ಶ್ರೀ ವೈದ್ಯನಾಥೇಶ್ವರ ದೇವಾಲಯದಲ್ಲಿ..
ಎರಡು-ಮೂರು ವರ್ಷಗಳ ಬಳಿಕ 07-10-2018, ಭಾನುವಾರ ಸಂಜೆ ತುಮಕೂರು ತಾಲ್ಲೂಕಿನ ಅರೆಯೂರು ಗ್ರಾಮದಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ನಾವು ಭೇಟಿ ನೀಡಿ ಆ ಪವಿತ್ರ ಹಾಗೂ ಪ್ರಶಾಂತ ವಾತಾವರಣದಲ್ಲಿ ಆನಂದಿಸಿದೆವು. ಈ ದೇವಾಲಯವು ನಾಡಿನಾದ್ಯಂತ ಪ್ರಸಿದ್ದಿಹೊಂದಿದ್ದು, ಭಕ್ತಾದಿಗಳು ಬರುತ್ತಲೇ ಇರುತ್ತಾರೆ. ರೋಗನಿವಾರಕ ಶಕ್ತಿ ಈ ಕ್ಷೇತ್ರಕ್ಕಿದೆಯೆಂಬ ನಂಬಿಕೆಯಿಂದ ಸಹ ಅಸಂಖ್ಯಾತ ಭಕ್ತರು ಬರುವುದು ಇಲ್ಲಿನ ವಿಶೇಷ. ಈಗ ಇಲ್ಲಿ ದೇವಾಲಯ ಹಾಗೂ ದಾಸೋಹ ಭವನದ ಕಟ್ಟಡಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಪಕ್ಕದಲ್ಲೇ ಹೇಮಾವತಿ ನಾಲೆ ತುಂಬಿ ಹರಿಯುತ್ತಿತ್ತು. ಅದರ ಪ್ರಭಾವದಿಂದ ಈ ದೇವಾಲಯಕ್ಕೆ ಹೊಂದಿಕೊಂಡಿರುವ ಕೆರೆಯೂ ನೀರಿನಿಂದ ಭರ್ತಿಯಾಗಿದೆ. ಸುತ್ತಲೂ ಹಸಿರಿನ ವಾತಾವರಣ ಆಹ್ಲಾದಕರವಾಗಿದೆ.
ದೇವಾಲಯಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ಗಮನಿಸಬಹುದು.
http://www.areyurushreevaidyanatha.org
No comments:
Post a Comment