* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 18 October 2018

R S iyer, R Vishwanathan with Sringeri Srigalu , Tiptur 2010 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸನ್ನಿಧಿ (ತಿಪಟೂರು)

ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರು ತಿಪಟೂರು ನಗರಕ್ಕೆ ಆಗಮಿಸಿದ್ದಾಗ...

ಶೃಂಗೇರಿ ಜಗದ್ಗುರುಗಳ ದರ್ಶನ ಮಾಡುವ ಮತ್ತೊಂದು ಸುಯೋಗ ದಿನಾಂಕ 05-03-2010 ರಂದು ಮತ್ತೆ ನಮಗೊದಗಿತು. ಜಗದ್ಗುರುಗಳು ಆಗ ತಿಪಟೂರಿಗೆ ದಯಮಾಡಿಸಿದ್ದರು. ತಿಪಟೂರಿನ ಶಾಸಕರಾದ ಶ್ರೀ ಬಿ.ಸಿ.ನಾಗೇಶ್ ರವರ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಸಮೀಪದ ಶ್ರೀ ಶಂಕರ ಮಠದಲ್ಲಿ ದೈನಂದಿನ ಕಾರ್ಯಕ್ರಮ ನಡೆಯುತ್ತಿತ್ತು. ಇಲ್ಲಿಗೂ ನಮ್ಮ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಆಹ್ವಾನಿತರಾಗಿದ್ದು, ಆ ದಿನ ಸಂಜೆ ಜಗದ್ಗುರುಗಳ ಸನ್ನಿಧಿಯಲ್ಲಿ ಉಪನ್ಯಾಸ ಮಾಡುವವರಿದ್ದರು.ನಾವೂ ಅವರ ಜೊತೆ ತಿಪಟೂರಿಗೆ ತೆರಳಿದೆವು.
ತಿಪಟೂರಿನಲ್ಲಿ ಅಂದು ಸಂಜೆ ಜಗದ್ಗುರುಗಳು ವಾಸ್ತವ್ಯವಿದ್ದ ಸ್ಥಳಕ್ಕೇ ಮೊದಲು ನಾವು ಭೇಟಿ ಕೊಟ್ಟೆವು. ಜಗದ್ಗುರುಗಳು ಮಂದಸ್ಮಿತರಾಗಿ ತಮ್ಮ ಪೀಠದಲ್ಲಿ ಆಸೀನರಾಗಿದ್ದರು. ಜಗದ್ಗುರುಗಳ ಆ ಸರಳತೆ ನಮ್ಮನ್ನು ಬೆರಗುಗೊಳಿಸಿತು. ಅಷ್ಟೊಂದು ಸನಿಹದಿಂದ ಅವರ ದರ್ಶನ ಮಾಡುವ, ಅವರ ಆಶೀರ್ವಾದ ಪಡೆಯುವ ಭಾಗ್ಯ ನಮಗೆ ದೊರೆತದ್ದು, ನಮ್ಮನ್ನು ರೋಮಾಂಚನಗೊಳಿಸಿತು. ಅತ್ಯಂತ ಪ್ರೀತಿಯಿಂದ, ಕಾರುಣ್ಯಭಾವದಿಂದ, ಮಾತೃಹೃದಯದಿಂದ ಕೂಡಿದ ಅವರ ಮಾತುಗಳು, ಸನಾತನ ಧರ್ಮದ ಸಂರಕ್ಷಣೆಯ ಬಗೆಗಿನ ಕಳಕಳಿ ನಮ್ಮೆಲ್ಲರ ಮನಸ್ಸನ್ನಾವರಿಸಿಬಿಟ್ಟಿತು. ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಆ ದಿವ್ಯತೆಯ ವಾತಾವರಣದಲ್ಲಿರುವ ಸೌಭಾಗ್ಯ ನಮ್ಮದಾಗಿತ್ತು. ಬಳಿಕ ಸಂಜೆ ಶ್ರೀ ಶಂಕರ ಮಠದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಉಪನ್ಯಾಸ ನೀಡಿದರು. ಕೊನೆಯಲ್ಲಿ ಜಗದ್ಗುರುಗಳು ಬೋಧಪ್ರದವಾದ ಆಶೀರ್ವಚನ ನೀಡಿದರು.


















No comments:

Post a Comment