ಬೆಂಗಳೂರಿನ ಮಲ್ಲೇಶ್ವರಂನ ಸೇವಾಸದನದಲ್ಲಿ ಕರ್ನಾಟಕ ಗಾನ ಕಲಾಪರಿಷತ್ ವತಿಯಿಂದ ದಿನಾಂಕ 13-09-2009, ಭಾನುವಾರದಂದು ಸಂಗೀತ ಸಮ್ಮೇಳನ ಏರ್ಪಟ್ಟಿತ್ತು. ಅದಕ್ಕೆ ಅತಿಥಿಗಳಾಗಿ ಆಹ್ವಾನಿತರಾಗಿದ್ದ ತುಮಕೂರಿನ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರೊಡನೆ ನಾನು ಮತ್ತು ವಿಶ್ವನಾಥನ್ ಅಲ್ಲಿಗೆ ತೆರಳಿದ್ದೆವು. ಅಂದು ಅಲ್ಲಿ ನಾಡಿನ ಹಿರಿಯ ವಿದ್ವಾಸರಾಗಿದ್ದ ಡಾ. ಮತ್ತೂರು ಕೃಷ್ನಮೂರ್ತಿ ಅವರನ್ನು ನೋಡುವ, ಅವರ ಬಳಿ ಕುಳಿತು ಅವರ ಮಾತು ಆಲಿಸುವ ಸುಯೋಗ ನಮಗೆ ಲಭಿಸಿತು. "ಪದ್ಮಶ್ರೀ" ಪುರಸ್ಕೃತರಾಗಿದ್ದ ಶ್ರೀ ಮತ್ತೂರರು, ಭಾರತೀಯ ವಿದ್ಯಾಭವನದ ಮೂಲಕ ದೇಶ ವಿದೇಶಗಳಲ್ಲಿ ಕೀರ್ತಿಶಾಲಿಗಳಾಗಿದ್ದವರು. ಅಂದು ನಾಡಿನ ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀ ಮೈಸೂರು ವಿ.ಸುಬ್ರಹ್ಮಣ್ಯರವರು (ಬಲತುದಿ) ಮತ್ತು ಡಾ. ಎ.ಎಚ್.ರಾಮರಾವ್ ಅವರೂ ಉಪಸ್ಥಿತರಿದ್ದರು. (ಫೋಟೋ: ವಿಶ್ವನಾಥನ್)



No comments:
Post a Comment