ಡಿವಿಜಿ ನನ್ನ ಫೇವರೇಟ್
********************
“ಡಿವಿಜಿ ನನ್ನ ಫೇವರೇಟ್” ಎಂದು ಕನ್ನಡದ ಖ್ಯಾತ ಚಲನಚಿತ್ರನಟರಾದ ಶ್ರೀ ರಮೇಶ್ ಅರವಿಂದ್ ಅವರು ಹೃತ್ಪೂರ್ವಕವಾಗಿ ನುಡಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
ತುಮಕೂರಿನಲ್ಲಿ ನಮ್ಮ ಸರಸ್ ಫೌಂಡೇಷನ್ ವತಿಯಿಂದ ಕಳೆದ 73 ತಿಂಗಳುಗಳಿಂದ “ಡಿವಿಜಿ ನೆನಪು” ಶೀರ್ಷಿಕೆಯಡಿ ಡಿವಿಜಿ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದನ್ನು ಹಾಗೂ ಇದೇ ಡಿಸೆಂಬರ್ 29 ರಂದು 74 ನೇ ತಿಂಗಳಿನ ಕಾರ್ಯಕ್ರಮ ನಡೆಯಲಿರುವುದನ್ನು ನಾನು ಮತ್ತು ವಿಶ್ವನಾಥನ್ ತಿಳಿಸಿದಾಗ, ಅಚ್ಚರಿ ಹಾಗೂ ಸಂತೋಷದಿಂದ “ವಾವ್’’ ಎಂದು ಉದ್ಗರಿಸುತ್ತ ಮೇಲಿನಂತೆ ಪ್ರತಿಕ್ರಿಯಿಸಿದರು.
ಇಂದು (23-12-2018, ಭಾನುವಾರ) ಬೆಳಗ್ಗೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ವತಿಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ ಖ್ಯಾತ ಕಾದಂಬರಿಕಾರ ಡಾ.ಕೆ.ಎನ್.ಗಣೇಶಯ್ಯ ಅವರ ಮೂರು ಕೃತಿಗಳನ್ನು ಬಿಡುಗಡೆ ಮಾಡಲು ಶ್ರೀ ರಮೇಶ್ ಅರವಿಂದ್ ಅವರು ಆಗಮಿಸಿದ್ದರು. ಆಗ ಅವರನ್ನು ಭೇಟಿ ಮಾಡಿ ಮಾತನಾಡುವ ಸುಸಂದರ್ಭ ನನಗೆ ಮತ್ತು ವಿಶ್ವನಾಥನ್ ಗೆ ಲಭಿಸಿತು. ಬಹುಭಾಷಾ ಚಿತ್ರನಟರಾಗಿ ಅಪಾರ ಕೀರ್ತಿ ಗಳಿಸಿದ್ದರೂ, ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಎಲ್ಲರೊಡನೆ ಬೆರೆಯುವ, ಎಲ್ಲರೊಡನೆ ಮಾತನಾಡುವ ರಮೇಶ್ ಅರವಿಂದ್ ಅವರ ಸರಳತೆ, ಸಜ್ಜನಿಕೆ, ಸೌಜನ್ಯ, ಸಹನೆ ನಮ್ಮನ್ನಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲರ ಹೃದಯವನ್ನೂ ಗೆದ್ದಿತು.

with Sri Ramesh Aravind , Famous Kannada Film Actor... R Vishwanathan Tumkur and R S Iyer Tumkur
R S Iyer Tumkur with Sri Ramesh Aravind