* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 8 December 2023

with Dr. Naren Shetty, Eye Specialist ನೇತ್ರ ತಜ್ಞರಾದ ಡಾ.ನರೇನ್ ಶೆಟ್ಟಿ ಅವರೊಡನೆ 2023

ಬೆಂಗಳೂರಿನ ಪ್ರಖ್ಯಾತ “ನಾರಾಯಣ ನೇತ್ರಾಲಯ” ಸಮೂಹದ ಉಪಾಧ್ಯಕ್ಷರೂ, ನೇತ್ರ ತಜ್ಞರೂ ಆದ ಡಾ. ನರೇನ್ ಶೆಟ್ಟಿ ಅವರನ್ನು ಭೇಟಿಯಾಗಿ ಮಾತನಾಡುವ ಸುಸಂದರ್ಭ ಇಂದು (ದಿ. 07-12-2023, ಗುರುವಾರ) ನಮಗೊದಗಿತು.

“ನಮ್ಮ ತುಮಕೂರು” ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ “ನಾರಾಯಣ ದೇವಾಲಯ” ಎಂಬ ಕಣ್ಣಾಸ್ಪತ್ರೆ ಇದೆ. ಬಡವರಿಗೆ ಅಂದರೆ ಬಿ.ಪಿ.ಎಲ್. ಕಾರ್ಡುದಾರರಿಗೆ ಸಂಪೂರ್ಣ ಉಚಿತವಾಗಿ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಮಾಡುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯದ ಹಾಗೂ ನುರಿತ ನೇತ್ರತಜ್ಞರು, ಸಿಬ್ಬಂದಿಯುಳ್ಳ ಆಸ್ಪತ್ರೆಯಿದು.

“ನಾರಾಯಣ ನೇತ್ರಾಲಯ”ದ ರೂವಾರಿಗಳೂ, ಸುಪ್ರಸಿದ್ಧ ನೇತ್ರ ತಜ್ಞರೂ ಆಗಿದ್ದ ದಿವಂಗತ ಡಾ. ಭುಜಂಗ ಶೆಟ್ಟಿ ಅವರು ಸ್ಥಾಪಿಸಿರುವ ಈ ಆಸ್ಪತ್ರೆಯು, ಬಡಜನರಿಗೆ ನೆರವಾಗಬೇಕೆಂಬ ಅವರ ಕನಸಿನ ಕೂಸೂ ಹೌದು. ಈ ಆಸ್ಪತ್ರೆ ಸ್ಥಾಪಿತವಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ಮೊದಲ ವಾರ್ಷಿಕೋತ್ಸವ ಸಂಭ್ರಮ. ಈ ಪ್ರಯುಕ್ತ ದಿವಂಗತ ಡಾ.ಭುಜಂಗ ಶೆಟ್ಟಿ ಅವರ ಸುಪುತ್ರರಾದ ಡಾ. ನರೇನ್ ಶೆಟ್ಟಿ ಅವರು ಇಲ್ಲಿಗೆ ಆಗಮಿಸಿದ್ದರು. ಆಗ ಅವರನ್ನು ನಾನು ಮತ್ತು ವಿಶ್ವನಾಥನ್ ಭೇಟಿಯಾದೆವು. ಅವರ ವಿನಯಶೀಲ - ಸೌಜನ್ಯಪೂರ್ಣ ವ್ಯಕ್ತಿತ್ವ ಆಕರ್ಷಿಸಿತು. ಅವರ ತಂದೆಯವರನ್ನು ನೆನಪಿಸಿತು. ಕಣ್ಣಿನ ಆರೋಗ್ಯಕ್ಕೆ ಮಧುಮೇಹಿಗಳು ವಹಿಸಬೇಕಾದ ಎಚ್ಚರಿಕೆ, ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದ ಆಹಾರಕ್ರಮ-ಜೀವನಶೈಲಿ ಕುರಿತು ವಿವರಿಸಿದರು. ನಾವು ತುಮಕೂರಿನಲ್ಲಿ ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮದ ಬಗ್ಗೆ ತಿಳಿದು ಅಚ್ಚರಿಯೊಡನೆ ಸಂತಸ ವ್ಯಕ್ತಪಡಿಸಿದರು. ಡಾ. ನರೇನ್ ಶೆಟ್ಟಿಯವರ ಜೊತೆಗಿನ ಈ ಭೇಟಿ ಅಪಾರ ಸಂತಸ ಮೂಡಿಸಿತು. ಈ ಭೇಟಿಗೆ ಕಾರಣಕರ್ತರಾದ “ನಾರಾಯಣ ನೇತ್ರಾಲಯ”ದ ಸಾರ್ವಜನಿಕ ಸಂಪರ್ಕಾಧಿಕಾರಿಗಳೂ, ಆತ್ಮೀಯರೂ ಆದ ಶ್ರೀ ಮುಳುಕುಂಟೆ ಪ್ರಕಾಶ್ ಅವರೂ ಇದ್ದರು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 07-12-2023








Vimala Visit - 2023

Tuesday, 3 October 2023

Felicitation by Niveditha Sports Club- ನಿವೇದಿತಾ ಕ್ರೀಡಾ ಸಂಸ್ಥೆಯಿಂದ V S R ಸನ್ಮಾನ

ತುಮಕೂರಿನ ಅಗ್ರಹಾರದ ನಿವೇದಿತಾ ಕ್ರೀಡಾ ಸಂಸ್ಥೆಯ ಪ್ರಮುಖರುಗಳು ಇಂದು (ದಿ. 03-10-2023 ಮಂಗಳವಾರ) ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ಅವರನ್ನು ಅಕ್ಕರೆಯಿಂದ ಸನ್ಮಾನಿಸಿದರು.

 ಸಂಸ್ಥೆಯ ಅಧ್ಯಕ್ಷರೂ, ತಿಪಟೂರು ತಾಲ್ಲೂಕು ಬಿಳಿಗೆರೆ ಸರ್ಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯರೂ, ಹಾಲಿ ಬೆಂಗಳೂರಿನ ನಿವಾಸಿಗಳೂ ಆಗಿರುವ ಶ್ರೀ ಜಿ.ಕೆ.ಗುಂಡಣ್ಣರವರ ನೇತೃತ್ವದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳೂ, ನಿವೃತ್ತ ತಹಸೀಲ್ದಾರರೂ, ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರೂ ಆದ ಶ್ರೀ ಕೆ.ವಿ.ಕುಮಾರ್ ರವರು, ಸಂಸ್ಥೆಯ ಸಹಕಾರ್ಯದರ್ಶಿಗಳಾದ ನಿವೃತ್ತ ಎಸ್.ಬಿ.ಎಂ. ಉದ್ಯೋಗಿ ಶ್ರೀ ಎ.ಎಸ್.ಕೃಷ್ಣಮೂರ್ತಿ ರವರು, ಸಂಸ್ಥೆಯ ಖಜಾಂಚಿಗಳಾದ ವೈಶ್ಯ ಕೋ ಆಪರೇಟೀವ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಶ್ರೀ ಎಸ್.ಕೆ.ಶ್ರೀಧರ ಮೂರ್ತಿರವರು ಆಗಮಿಸಿ, ಈ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

ನಿವೇದಿತಾ ಕ್ರೀಡಾ ಸಂಸ್ಥೆ 1975 ರಲ್ಲಿ ಅಗ್ರಹಾರದಲ್ಲಿ ಶ್ರೀ ಗುಂಡಣ್ಣನವರು ಮತ್ತು ಇತರ ಆ ಕಾಲದ ಅವರ ತರುಣ ಮಿತ್ರರ ನೇತೃತ್ವದಲ್ಲಿ ಪ್ರಾರಂಭವಾಯಿತು. ಕ್ರೀಡಾ ಚಟುವಟಿಕೆಗಳ ಜೊತೆಗೆ ಪ್ರತಿ ವರ್ಷ ಅಗ್ರಹಾರದಲ್ಲಿ ಗಣಪತಿ ಉತ್ಸವ ಆಚರಿಸಲಾರಂಭಿಸಿದರು. ಅದೇ ಹೊತ್ತಿಗೆ ಬಹುತೇಕ ಆ ಎಲ್ಲ ತರುಣರು ಉದ್ಯೋಗಸ್ಥರಾಗಿ ವಿವಿಧೆಡೆ ಚದುರಿದರು. ಆದರೂ ವರ್ಷಕ್ಕೊಮ್ಮೆ ಗಣೇಶೋತ್ಸವವನ್ನು ತಪ್ಪದೆ ಆಚರಿಸುತ್ತ, ಸತತ 21 ವರ್ಷಗಳ ಕಾಲ ಗಣೇಶೋತ್ಸವ ನೆರವೇರಿಸಿದರು. ಇದು ಆ ಕಾಲದಲ್ಲಿ ಬಹು ಪ್ರಸಿದ್ಧಿ ಪಡೆದಿತ್ತು. ಆ ಬಳಿಕ 1999 ರಿಂದ ನಿರಂತರವಾಗಿ ವರ್ಷಕ್ಕೊಮ್ಮೆ ಗಣಪತಿ ಹೋಮ ಏರ್ಪಡಿಸುತ್ತಿದ್ದಾರೆ. ಆ ಮೂಲಕ  ಆಗಿನ ಎಲ್ಲ ಹಳೆಯ ಮಿತ್ರರು ಮತ್ತು ಕುಟುಂಬ ವರ್ಗದವರು ಒಂದೆಡೆ ಸೇರುವಂತೆ ಮಾಡುತ್ತಿದ್ದಾರೆ. ಈ ವರ್ಷ (ದಿ. 29-10-2023) ಕೊರಟಗೆರೆ ರಸ್ತೆಯಲ್ಲಿರುವ ಗೊಲ್ಲಹಳ್ಳಿಯ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಗಣಪತಿ ಹೋಮ ಆಯೋಜಿಸಿದ್ದಾರೆ. ಇದರ ಜೊತೆ-ಜೊತೆಯಲ್ಲೇ ತುಮಕೂರಿನಲ್ಲಿ ವಾಸವಿರುವ ಸಮುದಾಯದ ಅತ್ಯಂತ ಹಿರಿಯ ವಯಸ್ಸಿನವರನ್ನು ಅವರ ಮನೆಗೇ ತೆರಳಿ ಗೌರವಿಸುವ ಸತ್ಸಂಪ್ರದಾಯವನ್ನು ಶ್ರೀ ಜಿ.ಕೆ.ಗುಂಡಣ್ಣನವರು ಆರಂಭಿಸಿದ್ದು, ಅದರ ಭಾಗವಾಗಿ ಇಂದು ನಮ್ಮ ಮನೆಗೆ ಆಗಮಿಸಿದ್ದರು.

 ಶ್ರೀ ಗುಂಡಣ್ಣನವರು ಮತ್ತು ಮಿತ್ರ ವೃಂದದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ದೇವರು ಅವರೆಲ್ಲರಿಗೂ ಒಳಿತನ್ನುಂಟುಮಾಡಲಿ ಎಂದು ಹಾರೈಸುತ್ತೇವೆ.

 -ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2023    








 






Thursday, 28 September 2023

M S Suhas Visit - 28-09-2023- ಎಂ.ಎಸ್. ಸುಹಾಸ್ ಭೇಟಿ

ನಮ್ಮ ಸಹೋದರಿ ದಿ|| ಶ್ರೀಮತಿ ಆರ್.ಮಹಾಲಕ್ಷ್ಮೀ ಶ್ರೀಧರ್ ರವರ ಪುತ್ರ ಎಂ.ಎಸ್. ಸುಹಾಸ್ ಮತ್ತು ಆತನ ಧರ್ಮಪತ್ನಿ ಶ್ರೀಮತಿ ಸುಭಾಷಿಣಿ ರವರು ಇಂದು (ದಿ. 28-09-2023) ಬೆಳಗ್ಗೆ ಬೆಂಗಳೂರಿನಿಂದ ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (94)ರವರ ಆಶೀರ್ವಾದ ಪಡೆದುಕೊಂಡರು. ತಾತ ಮತ್ತು ಮೊಮ್ಮಗನ ಈ ಭೇಟಿ ಉಭಯತ್ರರಲ್ಲೂ ಅಪಾರ ಸಂತೋಷ ಮೂಡಿಸಿತು.








****************************************************************************

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರೊಡನೆ ಇಂದು (22-09-2023) ಬೆಂಗಳೂರಿನಿಂದ ಆಗಮಿಸಿದ್ದ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್....









Wednesday, 20 September 2023

ಸಾಲಿಗ್ರಾಮ ಹಸ್ತಾಂತರ - ದಿ. 20-09-2023 Saligrama

 ನಮ್ಮ ಮನೆಯಲ್ಲಿ ಪಾರಂಪರಿಕವಾಗಿ ಪೂಜಿಸಲ್ಪಡುತ್ತಿದ್ದ ಸಾಲಿಗ್ರಾಮಗಳನ್ನು ಇಂದು (ದಿ.20-09-2023, ಬುಧವಾರ) ಬೆಳಗ್ಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಅನಿವಾರ್ಯ ಕಾರಣಗಳಿಂದ ನಮ್ಮ ತುಮಕೂರಿನ ಆಚಾರ್ಯರ ಬೀದಿ ನಿವಾಸಿಗಳೂ, ಕುಟುಂಬ ಸ್ನೇಹಿತರೂ ಆಗಿದ್ದ ದಿ|| ಶ್ರೀ ಶಾಮಾಚಾರ್ ಕುಟುಂಬ ವರ್ಗಕ್ಕೆ ಸೇರಿದ ಶ್ರೀ ಗುರುಪ್ರಸಾದ್ ರವರಿಗೆ ಹಸ್ತಾಂತರಿಸಿದರು. ಅದನ್ನು ಅವರು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಸ್ವೀಕರಿಸಿ, ಪ್ರತಿನಿತ್ಯ ತಮ್ಮ ಮನೆಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದಾಗಿ ಕೃತಜ್ಞತೆಯಿಂದ ತಿಳಿಸಿದರು. ಅವರ ಮಿತ್ರ ಶ್ರೀ ಪ್ರವೀಣ್, ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

ನಮ್ಮ ತಂದೆಯವರ ತಂದೆ ಶ್ರೀ ವಿ.ಎಸ್.ರಾಮಯ್ಯರ್ (ಇವರು ಆಗಿನ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಅದಕ್ಕೂ ಮೊದಲು 2 ನೇ ಮಹಾಯುದ್ಧದಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸಿದ್ದರಂತೆ) ಕೇರಳದ ಪಾಲಕ್ಕಾಡ್ ಊರಿನವರು. ಆ ಕಾಲದಲ್ಲಿ ದಿನವೂ ಮನೆಗೆ ಪುರೋಹಿತರು ಬಂದು ಈ ಸಾಲಿಗ್ರಾಮಗಳನ್ನು ಪೂಜಿಸುತ್ತಿದ್ದರಂತೆ. ಈ ಸಾಲಿಗ್ರಾಮಗಳು ಅವರ ಹಿಂದಿನವರಿಂದ ಬಂದಿದ್ದಂತೆ. ತಾತ ರಾಮಯ್ಯರ್ ಅವರು ರೈಲ್ವೆ ವೃತ್ತಿ ಸಂಬಂಧ ವಿವಿಧೆಡೆ ವರ್ಗಾವಣೆಯಾಗುತ್ತ ಕೊನೆಗೆ ತುಮಕೂರಿಗೆ ಬಂದು ನಿವೃತ್ತರಾಗಿದ್ದರು. ಆಗೆಲ್ಲ ಅವರೇ ಪೂಜಿಸುತ್ತಿದ್ದರಂತೆ. ಅವರ ಬಳಿಕ ನಮ್ಮ ತಂದೆಯವರು ಇದನ್ನು ದಶಕಗಳ ಕಾಲದಿಂದ ಪೂಜಿಸುತ್ತಿದ್ದರು. ತೀರಾ ಇತ್ತೀಚಿನವರೆಗೂ ದಿನವೂ ಪೂಜೆ ಮಾಡುತ್ತಲೇ ಇದ್ದರು. ಆದರೆ ಇತ್ತೀಚೆಗೆ ಆರೋಗ್ಯದ ಕಾರಣದಿಂದ ಅವರಿಂದ ಪೂಜಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುವವರಿಗೆ ಇದನ್ನು ಹಸ್ತಾಂತರಿಸಬೇಕೆಂಬ ಆಶಯ ನಮ್ಮೆಲ್ಲರಲ್ಲೂ ಇತ್ತು. ಅತ್ತ ಗುರುಪ್ರಸಾದ್ ರವರೂ ಸಾಲಿಗ್ರಾಮಕ್ಕಾಗಿ ಹುಡುಕಾಟ ನಡೆಸಿದ್ದು, ಅವರಿಗೆ ಈ ಮಾಹಿತಿ ದೊರೆತೊಡನೆ ಇಂದು ನಮ್ಮ ಮನೆಗೆ ಆಗಮಿಸಿ ಭಕ್ತಿಯಿಂದ ಸ್ವೀಕರಿಸಿದರು. ಉಭಯತ್ರರಿಗೂ ಸಮಾಧಾನ, ಸಂತೋಷ ಆಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-09-2023













Monday, 18 September 2023

Ganesha Chaturthi-2023 ಗಣೇಶನ ಹಬ್ಬ ಆಚರಣೆ ದಿ. 18-09-2023

 ಶ್ರೀ ಶೋಭಕೃತ ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 18-09-2023, ಸೋಮವಾರ) ನಮ್ಮ ಮನೆಯಲ್ಲಿ ಪ್ರತಿವರ್ಷದಂತೆ “ಶ್ರೀ ಗಣೇಶ ಚತುರ್ಥಿ”ಯನ್ನು ಆಚರಿಸಿದೆವು. ಮಣ್ಣಿನ ಗಣಪ ಮತ್ತು ಗೌರಿ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಮಿಸಿದೆವು. “ಲೋಕಾಃ ಸಮಸ್ತಾಃ ಸುಖಿನೋ ಭವಂತು”, “ಸರ್ವೇ ಜನಾಃ ಸುಖಿನೋ ಭವಂತು” ಎಂದು ಪ್ರಾರ್ಥಿಸಿದೆವು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಮಂಗಳಾರತಿ ನೆರವೇರಿಸಿದರು. ಹೀಗೆ 2023 ರ “ಗಣಪತಿ ಹಬ್ಬ” ನೆರವೇರಿ, ನೆಮ್ಮದಿ ಮೂಡಿಸಿತು. Ganesha Chaturthi-2023

-ಆರ್.ಎಸ್. ಅಯ್ಯರ್, ತುಮಕೂರು














Wednesday, 13 September 2023

Vidyashankara Temple and surroundings 11-09-2023 ವಿದ್ಯಾಶಂಖರ ದೇಗುಲ ಮತ್ತು ಸುತ್ತಮುತ್ತ

ಬಹುದಿನಗಳ ಬಳಿಕ ನಮ್ಮ ನೆಚ್ಚಿನ ತಾಣ, ತುಮಕೂರು ಸನಿಹದ ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿಯಲ್ಲಿರುವ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ದಿ. 11-09-2023 ರಂದು ಭೇಟಿ..... After a long time, today ( 11-09-2023) evening we visited Sri Vidyashankara Temple @ Devarayanadurga Forest, near to Tumakuru.



R S Iyer Tumkur & R Vishwanathan Tumkur
 





Temple priest Sri Vijayakumar 











                                                     *************************

ದೇವರಾಯನದುರ್ಗ ಅರಣ್ಯದ ನಡುವಿನ ದುರ್ಗದ ಹಳ್ಳಿ ಬಳಿಯಿರುವ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ಹೊಂದಿಕೊಂಡಂತೆ ಪ್ರಸಾದ ವಿತರಣೆಗೆ ಅನುಕೂಲವಾಗುವ ಷೆಲ್ಟರ್ ಒಂದು ನಿರ್ಮಾಣವಾಗುತ್ತಿದೆ. ಮುಜರಾಯಿ ಇಲಾಖೆಯ ವತಿಯಿಂದ ಈ ಉದ್ದೇಶಕ್ಕಾಗಿ 10 ಲಕ್ಷ ರೂ. ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರು ಇತ್ತೀಚೆಗೆ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ಅವಧಿಯಲ್ಲಿ ಈ ಷೆಲ್ಟರ್ ನಿರ್ಮಾಣಕ್ಕೆ ಹಣ ಮಂಜೂರು ಮಾಢಿದ್ದಾರೆಂದು ಹೇಳಲಾಗುತ್ತಿದೆ. ಅರಣ್ಯದ ನಡುವಿನ ನಿರ್ಜನ ಪ್ರದೇಶದಲ್ಲಿರುವ ಈ ದೇಗುಲಕ್ಕೆ ಇಂತಹುದೊಂದು ಸೌಲಭ್ಯದ ಅವಶ್ಯಕತೆ ಇತ್ತು. ಇದರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.



                                                 ******************************

Sri Vidyashankara Temple Surroundings....


R S Iyer Tumkur & R Vishwanathan Tumkur













***************************