* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 29 June 2019

"Music Village" Rudra Patna "ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ..27-06-2019

"ಸಂಗೀತ ಗ್ರಾಮ" ರುದ್ರಪಟ್ಟಣದಲ್ಲಿ
*******************************
ಬಹುವರ್ಷಗಳ ಕನಸೊಂದು ನನಸಾದ ಸಂತಸ ನಮ್ಮ ಮನದಲ್ಲಿ ತುಂಬಿ ತುಳುಕುತ್ತಿತ್ತು. "ಸಂಗೀತ ಗ್ರಾಮ"ವೆಂದು ಜಾಗತಿಕವಾಗಿ ಸುವಿಖ್ಯಾತವಾದ ರುದ್ರಪಟ್ಟಣಕ್ಕೆ ನಾವು (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್) ದಿನಾಂಕ 27-06-2019, ಗುರುವಾರ ಸಂಜೆ ಭೇಟಿ ಕೊಟ್ಟಿದ್ದೆವು.
ಇಲ್ಲಿನ "ಸಪ್ತ ಸ್ವರ ದೇವತಾ ಧ್ಯಾನ ಮಂದಿರ'' ನಮ್ಮನ್ನು ಮಂತ್ರಮುಗ್ದರನ್ನಾಗಿಸಿತು. 60 ಅಡಿ ಎತ್ತರದ "ರುದ್ರ ವೀಣೆ"ಯ ಆಕಾರದ ಗೋಪುರದ ಈ ದೇಗುಲದಲ್ಲಿ, ಸರಸ್ವತಿ ದೇವಿಯ ಪುತ್ಥಳಿಯೊಂದಿಗೆ ಕರ್ನಾಟಕ ಶಾಸ್ರ್ರೀಯ ಸಂಗಿತ ದಿಗ್ಗಜರಾದ ಶ್ರೀ ತ್ಯಾಗರಾಜರು,ಶ್ರೀ ಮುತ್ತುಸ್ವಾಮಿ ದೀಕ್ಷಿತರು,ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ಪುರಂದರ ದಾಸರು, ಶ್ರೀ ವಾದಿರಾಜರು ಮತ್ತು ಶ್ರೀ ಕನಕದಾಸರ ಪುತ್ಥಳಿಗಳು ವಿರಾಜಮಾನವಾಗಿವೆ. "ಸಂಗೀತ ನಮನ" ದ ಮೂಲಕ ಕನ್ನಡ ಭಾಷೆಯಲ್ಲೇ ಪೂಜಿಸುವುದು ಇಲ್ಲಿನ ವೈಶಿಷ್ಟ್ಯ.ನಾಡಿನ ಖ್ಯಾತ ಸಂಗೀತ ವಿದ್ವಾಂಸರಾದ ಶ್ರಿ ಆರ್.ಕೆ.ಪದ್ಮನಾಭರವರು ತಮ್ಮ ಹುಟ್ಟೂರಿಗೆ ನೀಡಿರುವ ಅಮೂಲ್ಯ ಕೊಡುಗೆಯಿದು. ಅವರ ಅದ್ಭುತ ಸೃಜನಶೀಲತೆಗೆ ಈ ಮಂದಿರ ಸಾಕ್ಷಿಯಾಗಿದೆ.
ಸಂಗೀತಗಾರರು, ಸಂಗೀತಾರಾಧಕರಿಗೆಲ್ಲ ರುದ್ರಪಟ್ಟಣ ಅಕ್ಷರಶಃ ತೀರ್ಥಕ್ಷೇತ್ರದಂತಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವು ಕಾವೇರಿ ನದಿಯ ತಟದಲ್ಲಿರುವ ರಮಣೀಯ ತಾಣವಾಗಿದೆ. ಇಲ್ಲಿನ ಇತಿಹಾಸ ಮೈನವಿರೇಳಿಸುವಂತಿದೆ. ಅದಕ್ಕೆ ಸಂಬಂಧಿಸಿದ ಲಿಂಕ್ ಗಳನ್ನು ಇಲ್ಲಿ ನಮೂದಿಸಿದ್ದು, ಆಸಕ್ತರ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ..
https://www.deccanchronicle.com/…/rudrapatna-a-village-whic…

Friday, 28 June 2019

Kaveri River, Japada Katte 27-06-2019 Thursday

"ಜಪದಕಟ್ಟೆ"ಯ ಕಾವೇರಿಯ ನದಿಯಲ್ಲಿ
**********************************
"ಜಪದಕಟ್ಟೆ"ಯಲ್ಲಿ ಕಾವೇರಿ ನದಿ ಶಾಂತವಾಗಿ ಹರಿದುಹೋಗುತ್ತಿದೆ. ನದಿಯಲ್ಲಿರುವ ಸಣ್ಣಪುಟ್ಟ ಬಂಡೆಗಳನ್ನೇರಿ ಕುಳಿತರೆ, ಸುತ್ತಲೂ ನೀರು ಹಾಗೂ ಹಸಿರುಮಯವಾದ ಆ ವಾತಾವರಣವು ಬೆರೆಯದೇ ಲೋಕಕ್ಕೆ ಒಯ್ದುಬಿಡುತ್ತದೆ! ಸಂಜೆಯ ತಂಪಾದ ಹೊತ್ತಿನಲ್ಲಿ ಮುಗಿಲತುಂಬ ಆವರಿಸಿದ್ದ ಮೋಡಗಳ ಮರೆಯಲ್ಲಿ ಸೂರ್ಯ ಅಡಗಿದ್ದ. ಆಗಾಗ ಸಣ್ಣ ತುಂತುರು ಮಳೆ.. ದಿ.27-06-2019 ರಂದು ಗುರುವಾರ ಸಂಜೆ ಅಲ್ಲಿ ನಮಗೆ (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಹೊತ್ತು ಕಳೆದಿದ್ದೇ ಗೊತ್ತಾಗಲಿಲ್ಲ. ನದಿಯ ಎದುರು ದಡದಲ್ಲಿ ಮುಂಗಸಿಗಳ ಹಿಂಡು, ನವಿಲುಗಳು ಮಿಂಚಿನಂತೆ ಕಂಡು ಮಾಯವಾಗಿದ್ದು ರೋಮಾಂಚನಗೊಳಿಸಿತು... Kaveri River @ Japada Katte, K.R.Nagara Taluk, Mysore Dist...













Thursday, 27 June 2019

Japada Katte, 27-06-2019 ಜಪದಕಟ್ಟೆಯಲ್ಲಿ

"ಜಪದಕಟ್ಟೆ"ಯಲ್ಲಿ....
*******************
ಕಾವೇರಿ ನದಿಯ ತಟದಲ್ಲಿರುವ "ಜಪದಕಟ್ಟೆ"ಯ ಸುಂದರ ಹಾಗೂ ಪ್ರಶಾಂತ ಪರಿಸರವನ್ನು ಸುಮ್ಮನೆ ಆಸ್ವಾದಿಸಬೇಕಷ್ಟೇ. ಹಾಸನ ಜಿಲ್ಲೆ ಹೊಳೆನರಸೀಪುರದಿಂದ 31 ಕಿ.ಮೀ. ದೂರವಿರುವ ಹಾಗೂ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಈ ಕ್ಷೇತ್ರದಲ್ಲಿ ಪುರಾತನ ಈಶ್ವರ ದೇವಾಲಯವಿದೆ. ಎಡತೊರೆ ಮಠವು ಈ ಕ್ಷೇತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ಹಿಂಬದಿಯೇ ಕಾವೇರಿ ನದಿಯ ಸೊಬಗನ್ನು ಕಾಣಬಹುದು. ದಿ.27-06-2019, ಗುರುವಾರ ಮಧ್ಯಾಹ್ನ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಇಲ್ಲಿಗೆ ಭೇಟಿ ನೀಡಿದ್ದೆವು.... @ Japada Katte, K.R.Nagara Taluk, Mysore Dist...27-06-2019






Sunday, 16 June 2019

Devarayanadurga Hills 16-06-2019



ದೇವರಾಯನದುರ್ಗದ ಮೇಲಿನ ಬೆಟ್ಟದಲ್ಲಿರುವ ಬಂಡೆಯೊಂದರ ಮೇಲೆ ಮುಸ್ಸಂಜೆಯಲ್ಲಿ ಕುಳಿತು ಊರ್ಡಿಗೆರೆ ಸುತ್ತಲಿನ ಪೂರ್ವ ಭಾಗದ ಪರಿಸರವನ್ನು ಅವಲೋಕಿಸುವುದೇ ಒಂದು ವಿಶಿಷ್ಟ ಅನುಭವ. ಮಿಂಚು ಹುಳುಗಳಂತೆ ಕಾಣುವ ದೂರದ ಊರುಗಳ ಸಾಲುಸಾಲು ವಿದ್ಯುತ್ ದೀಪಗಳ ಸಮೂಹವನ್ನು ನೋಡುವುದೇ ಆನಂದ. ಜೊತೆಗೆ ಆಗಸದಲ್ಲಿ ಚಂದ್ರನ ದರ್ಶನದ ಸೊಬಗು... ಇಂದು (16-06-2019, ಭಾನುವಾರ) ಸಂಜೆ 7 ಗಂಟೆಯಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅಲ್ಲಿಗೆ ತೆರಳಿದ್ದೆವು.ಈ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸಲು ಅಲ್ಲಿ ಅನೇಕ ಜನರು ಸೇರಿದ್ದರು...






Sunday, 2 June 2019

Durgadahalli Lake 02-06-2019 ದುರ್ಗದ ಹಳ್ಳಿ ಕೆರೆ

ದುರ್ಗದ ಹಳ್ಳಿಯ ಈ ಕೆರೆಯ ಪ್ರಾಕೃತಿಕ ಸೊಬಗು ಅದ್ಭುತವಾದುದು. ಆಗಾಗ ನಾವು ಭೇಟಿ ಕೊಡುವ ನೆಚ್ಚಿನ ತಾಣಗಳಲ್ಲೊಂದಿದು... ಇಂದು (02-06-2019, ಭಾನುವಾರ) ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ತರಳಿ ಒಂದಿಷ್ಟು ಹೊತ್ತು ಅಲ್ಲಿನ ಸುಂದರ ವಾತಾವರಣವನ್ನು ಆಸ್ವಾದಿಸಿದಾಗ.... This is the beautiful lake of Durgadahalli, near to Tumakuru