* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 9 November 2020

Markonahalli Dam -2020 (R S Iyer, R. Vishwanathan & V S Ramachandran)


ಮಾರ್ಕೋನಹಳ್ಳಿ ಜಲಾಶಯ ಈಗ ತುಂಬಿ ತುಳುಕುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದ ಈ ಜಲಾಶಯ ಕುಣಿಗಲ್ ಸನಿಹವಿದ್ದು, ತುಮಕೂರು ಜಿಲ್ಲೆಯ ಹೆಮ್ಮೆಯೆನಿಸಿದೆ. ತುಂಬಿ ಹರಿಯುತ್ತಿರುವ ಇದನ್ನು ನೋಡುವುದೇ ಒಂದು ಖುಷಿ. ದಿನಾಂಕ 03.11.2020 ರಂದು ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಾಗ, ಸೂರ್ಯ ಬಾನಂಗಳದಿಂದ ಮೋಡಗಳ ಹಿನ್ನೆಲೆಯಲ್ಲಿ ಮರೆಯಾಗುತ್ತಿದ್ದ. ಆಗಸದಲ್ಲಿ ಬಣ್ಣದ ಚಿತ್ತಾರಗಳು ಸೃಷ್ಟಿಯಾಗಿತ್ತು. ಮತ್ತೊಂದೆಡೆ ಧೋ ಎಂದು ನೀರು ಜಲಾಶಯದಿಂದ ಹೊರ ನುಗ್ಗುತ್ತಿತ್ತು. ಅದೇ ಹೊತ್ತಿನಲ್ಲಿ ಜಲಾಶಯದಲ್ಲಿ ಸುತ್ತಾಡಿದಾಗ, ಆ ಸೊಬಗು ಹೀಗಿತ್ತು...

ವಿಡಿಯೋ ವಿಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿ.








 

Tuesday 3 November 2020

Yedeyuru Temple 2020 (R S Iyer, R. Vishwanathan & V S Ramachandran)

ಎಡೆಯೂರು ದೇವಾಲಯದಲ್ಲಿ
*************************
ಶುಭ್ರ ಪರಿಸರ, ಅಚ್ಚುಕಟ್ಟುತನ, ಆಕರ್ಷಕ ದೀಪಾಲಂಕಾರ, ಮುಸ್ಸಂಜೆಯ ನಿಶ್ಯಬ್ದ ವಾತಾವರಣದಿಂದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ನಮ್ಮ ಮನಸ್ಸನ್ನು ಪ್ರಭಾವಿಸಿತು. ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾಗಿ ಪ್ರಸಿದ್ಧಿ ಪಡೆದಿರುವ ಎಡೆಯೂರು ದೇವಾಲಯವು, ಕುಣಿಗಲ್ ಸಮೀಪ ಹೆದ್ದಾರಿ ಬದಿ ಕಂಗೊಳಿಸುತ್ತಿದೆ. ಇಂದು (ದಿನಾಂಕ 03-11-2020, ಮಂಗಳವಾರ) ಮುಸ್ಸಂಜೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ಭೇಟಿ ಕೊಟ್ಟಿದ್ದೆವು.  Today evening we visited Yediyuru Sri Siddalingeshwara Swamy Temple, Yediyuru, Kunigal Taluk









 


Monday 26 October 2020

Devarayanadurga Hills 20-10-2020 ದೇವರಾಯನದುರ್ಗ ಬೆಟ್ಟ ( R S Iyer and R Vishwanathan)

ತುಮಕೂರು ಸನಿಹದ ದೇವರಾಯನದುರ್ಗ ಬೆಟ್ಟದ ಸೌಂದರ್ಯ ದಿನಾಂಕ 20-10-2020 ರಂದು ಸಂಜೆ ನಮಗೆ (ನಾನು ಮತ್ತು ಆರ್.ವಿಶ್ವನಾಥನ್ ಭೇಟಿ ಕೊಟ್ಟಾಗ) ಕಂಡಿದ್ದು ಹೀಗೆ..... Beauty of the Devarayanadurga Hills






 

Thursday 1 October 2020

Holakallu Palya Lake 01.10.2020





 



 

Guluru Ganapathi



 ಗೂಳೂರು ಗಣಪನ ನಿರ್ಮಾಣ ಕಾರ್ಯ…

*****************************


ಇತಿಹಾಸ ಪ್ರಸಿದ್ಧ “ಗೂಳೂರು ಗಣಪ” ಭರದಿಂದ ಸಿದ್ಧಗೊಳ್ಳುತ್ತಿದ್ದಾನೆ.


ಹತ್ತೂಮುಕ್ಕಾಲು ಅಡಿಗಳಷ್ಟು ಅಗಲ ಹಾಗೂ ಅಷ್ಟೇ ಅಡಿಗಳಷ್ಟು ಎತ್ತರದ “ಬೃಹತ್ ಗಣಪ”ನನ್ನು ರೂಪಿಸುವ ಕಾರ್ಯವು ತುಮಕೂರು ಹೊರವಲಯದ ಗೂಳೂರಿನ ಶ್ರೀ ಗಣಪತಿ ದೇಗುಲದಲ್ಲಿ ಶ್ರದ್ಧೆಯಿಂದ ಆರಂಭಗೊಂಡಿದೆ.


ಇಂದು (30-09-2020) ಸಂಜೆ ನಾನು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ಭೇಟಿ ಕೊಟ್ಟಾಗ, ಶಿಲ್ಪಿ ಶ್ರೀ ಗುರುಮೂರ್ತಿರವರು ಗಣಪನ ಹಸ್ತಗಳ ನಿರ್ಮಾಣ ಕಾರ್ಯದಲ್ಲಿ ಕುಶಲತೆಯಿಂದ ನಿರತರಾಗಿದ್ದರು. “ಕಳೆದ ಆರು ದಿನಗಳಿಂದ ಗಣಪನ ನಿರ್ಮಾಣವನ್ನು ಆರಂಭಿಸಲಾಗಿದೆ. ಅವನ ಕೃಪೆಯಿಂದ ಇವತ್ತಿಗೆ ಇಷ್ಟು ಸಾಧ್ಯವಾಗಿದೆ. ಪ್ರತಿದಿನವೂ ಈ ಕೆಲಸ ಮುಂದುವರೆಯುತ್ತದೆ. ನಮ್ಮ ತಂದೆಯವರ ಕಾಲದಿಂದಲೂ ಈ ಸೇವೆಯನ್ನು ನಡೆಸುತ್ತಿದ್ದೇವೆ. ಕಳೆದ 25 ವರ್ಷಗಳಿಂದ ನಾನು ಗಣಪನ ನಿರ್ಮಾಣ ಮಾಡುತ್ತಿದ್ದೇನೆ. ಇದೆಲ್ಲ ಆ ಗಣಪನ ಕೃಪೆ” ಎಂದು ಅವರು ನಮ್ರತೆಯಿಂದ ಪ್ರತಿಕ್ರಿಯಿಸಿದರು.


ತುಮಕೂರಿನ ಹೆಮ್ಮೆಯ ಈ “ಗೂಳೂರು ಗಣಪ” ಸಂಪೂರ್ಣವಾಗಿ ಸಿದ್ಧಗೊಳ್ಳಲು ಇನ್ನೂ ಒಂದೂವರೆ ತಿಂಗಳು ಆಗಲಿದೆ. ನವೆಂಬರ್ 14 ರ ದೀಪಾವಳಿಯಿಂದ “ಗೂಳೂರು ಗಣಪ”ನ ದರ್ಶನಭಾಗ್ಯ ಭಕ್ತಾದಿಗಳಿಗೆ ಲಭಿಸಲಿದೆ.


Historic “Guluru Ganapathi” is preparing by Shilpi Sri Gurumurthy at the temple of Guluru, Tumakuru Taluk. Today evening along with my father Sri V.S.Ramachandran I visited there. Festival starts from 14th November.



Friday 28 February 2020

ಸನ್ಮಾನ ಸಮಾರಂಭ- ದಿ.28-02-2020. ಶುಕ್ರವಾರ, Felicitation

ತುಮಕೂರಿನ ಕ್ಯಾತಸಂದ್ರದಲ್ಲಿ ಇಂದು (28-02-2020, ಶುಕ್ರವಾರ) ಬೆಳಗ್ಗೆ ಏರ್ಪಟ್ಟಿದ್ದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರ 78 ನೇ ಹುಟ್ಟುಹಬ್ಬ ಸಮಾರಂಭದಲ್ಲಿ ನನ್ನನ್ನು ತುಮಕೂರು ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಜಿ.ಜ್ಯೋತಿಗಣೇಶ್ ರವರು ಸನ್ಮಾನಿಸಿದರು.  ತುಮಕೂರಿನ ಪ್ರತಿಷ್ಠಿತ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪರಮೇಶ್, ಬಿಜೆಪಿ ಧುರೀಣರಾದ ಶ್ರೀ ಶಿವಪ್ರಸಾದ್, ಶ್ರೀ ರುದ್ರೇಶ್, ತುಮಕೂರು ಮಹಾನಗರ ಪಾಲಿಕೆ ಉಪಮೇಯರ್ ಶ್ರೀಮತಿ ಶಶಿಕಲಾ ಗಂಗಹನುಮಯ್ಯ, ಪಾಲಿಕೆಯ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು. ನನ್ನನ್ನು ಆಹ್ವಾನಿಸಿ, ಸನ್ಮಾನಕ್ಕೆ ಕಾರಣಕರ್ತರಾದ ಹಾಗೂ ಈ ಕಾರ್ಯಕ್ರಮ ಆಯೋಜಿಸಿದ್ದ "ಆಟೋ ಯಡಿಯೂರಪ್ಪ" ಎಂದೇ ಪ್ರಸಿದ್ಧರಾಗಿರುವ ಶ್ರೀ ಕೆ.ಎಂ.ಶಿವಕುಮಾರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.










Saturday 22 February 2020

with Justice Sri M N Venkatachalaiah, Former CJI, - R.S.Iyer and R.Vishwanathan ಸುಪ್ರಿಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ನ್ಯಾ. ಶ್ರೀ ಎಂ.ಎನ್.ವೆಂಕಟಾಚಲಯ್ಯರವರೊಂದಿಗೆ

With Former Chief Justice of Supreme Court of India Justice Sri M.N. Venkatachalaiah...ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯಲ್ಲಿ ದಿನಾಂಕ 26-04-2015, ಭಾನುವಾರ ಏರ್ಪಟ್ಟಿದ್ದ "ವಾತ್ಸಲ್ಯದ ಮಡಿಲಲ್ಲಿ" ಕೃತಿಯ ಲೋಕಾರ್ಪಣೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯನ್ಯಾಯಾಧೀಶರಾದ ಪದ್ಮವಿಭೂಷಣ ನ್ಯಾ.ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರನ್ನು ನಾನು ಮತ್ತು ವಿಶ್ವನಾಥನ್ .Vishwanathan R. Tumkur ಭೇಟಿಯಾದಾಗ.....(26-04-2015, ಭಾನುವಾರ) . (R S Iyer and R Vishwanathan)







with writer Sri Prabhuprasad, Mysore

***************************************************************************

2017 ರ ಮಾರ್ಚ್ ತಿಂಗಳಿನಲ್ಲಿ "ಡಿವಿಜಿ ನೆನಪು" ಮಾಸಿಕ  ಉಪನ್ಯಾಸವು 60 ನೇ ತಿಂಗಳು ಪೂರೈಸಿದ ನೆನಪಿಗಾಗಿ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಸರಸ್ ಫೌಂಡೇಷನ್ ವತಿಯಿಂದ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ  ಅವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದಾಗ ಅವರೊಂದಿಗೆ ನಾನು ಮತ್ತು ವಿಶ್ವನಾಥನ್ ಇರುವ ಚಿತ್ರಗಳು 








R.S.Iyer, Sriranjini, Justice Sri M.N.Venkatachalaiah, Smt Vidya Shivasathya, R.Vishwanathan

Wednesday 12 February 2020

with Sri Praveen Godkhindi, Eminent Classical Hindustani Flute Player. ಶ್ರೀ ಪ್ರವೀಣ್ ಗೋಡಖಿಂಡಿಯವರೊಂದಿಗೆ... 12-02-2020 (R S Iyer Tumkur)

ಅಂತರರಾಷ್ಟ್ರೀಯ ಖ್ಯಾತಿಯ ವೇಣುವಾದಕರಾದ ಶ್ರೀ ಪ್ರವೀಣ್ ಗೋಡಖಿಂಡಿಯವರನ್ನು ನೋಡುವ, ಅವರೊಡನೆ ಕೆಲ ನಿಮಿಷ ಮಾತನಾಡುವ ಹಾಗೂ ಅವರ ಕೊಳಲು ವಾದನದ ಇಂಚರವನ್ನಾಲಿಸುವ ಸದವಕಾಶ ಇಂದು (ದಿ.12-02-2020, ಬುಧವಾರ) ಸಂಜೆ ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂತು.
ನಮ್ಮ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಏರ್ಪಟ್ಟಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪ್ರವೀಣ್ ಗೋಡಖಿಂಡಿಯವರು ತಮ್ಮ ವೇಣುವಾದನದ ಧ್ವನಿಯಿಂದ ಸಭಾಂಗಣದಲ್ಲಿ ಅಕ್ಷರಶಃ ಮೋಡಿಯನ್ನೇ ಮಾಡಿಬಿಟ್ಟರು. ಬಳಿಕ ಮಾತನಾಡುತ್ತ, "ಬಾಲಿವುಡ್, ಟ್ಯಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ಗಳ ನಡುವೆ ನಮ್ಮ ಶಾಸ್ತ್ರೀಯ ಸಂಗೀತವನ್ನು ನಿರ್ಲಕ್ಷಿಸದೆ, ಆಸಕ್ತಿಯಿಂದ ಆಲಿಸಿ" ಎಂದು ವಿನಂತಿಸಿದಾಗ ಇಡೀ ಯುವ ಸಮೂಹ ಭಾರಿ ಕರತಾಡನದೊಂದಿಗೆ ಸಹಮತ ವ್ಯಕ್ತಪಡಿಸಿದ್ದು ರೋಮಾಂಚನವಾಗಿತ್ತು.
ಯುವ ಸಮೂಹದಲ್ಲಿ ಇಂತಹುದೊಂದು ಸದಭಿರುಚಿಯನ್ನು ಪ್ರೇರೇಪಿಸುವ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ ಶ್ರೀದೇವಿ ಮೆಡಿಕಲ್ ಕಾಲೇಜನ್ನು. ವಿಶೇಷವಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್ ರವರನ್ನು ಅಭಿನಂದಿಸಲೇಬೇಕು.
🙏

with Sri Praveen Godkhindi, Eminent Classical Hindustani Flute Player.. R S Iyer Tumkur and R Vishwanathan Tumkur

Sunday 19 January 2020

Durgadahalli 19-01-2020, Sunday, ದುರ್ಗದ ಹಳ್ಳಿ ಕೆರೆ

ದುರ್ಗದ ಹಳ್ಳಿಯ ಕೆರೆಯಂಗಳದಿಂದ ಸುಂದರ ಸೂರ್ಯಾಸ್ತವನ್ನು ನಾನು ಮತ್ತು ವಿಶ್ವನಾಥನ್ R. Vishwanathan Tumkur ವೀಕ್ಷಿಸುವಾಗ.... 19-01-2020, ಭಾನುವಾರ







Wednesday 15 January 2020

ಸಂಕ್ರಾಂತಿ "ಸುಗ್ಗಿ ಹಬ್ಬ" ತುಮಕೂರು Sankranthi Suggi Habba - 2020 R.S.Iyer and R.Vishwanathan

😊“ಸುಗ್ಗಿ ಹಬ್ಬ” ದಲ್ಲಿ ಭಾಗಿಯಾದ ಸಂತಸದ ಕ್ಷಣ..😊
-------------------------------------------------------
🔸ಗ್ರಾಮೀಣ ಸೊಗಡು ಕ್ರಮೇಣ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ತುಮಕೂರು ನಗರದ ಹೊರವಲಯದಲ್ಲಿ ಇಂದು “ಸಂಕ್ರಾಂತಿ” ಹಬ್ಬದಂದು (ದಿನಾಂಕ 15-01-2020, ಬುಧವಾರ) ಸಂಜೆ “ಸುಗ್ಗಿಹಬ್ಬ” ಸಂಭ್ರಮದಿಂದ ನಡೆದು ಮತ್ತೊಮ್ಮೆ ಗ್ರಾಮೀಣ ಸೊಗಡಿನ ಬೆಳಕನ್ನು ಪಸರಿಸಿತು.
🔸ತುಮಕೂರಿನ ಹನುಮಂತಪುರಕ್ಕೆ ಹೊಂದಿಕೊಂಡಿರುವ ಭಾಗ್ಯನಗರದಲ್ಲಿ (23 ನೇ ವಾರ್ಡ್) ನಡೆದ ಈ “ಸುಗ್ಗಿ ಹಬ್ಬ”ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸುವ ಸದವಕಾಶ ನನಗೆ ಮತ್ತು  ಸರಸ್ ಫೌಂಡೇಷನ್ ಅಧ್ಯಕ್ಷ ವಿಶ್ವನಾಥನ್ ಗೆ ಒದಗಿಬಂತು. ಇದಕ್ಕೆ ಕಾರಣೀಭೂತರಾದ ಈ ವಾರ್ಡ್ ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು ಮತ್ತು ಮಾಜಿ ಕಾರ್ಪೊರೇಟರ್ ಶ್ರೀ ಪ್ರೆಸ್ ರಾಜಣ್ಣರವರಿಗೆ ಕೃತಜ್ಞತೆಗಳು.🙏
🔸20 ಜೋಡಿ ಅಲಂಕೃತ ಎತ್ತುಗಳು ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದಿಂದ ಮೆರವಣಿಗೆಯಲ್ಲಿ ಭಾಗ್ಯನಗರಕ್ಕೆ ಬಂದವು. ಭಾಗ್ಯನಗರದ ರಾಮಮಂದಿರದ ಪಕ್ಕ “ಸುಗ್ಗಿಹಬ್ಬ”ದ “ರಾಶಿ ಪೂಜೆ”ಯನ್ನು ವ್ಯವಸ್ಥೆ ಮಾಡಲಾಗಿತ್ತು. ಹೂವಿನಿಂದ ವಿನ್ಯಾಸಗೊಳಿಸಿದ್ದ ದೊಡ್ಡ ರಂಗೋಲಿಯಲ್ಲಿ ಸಂಕ್ರಾಂತಿಯ ಸಂಕೇತಗಳಾದ ಕಬ್ಬು, ಸಿಹಿಗೆಣಸು, ಕಡಲೆಕಾಯಿ, ಅವರೆಕಾಯಿಯನ್ನು ಅಚ್ಚುಕಟ್ಟಾಗಿ ಜೋಡಿಸಿ ಆಕರ್ಷಕವಾಗಿ ಅಲಂಕೃತಗೊಳಿಸಲಾಗಿತ್ತು. ಅದರ ಹಿಂದೆ ಭತ್ತ ಮತ್ತು ರಾಗಿಯ ರಾಶಿಯನ್ನು ಹಾಕಲಾಗಿತ್ತು. ಇವೆಲ್ಲಕ್ಕೂ ಪೂಜೆ ಸಲ್ಲಿಸಲಾಯಿತು. ಬಳಿಕ ಎತ್ತುಗಳಿಗೆ ಬಹುಮಾನ ಘೋಷಿಸಲಾಯಿತು. ಪ್ರಥಮ ಬಹುಮಾನವಾಗಿ 5000 ರೂ., ದ್ವಿತೀಯ ಬಹುಮಾನವಾಗಿ 3000 ರೂ. ಹಾಗೂ ತೃತೀಯ ಬಹುಮಾನವಾಗಿ 2000 ರೂ.ಗಳನ್ನು ಎತ್ತುಗಳ ಪೋಷಕರಿಗೆ ವಿತರಿಸಲಾಯಿತು. ಎಲ್ಲ ಎತ್ತುಗಳ ಪೋಷಕರಿಗೂ ಪಾತ್ರೆಯನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು. ಬಂದವರಿಗೆಲ್ಲ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇಷ್ಟೆಲ್ಲದರ ವ್ಯವಸ್ಥೆ ಮಾಡಿದ್ದವರು ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು.
🔸 ಶ್ರೀ ನರಸಿಂಹಮೂರ್ತಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಿಗಳ ಸಮಾಜದ ಹಿರಿಯ ಮುಖಂಡರಾದ ಶ್ರೀ ಕುಂಭಯ್ಯ, 20 ನೇ ವಾರ್ಡ್ ಕಾರ್ಪೊರೇಟರ್ ಶ್ರೀ ಎ. ಶ್ರೀನಿವಾಸ್, ಮಾಜಿ ಕಾರ್ಪೊರೇಟರ್ ಶ್ರೀ ಪ್ರೆಸ್ ರಾಜಣ್ಣ, ತಿಗಳ ಸಮಾಜದ ಮುಖಂಡರುಗಳಾದ ಶ್ರೀ ಜಹಂಗೀರ್ ರವೀಶ್, ಶ್ರೀ ಎನ್.ಎಸ್.ಶಿವಣ್ಣ, ಯಜಮಾನರಾದ ಶ್ರೀ ಹನುಮಂತರಾಜು, ಶ್ರೀ ಟಿ.ಶ್ರೀನಿವಾಸ್, ಶ್ರೀ ಯತೀಶ್ ರವರು ಹಾಗೂ ನೂರಾರು ಗ್ರಾಮಸ್ಥರುಗಳು ಉಪಸ್ಥಿತರಿದ್ದರು. ಕಳೆದ 61 ವರ್ಷಗಳಿಂದ ಇಲ್ಲಿನ ರಾಮಮಂದಿರದಲ್ಲಿ ಸಂಕ್ರಾಂತಿಯಂದು ಭಜನಾದಿಗಳನ್ನು ಶ್ರೀ ಕುಂಭಯ್ಯರವರು ನಡೆಸಿಕೊಂಡು ಬಂದಿದ್ದರು. ಇದೀಗ ಕಳೆದ ಎರಡು ವರ್ಷಗಳಿಂದ ಅವರ ಪುತ್ರರಾದ ಕಾರ್ಪೊರೇಟರ್ ಶ್ರೀ ಟಿ.ಕೆ.ನರಸಿಂಹಮೂರ್ತಿರವರು ಈ ರೀತಿ “ಸುಗ್ಗಿ ಹಬ್ಬ”ವನ್ನು ಸಂಭ್ರಮದಿಂದ ವ್ಯವಸ್ಥೆ ಮಾಡುತ್ತಿದ್ದಾರೆಂಬುದು ಇಡೀ ನಮ್ಮ ತುಮಕೂರಿಗೆ ಅಭಿಮಾನದ ವಿಷಯವಾಗಿದೆ. 👍

-ಆರ್.ಎಸ್. ಅಯ್ಯರ್, ತುಮಕೂರು

R.S.Iyer and R.Vishwanathan participated in Suggi Habba-2020 at Hanumanthapura, Tumkur

R.S.Iyer and R.Vishwanathan participated in Suggihabba-2020, Tumakuru

R.S.Iyer inaugurated Suggi Habba


Leaders of Hanumanthapura Tumkur in Suggi Habba 2020


With Sri Press Rajanna, Ex Corporater, Tumkur

With Sri Press Rajanna, Ex Corporater & Sri Renuka, Press Photographer