ಕಾಳಿ ಮಾತೆಯ ಈ ಆಕರ್ಷಕ ವಿಗ್ರಹದ ದರ್ಶನ ಶರನ್ನವರಾತ್ರಿಯ ಮೊದಲ ದಿನವಾದ ಇಂದು (03-10-2024, ಗುರುವಾರ) ನಮಗಾಯಿತು. ನಾನು ಮತ್ತು ಆರ್.ವಿಶ್ವನಾಥನ್ ಇಂದು ತಂಗನಹಳ್ಳಿ ಕೆರೆಯ ಬಳಿ ಹೋಗಿದ್ದಾಗ ಕೆರೆಯ ಕೋಡಿ ಹತ್ತಿರ ರಸ್ತೆ ಬದಿಯಲ್ಲೇ ಬಂಡೆಯೊಂದರ ಮೇಲೆ ನಿರ್ಮಿಸಿರುವ ಈ ಕಾಳಿ ಮಾತೆಯ ಬೃಹತ್ ವಿಗ್ರಹ ಗಮನಸೆಳೆಯಿತು. ಇದೇ ಮೊದಲ ಬಾರಿಗೆ ಕಾಳಿಯ ಇಂತಹುದೊಂದು ವಿಗ್ರಹವನ್ನು ಈ ಭಾಗದಲ್ಲಿ ನೋಡಿ ನಮಗೆ ಆನಂದಾಶ್ಚರ್ಯಗಳಾದವು.
Friday, 4 October 2024
Kali Maa Statue- 2024- ಕಾಳಿ ಪ್ರತಿಮೆ ತಂಗನಹಳ್ಳಿ
Tanganahalli Lake- 2024- ತಂಗನಹಳ್ಳಿ ಕೆರೆ ಕೋಡಿ ದೃಶ್ಯ
ತಂಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಹಾಲ್ನೊರೆಯಂಥ ನೀರು ಕೆರೆಯ ಕೋಡಿಯಿಂದ ಹೊರಹೊಮ್ಮಿ ಧೋ ಎಂದು ಸದ್ದು ಮಾಡುತ್ತ ಹರಿಯುತ್ತಿದೆ. ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಇಂದು (ದಿ. 03-10-2024, ಗುರುವಾರ) ಮಧ್ಯಾಹ್ನ ಈ ದಾರಿಯಲ್ಲಿ ಹೋಗುವಾಗ, ಧೋ ಎಂಬ ನೀರಿನ ಹರಿವಿನ ಸದ್ದು ಕೇಳಿ ಕುತೂಹಲದಿಂದ ಬಂಡೆಗಳ ಮಧ್ಯೆ ಒಳಹೊಕ್ಕುನೋಡಿದಾಗ ಕಂಡ ಈ ದೃಶ್ಯ ಮನಮೋಹಕವಾಗಿತ್ತು. ಮೈಮರೆಸುವಂತಿತ್ತು. ನಿನ್ನೆ ರಾತ್ರಿಯಿಡೀ ಸುರಿದ ಭರ್ಜರಿ ಮಳೆಯಿಂದ ಈ ಕೆರೆ ಇಂದು ಬೆಳಗ್ಗೆ ಕೋಡಿ ಬಿದ್ದಿದೆ.
Sunday, 29 September 2024
ಮರಿಮಗನೊಡನೆ ಮುತ್ತಜ್ಜ- Vivek- 2024- VSR with great grand son
“ಹೊಸ ಚಿಗುರು ಹಳೆಬೇರು ಕೂಡಿರಲು ಮರಸೊಬಗು….”
Tuesday, 17 September 2024
Bhimanakatte Swamiji- ದಿ. 17-09-2024, ಮಂಗಳವಾರ - ಭೀಮನಕಟ್ಟೆ ಶ್ರೀಗಳೊಂದಿಗೆ
“ಎಲ್ಲರನ್ನೂ ತಿದ್ದುವುದು ಸಾಧ್ಯವಾಗದು; ಆದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು…”
Thursday, 12 September 2024
Ganesha Chaturthi-2024 - ಗಣೇಶ ಚತುರ್ಥಿ - ದಿ. 07-09-2024, ಶನಿವಾರ
ಹಳೆಯ ತುಮಕೂರಿನ ಹೆಮ್ಮೆಯ ಕಲಾವಿದರಲ್ಲಿ ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರೂ ಒಬ್ಬರಾಗಿದ್ದರು. ವಿಶೇಷವಾಗಿ ಮಣ್ಣಿನ ಗಣಪತಿ ವಿಗ್ರಹಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿ, ತಮ್ಮದೇ ಛಾಪು ಮೂಡಿಸಿದ್ದರು. ಇವರ ಜೊತೆಯಲ್ಲಿ ಸಹೋದರರಾದ ದಿವಂಗತ ಶ್ರೀ ರಾಜು ರವರು ಮತ್ತು ಶ್ರೀ ಕುಮಾರ್ ರವರೂ ಕೈಜೋಡಿಸುತ್ತಿದ್ದರು.
Thursday, 15 August 2024
Great-grandfather and Great-grandson face off- 14-08-2024- ಮುತ್ತಜ್ಜ-ಮರಿಮಗನ ಮುಖಾಮುಖಿ
ಮುತ್ತಜ್ಜ-ಮರಿಮಗನ ಮುಖಾಮುಖಿ
ಮುತ್ತಜ್ಜ ವಿ.ಎಸ್.ರಾಮಚಂದ್ರನ್ (95) ಮತ್ತು ಮರಿಮಗ ಕೃಷ್ಣ (ಒಂದೂಮುಕ್ಕಾಲು ವರ್ಷ) ಪರಸ್ಪರ ಮುಖಾಮುಖಿ ಆಗಿ ಖುಷಿಪಟ್ಟರು.
ಪುಟಾಣಿ ಕೃಷ್ಣ ತನ್ನ ತಾಯಿ ಶ್ರೀಮತಿ ಸುನಯನ (ರಾಮಚಂದ್ರನ್ ರವರ ಮೊಮ್ಮಗಳು- ಸಾಫ್ಟ್ ವೇರ್ ಇಂಜಿನಿಯರ್), ತನ್ನ ಅಜ್ಜಿ ಶ್ರೀಮತಿ ರಾಜೇಶ್ವರಿ (ರಾಮಚಂದ್ರನ್ ರವರ ಮಗಳು) ಮತ್ತು ತನ್ನ ತಾತ ಶ್ರೀ ಹೆಚ್.ಕೆ.ವೇಣುಗೋಪಾಲ್ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್) ರವರ ಜೊತೆಯಲ್ಲಿ ದಿನಾಂಕ 14-08-2024 ರಂದು ಸಂಜೆ ನಮ್ಮ ಮನೆಗೆ ಆಗಮಿಸಿದ್ದಾಗ ಈ ಮುಖಾಮುಖಿ ಆಯಿತು.
ಮರಿಮಗ ಕೃಷ್ಣ ತನ್ನ ಮುತ್ತಜ್ಜನ ಕೆನ್ನೆ ಸವರಿದ. ಗಡ್ಡ ಹಿಡಿದುಕೊಂಡ. ಕೈಕುಲುಕಿದ. ಪಾದಕ್ಕೆ ನಮಸ್ಕರಿಸಿದ. ಇವೆಲ್ಲ ಸಂದರ್ಭಗಳಲ್ಲೂ ಈರ್ವರ ಮೊಗದಲ್ಲೂ ಅನಿರ್ವಚನೀಯ ಸಂತಸ ಭೋರ್ಗರೆಯಿತು. ನಾನು ಮತ್ತು ಆರ್.ವಿಶ್ವನಾಥನ್ ಇದಕ್ಕೆ ಸಾಕ್ಷಿಯಾದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 14-08-2024
Sunday, 11 August 2024
VSR Sanmana- 2024 August- ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ
ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ 2024 ---------------------------------
-------------------------------------------------------------
--------------------------------------------------------------------
ತಿಮ್ಮನಾಯಕನಹಳ್ಳಿ ಕೆರೆ- Thimmanayakanahalli lake 2024
ಮನಮೋಹಕ ವಾತಾವರಣ, ಪ್ರಶಾಂತ ಪರಿಸರ, ಸುತ್ತಲೂ ಬೆಟ್ಟಗುಡ್ಡಗಳು ಹಾಗೂ ಎತ್ತರದ ಮರಗಳು, ಆಗಾಗ ಬೆಟ್ಟದ ಯಾವುದೋ ಮೂಲೆಯಿಂದ ಪ್ರತಿಧ್ವನಿಸುವ ನವಿಲುಗಳ ಕೂಗು .... ತಿಮ್ಮನಾಯಕನಹಳ್ಳಿ ಕೆರೆಯ ಸುಂದರ ಪರಿಸರ ಮನಸೂರೆಗೊಳ್ಳುತ್ತದೆ. ನಿನ್ನೆ ಸೂರ್ಯಾಸ್ತದ ಹೊತ್ತಲ್ಲಿ ನಾನು ಮತ್ತು ವಿಶ್ವನಾಥನ್ ಅಲ್ಲಿದ್ದೆವು.