* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 17 March 2019

ಡಿವಿಜಿ ಪ್ರತಿಮೆಯ ಮುಂದೆ...in front of DVG Statue 17-03-2019

ಡಿವಿಜಿ ಪ್ರತಿಮೆಯ ಮುಂದೆ...
******************************
ಇಂದು (17-03-2019, ಭಾನುವಾರ) ದಾರ್ಶನಿಕ ಡಿ.ವಿ.ಜಿ.ಯವರ 132 ನೇ ಜನ್ಮದಿನ. ಡಿ.ವಿ.ಜಿ. ಬಳಗದವರಿಗೆಲ್ಲ ಅನಿರ್ವಚನೀಯ ಸಂತೋಷ. ಡಿ.ವಿ.ಜಿ.ಯವರು ಆಗಾಗ ಬಂದು ಕೂರುತ್ತಿದ್ದ ಸ್ಥಳ (ಬೆಂಗಳೂರಿನ ಬ್ಯೂಗಲ್ ರಾಕ್)ದಲ್ಲಿ ಈಗ ಡಿ.ವಿ.ಜಿ. ಪ್ರತಿಮೆಯಿದ್ದು, ಮತ್ತೆಮತ್ತೆ ಡಿ.ವಿ.ಜಿ.ಯವರ ನೆನಪನ್ನು ಗಟ್ಟಿಗೊಳಿಸುತ್ತಿರುತ್ತದೆ. ಡಿ.ವಿ.ಜಿ.ಯವರ ಜನ್ಮದಿನವಾದ ಇಂದು ಸಂಜೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಡಿ.ವಿ.ಜಿ. ಪ್ರತಿಮೆ ಮುಂದೆ ಕೆಲಹೊತ್ತು ಇದ್ದು ಡಿ.ವಿ.ಜಿ.ಯವರನ್ನು ನೆನಪಿಸಿಕೊಂಡಾಗ....





Thursday, 14 March 2019

Felicitation to R S Iyer - Womens Day Function 14-03-2019- ಸನ್ಮಾನ-

ನಮ್ಮ ಬಡಾವಣೆಯಲ್ಲೇ ಸನ್ಮಾನ ಸ್ವೀಕರಿಸುವ ಸಂತೋಷವನ್ನು ಬಣ್ಣಿಸಲಾಗದು. ಹೌದು, ಇಂದು (14-03-2019, ಗುರುವಾರ) ಸಂಜೆ ನಮ್ಮ ತುಮಕೂರಿನ ನೃಪತುಂಗ ಬಡಾವಣೆಯ "ನಿರ್ಭಯ ಮಹಿಳಾ ಜಾಗೃತಿ ವೇದಿಕೆ" ಏರ್ಪಡಿಸಿದ್ದ "ಮಹಿಳಾ ದಿನಾಚರಣೆ"ಯಲ್ಲಿ ಇತರೆ ಮೂವರು ಸಾಧಕರೊಡನೆ ನನ್ನನ್ನೂ ಸನ್ಮಾನಿಸಿದರು.
ಒಂದಕ್ಕಿಂತ ಒಂದು ಭಿನ್ನವಾದ 9500 ರಂಗೋಲೆ ಚಿತ್ರ ಬಿಡಿಸುವ ಮೂಲಕ "ವರ್ಲ್ಡ್ ಬುಕ್ ಆಫ್ ರೆಕಾರ್ಡ್''ಗೆ ಭಾಜನರಾಗಿರುವ ಶ್ರೀಮತಿ ಎಸ್.ವಿ.ಜಯ ಸೋ.ಮು.ಭಾಸ್ಕರಾಚಾರ್, "ಸಹಕಾರ ರತ್ನ" ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ವೃತ್ತಿನಿಷ್ಠ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಶ್ರೀ ಮಹೇಶ್ ಅವರೊಂದಿಗೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತನಾಗಿರುವ ನನ್ನನ್ನೂ ಸನ್ಮಾನಿಸಿದರು.
ವೇದಿಕೆ ಅದ್ಯಕ್ಷೆ ಶ್ರೀಮತಿ ಗೀತಾ ನಾಗೇಶ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀ ಕವಿತಾಕೃಷ್ನ, ಸಾಹಿತಿ ಶ್ರೀ ಜಿ.ಕೆ.ಕುಲಕರ್ಣಿ, ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಶ್ರೀಮತಿ ಬಾ.ಹ.ರಮಾಕುಮಾರಿ, ಶ್ರೀಮತಿ ಸುಗುಣಾದೇವಿ ಮೊದಲಾದವರು ವೇದಿಕೆಯಲ್ಲಿದ್ದರು. ಬಡಾವಣೆಯ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.













Sunday, 3 March 2019

M.Gollahalli Temple Park ಎಂ.ಗೊಲ್ಲಹಳ್ಳಿ ದೇಗುಲ ಉದ್ಯಾನ 03-03-2019

ಎಂ.ಗೊಲ್ಲಹಳ್ಳಿ ಆಂಜನೆಯ ದೇಗುಲ ಉದ್ಯಾನದ ಸೊಬಗು ಮನಸೂರೆಗೊಳ್ಳುತ್ತದೆ. ನಿರ್ವಹಣೆ ಪ್ರಶಂಸಾರ್ಹವಾಗಿದೆ. ಹಿನ್ನೆಲೆಯ ಕೆರೆ ಇದೀಗ ಬತ್ತಿಹೋಗಿದ್ದರೂ, ಈ ಉದ್ಯಾನದ ಆಕರ್ಷಣೆ ಹಾಗೆಯೇ ಉಳಿದುಕೊಂಡಿದೆ. ಒಂದಷ್ಟು ಹೊತ್ತು ಇಲ್ಲಿ ಕುಳಿತು ಇಲ್ಲಿನ ಪ್ರಶಾಂತ ವಾತಾವರಣವನ್ನು ಮೌನವಾಗಿ ಆಸ್ವಾದಿಸಬಹುದು... ದಿನಾಂಕ 03-03-2019, ಭಾನುವಾರ ಸಂಜೆ ನಮ್ಮ ತಂದೆ ಸ್ವಾತಂತ್ತ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ...









M.Gollahalli Temple ಎಂ.ಗೊಲ್ಲಹಳ್ಳಿ ದೇಗುಲ 03-03-2019

ತುಮಕೂರು-ಕೊರಟಗೆರೆ ರಾಜ್ಯ ಹೆದ್ದಾರಿಯಲ್ಲಿ ಕೊರಟಗೆರೆಗೆ ಸನಿಹವಿರುವ ಎಂ.ಗೊಲ್ಲಹಳ್ಳಿಯಲ್ಲಿ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇದೆ. ಇಲ್ಲಿನ ಪ್ರಶಾಂತ ಪರಿಸರ ಮನೋಲ್ಲಾಸ ಮೂಡಿಸುವಂತಹುದು. ಬೆಟ್ಟಗಳ ಸಾಲು ಹಾಗೂ ಕೆರೆಯ (ಈಗ ಕೆರೆ ಸಂಪೂರ್ಣ ಬತ್ತಿದೆ) ಹಿನ್ನೆಲೆಯನ್ನು ಹೊಂದಿರುವ ಈ ದೇವಾಲಯದ ಪರಿಸರ ಆಹ್ಲಾದಕರವಾಗಿದೆ. ದಿನಾಂಕ 03-03-2019, ಭಾನುವಾರ ಸಂಜೆ ನಮ್ಮ ತಂದೆ ಸ್ವಾತಂತ್ತ್ಯ ಹೋರಾಟಗಾರರಾದ ಶ್ರಿ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಇಲ್ಲಿಗೆ ಭೇಟಿ ಕೊಟ್ಟಾಗ...