ನಮ್ಮ ತುಮಕೂರಿನ ಅನೇಕ ಬಡಾವಣೆಗಳಲ್ಲಿ ನನ್ನ ಮಿತ್ರರು ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಈ ವರ್ಷ ನನಗೆ "ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ'' ಲಭಿಸಿದ್ದಕ್ಕೆ ಆ ಮಿತ್ರರು ಸಂತಸ ಹಂಚಿಕೊಳ್ಳಲು ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಪ್ರೀತಿಯಿಂದ ಗೌರವಿಸುತ್ತಿದ್ದಾರೆ. ಜನಮನದಲ್ಲಿ ಸ್ವಾಭಾವಿಕವಾಗಿ ಬೇರೂರಿರುವ ಇಂಥ ಪ್ರೀತಿಯು ಮೂಕನನ್ನಾಗಿಸುತ್ತದೆ. ಅವರ ಪ್ರೀತಿಯನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸಿ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ.
ತುಮಕೂರಿನ ಬಾಳೆಗೌಡನ (ಬಿ.ಜಿ.) ಪಾಳ್ಯ ವೃತ್ತದಲ್ಲಿ ಸ್ಥಳೀಯ ಯುವ ಮುಖಂಡರಾದ ಶ್ರೀ ಪ್ರಸನ್ನ (ಪಚ್ಚಿ) ಅವರ ನೇತೃತ್ವದ "ಮಯೂರ ವರ್ಮ ಕನ್ನಡ ಯುವ ವೇದಿಕೆ'' ನಡೆಸಿದ ರಾಜ್ಯೋತ್ಸವಕ್ಕೆ ದಿ.29-11-2018, ಗುರುವಾರ ರಾತ್ರಿ ನನ್ನನ್ನೂ ಆಹ್ವಾನಿಸಿದ್ದರು. ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳಾದ ಶ್ರೀ ಮಹೇಶ್ ಕುಮಾರ್ , ಶ್ರೀ ಸೈಯದ್ ನಯಾಜ್, ವಕೀಲರಾದ ಶ್ರೀ ಟಿ.ಎಸ್.ನಿರಂಜನ್, ಶ್ರೀ ನಾಗೇಶ್ ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದರು. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
No comments:
Post a Comment