ಕರ್ನಾಟಕ ಲೋಕಾಯುಕ್ತರಾಗಿ ಲೋಕಾಯುಕ್ತ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಸಂಚಲನ ಮೂಸಿಸಿದವರು ನ್ಯಾಯಮೂರ್ತಿ ಎನ್. ವೆಂಕಟಾಚಲರವರು. ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಶ್ರೀಯುತರು, 2001 ರಿಂದ 2016 ರವರೆಗೆ ಲೋಕಾಯುಕ್ತಾಗಿ, ಲೋಕಾಯುಕ್ತಕ್ಕೊಂದು ಹೊಸ ಛಾಪು ಮೂಡಿಸಿದವರು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿ ಕಾಡಿದವರು. ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ಕೊಟ್ಟಾಗ, ಮೊನಚು ಮಾತುಗಳಿಂದಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವರು. ಅವರು ಲೋಕಾಯುಕ್ತರಾಗಿದ್ದಾಗ ಒಮ್ಮೆ (ದಿನಾಂಕ ನೆನಪಿಲ್ಲ) ತುಮಕೂರು ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಂದು ನಾನು ವರದಿಗೆ ತೆರಳಿದ್ದಾಗ ತೆಗೆದಿರುವ ಚಿತ್ರವಿದು. ಈ ಚಿತ್ರದಲ್ಲಿ ಆಗ "ವಿಜಯಕರ್ನಾಟಕ'' ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ (ಈಗ ಇವರು "ಉದಯಕಾಲ" ಸಂಪಾದಕರು) ಮಿತ್ರ ಶ್ರೀ ಕೆ.ಎನ್.ಪುಟ್ಟಲಿಂಗಯ್ಯ ಅವರನ್ನೂ (ನನ್ನ ಹಿಂಬದಿ ಬರೆದುಕೊಳ್ಳುತ್ತ ನಿಂತಿರುವವರು) ಕಾಣಬಹುದು.
No comments:
Post a Comment