ಲಿ ವಿವಿಧೆಡೆ ಅಭಿನಂದನೆ
-------------------------------------


ತುಮಕೂರು ನಗರದ ಶ್ವಾಸಕೋಶದಂತಿರುವ ಅಮಾನಿಕೆರೆಯ ಪ್ರವೇಶದ್ವಾರದಲ್ಲಿ "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ" ಸನ್ಮಿತ್ರರು 16-12-2018, ಭಾನುವಾರ ಸಂಜೆ ನಡೆಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. 
ಹಿರೇಮಠಾಧ್ಯಕ್ಷರಾದ .ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ತುಮಕೂರು ನಗರದ ಡಿವೈಎಸ್ಪಿರವರಾದ ಶ್ರೀ ನಾಗರಾಜ್ ರವರು, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಎಲ್. ಮಂಜುನಾಥಸ್ವಾಮಿರವರು, "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ" ಅಧ್ಯಕ್ಷರಾದ ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ವಾಸುದೇವ್ ರವರು, ಬಳಗದ ಗೌರವಾಧ್ಯಕ್ಷರಾದ ಖ್ಯಾತ ಕರಾಟೆಪಟು ಶ್ರೀ ಕೆ. ಕೃಷ್ಣಮೂರ್ತಿರವರು ಹಾಗೂ ಹಲವು ಮಿತ್ರರು ಹಾಗೂ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಉಪಸ್ಥಿತರಿದ್ದರು.







_______________________________________



ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ಆಮಂತ್ರಿತರಾಗಿದ್ದರು. “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತರಾದ ಆರ್.ಎಸ್.ಅಯ್ಯರ್ ಅವರನ್ನು ತಿಗಳ ಜನಾಂಗದ ಪ್ರಮುಖರು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ  ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ದೇವಾಲಯ ಹಾಗೂ ತಿಗಳ ಜನಾಂಗದ ಪರವಾಗಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. ಜಿಲ್ಲಾಧಿಕಾರಿಗಳಾದ ಡಾ. ಕೆ.ರಾಕೇಶ್ ಕುಮಾರ್ IAS, “ಪ್ರಜಾಪ್ರಗತಿ” ಸಂಪಾದಕರಾದ ಶ್ರೀ ಎಸ್.ನಾಗಣ್ಣ, ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀ T K ನರಸಿಂಹಮೂರ್ತಿ, ತಿಗಳ ಜನಾಂಗದ ಮುಖಂಡ ಶ್ರೀ ರವೀಶ್ ಜಹಂಗೀರ್ ಮೊದಲಾದ ಪ್ರಮುಖರು ಗಣ್ಯರುಗಳು ಉಪಸ್ಥಿತರಿದ್ದರು.
-----------------------------------


ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ  ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಲ್ಲಿ ತಿಗಳ ಜನಾಂಗದ ಮುಖಂಡರಾದ ಶ್ರೀ ಟಿ.ಎಲ್.ಕುಂಭಯ್ಯರವರು, ಶ್ರೀ ಎನ್.ಎಸ್.ಶಿವಣ್ಣರವರು, ಮಾಜಿ ಕಾರ್ಪೊರೇಟರ್ ಗಳಾದ ಶ್ರೀ ಪ್ರೆಸ್ ರಾಜಣ್ಣ ಮತ್ತು ಶ್ರೀ ರಾಮಕೃಷ್ಣ ಅವರು ಆರ್.ಎಸ್.ಅಯ್ಯರ್ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಗೌರವಿಸಿದರು. 
----------------------------


ಹಾಲಪ್ಪ ಫೌಂಡೇಷನ್ ವತಿಯಿಂದ ದಿನಾಂಕ 07-12-2018, ಶುಕ್ರವಾರ ತುಮಕೂರಿನ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ಮುರಳೀಧರ ಹಾಲಪ್ಪ ಅವರು “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತರಾದ ಶ್ರೀ ಆರ್.ಎಸ್.ಅಯ್ಯರ್ ಅವರನ್ನು  ಶ್ರೀ ಮಿಡಿಗೇಶಿ ಭೂಷಣ್, ಶ್ರೀ ಬಂಡಿ ಚೌಡಯ್ಯ, ಶ್ರೀ ಹಫೀಜ್ ಮತ್ತು ಕುಮಾರಿ ಕುಸುಮಾ ಜೈನ್ ಅವರ ಜೊತೆಗೆ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಸಿ. ವೇಣುಗೋಪಾಲ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶ್ರೀ ಮುಷ್ತಾಕ್ ಅಹಮದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಬಾ.ಹ.ರಮಾಕುಮಾರಿ, ತುಮಕೂರು ನಗರ ಡಿವೈಎಸ್ಪಿ ಶ್ರೀ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ, ಮಾಜಿ ಜಿ.ಪಂ. ಸದಸ್ಯ ಶ್ರೀ ಶ್ರೀನಿವಾಸ ಮೂರ್ತಿ, ಶ್ರೀ ಚಂದ್ರಶೇಖರ ಗೌಡ ಮೊದಲಾದ ಹಲವು ಮುಖಂಡರುಗಳು ಉಪಸ್ಥಿತರಿದ್ದರು. 

--------------------------------


 ತುಮಕೂರಿನ "ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ ಅಸೋಸಿಯೇಷನ್'' ವತಿಯಿಂದ  ದಿ.02-12-2018 ರಂದು ಭಾನುವಾರ ಸಂಜೆ ತುಮಕೂರಿನ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಸದರಿ ಸಂಘದ ಅಧ್ಯಕ್ಷರಾದ ಶ್ರೀ ಬೆಳ್ಳಿ ಲೋಕೇಶ್ ರವರ ನೇತೃತ್ವದಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಲಾಯಿತು.  ಜೊತೆಗೆ ಮುಖ್ಯಮಂತ್ರಿಗಳಿಂದ ಸನ್ಮಾನಿತರಾದ ತುಮಕೂರು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ ರವರು ಮತ್ತು ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿರುವ ಶ್ರೀಮತಿ ನುಜರತ್ ಉನ್ನೀಸಾ ರವರನ್ನೂ ಸನ್ಮಾನಿಸಲಾಯಿತು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಎಸ್.ಜಿ. ಪರಮೇಶ್ವರಪ್ಪರವರು, ಸಂಘದ ಗೌರವ ಅಧ್ಯಕ್ಷರಾದ ಅಂಬ್ಲಿ ನಾಗರಾಜ್ ರವರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು







-------------------------------------------------



ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ಬಾಲಕೃಷ್ಣರವರು ಮತ್ತು ಹೋಟೆಲ್ ಉಡ್ ಲ್ಯಾಂಡ್ಸ್ ಮಾಲೀಕರಾದ ಶ್ರೀ ಗುರು ಬಳ್ಳಕುರಾಯ,  ಶ್ರೀ ಬಿ.ಎಲ್. ರವೀಂದ್ರ ಕುಮಾರ್ ರವರ ನೇತೃತ್ವದಲ್ಲಿ ಶ್ರೀರಾಮನಗರದ ಶ್ರೀರಾಮ ಕನ್ನಡ ಯುವಕ ಸಂಘವು ದಿನಾಂಕ 01-12-2018, ಶನಿವಾರ ರಾತ್ರಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಆರ್.ಎಸ್.ಅಯ್ಯರ್ ಅವರ ಜೊತೆಯಲ್ಲಿ. ಕರಾಟೆ ಪಟು ಶ್ರೀ ಶರತ್, ಸ್ಥಳೀಯ ಕಾರ್ಪೊರೇಟರ್ ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.




________________________________



ತುಮಕೂರಿನ ಚಿಕ್ಕಪೇಟೆ-ಮಂಡಿಪೇಟೆ ರಸ್ತೆಯಲ್ಲಿ ಮಾಜಿ ಕಾರ್ಪೊರೇಟರ್ ಶ್ರೀ ಟಿ.ವಿ. ಚಂದ್ರಶೇಖರ್ (ಪಾತ್ರೆ ಚಂದ್ರು) ಅವರ ನಾಯಕತ್ವದಲ್ಲಿ ಶ್ರೀ ಶಿವಸೈನ್ಯ ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ದಿ.30-11-2018, ಶುಕ್ರವಾರ ಸಂಜೆ ಆರ್.ಎಸ್.ಅಯ್ಯರ್ ಮತ್ತು ಎನ್.ಆರ್.ಕಾಲೋನಿಯ ಶ್ರೀ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಮೇಯರ್ ಶ್ರೀ ಸುಧೀಶ್ವರ್, ಕಾರ್ಪೊರೇಟರ್ ಗಳಾದ ಶ್ರೀ ಟಿ.ಎಂ. ಮಹೇಶ್ ಕುಮಾರ್ ಮತ್ತು ಶ್ರೀಮತಿ ದೀಪಶ್ರೀ ಮಹೇಶ್, ಇತರ ಗಣ್ಯರಾದ ಶ್ರಿ ಮನೋಹರಗೌಡ, ಶ್ರೀ ಬಾವಿಕಟ್ಟೆ ನಾಗೇಶ್, ಶ್ರೀಮತಿ ಅನಸೂಯ ರತ್ನಯ್ಯಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 





_________________________________



ತುಮಕೂರಿನ ಬಾಳೆಗೌಡನ (ಬಿ.ಜಿ.) ಪಾಳ್ಯ ವೃತ್ತದಲ್ಲಿ ಸ್ಥಳೀಯ ಯುವ ಮುಖಂಡರಾದ ಶ್ರೀ ಪ್ರಸನ್ನ (ಪಚ್ಚಿ) ಅವರ ನೇತೃತ್ವದ "ಮಯೂರ ವರ್ಮ ಕನ್ನಡ ಯುವ ವೇದಿಕೆ'' ದಿ.29-11-2018, ಗುರುವಾರ ರಾತ್ರಿ ನಡೆಸಿದ ರಾಜ್ಯೋತ್ಸವದಲ್ಲಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳಾದ ಶ್ರೀ ಟಿ.ಎಂ.ಮಹೇಶ್ ಕುಮಾರ್ , ಶ್ರೀ ಸೈಯದ್ ನಯಾಜ್, ವಕೀಲರಾದ ಶ್ರೀ ಟಿ.ಎಸ್.ನಿರಂಜನ್ ಮತ್ತು ಶ್ರೀ ನಾಗೇಶ್ ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದರು. 


___________________________________



ರೋಟರಿ ತುಮಕೂರು ಸೆಂಟ್ರಲ್ ಸಂಸ್ಥೆಯಿಂದ ತುಮಕೂರು ನಗರದ ಸೋಮೇಶ್ವರಪುರಂನ ಶಿವಲಾಸ್ಯ ಸಭಾಂಗಣದಲ್ಲಿ ದಿನಾಂಕ 29-11-2018, ಗುರುವಾರ) ಸಂಜೆ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಆರ್.ಎಸ್.ಅಯ್ಯರ್ ಅವರನ್ನು ಗೌರವಿಸಲಾಯಿತುರೋಟರಿಯ ಜಿಲ್ಲಾ ಗೌರ್ನರ್ ರವರಾದ ಶ್ರೀ ಸುರೇಶ್ ಹರಿ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಾಧಕರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಶ್ರೀ ಜಿ.ಎಂ.ಸಿದ್ದೇಗೌಡರನ್ನೂ ಗೌರವಿಸಲಾಯಿತುರೋಟರಿ ಜಿಲ್ಲಾ ಗೌರ್ನರ್ ಶ್ರೀ ಸುರೇಶ್ ಹರಿ, ಜಿಲ್ಲಾ ಕಾರ್ಯದರ್ಶಿ ಶ್ರೀ ತಿರುಮುರುಗನ್, ಸಹಾಯಕ ಗೌರ್ನರ್ ಶ್ರೀ ಕೆ.ಟಿ.ಥಾಮಸ್, ತುಮಕೂರು ಸೆಂಟ್ರಲ್ ಅಧ್ಯಕ್ಷರಾದ ಶ್ರೀ ಎಂ.ಜಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಶ್ರೀ ಆರ್.ಎನ್.ದಿನಕರ್, ರೋಟೇರಿಯನ್ ಗಳಾದ ಶ್ರೀ ಬೆಳ್ಳಿ ಲೋಕೇಶ್, ಶ್ರೀ ಟಿ.ಆರ್.ಎಚ್.ಪ್ರಕಾಶ್, ಶ್ರೀ ಟಿ.ಬಿ.ಮೃತ್ಯುಂಜಯ, ಶ್ರೀ ಬಿಳಿಗೆರೆ ಶಿವಕುಮಾರ್, ಶ್ರೀ ಬಿ..ಶಿವಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.




                          ------------------------------------------------



ತುಮಕೂರಿನ ಮಾರುತಿ ನಗರದಲ್ಲಿ ''ಮಾರುತಿನಗರ ನಾಗರಿಕ ಹಿತರಕ್ಷಣಾ ಸಮಿತಿ'' ದಿನಾಂಕ 22-11-2018, ಗುರುವಾರ, ಸಂಜೆ ನಡೆಸಿದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. ಆಗಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು , ಸಾಹಿತಿಗಳಾದ ಶ್ರೀ ಕವಿತಾಕೃಷ್ಣ ರವರು, ಸಮಿತಿ ಅಧ್ಯಕ್ಷರಾದ ಶ್ರೀ ಸಿದ್ದರಾಮಯ್ಯರವರು, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನರವರು, ಎನ್.ಎಸ್. ಐ ಫೌಂಡೇಷನ್ ನ ಶ್ರೀ ಎನ್.ಎನ್.ಶ್ರೀಧರ್ ಅವರೂ ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.



---------------------------------


ತುಮಕೂರು ನಗರದ ಖ್ಯಾತ ಕರಾಟೆ ಪಟುಗಳಾದ ಶ್ರಿ ಕೆ.ಕೃಷ್ಣಮೂರ್ತಿ ಅವರು ತಮ್ಮ ಪುತ್ರ ಶ್ರೀ ಸಾಗರ್ ಅವರೊಂದಿಗೆ ದಿನಾಂಕ 13-11-2018 ರಂದು ಬೆಳಗ್ಗೆ ಶ್ರೀ ಆರ್.ಎಸ್.ಅಯ್ಯರ್ ಅವರ ನಿವಾಸಕ್ಕೇ ಆಗಮಿಸಿ ಸನ್ಮಾನಿಸುವ ಮೂಲಕ ಅಭಿನಂದಿಸಿದರು.
-------------------------------------


ತುಮಕೂರಿನ ಮಾಜಿ ನಗರಸಭಾ ಸದಸ್ಯರಾದ ಶ್ರೀ ಕುಬೇರ ನಾಗಭೂಷಣ್, ಶ್ರೀ ಪ್ರಕಾಶ್ ಮತ್ತು  ಶ್ರೀ ಚಂದನ್ ಕುಮಾರ್ ಅವರು ಉಡುಪಿ ಹೋಟೆಲ್ ನಲ್ಲಿ ದಿನಾಂಕ 02-11-2018 ರಂದು ಶ್ರೀ ಆರ್.ಎಸ್.ಅಯ್ಯರ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. 

--------------------------------------




ಬಿಜೆಪಿಯ ಹಿರಿಯ ಮುಖಂಡರೂ, ಶಾಸಕರೂ, ಮಾಜಿ ಸಚಿವರೂ ಹಾಗೂ ಆತ್ಮೀಯರೂ ಆದ ಶ್ರೀ ಎಸ್.ಸುರೇಶ್ ಕುಮಾರ್ (ರಾಜಾಜಿ ನಗರ, ಬೆಂಗಳೂರು) ಅವರಿಂದ ಫೇಸ್ ಬುಕ್ ನಲ್ಲಿ ಅಭಿನಂದನೆ.




**************************

ತುಮಕೂರು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2018














ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರಿಂದ ಜಿಲ್ಲಾಡಳಿತದ ಪರವಾಗಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಚನ್ನಬಸಪ್ಪ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


 



******************************

ಶ್ರೀ ಹೆತ್ತೇನಹಳ್ಳಿ ಅಮ್ಮನವರ ದೇವಾಲಯದಲ್ಲಿ ಸನ್ಮಾನ 2018


ತುಮಕೂರು ನಗರದ ಶಾಂತಿನಗರ ಬಡಾವಣೆಯ ಶ್ರೀ ಹೆತ್ತೇನಹಳ್ಳಿ ಅಮ್ಮನವರ ದೇವಾಲಯದಲ್ಲಿ ಶ್ರೀ ಬಿ.ಎಸ್.ವೆಂಕಟೇಶ್ (ಬೆಳಗುಂಬ) ಅವರ ನೇತೃತ್ವದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರು ದಿ. 29-04-2018 ರಲ್ಲಿ ಶ್ರೀ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. ಚಿತ್ರದಲ್ಲಿ ಶ್ರೀ ಬಿ.ಎಸ್.ವೆಂಕಟೇಶ್, ಶ್ರೀ ಗಂಗಾಧರ್ ಮತ್ತಿತರರು ಇದ್ದಾರೆ. 

***************************

ವಕ್ಫ್ ಬೋರ್ಡ್  ಕಚೇರಿಯಲ್ಲಿ ಗೌರವಾರ್ಪಣೆ  2017-18


ತುಮಕೂರು ನಗರದ ಎಂ.ಜಿ.ರಸ್ತೆಗೆ ಹೊಂದಿಕೊಂಡಿರುವ ಹೆಚ್.ಎಂ.ಎಸ್.  ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಶ್ರೀ ಮುಷ್ತಾಕ್ ಅಹಮದ್ ಅವರು ಆರ್.ಎಸ್.ಅಯ್ಯರ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ಬೆಳಗುಂಬ ವೆಂಕಟೇಶ್ ಇದ್ದರು. 



************************

ಅನುಗ್ರಹ ಸಂಗೀತ ಶಾಲೆ ಸಮಾರಂಭದಲ್ಲಿ ಸನ್ಮಾನ 2011



ತುಮಕೂರು ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ 2011 ರ ಫೆಬ್ರವರಿಯಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವತಿಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ  ಆರ್.ಎಸ್.ಅಯ್ಯರ್ ಅವರು  ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು. ಚಿತ್ರದಲ್ಲಿ ಮಹಾವಿದ್ಯಾಲಯದ ಮುಖ್ಯಸ್ಥರಾದ ಖ್ಯಾತ ಸಂಗೀತ ವಿದ್ವಾಂಸರಾದ ವಿ|| ಶ್ರೀಕಂಠ ಭಟ್, ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ IAS, ಶ್ರೀ ಸಂಪಿಗೆ ವೆಂಕಟನಾರಾಯಣ ರವರು ಇದ್ದಾರೆ.


ವಿದ್ವಾನ್ ಶ್ರೀಕಂಠ ಭಟ್ ರವರಿಂದ ಗೌರವಾರ್ಪಣೆ






****************************

ತುಮಕೂರು ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಸನ್ನಾನ 2010


ತುಮಕೂರು ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ 2010 ರಲ್ಲಿ ಏರ್ಪಟ್ಟಿದ್ದ "ತುಮಕೂರು ಜಿಲ್ಲಾ ಉತ್ಸವ"ದ ಸಂದರ್ಭದಲ್ಲಿ ನಗರದ ಬಸವೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ಸವದ ರೂವಾರಿಗಳೂ, ಜಿಲ್ಲಾಧಿಕಾರಿಗಳೂ ಆದ ಡಾ. ಸಿ.ಸೋಮಶೇಖರ್ IAS ಅವರು ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದರು. ಚಿತ್ರದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಪ್ರೊ. ಚಂದ್ರಣ್ಣ, ಶ್ರೀ ಕಂಟಲಗೆರೆ ಸಣ್ಣಹೊನ್ನಯ್ಯ, ಶ್ರೀ ಕಾಡಶೆಟ್ಟಿಹಳ್ಳಿ ಸತೀಶ್ ಮತ್ತು ಇತರ ಗಣ್ಯರುಗಳು ಇದ್ದಾರೆ.





***********************

ತುಮಕೂರು ಜಿಲ್ಲಾ ಪತ್ರಕರ್ತರ ಸಂಘದಿಂದ "ಪತ್ರಿಕಾ ದಿನಾಚರಣೆ" ಸಮಾರಂಭದಲ್ಲಿ  ಸನ್ಮಾನ



ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಆರ್.ಎಸ್.ಅಯ್ಯರ್ (ಎಡದಿಂದ ಮೊದಲನೆಯವರು) ಮತ್ತು ಇತರರಿಗೆ ಸನ್ಮಾನ. ಚಿತ್ರದಲ್ಲಿ (ಎಡದಿಂದ) ಆಗಿನ ಜಿಲ್ಲಾಧಿಕಾರಿ ಶ್ರೀ ಉಮಾಶಂಕರ್ IAS, ಶ್ರೀ ಸೊಗಡು ವೆಂಕಟೇಶ್,  ಆಂದಿನ ನೂತನ ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ IAS, ಪತ್ರಿಕಾ ಛಾಯಾಗ್ರಾಹಕ ಶ್ರೀ ಸುರೇಶ್, ಸಚಿವ ಶ್ರೀ ವೆಂಕಟರಮಣಪ್ಪ, ಶ್ರೀ ಚಿ.ನಿ.ಪುರುಷೋತ್ತಮ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಜಿ.ಇಂದ್ರಕುಮಾರ್, ಹಿರಿಯ ಪತ್ರಕರ್ತ ಶ್ರೀ ಬಿ.ಎಂ.ಹನೀಫ್, ಸೊಗಡು ಪತ್ರಿಕೆ ಸಂಪಾದಕ ಹಾಗೂ ಶಾಸಕರಾದ ಶ್ರೀ ಸೊಗಡು ಶಿವಣ್ಣ, ಶ್ರೀ ಹೆಚ್.ಜಿ.ವೆಂಕಟೇಶ ಮೂರ್ತಿ, ಜಿಲ್ಲಾ ಪಂಚಾಯತ್ ಸಿ.ಇ.ಓ. ಮನೋಜ್ ಕುಮಾರ್ ಮೀನಾ IAS ಮತ್ತಿತರರು ಇದ್ದಾರೆ. 





ಚಿತ್ರದಲ್ಲಿ (ಎಡದಿಂದ) ಸರ್ವಶ್ರೀ ಚಿ.ನಿ.ಪುರುಷೋತ್ರಮ್, ಆರ್.ಕಾಮರಾಜ್, ಆರ್.ಎಸ್.ಅಯ್ಯರ್, ಡಾ.ಸಿ.ಸೋಮಶೇಖರ್ IAS, ಸಚಿವರಾದ  ವೆಂಕಟರಮಣಪ್ಪ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಇಂದ್ರಕುಮಾರ್, ಶಾಸಕರಾದ ಸೊಗಡು ಶಿವಣ್ಣ, ಜಿಲ್ಲಾ ಪಂಚಾಯತ್ ಸಿ.ಇ.ಓ. ಮನೋಜ್ ಕುಮಾರ್ ಮೀನಾ IAS, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಹೆಚ್.ಜಿ.ವೆಂಕಟೇಶ ಮೂರ್ತಿ ಅವರನ್ನು ಕಾಣಬಹುದು.

********************

ತುಮಕೂರು ಹೆಚ್.ಎಂ.ಟಿ. ದ್ವಿಜ ಸಮೂಹದಿಂದ ಸನ್ಮಾನ - 2009





ತುಮಕೂರು ಹೆಚ್.ಎಂ.ಟಿ. ದ್ವಿಜ ಸಮೂಹದ ವತಿಯಿಂದ ದಿ. 04-01-2009 ರಂದು ತುಮಕೂರಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಏರ್ಪಟ್ಟಿದ್ದ ಸಮಾರಂಭದಲ್ಲಿ ಪತ್ರಕರ್ತ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಪಾವಗಡದ ಶ್ರೀ ಸ್ವಾಮಿ ಜಪಾನಂದಜಿಯವರ ಸಾನಿದ್ಯದಲ್ಲಿ ಏರ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀ ಶೃಂಗೇರಿ ಶಾರದಾ ಪೀಠದ ಸಿಇಓ ಹಾಗೂ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್.ಗೌರೀಶಂಕರ್ ರವರು ಉಪಸ್ಥಿತರಿದ್ದುದು ಕಾರ್ಯಕ್ರಮಕ್ಕೊಂದು ಮೆರುಗು ನೀಡಿತ್ತು. ಆ ಸಮಾರಂಭದಲ್ಲಿ ಲೇಖಕಿ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಗಾಯತ್ರಿ ಸಹಕಾರ ಸಂಘದ ಉದ್ಯೋಗಿಗಳೂ ಸಮಾಜ ಸೇವಕರೂ ಆದ ಶ್ರೀ ಆರ್.ಗೋಪಾಲಕೃಷ್ಣ ಮತ್ತು ಪೊಲೀಸ್ ಇಲಾಖೆಯ  ಶ್ರೀ ಎ. ಗುರುರಾಜ್ ರವರನ್ನೂ ಸನ್ಮಾನಿಸಲಾಯಿತು.
 
ಶ್ರೀ ಶೃಂಗೇರಿ ಶಾರದಾ ಪೀಠದ ಸಿಇಓ ಮತ್ತು ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್.ಗೌರಿಶಂಕರ್ ರವರೊಂದಿಗೆ...





**********************

ಮ್ಯಾಗ್ನೇಟಿಕ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ- 2012


ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಭಾರದ್ವಾಜಾ ಟವರ್ಸ್ ನಲ್ಲಿ ವ್ಯವಸ್ಥೆಗೊಂಡಿದ್ದ ಮ್ಯಾಗ್ನೇಟಿಕ್ ಚಿಕಿತ್ಸಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ (ದಿ. 10-11-2012) ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ಮ್ಯಾಗ್ನೇಟಿಕ್ ಚಿಕಿತ್ಸಾ ತಜ್ಞ ಶ್ರೀ ಶ್ರೀನಿವಾಸ್, ಸಾಹಿತಿ ಶ್ರೀ  ಕವಿತಾ ಕೃಷ್ಣ,  ಶ್ರೀ ಪ್ರಕಾಶ್ ಭಾರದ್ವಾಜ್, ಮಾಜಿ ನಗರಸಭಾ ಸದಸ್ಯ ಶ್ರೀ ಎಸ್.ಟಿ.ಡಿ. ನಾಗರಾಜ್, ಶ್ರೀ ವೀರಪ್ಪ ದೇವರು ಮೊದಲಾದವರು ಇದ್ದಾರೆ. 





**************************

ತುಮಕೂರು ರೋಟರಿ ಕ್ಲಬ್ ನಿಂದ ಸನ್ಮಾನ


ತುಮಕೂರು ರೋಟರಿ ಕ್ಲಬ್ ವತಿಯಿಂದ ರೋಟರಿ ಬಾಲಭವನದಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಕ್ಷೇತ್ರದ ಸೇವೆ ಗುರುತಿಸಿ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಿದ ಸಂದರ್ಭ. ಚಿತ್ರದಲ್ಲಿ (ಎಡದಿಂದ) ತುಮಕೂರಿನ ಖ್ಯಾತ ನ್ಯಾಯವಾದಿಗಳಾದ ಪ್ರೊ. ಹೆಚ್.ಎಸ್.ಶೇಷಾದ್ರಿ, ರೋಟರಿ ಅಧ್ಯಕ್ಷರಾಗಿದ್ದ ಪ್ರೊ. ಬಸವಲಿಂಗಪ್ಪ, ರೋಟರಿ ಕ್ಲಬ್  ಪದಾಧಿಕಾರಿಗಳಾಗಿದ್ದ  ಹಾಗೂ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಾಗಿದ್ದ  ಡಾ || ಕ್ಯಾಪ್ಟನ್ ರಾಮು ಅವರನ್ನು ಕಾಣಬಹುದು. 

No comments:

Post a Comment