* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 7 December 2018

ಸನ್ಮಾನ- ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರಿಂದ- Felicitation by Dr.G.Parameshwara, Deputy C.M.

ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ಆಮಂತ್ರಿತರಾಗಿದ್ದರು. ಈ ಬಾರಿಯ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತನಾದ ಹಿನ್ನೆಲೆಯಲ್ಲಿ ತಿಗಳ ಜನಾಂಗದ ಪ್ರಮುಖರು ನನ್ನನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸುವ ಸಲುವಾಗಿ ಆಹ್ವಾನಿಸಿದ್ದರು. ಅಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ನನ್ನನ್ನು ದೇವಾಲಯ ಹಾಗೂ ತಿಗಳ ಜನಾಂಗದ ಪರವಾಗಿ ಪ್ರೀತಿಯಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಕೆ.ರಾಕೇಶ್ ಕುಮಾರ್, “ಪ್ರಜಾಪ್ರಗತಿ” ಸಂಪಾದಕರಾದ ಶ್ರೀ ಎಸ್.ನಾಗಣ್ಣ, ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀ ನರಸಿಂಹಮೂರ್ತಿ, ತಿಗಳ ಜನಾಂಗದ ಮುಖಂಡ ಶ್ರೀ ರವೀಶ್ ಜಹಂಗೀರ್ ಮೊದಲಾದ ಪ್ರಮುಖರು ಗಣ್ಯರುಗಳು ಉಪಸ್ಥಿತರಿದ್ದರು.




No comments:

Post a Comment