ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 29-05-2024) ಬೆಳಗ್ಗೆ ಬೆಂಗಳೂರಿನಿಂದ ಹೆಚ್.ಎಸ್.ಪವನ್ ತನ್ನ ಗೆಳೆಯರೊಬ್ಬರ ಬೈಕ್ ನಲ್ಲಿ ತುಮಕೂರಿನ ನಮ್ಮ ಮನೆಗೆ ಬಂದಿದ್ದ. ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಮತ್ತು ಶ್ರೀ ಹೆಚ್.ಎಸ್.ಸತ್ಯನಾರಾಯಣ ದಂಪತಿಯ ಪುತ್ರನಾದ ಪವನ್ ಈಗ ಅಂತಿಮ ಪದವಿ ವಿದ್ಯಾರ್ಥಿ. ಬೈಕ್, ಕಾರನ್ನು ಲೀಲಾಜಾಲವಾಗಿ ಚಾಲನೆ ಮಾಡುವ ಚಾಕಚಕ್ಯತೆ ಇವನಿಗೆ ಕರಗತ. ಹೀಗಾಗಿ ಗೆಳೆಯನ ಬೈಕ್ ನಲ್ಲೇ ಬಂದಿದ್ದ. ಒಂದಿಷ್ಟು ಹೊತ್ತು ನಮ್ಮ ಮನೆಯಲ್ಲಿದ್ದು, ತನ್ನ ತಾತನ ಆಶೀರ್ವಾದ ಪಡೆದುಕೊಂಡ. ಬಳಿಕ ಶೆಟ್ಟಿಹಳ್ಳಿ ಶ್ರೀ ಆಂಜನೇಯ ದೇವಾಲಯ, ಮಾರ್ಕೆಟ್ ವೃತ್ತದ ಶ್ರೀ ಕೋಟೆ ಆಂಜನೇಯ ಸ್ವಾಮಿ ಪ್ರತಿಮೆ ಇತ್ಯಾದಿ ವೀಕ್ಷಿಸುವ ಮೂಲಕ ತುಮಕೂರು ನಗರವನ್ನು ಒಂದು ಸುತ್ತು ಹಾಕಿದ. ಮಧ್ಯಾಹ್ನದ ಭೋಜನ ಮುಗಿಸಿ ಬೆಂಗಳೂರಿಗೆ ನಿರ್ಗಮಿಸಿದ. ಮುಂದಿನ ಎರಡು ಗಂಟೆಗಳೊಳಗೆ ಸುರಕ್ಷಿತವಾಗಿ ಮನೆ ಸೇರಿದ್ದ. ಪರಸ್ಪರ ಭೇಟಿಯ ಸಂತಸವನ್ನು ಬಣ್ಣಿಸಲಾದೀತೇ?
ಹಸವ
gss
Wednesday, 29 May 2024
Friday, 24 May 2024
Dubai Relatives.... ದುಬೈ ಬಂಧುಗಳು ಬಂಧಾಗ... 24-05-2024
ದುಬೈ ಬಂಧುಗಳು ಬಂದಾಗ....
--------------------------
Sunday, 12 May 2024
Shankara Jayanthi - 12-05-2024 -VSR- ಶ್ರೀ ಶಂಕರ ಜಯಂತಿ ಆಚರಣೆ
ಪ್ರತಿ ವರ್ಷದಂತೆ ಈ ವರ್ಷವೂ- ಇಂದು ದಿನಾಂಕ 12-05-2024, ಭಾನುವಾರ- ನಮ್ಮ ಮನೆಯಲ್ಲೇ ಶ್ರೀ ಶಂಕರ ಜಯಂತಿಯನ್ನು ಆಚರಿಸಿದೆವು. ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷಗಳು)ರವರು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅವರಿಗೆ ನಾನು ಮತ್ತು ವಿಶ್ವನಾಥನ್ ಸಹಕಾರ ನೀಡಿದೆವು. ಇತ್ತೀಚೆಗಷ್ಟೇ ರಾಮಚಂದ್ರನ್ ರವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮನೆಗೆ ಮರಳಿ ಚೇತರಿಸಿಕೊಳ್ಳುತ್ತಿದ್ದಾರೆ.
with Krishna 06-05-2024 ( Vivek Family Function)
ತುಮಕೂರಿನ ಬಟವಾಡಿಯ ರಾಯಲ್ ಕನ್ವೆನ್ ಷನ್ ಹಾಲ್ ನಲ್ಲಿ ಇಂದು (ದಿ. 06-05-2024, ಸೋಮವಾರ) ನಡೆದ ವಿ.ವಿವೇಕ್ ಕುಟುಂಬದ ಕೌಟುಂಬಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮುದ್ದು "ಕೃಷ್ಣ"ನ ಜೊತೆಯಲ್ಲಿ ಸಂತಸದ ಕ್ಷಣಗಳು....
ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 06-05-2024, ಸೋಮವಾರ) ಬೆಂಗಳೂರಿನಿಂದ ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಶಿವಸತ್ಯ ತನ್ನ ಮಗಳಾದ ಕು. ಶ್ರೀರಂಜಿನಿ (ಸಾಫ್ಟ್ ವೇರ್ ಇಂಜಿನಿಯರ್) ಜೊತೆಯಲ್ಲಿ ನಮ್ಮ ಮನೆಗೆ ಆಗಮಿಸಿದ್ದ ಸಂತಸದ ಸಮಯ.....
Monday, 29 April 2024
VSR in Auto- 29-04-2024 ಆಟೋದಲ್ಲಿ ವಿ.ಎಸ್.ಆರ್. ಪ್ರಯಾಣ
ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ಅವರ ಕೋರಿಕೆ ಮೇರೆಗೆ ಇಂದು (ದಿ. 29-04-2024) ಮುಸ್ಸಂಜೆ ಮಿತ್ರರಾದ ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಅವರ ಆಟೋದಲ್ಲಿ "ನಗರ ಸಂಚಾರ" ಮಾಡಿಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ಅವರಿಗೆ ಹೊರಗಡೆ ಹೋಗಲಾಗಿಲ್ಲ. ಅಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಗುಣಮುಖರಾಗಿದ್ದಾರೆ. ಹೀಗಾಗಿ ಮನೆಯೊಳಗೇ ಇದ್ದ ಅವರನ್ನು ಬದಲಾವಣೆಯಿರಲೆಂದು ಇಂದು ನಾನು ಮತ್ತು ವಿಶ್ವನಾಥನ್ ಜೊತೆಯಾಗಿ ಕರೆದೊಯ್ದೆವು.
Sunday, 28 April 2024
Shettyhalli Rathothsava 2024 ಶೆಟ್ಟಿಹಳ್ಳಿ ರಥೋತ್ಸವ-ತುಮಕೂರು
Saturday, 20 April 2024
Pavagada Prakash Rao and Mallepuram G Venkatesh ಪಾವಗಡ ಪ್ರಕಾಶರಾವ್ ಮತ್ತು ಮಲ್ಲೇಪುರಂ ಜಿ.ವೆಂಕಟೇಶ್ ರವರೊಡನೆ
ನಾಡಿನ ಇಬ್ಬರು ಹಿರಿಯ ಹಾಗೂ ಖ್ಯಾತ ವಿದ್ವಾಂಸರನ್ನು "ನಮ್ಮ ತುಮಕೂರು" ನಗರದಲ್ಲೇ ಭೇಟಿ ಮಾಡುವ ಸುಯೋಗ ಇಂದು (ದಿ.20-04-2024) ನನಗೆ ಮತ್ತು ವಿಶ್ವನಾಥನ್ ಗೆ ಲಭ್ಯವಾಯಿತು. "ನಡೆದಾಡುವ ವಿಶ್ವಕೋಶ"ವೆಂದೇ ಖ್ಯಾತರಾಗಿರುವ ವಾಗ್ಮಿ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಚಿಂತಕರೂ ಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರನ್ನು ಮಾತನಾಡಿಸುವ ಸದವಕಾಶ ಒದಗಿತು. ನಾವು ನಮ್ಮ ಸರಸ್ ಸಂಸ್ಥೆ ವತಿಯಿಂದ ತುಮಕೂರಿನಲ್ಲಿ ನಡೆಸುವ "ಡಿವಿಜಿ ನೆನಪು" ಉಪನ್ಯಾಸ ಕಾರ್ಯಕ್ರಮ ಕುರಿತು ಈರ್ವರೂ ವಿದ್ವಾಂಸರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.




































