* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 18 October 2018

R S iyer, R Vishwanathan with Sringeri Srigalu , Tiptur 2010 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸನ್ನಿಧಿ (ತಿಪಟೂರು)

ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರು ತಿಪಟೂರು ನಗರಕ್ಕೆ ಆಗಮಿಸಿದ್ದಾಗ...

ಶೃಂಗೇರಿ ಜಗದ್ಗುರುಗಳ ದರ್ಶನ ಮಾಡುವ ಮತ್ತೊಂದು ಸುಯೋಗ ದಿನಾಂಕ 05-03-2010 ರಂದು ಮತ್ತೆ ನಮಗೊದಗಿತು. ಜಗದ್ಗುರುಗಳು ಆಗ ತಿಪಟೂರಿಗೆ ದಯಮಾಡಿಸಿದ್ದರು. ತಿಪಟೂರಿನ ಶಾಸಕರಾದ ಶ್ರೀ ಬಿ.ಸಿ.ನಾಗೇಶ್ ರವರ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಸಮೀಪದ ಶ್ರೀ ಶಂಕರ ಮಠದಲ್ಲಿ ದೈನಂದಿನ ಕಾರ್ಯಕ್ರಮ ನಡೆಯುತ್ತಿತ್ತು. ಇಲ್ಲಿಗೂ ನಮ್ಮ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಆಹ್ವಾನಿತರಾಗಿದ್ದು, ಆ ದಿನ ಸಂಜೆ ಜಗದ್ಗುರುಗಳ ಸನ್ನಿಧಿಯಲ್ಲಿ ಉಪನ್ಯಾಸ ಮಾಡುವವರಿದ್ದರು.ನಾವೂ ಅವರ ಜೊತೆ ತಿಪಟೂರಿಗೆ ತೆರಳಿದೆವು.
ತಿಪಟೂರಿನಲ್ಲಿ ಅಂದು ಸಂಜೆ ಜಗದ್ಗುರುಗಳು ವಾಸ್ತವ್ಯವಿದ್ದ ಸ್ಥಳಕ್ಕೇ ಮೊದಲು ನಾವು ಭೇಟಿ ಕೊಟ್ಟೆವು. ಜಗದ್ಗುರುಗಳು ಮಂದಸ್ಮಿತರಾಗಿ ತಮ್ಮ ಪೀಠದಲ್ಲಿ ಆಸೀನರಾಗಿದ್ದರು. ಜಗದ್ಗುರುಗಳ ಆ ಸರಳತೆ ನಮ್ಮನ್ನು ಬೆರಗುಗೊಳಿಸಿತು. ಅಷ್ಟೊಂದು ಸನಿಹದಿಂದ ಅವರ ದರ್ಶನ ಮಾಡುವ, ಅವರ ಆಶೀರ್ವಾದ ಪಡೆಯುವ ಭಾಗ್ಯ ನಮಗೆ ದೊರೆತದ್ದು, ನಮ್ಮನ್ನು ರೋಮಾಂಚನಗೊಳಿಸಿತು. ಅತ್ಯಂತ ಪ್ರೀತಿಯಿಂದ, ಕಾರುಣ್ಯಭಾವದಿಂದ, ಮಾತೃಹೃದಯದಿಂದ ಕೂಡಿದ ಅವರ ಮಾತುಗಳು, ಸನಾತನ ಧರ್ಮದ ಸಂರಕ್ಷಣೆಯ ಬಗೆಗಿನ ಕಳಕಳಿ ನಮ್ಮೆಲ್ಲರ ಮನಸ್ಸನ್ನಾವರಿಸಿಬಿಟ್ಟಿತು. ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಆ ದಿವ್ಯತೆಯ ವಾತಾವರಣದಲ್ಲಿರುವ ಸೌಭಾಗ್ಯ ನಮ್ಮದಾಗಿತ್ತು. ಬಳಿಕ ಸಂಜೆ ಶ್ರೀ ಶಂಕರ ಮಠದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಉಪನ್ಯಾಸ ನೀಡಿದರು. ಕೊನೆಯಲ್ಲಿ ಜಗದ್ಗುರುಗಳು ಬೋಧಪ್ರದವಾದ ಆಶೀರ್ವಚನ ನೀಡಿದರು.


















R S Iyer R Vishwanathan with Sringeri Srigalu @ Hassan 2009 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸನ್ನಿಧಿಯಲ್ಲಿ (ಹಾಸನ)

ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ...

 

“ನೀವೂ ಬರುತ್ತೀರಾ?’’ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ದೂರವಾಣಿಯಲ್ಲಿ ಕೇಳಿದಾಗ, “ಏನು ವಿಶೇಷ?’’ ಎಂದು ನಾನು ಅಚ್ಚರಿಯಿಂದ ಪ್ರಶ್ನಿಸಿದೆ. ಅವರೆಂದರು- “ಹಾಸನದ ಶ್ರೀ ಶಂಕರಮಠದಲ್ಲಿ ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಗಳು ವಾಸ್ತವ್ಯ ಮಾಡಿದ್ದಾರೆ. ಇಂದು ಸಂಜೆ ಅಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ನಾನು ಉಪನ್ಯಾಸ ಮಾಡಬೇಕಾಗಿದೆ. ಅದಕ್ಕಾಗಿ ಮಧ್ಯಾಹ್ನ ಹಾಸನಕ್ಕೆ ಹೊರಟಿದ್ದೇನೆ’’. ಒಡನೆಯೇ “ನಿಮ್ಮೊಡನೆ ನಾನು ಮತ್ತು ವಿಶ್ವನಾಥನ್ ಬರುತ್ತೇವೆ’’ ಎಂದೆ. ಅದರಂತೆ ಅಂದು ಮಧ್ಯಾಹ್ನ  ನಾವು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರೊಡನೆ ಹಾಸನಕ್ಕೆ ತೆರಳಿದೆವು.

 

ಅದು ದಿನಾಂಕ 27-04-2009, “ಅಕ್ಷಯ ತೃತೀಯ”ದ ಶುಭದಿನ. ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಹಾಸನದ ಶ್ರೀ ಶಂಕರಮಠದಲ್ಲಿದ್ದೆವು. ವಾಹನದಿಂದ ಇಳಿದು ಜಗದ್ಗುರುಗಳ ಬಗ್ಗೆ ವಿಚಾರಿಸುವಷ್ಟರಲ್ಲೇ, ಜಗದ್ಗುರುಗಳಿಂದ ತಕ್ಷಣವೇ ಒಳಕ್ಕೆ ಬರುವಂತೆ ಸಂದೇಶ ಬಂತು. ಪಕ್ಕದ ಕೊಠಡಿಯಲ್ಲೇ ಜಗದ್ಗುರುಗಳು ಇದ್ದರು. ಒಡನೆಯೇ ನಮ್ಮ ಜೊತೆಯಿದ್ದ ಸ್ವಾಮೀಜಿಯವರು ಒಳ ಪ್ರವೇಶಿಸಿದರು. ತರಾತುರಿಯಲ್ಲಿ ನಾವು ಅಲ್ಲೇ ಹೊರಗೇ ಶಲ್ಯವನ್ನು ಹಾಕಿಕೊಂಡು ಒಳಗೆ ತೆರಳಿದೆವು. ಜಗದ್ಗುರುಗಳನ್ನು ಅಷ್ಟು ಸನಿಹದಿಂದ ಪ್ರಪ್ರಥಮ ಬಾರಿಗೆ ನೋಡಿದ ಭಾಗ್ಯ ನಮ್ಮದಾಗಿತ್ತು. ರೋಮಾಂಚನದಿಂದ ನೋಡುತ್ತಲೇ ಇದ್ದೆವು. ಜಗದ್ಗುರುಗಳು ಮಂದಸ್ಮಿತರಾಗಿದ್ದರು. ಅನಂತ ಪ್ರೀತಿ, ವಾತ್ಸಲ್ಯ, ಕಾರುಣ್ಯಭಾವದಿಂದ ಮಾತನಾಡಿಸಿದರು. ನಮ್ಮ ಸ್ವಾಮೀಜಿಯವರು ನಮ್ಮೆಲ್ಲರನ್ನೂ ಪರಿಚಯಿಸಿದಾಗ, ಜಗದ್ಗುರುಗಳು ಅಷ್ಟೇ ಪ್ರೀತಿಯಿಂದ ನಮ್ಮೆಲ್ಲರನ್ನೂ ವಿಚಾರಿಸಿದರು. ಮಾತುಕತೆಯ ಕೊನೆಯಲ್ಲಿ ನಮ್ಮ ಸ್ವಾಮಿಗಳು “ಫೋಟೋ ತೆಗೆದುಕೊಳ್ಳಬಹುದೇ” ಎಂದು ಜಗದ್ಗುರುಗಳ ಅನುಮತಿ ಕೋರಿದಾಗ, ಅವರು ಸಂತೋಷದಿಂದ ಸಮ್ಮತಿಸಿದರು. ಬಳಿಕ ಎಲ್ಲರನ್ನೂ ಆಶೀರ್ವದಿಸಿದರು. ನಂತರ ಮಠದಲ್ಲಿ ಪೂಜ್ಯ ಜಗದ್ಗುರುಗಳ ಸನ್ನಿಧಿಯಲ್ಲಿ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಉಪನ್ಯಾಸ ನೀಡಿದರು. ಕೊನೆಯಲ್ಲಿ ಪೂಜ್ಯ ಜಗದ್ಗುರುಗಳು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೆ ಶಾಲು ಹೊದಿಸಿ, ಗೌರವಿಸಿದರು. ಜಗದ್ಗುರುಗಳ ದಿವ್ಯ ಸನ್ನಿಧಿಯಲ್ಲಿಅಂದು ನಮಗಾದ ಆ ಅನನ್ಯ ಅನುಭವವನ್ನು ಮೆಲುಕು ಹಾಕುವಾಗಲೆಲ್ಲ ಮನಸ್ಸು ಪ್ರಫುಲ್ಲಗೊಳ್ಳುತ್ತಿರುತ್ತದೆ. 












ಹಿರಿಯ ವಿದ್ವಾಂಸ ಶ್ರೀ ಮತ್ತೂರು ಕೃಷ್ಣಮೂರ್ತಿರವರೊಡನೆ.. with Dr. Matturu Krishnamurthy

ಬೆಂಗಳೂರಿನ ಮಲ್ಲೇಶ್ವರಂನ ಸೇವಾಸದನದಲ್ಲಿ ಕರ್ನಾಟಕ ಗಾನ ಕಲಾಪರಿಷತ್ ವತಿಯಿಂದ ದಿನಾಂಕ 13-09-2009, ಭಾನುವಾರದಂದು ಸಂಗೀತ ಸಮ್ಮೇಳನ ಏರ್ಪಟ್ಟಿತ್ತು. ಅದಕ್ಕೆ ಅತಿಥಿಗಳಾಗಿ ಆಹ್ವಾನಿತರಾಗಿದ್ದ ತುಮಕೂರಿನ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ತೆರಳಿದ್ದೆವು. ಅಂದು ಅಲ್ಲಿ ನಾಡಿನ ಹಿರಿಯ ವಿದ್ವಾಸರಾಗಿದ್ದ ಡಾ. ಮತ್ತೂರು ಕೃಷ್ನಮೂರ್ತಿ ಅವರನ್ನು ನೋಡುವ, ಅವರ ಬಳಿ ಕುಳಿತು ಅವರ ಮಾತು ಆಲಿಸುವ ಸುಯೋಗ ನಮಗೆ ಲಭಿಸಿತು. "ಪದ್ಮಶ್ರೀ" ಪುರಸ್ಕೃತರಾಗಿದ್ದ ಶ್ರೀ ಮತ್ತೂರರು, ಭಾರತೀಯ ವಿದ್ಯಾಭವನದ ಮೂಲಕ ದೇಶ ವಿದೇಶಗಳಲ್ಲಿ ಕೀರ್ತಿಶಾಲಿಗಳಾಗಿದ್ದವರು. ಅಂದು ನಾಡಿನ ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀ ಮೈಸೂರು ವಿ.ಸುಬ್ರಹ್ಮಣ್ಯರವರು (ಬಲತುದಿ) ಮತ್ತು ಡಾ. ಎ.ಎಚ್.ರಾಮರಾವ್ ಅವರೂ ಉಪಸ್ಥಿತರಿದ್ದರು. (ಫೋಟೋ: ವಿಶ್ವನಾಥನ್)






Tuesday, 16 October 2018

"ಜ್ಞಾನಪೀಠ" ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರರೊಂದಿಗೆ With Dr.Chandra Shekara Kambara

"ಜ್ಞಾನಪೀಠ" ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರರೊಂದಿಗೆ ಬೆಂಗಳೂರಿನ ಸಮಾರಂಭವೊಂದರಲ್ಲಿ... With Dr.Chandra Shekara Kambara




Saturday, 13 October 2018

"ನಾಡೋಜ", ವಿದ್ವಾಂಸ, ಪತ್ರಕರ್ತ ಡಾ.ಎಸ್.ಆರ್.ರಾಮಸ್ವಾಮಿ ಅವರೊಡನೆ.. With "Nadoja" Dr.S.R.Ramaswamy

ಅದೊಂದು ಅಪರೂಪದ ಸಂದರ್ಭ. ನಾಡಿನ ಖ್ಯಾತ ವಿದ್ವಾಂಸರೂ, ಬಹುಭಾಷಾ ಪಂಡಿತರೂ, ಪತ್ರಕರ್ತರೂ, ಮಿಗಿಲಾಗಿ ಡಿವಿಜಿಯವರ ಮಾನಸ ಪುತ್ರರಂತೆ ಡಿವಿಜಿಯವರ ಒಡನಾಡಿಯಾಗಿದ್ದವರೂ ಆದ  "ನಾಡೋಜ" ಡಾ.ಎಸ್.ಆರ್.ರಾಮಸ್ವಾಮಿ ಅವರು ದಿ. 26-04-2016 ರಂದು ತುಮಕೂರಿನಲ್ಲಿ ನಾವು ನಡೆಸುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ 50 ನೇ ತಿಂಗಳಿನ ಕಾರ್ಯಕ್ರಮಕ್ಕೆ ಆಗಮಸಿದ್ದರು. ಸಮಾರಂಭ ಮುಗಿದ ಬಳಿಕ ನಮ್ಮ ತಂದೆಯವರೊಡನೆ ಸುಮಾರು 50-60 ವರ್ಷಗಳ ಹಿಂದಿನ ಘಟನಾವಳಿಗಳನ್ನು ನೆನೆಯುವಾಗ ಸಂತೋಷಪಟ್ಟ ಅಪರೂಪದ ಚಿತ್ರವಿದು... ದಿ. ಜಿ.ಎಂ.ರಾಜಾಚಾರ್, ದಿ.ಎಸ್.ಮಲ್ಲಿಕಾರ್ಜುನಯ್ಯ ಅವರೊಂದಿಗಿನ ಆರೇಳು ದಶಕಗಳ ಒಡನಾಟ, ಬೆಂಗಳೂರು ಸೆಂಟ್ರಲ್ ಜೈಲುವಾಸ ಇತ್ಯಾದಿ ಮೆಲುಕು ಹಾಕುವಾಗ ಒಂದು ಸಂದರ್ಭದಲ್ಲಿ ಅವರು ಹರ್ಷೋದ್ಗಾರ ಮಾಡಿದ ಅಪೂರ್ವ ಸಂದರ್ಭವದು. ಅಂಥ ಮೇರು ವಿದ್ವಾಂಸರನ್ನು ನೋಡುವ, ಅವರ ಮಾತು ಆಲಿಸುವ, ಅವರೊಡನೆ ಆಪ್ತವಾಗಿ ಕೆಲ ಕಾಲ ಮಾತನಾಡುವ ಸುಸಂದರ್ಭ ನಮಗೆ ಲಭಿಸಿದ್ದು ನಮ್ಮ ಪಾಲಿನ ಅದೃಷ್ಟವೇ ಹೌದು.. with verern journalist, famous writer, "Nadoja" Dr.S.R.Ramaswamy











 









Thursday, 11 October 2018

with Sri Thimmappa Bhat, Veteran Journalist ಹಿರಿಯ ಪತ್ರಕರ್ತರಾದ ಶ್ರೀ ತಿಮ್ಮಪ್ಪ ಭಟ್ ಅವರೊಡನೆ

ಹಿರಿಯ ಪತ್ರಕರ್ತರಾದ ಶ್ರೀ ತಿಮ್ಮಪ್ಪ ಭಟ್ (ಆಗ ಅವರು "ವಿಜಯವಾಣಿ" ಸಂಪಾದಕರಾಗಿದ್ದರು) ಅವರು ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ದಿ.27-12-2014 ರಂದು ಆಗಮಿಸಿದ್ದಾಗ ಅವರೊಂದಿಗೆ ನಾನು ಮತ್ತು "ವಿಜಯವಾಣಿ" ಜಿಲ್ಲಾ ವರದಿಗಾರರಾದ ಶ್ರೀ ಕೆ.ಎಸ್.ಜಗನ್ನಾಥ್.
(ಮತ್ತೊಂದು ಫೋಟೋದಲ್ಲಿ ಇರುವವರು-ಎಡದಿಂದ-ಪ್ರಜಾವಾಣಿಯ ಶ್ರೀ ಚಂದ್ರಪ್ಪ, ಸಿದ್ಧಾರ್ಥ ರೇಡಿಯೋದ ಶ್ರೀ ಟಿ.ಕೆ.ವಿನುತ್, ಶ್ರೀ ತಿಮ್ಮಪ್ಪ ಭಟ್, ಶ್ರೀ ಜಗನ್ನಾಥ್, ನಾನು, ಪ್ರಜಾಪ್ರಗತಿಯ ಶ್ರೀ ತ್ಯಾಮಗೊಂಡ್ಲು ನಂಜುಂಡಪ್ಪ ಮತ್ತು ಶ್ರೀ ಬುಕ್ಕಾಪಟ್ಟಣ ಮಂಜುನಾಥ್.)





Wednesday, 10 October 2018

R S Iyer with Dr.K.Radhakrishnan, ಖ್ಯಾತ ವಿಜ್ಞಾನಿ ಡಾ.ಎಸ್.ರಾಧಾಕೃಷ್ಣನ್ ಅವರೊಡನೆ

ನಮ್ಮ ಪಾಲಿಗೆ ಅದೊಂದು ಅದೃಷ್ಟದ ದಿನ. 2010 ರ ಮಾರ್ಚ್ 3 ರಂದು ತುಮಕೂರು ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವವು ಆಗಿನ ಕುಲಪತಿ ಮಾನ್ಯ ಡಾ. ಎಸ್.ಸಿ.ಶರ್ಮಾ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯಿತು. ಅಂದು ಘಟಿಕೋತ್ಸವ ಭಾಷಣ ಮಾಡಲು ಆಗಿನ "ಇಸ್ರೋ" (Indian Space Research Organisation) ಅಧ್ಯಕ್ಷರೂ, ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳೂ ಆದ ಡಾ.ಕೆ.ರಾಧಾಕೃಷ್ಣನ್ ರವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ವಿದ್ವಾಂಸರಾದ "ಶತಾವಧಾನಿ" ಡಾ.ಆರ್.ಗಣೇಶ್ ರವರಿಗೆ ಮತ್ತು ಖ್ಯಾತ ಆಹಾರ ತಜ್ಞರಾದ ಶ್ರೀ ಸದಾನಂದ ಮಯ್ಯರವರಿಗೆ "ಗೌರವ ಡಾಕ್ಟರೇಟ್" ಪದವಿ ಪ್ರದಾನ ಮಾಡಲಾಯಿತು. ಸಮಾರಂಭದ ಬಳಿಕ ಈ ಮೂವರು ಮಹನೀಯರನ್ನು ನಾನು, ನನ್ನ ಸಹೋದರ ಆರ್.ವಿಶ್ವನಾಥನ್, ನಮ್ಮ ತಂದೆ-ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಮತ್ತು ವಿ.ವಿವೇಕ್ ಭೇಟಿ ಮಾಡುವ ಮತ್ತು ಆ ಮಹನೀಯರೊಡನೆ ಫೋಟೋ ತೆಗೆಸಿಕೊಳ್ಳವ ಸದವಕಾಶ  ಲಭಿಸಿದ್ದು ನಮ್ಮ ಪಾಲಿನ ಅವಿಸ್ಮರಣೀಯ ಪ್ರಸಂಗ. with ISRO chairman Dr.K.Radhakrishnan, "Shatavadhani" Dr.R Ganesh,& Food expert Dr.Sadananda Mayya..03-03-2010.



Tuesday, 9 October 2018

ಡಾ.ರವೀಂದ್ರನಾಥ್ ಶಾನುಭಾಗ್ ಅವರೊಂದಿಗೆ with Dr.Ravindranath Shanbhag, Udupi

ಉಡುಪಿಯ ಡಾ. ರವೀಂದ್ರನಾಥ್ ಶಾನುಭಾಗ್ ಅವರು 90 ರ ದಶಕದಿಂದಲೂ ನನಗೆ ಪರಿಚಿತರು. ಬಳಕೆದಾರರ ವೇದಿಕೆ ಮೂಲಕ ಅವರು ಹೊರತರುತ್ತಿದ್ದ ಪತ್ರಿಕೆ ಓದಿ ನಾನು ಅವರತ್ತ ಆಕರ್ಷಿತನಾದವನು. ಆಗಲೇ ನಾವೆಲ್ಲ ಮಿತ್ರರು ಶ್ರೀ ಭರತ್ ಕುಮಾರ್ ಜೈನ್ ಅವರೊಡನೆ ಸೇರಿ ತುಮಕೂರಿನಲ್ಲಿ 1996 ರಲ್ಲಿ ಡಾ..ಶಾನುಭಾಗರನ್ನು ಆಹ್ವಾನಿಸಿ ಒಂದು ದಿನದ ಶಿಬಿರ ನಡೆಸಿದ್ದೆವು. ವೃತ್ತಿಯಿಂದ  ಮಣಿಪಾಲದ ಆಸ್ಪತ್ರೆಯಲ್ಲಿ ಹೆಸರಾಂತ ವೈದ್ಯರಾದರೂ, ಪ್ರಾಧ್ಯಾಪಕರಾದರೂ, ದೇಶ-ವಿದೇಶಗಳ ವೈದ್ಯಕೀಯ ಕಾಲೇಜುಗಳ ವಿಸಿಟಿಂಗ್ ಪ್ರೊಫೆಸರ್ ಆದರೂ,  ಪ್ರವೃತ್ತಿಯಿಂದ ಪ್ರಖರ ಹೋರಾಟಗಾರರು. ಬಳಕೆದಾರರ ಹಿತರಕ್ಷಣೆಯಲ್ಲಿ, ಮಾನವ ಹಕ್ಕುಗಳ ರಕ್ಷಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿಶಾಲಿಗಳಾದವರು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾದವರು. ಹಿರಿಯ ನಾಗರಿಕರ ಹಿತರಕ್ಷಣೆಗೆ ಅಪಾರವಾಗಿ ಶ್ರಮಿಸಿದವರು. ಅಷ್ಡೆಲ್ಲ ಪ್ರಸಿದ್ಧರಾಗಿದ್ದರೂ ಅತ್ಯಂತ ಸರಳ ಜೀವಿಗಳು. ಎಲ್ಲರೊಡನೆ ಹಮ್ಮು ಬಿಮ್ಮುಗಳಿಲ್ಲದೆ ಬೆರೆಯುವವರು. ಅವರು ದಿನಾಂಕ 17-01-2016 ರಂದು ಭಾನುವಾರ ಸಂಜೆ ತುಮಕೂರು ನಗರಕ್ಕೆ ಆಗಮಿಸಿದ್ದರು. ತುಮಕೂರಿನ ನ್ಯಾಯವಾದಿಗಳೂ, ಗ್ರಾಹಕ ಹೋರಾಟಗಾರರೂ ಆದ ಶ್ರೀ ಟಿ.ಎಸ್.ನಿರಂಜನ್ ಅವರು ಡಾ.ಶಾನುಭಾಗ್  ಅವರನ್ನು ಸಂವಾದಕ್ಕೆ ಆಹ್ವಾನಿಸಿದ್ದರು. ಅಂದು ಅವರನ್ನು ನೋಡುವ, ಬಹುಹೊತ್ತು ಅವರೊಡನೆ ಮಾತನಾಡುವ, ಅವರ ಮಾತು ಆಲಿಸುವ ಸದವಕಾಶ ನಮಗೆಲ್ಲ ಸಿಕ್ಕಿತ್ತೆಂಬುದು ನಮ್ಮ ಅದೃಷ್ಟವೇ ಆಗಿತ್ತು. ಅಂದು ನಾನು, ನನ್ನ ಸಹೋದರ ಶ್ರೀ  ಆರ್.ವಿಶ್ವನಾಥನ್,  "ಆಟೋ ಯಡಿಯೂರಪ್ಪ" ಎಂದು ಹೆಸರಾದ ಶ್ರೀ ಕೆ.ಎಂ.ಶಿವಕುಮಾರ್  (ಇವರು ಡಾ.ಶಾನುಭಾಗ್ ರವರಿಗೆ ಆತ್ಮೀಯರು ಎಂಬುದು ವಿಶೇಷ) ಅವರೊಡನೆ ಹಲವು ವಿಷಯಗಳನ್ನು ಚರ್ಚಿಸಿದೆವು.

https://hrpfudupi.wordpress.com/2015/11/15/dr-ravindranath-shanbhag/













President, Human Rights Protection Foundation, Udupi
Dr Ravindranath Shanbhag,was a Professor of pharmacology at Manipal University for the 30 years and  in 2009 he moved to Himachal Pradesh as Dean in the Shoolini University.At present he is a visiting professor to several Indian and Foreign Universities.
He has been a Consumer and Human Right activist for the last three decades. Apart from writing more than 1000 articles in the popular public interest columns of ‘Bhahujana Hithaya Bhahujana Sukhaya’ in Udayavani , he wrote 12 books on Consumer and Human rights protection.
From 1980 to 2014 more than 26000 cases have been registered with Consumers Forum, Basrur and Human Rights Protection Foundation, Udupi percentage success of 78%. Most of these problems were solved through journalism by creating public opinion against injustice. Very few cases were taken to the court of law.  He has guided and supported aggrieved citizens to file more than 300 petitions in various courts in India including Supreme Court Of India. Land mark judgments have been pronounced by Supreme Court of India in PLI filed by Human Rights Protection Foundation include Endosulfan case, Akku-Leela case, and Mangalore Teachers’ PF case. HRPF Udupi has successfully released several Indian Laborers stranded/ imprisoned in Middle East countries on various charges.

Dr. Ravindranath Shanbhag: A Short Biographical Sketch of the Activist
Dr Ravindranath Shanbhag’s career in public interest movement began in 1976, when he was arrested in Udupi, during the Emergency, for raising his voice against police atrocities. After three months in the Mangalore prison, he was acquitted by the court because there were no charges against him. During his stay in the prison, he observed several episodes of gross human rights violations.
Shortly after the emergency, Dr Ravindranath Shanbhag and a group of youngsters in Udupi gathered together to find a permanent solution for the evils that enveloped the society. They first identified the major reasons for the dismal state of affairs. While feudalism, bureaucratic arrogance and corruption allowed the powerful to exercise their authority in the most arbitrary manner, illiteracy, fear and ignorance about the governmental machinery, rights and duties of a responsible citizen, weakened the victims of social injustice. Judiciary, which was overburdened with millions of pending cases, was unfortunately reserved for the rich and influential.
Those were the days when victims of injustice were afraid even to complain. Local Newspapers were afraid to write or even publish any material against the governmental authorities. Political leadership were hand in glove with the bureaucracy, and nepotism was the norm. Thus, it was necessary to have an apolitical noncontroversial, not-for-profit, self-sustaining, self help movement.
To start with, a Consumers’ Forum was established in 1980 in a small village called Basrur having a population of 5000. A modus operandi was developed, first to educate the citizens about their rights and responsibilities and then to encourage and empower them to take up the fight on their own. Consumers’ Forum Basrur. stepped in only when victims failed to get justice. Cases were filed in the court of law only as a last resort. Creating public opinion was the key to sustaining the struggle and therefore a fortnightly periodical was introduced in 1981. With the taste of success, more and more people started approaching the forum for guidance and support. The movement also spread to the Taluks of the Dakshina Kannada district.
In 1996, when more and more cases of human-rights violations began to contact the forum, Dr Shanbhag established the Human-rights Protection Foundation, Udupi. The local newspapers invited Dr Shanbhag to write weekly columns, which were used to spread the message to the nearby districts.
From 1980 to 2012, more than 23000 cases have been registered with a percentage success of 78%. The remaining cases were related to false complaints or misconceptions by the complainant himself/ herself.
Most of these problems were solved through journalism by creating public opinion. Very few cases were taken to the court of law.
At present, because of his poor health, Dr Shanbhag has restricted his activities only to guide the activists working for various movements
**************************************
ನಾವು ತುಮಕೂರಿನಲ್ಲಿ  1996 ರಲ್ಲಿ ನಡೆಸಿದ್ದ ಬಳಕೆದಾರರ ತರಬೇತಿ ಶಿಬಿರದ ನೆನಪಿನ ಫೋಟೋಗಳಿವು



with Justice N.Venkatachala, Lokayuktha

ಕರ್ನಾಟಕ ಲೋಕಾಯುಕ್ತರಾಗಿ ಲೋಕಾಯುಕ್ತ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಸಂಚಲನ ಮೂಸಿಸಿದವರು ನ್ಯಾಯಮೂರ್ತಿ ಎನ್. ವೆಂಕಟಾಚಲರವರು. ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಶ್ರೀಯುತರು, 2001 ರಿಂದ 2016 ರವರೆಗೆ ಲೋಕಾಯುಕ್ತಾಗಿ, ಲೋಕಾಯುಕ್ತಕ್ಕೊಂದು ಹೊಸ ಛಾಪು ಮೂಡಿಸಿದವರು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿ ಕಾಡಿದವರು. ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ಕೊಟ್ಟಾಗ, ಮೊನಚು ಮಾತುಗಳಿಂದಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವರು. ಅವರು ಲೋಕಾಯುಕ್ತರಾಗಿದ್ದಾಗ ಒಮ್ಮೆ (ದಿನಾಂಕ ನೆನಪಿಲ್ಲ) ತುಮಕೂರು ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಂದು ನಾನು ವರದಿಗೆ ತೆರಳಿದ್ದಾಗ ತೆಗೆದಿರುವ ಚಿತ್ರವಿದು. ಈ ಚಿತ್ರದಲ್ಲಿ ಆಗ "ವಿಜಯಕರ್ನಾಟಕ'' ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ (ಈಗ ಇವರು "ಉದಯಕಾಲ" ಸಂಪಾದಕರು) ಮಿತ್ರ ಶ್ರೀ ಕೆ.ಎನ್.ಪುಟ್ಟಲಿಂಗಯ್ಯ ಅವರನ್ನೂ (ನನ್ನ ಹಿಂಬದಿ ಬರೆದುಕೊಳ್ಳುತ್ತ ನಿಂತಿರುವವರು) ಕಾಣಬಹುದು.

Sunday, 7 October 2018

Areyuru Sri Vaidyanatheshwara Temple

ಶ್ರೀ ವೈದ್ಯನಾಥೇಶ್ವರ ದೇವಾಲಯದಲ್ಲಿ..
ಎರಡು-ಮೂರು ವರ್ಷಗಳ ಬಳಿಕ 07-10-2018, ಭಾನುವಾರ ಸಂಜೆ ತುಮಕೂರು ತಾಲ್ಲೂಕಿನ ಅರೆಯೂರು ಗ್ರಾಮದಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ನಾವು ಭೇಟಿ ನೀಡಿ ಆ ಪವಿತ್ರ ಹಾಗೂ ಪ್ರಶಾಂತ ವಾತಾವರಣದಲ್ಲಿ ಆನಂದಿಸಿದೆವು. ಈ ದೇವಾಲಯವು ನಾಡಿನಾದ್ಯಂತ ಪ್ರಸಿದ್ದಿಹೊಂದಿದ್ದು, ಭಕ್ತಾದಿಗಳು ಬರುತ್ತಲೇ ಇರುತ್ತಾರೆ. ರೋಗನಿವಾರಕ ಶಕ್ತಿ ಈ ಕ್ಷೇತ್ರಕ್ಕಿದೆಯೆಂಬ ನಂಬಿಕೆಯಿಂದ ಸಹ ಅಸಂಖ್ಯಾತ ಭಕ್ತರು ಬರುವುದು ಇಲ್ಲಿನ ವಿಶೇಷ. ಈಗ ಇಲ್ಲಿ ದೇವಾಲಯ ಹಾಗೂ ದಾಸೋಹ ಭವನದ ಕಟ್ಟಡಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಪಕ್ಕದಲ್ಲೇ ಹೇಮಾವತಿ ನಾಲೆ ತುಂಬಿ ಹರಿಯುತ್ತಿತ್ತು. ಅದರ ಪ್ರಭಾವದಿಂದ ಈ ದೇವಾಲಯಕ್ಕೆ ಹೊಂದಿಕೊಂಡಿರುವ ಕೆರೆಯೂ ನೀರಿನಿಂದ ಭರ್ತಿಯಾಗಿದೆ. ಸುತ್ತಲೂ ಹಸಿರಿನ ವಾತಾವರಣ ಆಹ್ಲಾದಕರವಾಗಿದೆ.

ದೇವಾಲಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ಗಮನಿಸಬಹುದು.
http://www.areyurushreevaidyanatha.org








Saturday, 6 October 2018

ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರೊಡನೆ.. with Central Minister Sri Ramvilas Paswan

ಕೇಂದ್ರ ಸಚಿವರಾದ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ತುಮಕೂರು ನಗರಕ್ಕೆ ಆಗಮಿಸಿದ್ದಾಗ ಅವರೊಡನೆ ಮಾತು...




ಶ್ರೀ ಬರಗೂರು ರಾಮಚಂದ್ರಪ್ಪ, ಶ್ರೀ ಟಿ.ಎನ್.ಸೀತಾರಾಮ್ ಅವರೊಂದಿಗೆ.. with Sri Baraguru & Sri T N Seetharam (R S Iyer Tumkur)

ನಾಡಿನ ಖ್ಯಾತ ಸಾಹಿತಿ ಶ್ರೀ ಬರಗೂರು ರಾಮಚಂದ್ರಪ್ಪ ಮತ್ತು ಖ್ಯಾತ ಕಿರುತೆರೆ ನಿರ್ದೇಶಕರಾದ ಶ್ರೀ ಟಿ.ಎನ್.ಸೀತಾರಾಮ್ ಅವರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಬಂದಿದ್ದಾಗ  ಅವರೊಂದಿಗೆ ಕೆಲ ಹೊತ್ತು. ಚಿತ್ರದಲ್ಲಿ ಶ್ರೀ ಜಿ.ಎಸ್.ಸೋಮಶೇಖರ್ ಸಹ  ಇದ್ದಾರೆ.

R S Iyer with Sri T N Seetharam


 
R S Iyer Tumkur with Sri T N Seetharam, Sri G S Somashekhar and Sri Baraguru Ramachandrappa

                                         R S Iyer with Sri Baraguru Ramachandrappa