Friday, 28 October 2016
R S Iyer with H.H. Swarnavalli Sri.... ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ
Wednesday, 26 October 2016
R.S.Iyer with Prof. Baraguru Ramachandrappa
-------------------------------------------------------
"ಎಲ್ಲಿ, ನೀವು ಕಾಣಿಸುತ್ತಿಲ್ಲವಲ್ಲ" ಎಂದು ಅವರು ಹೇಳಿದಾಗ ನಾನು ಸಹಜವಾಗಿ "ಇದ್ದೇನಲ್ಲ" ಎಂದೆ. ಅದಕ್ಕವರು "ಪತ್ರಿಕೆಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗ ಮತ್ತೆ ನಾನು "ಪತ್ರಿಕೆಯಲ್ಲೇ ಇದ್ದೇನಲ್ಲ..." ಎನ್ನುವಷ್ಟರಲ್ಲೇ ಅವರು ಮಧ್ಯೆಪ್ರವೇಶಿಸಿ "ವಾಚಕರ ವಾಣಿಯಲ್ಲಿ ಕಾಣಿಸುತ್ತಿಲ್ಲವಲ್ಲ" ಎಂದಾಗಲೇ ನನಗೆ ಅವರು ಏನು ಹೇಳಲು ಹೊರಟಿದ್ದಾರೆಂಬುದು ಅರ್ಥವಾದದ್ದು!! -- ಇದು ಇಂದು (26-10-2016, ಬುಧವಾರ) ಬೆಳಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರನ್ನು ನಾನು ಭೇಟಿ ಆದ ತಕ್ಷಣ ನಡೆದ ಸಂಭಾಷಣೆ. ದಶಕದ ಹಿಂದೆ ತುಮಕೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಅವರು ಬಂದ ಸಂದರ್ಭದಿಂದಲೂ ಅವರು ಪರಿಚಿತರು. "ಪ್ರಜಾವಾಣಿ"ಯ ವಾಚಕರ ವಾಣಿಯಲ್ಲಿ ನಾನು ಬರೆಯುತ್ತಿದ್ದ ರಾಜಕೀಯ/ಸಾಂಸ್ಕೃತಿಕ ಸಂಗತಿ ಕುರಿತ ಪತ್ರವನ್ನು ಗಮನಿಸುತ್ತಿದ್ದ ಅವರು, ತುಮಕೂರಿನಲ್ಲಿ ಭೇಟಿ ಆದಾಗಲೆಲ್ಲ "ಪತ್ರ ಓದಿದೆ" ಎನ್ನುತ್ತಿದ್ದರು. ಕಾರಣಾಂತರಗಳಿಂದ ಇತ್ತೀಚೆಗೆ ನಾನು ಬರೆಯುತ್ತಿಲ್ಲ. ಅದನ್ನೂ ಅವರು ಗಮನಿಸಿದ್ದು ಇಂದು ಹೀಗೆ ಪ್ರತಿಕ್ರಿಯಿಸಿದರು. ಅವರ ವಿಶ್ವಾಸ ಸಂತೋಷವನ್ನುಂಟುಮಾಡಿತು. ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಅವರನ್ನು ಅಭಿನಂದಿಸಿದಾಗ ಮನಸಾರೆ ಮುಗುಳ್ನಕ್ಕರು. (ಆ ಕ್ಷಣಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಶ್ರೀ ತ್ರಿಯಂಬಕ ಅವರಿಗೆ ಕೃತಜ್ಞತೆಗಳು)
Monday, 24 October 2016
R S Iyer with Dr.Khader
Tuesday, 20 September 2016
R S Iyer with Padmashree Girish Kasaravalli
wirh Padmashree awardee, International famous film maker Sri Girish Kasaravalli at Tumakuru University today (20-09-2016).
R S Iyer with Sri Gururaja Karajagi
Today (19-09-2016) I met international famous educationist Dr.Gururaja Karajagi in Govt school function @ Honasigere Village, Tumakuru Taluk.
Saturday, 17 September 2016
Alasettykere Anthima Yathre 05-06-2002 ಅಳಸೆಟ್ಟಿಕೆರೆ ಅಂತಿಮಯಾತ್ರೆ-
ಅಗಲಿದ ಕೆರೆಗೆ ಹೀಗೊಂದು ಅಂತಿಮ ನಮನ....
**************************************
ಇದು 2002 ರ ಸಂಗ್ರಹ
ಚಿತ್ರ. ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಈಗಿರುವ ಹೇಮಾವತಿ ಕಛೇರಿ ಒಳಗೊಂಡು ಹಿಂಬದಿಯ ಪ್ರದೇಶ
"ಅಳಸೆಟ್ಟಿಕೆರೆ" ಆಗಿತ್ತು. ಆ ಕೆರೆ ಅಂಗಳ ವಿವಿಧೋದ್ದೇಶಗಳಿಗೆ ವಿಂಗಡಣೆಗೊಂಡಿತು. ಆ
ಮೂಲಕ ಆ ಕೆರೆ ಇನ್ನಿಲ್ಲವಾಯಿತು. ಆ ವರ್ಷದ ವಿಶ್ವಪರಿಸರ ದಿನಾಚರಣೆಯನ್ನು ವನ್ಯಜೀವಿ ಜಾಗೃತಿ ನಿಸರ್ಗ
ಸಂಸ್ಥೆಯ ಮುಖ್ಯಸ್ಥ ಶ್ರೀ ಟಿ.ವಿ.ಎನ್.ಮೂರ್ತಿ ಅವರು ಈ ಕೆರೆಗೆ ಅರ್ಪಿಸಿ, ವಿಶಿಷ್ಟ ರೀತಿಯ
ಪ್ರತಿಭಟನಾ ಕಾರ್ಯಕ್ರಮ ರೂಪಿಸಿದ್ದರು. ಅಂದು (05-06-2002) ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ "ಅಳಸೆಟ್ಟಿಕೆರೆಯ ಶವಯಾತ್ರೆ" ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ಹೊರಟು ಕುಣಿಗಲ್ ರಸ್ತೆಯ ಹೇಮಾವತಿ
ಕಛೇರಿ ಪಕ್ಕ ಅದನ್ನು ಹೂತು, ಅಲ್ಲೊಂದು ಕಲ್ಲು ನೆಡಲಾಯಿತು. ಆ ಮೂಲಕ ಅಳಸೆಟ್ಟಿಕೆರೆಗೆ ಅಂತಿಮ ನಮನ
ಸಲ್ಲಿಸಲಾಯಿತು. ಆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಂದು ಸರ್ವಶ್ರೀ ಟಿ.ವಿ.ಎನ್.ಮೂರ್ತಿ, ಬಿ.ವಿ. ಗುಂಡಪ್ಪ,
ಸಿ.ಯತಿರಾಜು, ಚಂದ್ರಶೇಖರ ಉಪಾಧ್ಯಾಯ, ನವೀನ್, ನರಸಿಂಹರಾಜು, ಮುರಳಿಕೃಷ್ಣ, ಅಮೀನ್ ಅಹಮದ್, ಸುರೇಶ್ ಅಗ್ರಹಾರ ಮತ್ತಿತರ ಪರಿಸರಾಸಕ್ತರು ಭಾಗಿಯಾಗಿದ್ದರು. ನಾನೂ ( R. S. Iyer ) ಸಹಾ ಪಾಲ್ಗೊಂಡಿದ್ದೆ.
Thursday, 15 September 2016
Thursday, 25 August 2016
Tuesday, 23 August 2016
With Sri M ( Mumtaz Ali Khan ) @ Tumakuru - 2015 - R.S.Iyer and R.Vishwanathan - ಶ್ರೀ ಎಂ (ಮುಮ್ತಾಜ್ ಅಲಿ ಖಾನ್ ) ಅವರೊಂದಿಗೆ
R.Vishwanathan and Sri M