ಪ್ರಸಿದ್ಧ ನ್ಯಾಯವಾದಿಗಳೂ, ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ರವರೂ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರೂ, "ಸಂಯುಕ್ತ ಕರ್ನಾಟಕ" ದಿನಪತ್ರಿಕೆಯನ್ನು ಪ್ರಕಟಿಸುತ್ತಿರುವ ಲೋಕ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ನಮ್ಮ ಆತ್ಮೀಯರೂ ಆಗಿರುವ ಶ್ರೀ ಅಶೋಕ್ ಹಾರನಹಳ್ಳಿ ರವರನ್ನು ಭೇಟಿ ಮಾಡುವ ಸದವಕಾಶ ಇಂದು (ದಿ. 26-06-2026) ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂದಿತು.
ತುಮಕೂರು ನಗರದ ಆಲದಮರದ ಪಾರ್ಕ್ ಅವರಣದ ಪ್ರೆಸ್ ಕ್ಲಬ್ ನಲ್ಲಿ ಇಂದು ಮಧ್ಯಾಹ್ನ ಲೋಕ ಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ "ಚಿಂತನ ಮಂಥನ" ಕಾರ್ಯಕ್ರಮಕ್ಕೆ ಟ್ರಸ್ಟ್ ನ ಆಹ್ವಾನದ ಮೇರೆಗೆ ನಾವು ಪಾಲ್ಗೊಂಡಿದ್ದೆವು.
ಶ್ರೀ ಅಶೋಕ್ ಹಾರನಹಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಸ್ಫೂರ್ತಿ ಡೆವೆಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಪಿ. ಚಿದಾನಂದ್ ರವರು, ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಾಜಿ ಟೂಡಾ ಅಧ್ಯಕ್ಷರಾದ ಶ್ರೀ ಹೆಚ್.ಜಿ.ಚಂದ್ರಶೇಖರ್ ರವರು, ಮಾಜಿ ಕಾರ್ಪೊರೇಟರ್ ಶ್ರೀ ಸಿ.ಎನ್. ರಮೇಶ್ ರವರು, ಜಿಲ್ಲಾ ಬ್ರಾಹ್ಮಣ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ರಾಘವೇಂದ್ರರವರು, ಮಹಿಳಾ ಸಮಾಜದ ಕಾರ್ಯದರ್ಶಿಗಳಾದ ಶ್ರೀಮತಿ ಸುಭಾಷಿಣಿ ರವೀಶ್ ರವರು ಮತ್ತಿತರ ಗಣ್ಯರು ಭಾಗವಹಿಸಿದ್ದರು. ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಹರಿ ಚನ್ನಕೇಶವರವರು, "ಸಂಯುಕ್ತ ಕರ್ನಾಟಕ" ಪತ್ರಿಕೆಯ ಸಂಪಾದಕರಾದ ಶ್ರೀ ಮಹಾಬಲೇಶ್ವರ ವಿ.ಭಟ್ ರವರು, ತುಮಕೂರು ಜಿಲ್ಲಾ ವರದಿಗಾರರಾದ ಶ್ರೀ ಸತೀಶ್ ಕುಮಾರ್ ಮೊದಲಾದ ಪ್ರಮುಖರೂ ಉಪಸ್ಥಿತರಿದ್ದರು. ಸಭೆಯಲ್ಲಿ ಪತ್ರಿಕೆ ಕುರಿತಂತೆ ಚರ್ಚೆ ನಡೆಯಿತು.
ಶ್ರೀ ಅಶೋಕ್ ಹಾರನಹಳ್ಳಿಯವರು ನಾವು ನಡೆಸುವ "ಡಿವಿಜಿ ನೆನಪು" ಉಪನ್ಯಾಸ ಮಾಲಿಕೆಯ 83 ನೇ ಕಾರ್ಯಕ್ರಮಕ್ಕೆ (ದಿ. 03-03-2023) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರೆಂಬುದು ಸ್ಮರಣೀಯವಾಗಿದೆ.





No comments:
Post a Comment